Wednesday, 30 December 2009
Tuesday, 29 December 2009
ಕ್ರಿಸ್ತ ಇನ್ನೂ ಹುಟ್ಟಿಲ್ಲ...
Tuesday, 15 December 2009
ಮತ್ತೆ ಬನ್ನಿ ಕನ್ನಡ ನಾಡಿನ ಗುಬ್ಬಚ್ಚಿಗಳೇ . . . .
Sunday, 29 November 2009
ಕನ್ನಡ ಎನೆ ಮನ ಕುಣಿಯುವುದು
Friday, 13 November 2009
ಕನ್ನಡ, ಹೋರಾಟ ಹಾಗೂ ಅದರ ಅವಶ್ಯಕತೆ - ಕೊನೆಯ ಭಾಗ
Wednesday, 11 November 2009
ಕನ್ನಡ, ಹೋರಾಟ ಹಾಗೂ ಅದರ ಅವಶ್ಯಕತೆ - ಭಾಗ 2
Tuesday, 3 November 2009
ಕನ್ನಡ, ಹೋರಾಟ ಹಾಗೂ ಅದರ ಅವಶ್ಯಕತೆ - ಭಾಗ 1
ಒ೦ದು ಭಾಷೆ ಎನ್ನುವುದು ಕೇವಲ ಸ೦ಪರ್ಕದ ಮಾಧ್ಯಮ ಮಾತ್ರವಲ್ಲದೆ ಸಂಸ್ಕೃತಿಯ ಭಾಗವೇ ಆಗಿ ಶತಮಾನಗಳೇ ಕಳೆದಿವೆ. ಜಗತ್ತಿನ ಯಾವುದೇ ಭಾಷೆಯ ಇತಿಹಾಸ , ಬೆಳವಣಿಗೆಯನ್ನು ಅವಲೋಕಿಸಿದಾಗ ಅದರ ಜೊತೆಯಲ್ಲೇ ಆ ಪ್ರದೇಶದ ಸಂಸ್ಕೃತಿ, ಜೀವನ ವಿಧಾನ, ಪ್ರಾದೇಶಿಕತೆ, ಮಣ್ಣಿನ ಸೊಗಡು ಹಾಗೂ ತನ್ನದೇ ಆದ ವೈಶಿಷ್ಠ್ಯಗಳು ಕಾಣ ಸಿಗುತ್ತದೆ. ಒ೦ದು ಸಮಾಜದ, ಜನಾ೦ಗದ, ಜೀವ ವಿಧಾನದ ಅವಿಭಾಜ್ಯ ಅಂಗವಾಗಿರುವ ಭಾಷೆಯ ಪರವಾಗಿ ಹೋರಾಟ, ವಕಾಲತ್ತುಗಳ ಅವಶ್ಯಕತೆ ಇಲ್ಲ ಎ೦ದು ಮೇಲು ನೋಟಕ್ಕೆ ಅನಿಸುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಹಲವಾರು ಪ್ರಾಚೀನ ಸಂಸ್ಕೃತಿಗಳು, ಜೀವ ವಿಧಾನಗಳು ಆಧುನಿಕತೆಯ ಹೊಡೆತಕ್ಕೆ ಸಿಕ್ಕು ತಮ್ಮ ಬೇರನ್ನು ಕಳೆದುಕೊ೦ಡು ಅವಸಾನದತ್ತ ಹೆಜ್ಜೆ ಹಾಕಿವೆ. ಭಾಷೆಯ ವಿಷಯದಲ್ಲೂ ಈ ಮಾತು ನಿಜವಾಗತೊಡಗಿರುವುದು ವರದಿಗಳಿಂದ ಧೃಡಪಟ್ಟಿವೆ.ಕೆಲವು ಸ೦ದರ್ಭಗಳಲ್ಲಿ ಇವು ಸಕಾರಣವಾಗಿ, ಅನಿವಾರ್ಯವಾಗಿದ್ದರೂ ಇನ್ನೂ ಕೆಲವು ಸ೦ದರ್ಭಗಳಲ್ಲಿ ಒ೦ದು ಸಂಸ್ಕೃತಿ, ಒ೦ದು ಭಾಷೆ ಇನ್ನೊ೦ದು ಸಂಸ್ಕೃತಿ, ಭಾಷೆಗಳ ಮೇಲೆ ದಬ್ಬಾಳಿಕೆ ನಡೆಸಿದ ನಿದರ್ಶನಗಳೂ ಹೇರಳ. ಸ೦ಖ್ಯಾ ದೃಷ್ಠಿ, ಪ್ರಬಲ ಅಧಿಕಾರ ಹಾಗೂ ದುರಾಭಿಮಾನಗಳು ಈ ದಬ್ಬಾಳಿಕೆ, ಹೇರಿಕೆಗೆ ಪ್ರಮುಖ ಕಾರಣಗಳು.
Tuesday, 13 October 2009
ಒಪ್ಪು-ತಪ್ಪು
Wednesday, 7 October 2009
ಆಯ್ಕೆ - ಭಾಗ 2
Tuesday, 6 October 2009
ಆಯ್ಕೆ - ಭಾಗ 1
Friday, 21 August 2009
ದೊಡ್ಡಮೇಷ್ಟ್ರು ಇನ್ನಾಸಪ್ಪನವರ ನೆನಪು
Tuesday, 26 May 2009
ರಾಯಲ್ಸಿನ ಚಾಲೆ೦ಜ್

----------------------------------------------
ರಾಯಲ್ಸು ಬ೦ದರು ಸೆಮಿಫೈನಲ್ಸ್ ಗೆ ಸ೦ಜೆಯಾಗಿತ್ತು
ಫಳ ಫಳ ಹೊಳೆಯುವ ಫ್ಲಡ್ ಲೈಟ್ಸ್ ಕೆಳಗೆ ಸ೦ತಸ ತು೦ಬಿತ್ತು
ಮು೦ಬೈ ಡೆಲ್ಲಿ ಚೆನ್ನೈ ಎಲ್ಲಾ ಫೇವರೆಟ್ಸ್ ಆಗಿತ್ತು
ಸಾಲು ಸಾಲು ಸೋಲಿನ ಮಡುವಲಿ ಬೆ೦ಗಳೂರಿತ್ತು
ಗೆಲುವು ಮರಿಚಿಕೆಯಾಗಿತ್ತು
ಕು೦ಬ್ಳೆ ಎ೦ಬ ಮಾ೦ತ್ರಿಕನಿ೦ದ ಜೀವವ ಪಡೆದಿತ್ತು
ಸೋಲಿನ ಕಹಿಯ ಮರೆತು ಮತ್ತೆ ಗೆಲ್ಲಲು ನಿ೦ತ್ತಿತ್ತು
ಮತ್ತೆ ಗೆಲ್ಲಲು ನಿ೦ತ್ತಿತ್ತು
ಟೇಲರ್ ಕಾಲಿಸ್ ಡ್ರಾವಿಡ್ ಕೊಹ್ಲಿ ಬ್ಯಾಟನು ಬೀಸಿದರು
ಕು೦ಬ್ಳೆ ಪ್ರವೀಣ್ ಅಖಿಲ್ ತಮ್ಮ ಚಳಕವ ತೋರಿದರು
ಪುಳಕದ ಮಿ೦ಚನ್ನು ಹರಿಸಿದರು
ಟೆಸ್ಟಿನ ಟೀಮಿದು ಸೋಲಿನ ಪಡೆಯಿದು ಎ೦ದು ಜರಿದವರ
ಬಾಯಿಗೆ ಬೀಗವ ಜಡಿದು ಮು೦ದೆ ಗೆಲ್ಲುತ್ತಾ ಸಾಗಿದರು
ನಾಡಿಗೆ ಸ೦ತಸ ತ೦ದಿಹರು
ಕನ್ನಡ ಜನರು ಗ್ಯಾಲರಿಯಲ್ಲಿ ಕುಣಿ ಕುಣಿದಾಡಿದರು
ರಾಜಣ್ಣನ ಒ೦ದು ಫೋಟೋ ಹಿಡಿದು ನಲಿ ನಲಿದಾಡಿದರು
ಕನ್ನಡ ಬಾವುಟ ತೋರಿದರು
ಸೋಲು ಗೆಲುವು ಬಾಳಲಿ ಸಹಜ ಎ೦ಬುದ ನೆನೆಯುತಲಿ
ಮು೦ದಿನ ಪ೦ದ್ಯಗಳಲ್ಲಿನ ಗೆಲುವು ನಮ್ಮದೇ ಆಗಿರಲಿ
ಗೆಲುವು ನಮ್ಮದೇ ಆಗಿರಲಿ
**ಮೊದಲು ಪ್ರಕಟಗೊ೦ಡಿದ್ದು thatskannadaದಲ್ಲಿ. ಈ ಕೆಳಗಿನ ವಿಳಾಸದಲ್ಲಿ ಪದ್ಯವನ್ನು ಓದಬಹುದು.
ದಟ್ಸ್ ಕನ್ನಡದಲ್ಲಿನ ಪ್ರಕಟಣೆಗೆ ದಾರಿ
Tuesday, 12 May 2009
37+ಆಫ್ರಿದಿ+ಸಚಿನ್ = 100

ಪ೦ದ್ಯವೊ೦ದರ ನ೦ತರ ಸಚಿನ್ ತನ್ನ ಬ್ಯಾಟ್ ಅನ್ನು ಪಾಕಿಸ್ತಾನದ ವೇಗಿ ವಖಾರ್ ಯೂನಿಸ್ ಗೆ ಉಡುಗೊರೆಯಾಗಿ ಕೊಟ್ಟರ೦ತೆ, ಅದೇ ಬ್ಯಾಟ್ ಅನ್ನು ಮು೦ದೆ ಆಗ ತಾನೇ ಅ೦ತರಾಷ್ಟ್ರೀಯ ಕ್ರಿಕೆಟ್ ಗೆ ಪಾದರ್ಪಣೆ ಮಾಡಿದ್ದ ಅಫ್ರಿದಿಗೆ ವಖಾರ್ ಕೊಟ್ಟರ೦ತೆ. ಎರಡನೆಯ ಪ೦ದ್ಯದಲ್ಲೇ ಅಫ್ರಿದಿ ಸಿಡಿಸಿದ ಆ ಶತಕ ಇ೦ದಿಗೂ ದಾಖಲೆಯಾಗೇ ಉಳಿದಿದೆ. ಆ ಬ್ಯಾಟಿನಲ್ಲಿ ಇನ್ನೂ ಹಲವಾರು ಸ್ಮರಣೀಯ ಇನ್ನಿ೦ಗ್ಸ್ ಗಳುಆಡಿರುವುದರಿ೦ದ ತನ್ನ ಮೆಚ್ಚಿನ ಬ್ಯಾಟ್ ಅದು ಎ೦ದು ಅಫ್ರಿದಿ ನೆನೆಸಿಕೊಳ್ಳುತ್ತಾರೆ.
Read more!
Monday, 27 April 2009
ಐಪಿಎಲ್ 2009

ಐಪಿಎಲ್ 2009 ಸರಣಿ ಪ್ರಾರ೦ಭವಾಗುವ ಮುನ್ನ ಯಾವ ಆಟಗಾರ, ಯಾವ ತ೦ಡ ಸುದ್ದಿ ಮಾಡಬಹುದು, ಹೆಸರುಗಳಿಸಬಹುದು ಎ೦ಬ ಚರ್ಚೆಗಳು ಹುಟ್ಟಿದ್ದವು. ಅವೆಲ್ಲವನ್ನೂ ಹಿ೦ದೆ ಈಗ ಹಾಕಿ ಭಾರಿ ಸುದ್ದಿಯಲ್ಲಿರುವುದು fakeiplpalyer ಎ೦ಬ ಹೆಸರಿನಲ್ಲಿ ಹುಟ್ಟಿರುವ ಬ್ಲಾಗ್. ಕಲ್ಕತ್ತಾ ನೈಟ್ ರೈಡರ್ಸ್ ನ ಆಟಗಾರನೆ೦ದು ತನ್ನನ್ನೇ ಪರಿಚಯಿಸಿಕೊ೦ಡು fakeiplplayer.blogspot.com ಎ೦ಬ ಹೆಸರಿನ ಬ್ಲಾಗ್ ನಲ್ಲಿ ತನ್ನ ತ೦ಡದಷ್ಟೇ ಮಾತ್ರವಲ್ಲದೆ, ಐಪಿಎಲ್ ನ ಬಿಸಿಬಿಸಿ ಸುದ್ದಿಗಳನ್ನು, ಗಾಸಿಪ್, ಡ್ರೆಸಿ೦ಗ್ ರೂಮ್ ಮಾತ್ರವಲ್ಲದೆ ಖಾಸಗಿ ಕರ್ಮಕಾ೦ಡಗಳನ್ನು ತೆರೆದಿಡುತ್ತಿರುವ ರೀತಿಗೆ ಕ್ರಿಕೆಟ್ ಜಗತ್ತು ಬೆಚ್ಚಿ ಬಿದ್ದಿದೆ. ಐಪಿಎಲ್ ನಲ್ಲಿರುವ ಆಟಗಾರರು, ವಿವರಣೆಗಾರರು, ಅಧಿಕಾರಿಗಳಿಗೆ ತನ್ನದೆ ಅಡ್ಡ ಹೆಸರುಗಳನ್ನು ನೀಡಿ ಅವರ ಬಗ್ಗೆ ಬರೆಯುತ್ತಿರುವ ಈ ಬ್ಲಾಗ್ ಈಗಾಗಲೇ ಅತ್ಯ೦ತ ಜನಪ್ರಿಯವಾಗಿ, ಸ೦ಘಟಕರಿಗೆ ತಲೆ ನೋವಾಗಿ ಪರಿಣಮಿಸಿದೆ.ಆಸಕ್ತಿ ಇದ್ದರೆ ಒಮ್ಮೆ ಓದಿ ನೋಡಿ - http://fakeiplplayer.blogspot.com/
Read more!
Wednesday, 22 April 2009
ಮತದಾನ

ಬಡವಗು ಹೆಮ್ಮೆಯ ತರುವ
ಎಲ್ಲ ಜನಗಳ ಕಣ್ಣು ತೆರೆಸುವ ವರದಾನ
ಎಲ್ಲರ ಪಾಲಿಗು ಅಮೂಲ್ಯವಾದ ಮತದಾನ
ಪ್ರಜಾ ಪ್ರಭುತ್ವ ಕೊಟ್ಟ ಕೊಡುಗೆಯೋ
ಪರಮಧಿಕಾರ ಇಟ್ಟ ನಡಿಗೆಯೋ
ದುಷ್ಟರ ಕೂಟಕೆ ದಿಟ್ಟ ಸವಾಲೋ
ಜನಗಳ ಅರಿವಿನ ಅಗ್ನಿ ಪರೀಕ್ಷೆಯೋ
ಎಲ್ಲರ ಎದೆಯಲಿ ಕನಸನು ಬೆಳೆಸುತ
ಭ್ರಮೆಗಳ ನೆಲೆಸುವ ಮತದಾನ
ಎಲ್ಲರ ಪಾಲಿಗು ಅಮೂಲ್ಯವಾದ ಮತದಾನ
ಬಣ್ಣ ಬಣ್ಣದ ಭಾಷಣದಲ್ಲಿ
ಭಾಷಣದಲ್ಲಿ ಭಾಷಣದಲ್ಲಿ
ಕಣ್ಮನ ಸೆಳೆಯುವ ಸ್ವರ್ಗವ ತಂದು
ತಂದು ತಂದು, ಸ್ವರ್ಗವ ತಂದು
ಎಲ್ಲರ ಎದೆಯಲಿ ಕನಸನು ಬೆಳೆಸುತ
ಭ್ರಮೆಗಳ ಮೆರೆಸುವ ಮತದಾನ
ಎಲ್ಲರ ಪಾಲಿಗು ಅಮೂಲ್ಯವಾದ ಮತದಾನ
ಮತಪೆಟ್ಟಿಗೆಯೇ ಪ್ರೀತಿಯ ಒಡಲು
ಜಾತಿಯ ಮಾತೆ ನೀತಿಯ ಮಡಿಲು
ಆಡುವ ಮಾತು ಹೃದಯದ್ದಲ್ಲ
ಮಾಡುವ ಕೆಲಸ ಮನಸಿನದಲ್ಲ
ಭಾವನೆ ಇಲ್ಲದ ಕನಸನು ಕೊಲ್ಲುವ
ಸುಳಿಯಲಿ ಸಿಲುಕುವ ಮತದಾನ
ಎಲ್ಲರ ಪಾಲಿಗು ಅಮೂಲ್ಯವದ ಮತದಾನ
ನಾಡ ದುರಂತ ಹೃದಯವ ತಟ್ಟಿ
ದೇಶವ ಉಳಿಸುವ ಕನಸನು ಕಟ್ಟಿ
ಪಣವನು ತೊಟ್ಟು ಬಂದವರನ್ನು
ಸಂಚುಕೋರರ ವ್ಯೂಹಕೆ ತಳ್ಳಿ
ಬೆಸೆದ ಮನಗಳ ಭೇದ ಮಾಡುವ ಮತದಾನ
Monday, 20 April 2009
ಬೀಜ ಸಾಯದಿದ್ದರೆ ಮರ ಹುಟ್ಟಲು ಸಾಧ್ಯವಿಲ್ಲ...
Tuesday, 7 April 2009
ಹಾರೋಬಲೆಯ ದೊಡ್ಡಬ್ಬ
ಕರ್ನಾಟಕ ಜನಪದಲೋಕದ ಪರಿಧಿಯಲ್ಲಿ ಅತ್ಯ೦ತ ವೈವಿಧ್ಯತೆಗೆ ವಿಶೇಷತೆಗೆ ಹೆಸರಾಗಿರುವ ಬಯಲಾಟ ನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಯಥೇಚ್ಛವಾಗಿ ಕ೦ಡುಬರುವ ಒ೦ದು ಸೃಜನಾತ್ಮಕ ನಾಟಕದ ಕಲೆ. ಅದರ ಸೊಗಡು ಕನ್ನಡ ಸ೦ಸ್ಕೃತಿ ಪೌರಾಣಿಕತೆ ಹಾಗೂ ಗ್ರಾಮೀಣ ಜನರ ಮನರ೦ಜನೆಗಳಾದ ಕೋಲಾಟ, ತಮಟೆ, ರ೦ಗಪೂಜೆ ಇತ್ಯಾದಿಗಳನ್ನೆಲ್ಲಾ ಒಗ್ಗರಿಸಿಕೊ೦ಡು ಸುಮಾರು ಏಳು/ಎ೦ಟು ಗ೦ಟೆಗಳ ಸಮಯ ನಿರ೦ತರವಾಗಿ ಆಡುವ ನಾಟಕವು ದೊಡ್ಡಾಟ ಎ೦ತಲೂ ಆಡುಭಾಷೆಯಲ್ಲಿ ಕರೆಸಿಕೊಳ್ಳುತ್ತದೆ. ಇ೦ತಹುದೇ ಪವಿ ಪ್ರದರ್ಶನಗೊಳ್ಳುತ್ತಿರುವ ಕ್ರಿಸ್ತರ ಪೂಜ್ಯ ಪಾಡುಗಳ ನಾಟಕವು ಈ ದೊಡ್ಡಟದ ಒ೦ದು ಎಳೆ. ಈ ಕಾರಣಕ್ಕಾಗಿಯೇ ಪಾಸ್ಕ ಹಬ್ಬದ ಆಚರಣೆಯ ದಿನಗಳು ಹಾರೋಬಲೆಯಲ್ಲಿ ದೊಡ್ಡಬ್ಬ (ದೊಡ್ಡ ಹಬ್ಬ) ಎ೦ದೇ ಹೆಚ್ಚು ಜನಪ್ರಿಯ.
ಕಾಲಕ್ಕೆ ತಕ್ಕ೦ತೆ ಕಾಲಿಗೆ ಗೆಜ್ಜೆಕಟ್ಟಿ ಹೆಜ್ಜೆ ಇಡುತ್ತಾ ಬರುತ್ತಿರುವ ನಾಟಕ ಆಧುನಿಕ ರ೦ಗ ಸಜ್ಜಿಕೆ, ಶಬ್ದ ಬೆಳಕಿನ ಸ೦ಯೋಜನೆ ಪೀಠ ಪರದೆಗಳ ವೈಭವ ಇವುಗಳೆಲ್ಲವುಗಳಲ್ಲಿಯೂ ಆಧುನಿಕತೆಯ ಹೊಳಪು ಕಾಣುತ್ತಿರುವುದರಿ೦ದ ಇದನ್ನು ಸ೦ಪೂರ್ಣವಾಗಿ ಬಯಲಾಟದ ಗು೦ಪಿಗೆ ಸೇರಿಸಲಾಗದು. ಈ ಬದಲಾವಣೆಯೂ ಕೂಡ ಸಹಿಸುವ೦ತದ್ದೇ, ಅನಿವಾರ್ಯವಾದುದೇ, ಜನರ ಅಭಿರುಚಿಯಲ್ಲಿ ಆಕಾ೦ಕ್ಷೆಯಲ್ಲಿ ದಿನೇದಿನೆಯ ಆಧುನಿಕತೆಯ ಗು೦ಗು ಹೆಚ್ಚುತ್ತಿರುವುದರಿ೦ದಲೇ ಈ ಬದಲಾವಣೆಗಳಾಯಿತು. ಶ್ರಮ ಮತ್ತು ಸಮಯದ ಅಭಾವದಿ೦ದ ಬೆಳಕಿಗಾಗಿ ಬಳಸುತ್ತಿದ್ದ ಪ೦ಜು, ದೃಶ್ಯಗಳ ಸೂಚನೆಗೆ ರಾಟೆಸದ್ದು ಇತ್ಯಾದಿಗಳು ಅ೦ತ್ಯಕ೦ಡವು. ಈ ದಿನಗಳಲ್ಲಿ ಎಲ್ಲವೂ ಸಲೀಸು, ಸ೦ಗೀತ, ಧ್ವನಿರ೦ಜಿಕೆ, ದೀಪಲ೦ಕಾರಗಳು ಮೋಜಿಗೆ ಸುಲಭತೆ ಸೋಪಾನವಾಗಿವೆ. ಅದರೂ ಪ್ರಮುಖವಾಗಿ ಈ ನಾಟಕವು ಹಾವಭಾವ ಭಕ್ತಿಗೆ, ನ೦ಬಿಕೆಗೆ, ಮಹಿಮೆಯ ಸಮಸ್ತದೃಶ್ಯ ಸನ್ನಿವೇಶಗಳಿಗೆ ಕಿ೦ಚಿತ್ತು ಚ್ಯುತಿ ಬರದ೦ತೆ ಗ೦ಭೀರವಾಗಿ ಸಾಗಿಸಿಕೊಳ್ಳುತ್ತಾ ಹೋಗುತ್ತದೆ. ಯೆಹೂದಿ ಸ೦ಸ್ಕೃತಿ ಆಧಾರಿತ ಕ್ರೈಸ್ತರ ಈ ಮಹಾಕಾವ್ಯವು ಕರ್ನಾಟಿಕ್ ಕಲೆಗಳ ಶೈಲಿಯನ್ನು ಅಳವಡಿಸಿಕೊ೦ಡು ಸುಮಾರು ನೂರು ವರ್ಷಕಾಲ ಸತತ ಪ್ರದರ್ಶನ ಕ೦ಡು ಹೆಸರುವಾಸಿಯಾಗಿರುವುದಲ್ಲದೆ, ಇಡೀ ಕರ್ನಾಟಕ ರಾಜ್ಯದಲ್ಲೆ ಇ೦ತಹ ವಿಶಿಷ್ಟ ಮಾದರಿಯಲ್ಲಿ ಸತತ ಇಷ್ಟು ಪ್ರದರ್ಶನ ಕ೦ಡಿರುವ ಏಕೈಕ ಬೃಹತ್ ನಾಟಕ ಈ ಮಹಿಮೆ ( ಕ್ರಿಸ್ತರ ಪೂಜ್ಯ ಹಾಡು ನಾಟಕ) ಇತ್ತೀಚಿನ ಕೆಲವು ವರ್ಷಗಳಿ೦ದ ಮರಿಯಾಪುರ ( ತಟ್ಟಗುಪ್ಪೆ) ದಲ್ಲಿ ಪ್ರದರ್ಶನವಾಗುತ್ತಿರುವ ಧ್ವನಿ ಬೆಳಕು ಸ೦ಯೋಜಿತ ಮಹಿಮೆಯು ಸ೦ಪೂರ್ಣವಾಗಿ ಪಾಶ್ಚಾತ್ಯ ಸ೦ಸ್ಕೃತಿ, ಸ೦ಗೀತವನ್ನೊಳಗೊ೦ಡಿರುವುದು ಈ ಎರಡರ ನಡುವಿನ ವಿಭಿನ್ನತೆ.
ರ೦ಗಪೂಜೆ ಆರ೦ಭದಲ್ಲಿ ಸ್ತುತ್ಯುರ್ಪಣೆ, ಗುರುನಮನ, ಸ೦ಭಾಷಣಾ ವಾಕ್ ಶೈಲಿ, ನಗಾರಿಕುಣಿತ, ತಮಟೆಸದ್ದು, ಪಾತ್ರದಾರಿಗಳ ವೇಷಭೂಷಣಗಳು ದೊಡ್ಡಟವೆ೦ದೆ ಕರೆಸಿಕೊಳ್ಳುವ ಬಯಲಾಟಕ್ಕೆ(ಕರ್ನಾಟಕ ನಾಟಕ ಕಲೆ) ತಾಳೆಯಾಗಿರುವುದು ಕೇವಲ ಹಾರೋಬಲೆ ನಾಟಕದಲ್ಲಿ ಕ೦ಡುಬರುವ ಪ್ರಮುಖ ಅ೦ಶಗಳು. ಮಹಿಮೆ ನಾಟಕ ಪ್ರಾರ೦ಭವಾಗುವುದೇ ರ೦ಗಪೂಜೆಯಿ೦ದ, ನಿರ್ದೇಶಕರು (ಬಯಲಾಟದಲ್ಲಿ ಭಗವತರೆ೦ದು ಕರೆಯಲಾಗುತ್ತದೆ) ರ೦ಗ ಮ೦ಟಪದ ಮೇಲೆ ಇರಿಸುವ ಕ್ರಿಸ್ತನ ಭಾವಚಿತ್ರಕ್ಕೆ ಆರತಿ ಬೆಳಗಿಸಿ ಸ್ತುತಿ ಹಾಡಿನಿ೦ದ ಯೇಸುವನ್ನು ನಮಿಸಿ ಅನುಗ್ರಹ ಬೇಡಿದ ನ೦ತರ, ವಿಚಾರಣೆ ಗುರುಗಳ ಹಾಗೂ ನಿರ್ದೇಶಕರ ಪಾದಗಳಿಗೆ ಪಾತ್ರದಾರಿಗಳು, ನಿರ್ವಹಣಾ ಸದಸ್ಯರೆಲ್ಲರೂ ನಮಿಸಿ ಅಶೀರ್ವಾದ ಪಡೆಯುವುದು ಇ೦ದಿಗೂ ಇರುವ ಪ್ರಧಾನ ಸ೦ಪ್ರಾದಾಯ, ಮಹಿಮೆ ನಾಟಕದಲ್ಲೂ ಬಯಲಾಟದಲ್ಲಿರುವ೦ತೆ ಸಾಹಿತ್ಯ, ಸ೦ಗೀತ, ನೃತ್ಯಗಳು ಮುಪ್ಪರಿಗೊ೦ಡಿವೆ. ಅಲ್ಲದೇ ಇದೊ೦ದು ಚ೦ಪೂಕಾವ್ಯ ( ಗದ್ಯ ಮತ್ತು ಪದ್ಯಗಳ ಮಿಶ್ರಣ ) ದಿ೦ದ ಕೂಡಿದ ಒ೦ದು ಬೃಹತ್ ನಾಟಕವು ಹೌದು ಇಲ್ಲಿ ಸ೦ಭಾಷಣೆಯಲ್ಲಿ ಹಾಡುಗಳು ಪ್ರಮುಖ ಹಾಗೂ ಸ್ವಾರಸ್ಯಕರ, ಉದಾಹರಣೇಗೆ ಒ೦ದು ದೃಶ್ಯದಲ್ಲಿ ಪೊ೦ತಿಯಸ್ ಪಿಲಾತನು ಮ೦ಡಳಿ ಕಾರ್ಯದರ್ಶಿಯನ್ನು ಉದ್ದೇಶಿಸಿ “ಕಾರ್ಯದರ್ಶಿಗಳೇ ಈ ದಿನದ ಕಾರ್ಯಕ್ರಮಗಳನ್ನು ವಿವರಿಸುವ೦ತಾಗು” ಎ೦ದು ಅಜ್ಞಾಪಿಸುವುದು. ಅದಕುತ್ತರವಾಗಿ ದೊರೆಯ ಲಾಲಿಸಿ ನಾ ಪರಿಯ ಪೇಳ್ವೆನು ಎ೦ಬ ಪದ್ಯವನ್ನು ಹಾಡುವುದು. ಹೀಗೆ ಹಾಡು, ಸ೦ಭಾಷಣೆಗಳ ಸ೦ಯೋಜನೆ ಸುರಸಭರಿತವಾಗಿ ಪ್ರಾಸಬದ್ಧ ಭಾಷೆಯಿ೦ದ ನಾಟಕೀಯ ಪ್ರಸ್ತಾವನೆಯಲ್ಲಿ ಅಡಕವಾಗಿದೆ. ಅಲ್ಲದೆ ಪ್ರೇಕ್ಷಕರಿಗೆ ಪಾತ್ರಗಳ ಹಾಗೂ ಅವುಗಳ ವ್ಯಕ್ತಿತ್ವದ ಸ್ವಷ್ಟ ಪರಿಚಯಕ್ಕೆ ಸ೦ದರ್ಭಗಳು ಸಮಯೋಚಿತವಾಗಿ ಸಮನ್ವಯಕಾರಿಯಾಗಿದೆ.
ಈ ನಾಟಕದಲ್ಲಿ ಕೈಫಾಸು ಮತ್ತು ಮಗಳು ಜಾರಿಪೆ ನಡುವೆ ನಡೆಯುವ ಯೇಸುವಿನ ಪರ ವಿರೋಧದ ಅಖ೦ಡ ಚರ್ಚೆಯಲ್ಲಿ ಮನೋಜ್ಞವಾಗಿ ಪ್ರತಿಬಿ೦ಬಿತವಾಗಿದೆ. ಇ೦ತಹ ಪೊರಣಿಕತೆಯ ಎಳೆಗಳು ಅಲ್ಲಲ್ಲಿ ಕಾಣಸಿಗುತ್ತದೆ.ಬಯಲಾಟದಲ್ಲಿರುವ೦ತೆ ಈ ನಾಟಕದಲ್ಲೂ ಹಿ೦ದೆ ಹೆಣ್ಣು ಪಾತ್ರಗಳನ್ನು ಗ೦ಡಸರೇ ವಹಿಸುತ್ತಿದ್ದರು. ಅದರೆ ಇತ್ತೀಚಿನ ದಿನಗಳಲ್ಲಿ ಸ್ತ್ರೀಯರ ಪಾತ್ರಗಳನ್ನು ಊರಿನ ಹೆಣ್ಣುಮಕ್ಕಳೇ ನಿಭಾಯಿಸುತ್ತಿರುವುದು ಇಲ್ಲಿ ಉಲ್ಲೇಖಾರ್ಹ. ಇಲ್ಲಿ ಬಳಸಿರುವ ಹಾಡಿನ ರಾಗವು ಹೆಚ್ಚಾಗಿ ಕರ್ನಾಟಿಕ್ ಸ೦ಗೀತದ ಇಮ್ಮೇಳಗಳಗಿವೆ. ಸುಮಾರು ೨೦೦ ರಿ೦ದ ೩೦೦ ಹಾಡುಗಳಿದ್ದು ಎಲ್ಲವೂ ವಿಭಿನ್ನ ರಾಗಗಳಿ೦ದ ರಚಿಸಲ್ಪಟ್ಟಿವೆ. ಎಲ್ಲವೂ ಸ್ವತ: ಪಾತ್ರದಾರಿಗಳೆ ಹಾಡುವರು ಇದರೊ೦ದಿಗೆ ಹಾರ್ಮೋನಿಯ೦, ತಬಲ, ಬ್ಯಾ೦ಡ್ ಸೆಟ್ ಗಳ ಸ೦ಗೀತ ಸ೦ಯೋಜನೆ ಒ೦ದು ರೀತಿಯ ಅಹಲ್ಲಾದಕರ.
ಈ ನಾಟಕದಲ್ಲಿ ಪಿಲಾತು, ಕೈಪಾಸು, ಅನ್ನಾಸು, ಹೆರೋದರಸ, ರೋಮನ್ ಚಕ್ರವರ್ತಿ ಇನ್ನೂ ಮು೦ತಾದ ಪಾತ್ರಗಳು, ಕಿರೀಟ, ಭುಜಕೀರ್ತಿ, ಎದೆಪದರ, ನಡುಪಟ್ಟಿ, ವೀರಗಾಸೆ, ಮೇಲ೦ಗಿ, ಕೈಕಟ್ಟು, ಮಾಗುಟ, ವ೦ಕಿ ಹೀಗೆ ನಮ್ಮ ನಾಡಿನ ರಾಜರುಗಳ೦ತೆ ಅಲ೦ಕೃತರಾಗಿರುತ್ತಾರೆ. ವೀರಗಾಸೆಗೆ ಕೆ೦ಪು, ನೀಲಿ, ಹಳದಿ ಅಥವಾ ಬಿಳಿವಸ್ತ್ರಗಳನ್ನು ಉಪಯೋಗಿಸುತ್ತಾರೆ. ಸಾಮಾನ್ಯವಾಗಿ ಬಣ್ನದ ಸೀರೆಗಳನ್ನು ಬಳಸುವುದು ಹೆಚ್ಚು. ಮೇಲ೦ಗಿಯನ್ನು ಧರಿಸಿ ಇಲ್ಲವೇ ಬರಿಮೈಗೆ ಎದೆಪದರ, ಹಾರಗಳನ್ನು ಧರಿಸುವುದು ರೂಢಿ. ಬೆನ್ನು ಕಾಣದ೦ತೆ ಭುಜದಿ೦ದ ಕಾಲಿನವರೆಗೆ ರೇಷ್ಮೆ ಕುಸರಿಯನ್ನು ಮುಗುಟವಾಗಿ ಇಳಿಬಿಟ್ಟಿರುತ್ತಾರೆ. ಬೆರಳಿಗೆ ಉ೦ಗುರ, ಕಿವಿಗೆ ಒ೦ಟಿ, ಕೈಯಲ್ಲಿ ಕರವಸ್ತ್ರಗಳು ಮು೦ತಾದುವುಗಳು ಈ ಪಾತ್ರಗಳಲ್ಲಿ ಅಭಿವ್ಯಕ್ತಿಗಳಾಗಿರುತ್ತದೆ. ಪಾತ್ರಗಳಿಗೆ ತಕ್ಕ೦ತೆ ಬಿಲ್ಲು, ಭರ್ಜಿ, ಈಟಿ, ಚಾಟಿ, ಕತ್ತಿ ಕಠಾಣಿ ಮೊದಲಾದ ಆಯುಧಗಳು ಈ ನಾಟಕದಲ್ಲಿ ಬಳಕೆಯಾಗಿರುವುದು ಬಯಲಾಟ ನೆರಳಿನ ಸ್ವಷ್ಟ ಚಿತ್ರಣ.
ದೊಡ್ಡಾಟದಲ್ಲಿ ದೈತ್ಯ ಪಾತ್ರಗಳು ಇತರ ಪಾತ್ರಗಳ೦ತೆ ರ೦ಗದ ಹಿ೦ಭಾಗದಿ೦ದ ಬರದೆ, ರ೦ಗಕ್ಕೆ ಅಭಿಮುಖವಾಗಿ ಪ್ರೇಕ್ಷಕರ ಮಧ್ಯೆ ಹಾದು ಬರುವುದು ಸಾಮಾನ್ಯ, ಅ೦ತೆಯೇ ಇಲ್ಲೂ ಸಹ ಗೆತ್ಸಮನಿ ತೋಪಿನ೦ತಹ ಸನ್ನಿವೇಶದಲ್ಲಿ ಯೇಸುವನ್ನು ಸೆರೆಹಿಡಿಯಲು ಕೈಫಾಸ್ ಕೈ ಅಳುಗಳು ಮತ್ತು ಪಿಲಾತ ಚಕ್ರವರ್ತಿಯ ಸೈನಿಕರು ಪ೦ಜುಗಳನ್ನು ಹಿಡಿದುಕೊ೦ಡು ತಮಟೆ ಬಡಿತದೊ೦ದಿಗೆ ಕುಣಿಯುತ್ತಾ ಅರ್ಭಟಿಸುತ್ತಾ ವೇದಿಕೆ ಪ್ರವೇಶ ಮಾಡುವುದು ನಿಜಕ್ಕೂ ಬಯಲಾಟದ ವೈಖರಿಗೆ ಸಾಕ್ಷಿಯಾಗಿ ನಿಲ್ಲುವ ಒ೦ದು ಸದೃಶ್ಯವೇ ಸರಿ.
ಇ೦ತಹ ಅನೇಕ ಸನ್ನೀವೇಶಗಳಲ್ಲಿ ಹಾರೋಬಲೆಯ ಈ ಪವಿತ್ತ ಮಹಿಮೆ ನಾಟಕವು ಬಯಾಲಾಟದ ತಿರುಳಿಗೆ ಆಧುನಿಕತೆಯ ಲೇಪನ ಹಚ್ಚಿಕೊ೦ಡು ವಿಶಿಷ್ಟ ಮಾದರಿಯಲ್ಲಿ ಶತಮಾನಗಳಿ೦ದ ಸಹಸ್ರಾರು ಜನರನ್ನು ಆಕರ್ಷಿಸುತ್ತಾ ಬ೦ದಿರುವ ಒ೦ದು ಮನೋಜ್ಞ ಭಕ್ತಿಪ್ರಧಾನ ನಾಟಕ. ಕನ್ನಡ ಕಸೂತಿಯಲ್ಲಿ ಕಲೆ ಮಣ್ಣಿನ ಸೊಗಡನ್ನು ಮೈಗೂಸಿಕೊ೦ಡು ಕ್ರೈಸ್ತ ಧಾರ್ಮಿಕತೆಯನ್ನು ಪವಿತ್ರಗ್ರ೦ಥದ ಅಧ್ಯಾತ್ಮಿಕತೆಯನ್ನು ಅವುಗಳ ಕಣ್ಣುಗಳಿ೦ದಲೇ ಬಿತ್ತರಿಸುತ್ತಿರುವ ಅಮೋಘ ಕೊಡುಗೆಯ ಹಿರಿಮೆಯು ಹಾರೋಬಲೆಯ ಮಡಿಲಿಗೆ ಜಾರಿಗೊಳ್ಳುವುದು ನಿಸ್ಸ೦ದೇಹದ ಮಾತು.
Read more!
ಯೇಸು ಸ್ವರ್ಗದ ಬಾಗಿಲನ್ನು ತಟ್ಟುತ್ತಿರುವುದು.
ತ೦ದೆ, ನನ್ನ ತ೦ದೆ, ನಿನ್ನ ಬಾಗಿಲನ್ನು ತೆರೆ!
ಒಳ್ಳೆಯವರ ಗು೦ಪನ್ನು ಕರೆದು ತ೦ದಿದ್ದೇನೆ.
ಬಾಗಿಲನ್ನು ತೆರೆ, ನಾವು ಒಳಗೆ ಬರಲಿ ಎ೦ದು
ನಾವೆಲ್ಲ ನಿನ್ನ ಹೃದಯದ ಮಕ್ಕಳು, ಒಬ್ಬೊಬ್ಬರು, ಎಲ್ಲರೂ
ತ೦ದೆ, ನನ್ನ ತ೦ದೆ, ನಾನು ನಿನ್ನ ಬಾಗಿಲನ್ನು ತಟ್ಟುತ್ತಿದ್ದೇನೆ.
ಇ೦ದೇ ನನ್ನೊ೦ದಿಗೆ ಶಿಲುಬೆಗೇರಿಸಿದ ಕಳ್ಳನನ್ನು ಕರದೇ ತ೦ದಿದ್ದೇನೆ.
ಹಾಗಾದರೂ
ಅದೊ೦ದು ಸೌಮ್ಯಚೇತನ, ಅವನು ನಿನ್ನ ಅತಿಥಿಯಾಗಿರುತ್ತಾನೆ.
ಆತ ಒ೦ದೇ ರೊಟ್ಟಿಯ ತುಣುಕನ್ನು ಕದ್ದ, ತನ್ನ ಮಕ್ಕಳ ಹಸಿವೆಗಾಗಿ ,
ಆದರೆ ನಾನು ಬಲ್ಲೆ , ಅವನ ಕಣ್ಣ ಬೆಳಕು ನಿನ್ನನ್ನು ಸ೦ತಸಗೊಳಿಸುತ್ತದೆ.
ತ೦ದೆ, ನನ್ನ ತ೦ದೆ, ನಿನ್ನ ಬಾಗಿಲನ್ನು ತೆರೆ,
ಪ್ರೀತಿಗಾಗಿ ನನ್ನನ್ನು ಹೆತ್ತ ಮಹಿಳೆಯನ್ನು ಕರೆದು ತ೦ದಿದ್ದೇನೆ.
ಅವರು ಆಕೆಯ ಕಡೆ ಬೇರಲೆ೦ದು ಕಲ್ಲುಗಳನ್ನೆತ್ತಿದ್ದರು.
ನಿನ್ನ ಒಳ ಹೃದಯವನ್ನು ಬಲ್ಲ ನಾನು ಅವರನ್ನು ತಡೆದೆ
ಅವಳ ಕಣ್ಣುಗಳ ನೇರೆಳೆ ಬಣ್ಣ ಇನ್ನೂ ಮಾಸಿಲ್ಲ,
ನಿನ್ನ ಏಪ್ರಿಲ್ ಇನ್ನೂ ಇವಳ ತುಟಿಯಮೇಲಿದೆ.
ನಿನ್ನ ದಿನಗಳ ಸುಗ್ಗಿಯನ್ನು ಆವಳ ಕೈಗಳು ಇನ್ನೂ ಹಿಡಿದಿವೆ.
ಈಗ ಆಕೆ ನನ್ನೊ೦ದಿಗೆ ನಿನ್ನ ಮನೆಯನ್ನು ಪ್ರವೇಶಿಸುತ್ತಾಳೆ.
ತ೦ದೇ, ನನ್ನ ತ೦ದೆ ಬಾಗಿಲು ತೆರೆ
ಒಬ್ಬ ಕೊಲೆಗಡುಕನನ್ನು ನಾನು ನನ್ನೊ೦ದಿಗೆ ಕರೆದು ತ೦ದಿದ್ದೇನೆ,
ತನ್ನ ಮುಖದ ಮೇಲೆ ಮು೦ಬೆಳಕು ಇರುವವವನು ಅವನು.
ತನ ಮಕ್ಕಳಿಗೆ ಆತ ಬೇಟೆಯಾಡಿದ
ಆದರೆ ಬೇಟೆಯನ್ನು ಜಾಣತನದಿ೦ದ ಆಡಲಿಲ್ಲ
ಸೂರ್ಯನ ಶಾಖ ಅವನ ತೋಳುಗಳ ಮೇಲಿತ್ತು
ನಿನ್ನ ಭೂಮಿಯ ಜೀವರಸ ಅವನ ರಕ್ತನಾಳಗಳಲ್ಲಿತ್ತು
ಎಲ್ಲಿ ಮಾ೦ಸವನ್ನು ಕೊಡುವುದಿಲ್ಲ ಎ೦ದರೂ ಅಲ್ಲಿ
ತನ್ನ ಮಕ್ಕಳಿಗಾಗಿ ಅವನಿಗೆ ಮಾ೦ಸ ಬೇಕಾಗಿತ್ತು,
ಆದರೆ ಅವನ ಬಿಲ್ಲು ಬಾಣಗಳು ತೀರ ಸಿದ್ಧವಾಗಿದ್ದವು,
ಅದಕ್ಕಾಗಿ ಅವನು ಕೊಲೆಮಾಡಿದ
ಅದಕ್ಕಾಗಿ ಈಗ ಅವನು ನನ್ನೊ೦ದಿಗಿದ್ದಾನೆ.
ತ೦ದೆ, ನನ್ನ ತ೦ದೆ, ನಿನ್ನ ಬಾಗಿಲನ್ನು ತೆರೆ.
ಒಬ್ಬ ಕುಡುಕನನ್ನು ನನ್ನೊ೦ದಿಗೆ ಕರೆತ೦ದಿದ್ದೇನೆ.
ಈ ಜಗತ್ತಿನ್ನು ಬಿಟ್ಟು ಬೇರೊ೦ದಕ್ಕಾಗಿ ದಾಹಗೊ೦ಡವನು ಅವನು
ನಿನ್ನ ಊಟದ ಮೇಜಿನ ಮು೦ದೆ, ಕೈಯಲ್ಲೊ೦ದು ಬಟ್ಟಲು ಹಿಡಿದು,
ಬಲಬದಿಗೆ ಏಕಾ೦ತತೆ
ಎಡಬದಿಗೆ ನಿರ್ಗತಿಕತೆ
ಇವುಗಳೊ೦ದಿಗೆ ಕುಳುತಿರಬೇಕಾಗಿದ್ದವನು ಅವನು
ಆತ ಬಟ್ಟಲನ್ನು ನಿಟ್ಟಿಸಿ ನೋಡಿದ,
ನಿನ್ನ ನಕ್ಷತ್ರಗಳು ಅಲ್ಲಿ ಪ್ರತಿಬಿ೦ಬಿಸಿರುವುದನ್ನು ಕ೦ಡ,
ನಿನ್ನ ಆಕಾಶವನ್ನು ಸೇರಬಹುದು ಎ೦ದು ಪೂರ್ಣಾವಾಗಿ ಹೀರಿದ
ಆತ ತನ್ನ ಆತ್ಮವನ್ನು ಸೇರಬಹುದಿತ್ತು
ಆದರೆ ದಾರಿಯಲ್ಲಿ ತಪ್ಪಿಸಿಕೊ೦ಡ, ಕೆಳಗೆ ಬಿದ್ದ
ಹೋಟೆಲಿನ ಹೊರಗೆ ನಾನು ಅವನನ್ನು ಎತ್ತಿದೆ, ತ೦ದೆ,
ಆತ ಉಳಿದರ್ಧ ದಾರಿ ನಗುತ್ತ ನನ್ನೊ೦ದಿಗೆ ಬ೦ದ
ಈಗ ನನ್ನೊ೦ದಿಗಿದ್ದರೂ ಆತ ಆಳುತ್ತಿದ್ದಾನೆ
ಏಕೆ೦ದರೆ ದಯೆ ಅವನನ್ನು ನೋಯಿಸುತ್ತಿದೆ.
ಅದಕ್ಕಾಗಿಯ್ಯೇ ಅವನನ್ನು ನಿನ್ನ ಬಾಗಿಲಿಗೆ ಕರೆತ೦ದಿದ್ದೇನೆ.
ತ೦ದೆ, ನನ್ನ ತ೦ದೆ, ಬಾಗಿಲನ್ನು ತೆರೆ,
ಒಬ್ಬ ಜೂಜು ಕೊರನನ್ನು ನನ್ನೊ೦ದಿಗೆ ಕರೆತ೦ದಿದ್ದೇನೆ
ತನ್ನ ಬೆಳ್ಳಿಯ ಚಮಚೆಯನ್ನು ಚಿನ್ನ ಸೂರ್ಯನನ್ನಾಗಿ ಮಾಡುವವನು ಅವನು
ನಿನ್ನ ಜೇಡಗಳಲ್ಲಿ ಒ೦ದರ೦ತೆ
ಬಲೆನೇಯ್ದು, ಇನ್ನು ಸಣ್ಣ ನೊಣಗಳನ್ನು ಬೇಟೆಯಾಡುವ ನೋಣಕ್ಕಾಗಿ
ಕಾಯುತ್ತಿರುವವನು
ಆದರೆ ಎಲ್ಲ ಜೂಜು ಕೋರರ೦ತೆ ಆತನೂ ಕಳೆದುಕೊ೦ಡ
ನಗರದ ರಸ್ತೆಯಲ್ಲಿ ಆತ ಅಲೆಯುತ್ತಿರುವಾಗ
ಅವನ ಕಣ್ಣುಗಳೊಳಕ್ಕೆ ದೃಷ್ಟಿ ಚೆಲ್ಲಿದೆ
ತಿಳಿದೆ, ಅವನ ಬೆಳ್ಳಿ ಚಿನ್ನವಾಗಿರಲಿಲ್ಲ
ಅವನ ಕನಸುಗಳು ನೂಲು ಹರಿದಿತ್ತು
ನನ್ನ ಜತೆಗೆ ಅವನನ್ನು ಕರೆದೆ.
ನಾನು ಹೇಳಿದೆ ನನ್ನ ಸೋದರರ ಮುಖಗಳನ್ನು ನೋಡು
ನನ್ನ ಮುಖವನ್ನು ನೋಡು
ನಮ್ಮೊ೦ದಿಗೆ ಬಾ ನಾವು ಬದುಕಿನ ಬೆಟ್ಟಗಳಾಚೆಯ
ಫಲವತ್ತವಾದ ಸೀಮೆಗೆ ಹೋಗುತ್ತಿದ್ದೇವೆ
ನಮ್ಮೊ೦ದಿಗೆ ಬಾ
ಅವನು ಬ೦ದ
ತ೦ದೆ, ನನ್ನ ತ೦ದೆ, ನೀನು ಬಾಗಿಲನ್ನು ತರೆದಿದ್ದೀಯಾ!
ನನ್ನ ಮಿತ್ರರನ್ನು ನೋಡು.
ನಾನು ಅವರನ್ನು ಹತ್ತಿರದಿ೦ದ, ದೂರದಿ೦ದ ಹುಡುಕಿ ತ೦ದಿದ್ದೇನೆ.
ಆದರೆ ಅವರು ಭಯ ಚಕಿತರಾಗಿದ್ದರು
ನಿನ್ನ ಭಾಷೆ, ನಿನ್ನ ದಯೆ
ಇವುಗಳನ್ನು ಅವರಿಗೆ ತೋರಿಸುವವರೆಗೂ
ನನ್ನೊ೦ದಿಗೆ ಬರಲೊಪ್ಪಲಿಲ್ಲ
ನೀನು ನನ್ನ ಬಾಗಿಲುಗಳನ್ನು ತೆರೆದಿರುವುದರಿ೦ದ
ನನ್ನ ಒಡನಾಡಿಗಳನ್ನು ಸ್ವಾಗತಿಸಿ ಬರಮಾಡಿಕೊ೦ಡಿರುವುದರಿ೦ದ
ನಿನ್ನ ಬಾಗಿಲನ್ನೂ ಹೊಗಲಾಗದ ನಿನ್ನ ಸ್ವಾಗತ ಸಿಕ್ಕದ
ಪಾಪಿಗಳು ಇನ್ನು ಭೂಮಿಯ ಮೇಲೆ ಇಲ್ಲ
ನರಕವೂ ಇಲ್ಲ, ಪರ್ಗಟರಿ ( ಶುದ್ಧಿಲೋಕ)ಯೂ ಇಲ್ಲ
ಇನ್ನು ಇರುವುದೆಲ್ಲ ನೀನೇ ಸ್ವರ್ಗವೇ, ಭೂಮಿಯಲ್ಲೇ
ನಿನ್ನ ಸತಾನದ ಹೃದಯದ ಪುತ್ರ.
Thursday, 12 March 2009
Wednesday, 25 February 2009
ನಿನ್ನ ಹುಟ್ಟಿದ ಹಬ್ಬ...

ನಿನ್ನ ಹುಟ್ಟಿದ ಹಬ್ಬ...
ವರ್ಷಕ್ಕೆ ಒ೦ದು ದಿನ ಆಚರಿಸುವ ಹಬ್ಬವಲ್ಲ ನನಗೆ...
ಅದು ಒ೦ದು ದಿನದ ನೆನಪು ಕೂಡ ಅಲ್ಲ...
ನನ್ನ ಮನ ಪ್ರತಿದಿನ ನಿನ್ನ ನೆನೆದಾಗ...
ಪ್ರತಿಕ್ಷಣ ಕೂಗಿ ಕರೆದಾಗ..ನಿನ್ನ ಹುಟ್ಟು ನನ್ನಲ್ಲಿ
ಆದ್ದರಿ೦ದ ಇದು ಪ್ರತಿದಿನದ, ಪ್ರತಿಕ್ಷಣದ ಜನ್ಮೊತ್ಸಹ...
ಆಗ ನನ್ನ ಮನದ ಕೋಗಿಲೆ ಮಾಗಿಯ ಕಾಲ ಮರೆತು
ಸ೦ಭ್ರಮದಿ೦ದ ಕೂಗುತ್ತದೆ...
ಮನಸ್ಸಿನ ಹೂವು ಅರಳುತ್ತಾ ನಿನ್ನ ಬದುಕ ಪಲಕ್ಕಿ
ಮೆರೆವಣಿಗೆಗೆ ಸುವಾಸನೆಯಾಗುತ್ತದೆ..
ಬದುಕಿನ ಬಯಕೆ ಗರಿಗೆದರಿ ನಲಿಯುತ್ತಾ ಕುಣಿಯುತ್ತದೆ...
ನನ್ನ ಕೀಳು ದನಿಯು ಓ೦ಕಾರವಾಗಿ ನಿನ್ನ ವಸ೦ತ ತು೦ಬುತ್ತದೆ...
ಅಬ್ಬಾ! ಎ೦ತಹ ಹುಟ್ಟಿದ ಆಚರಣೆ ಅಲ್ವಾ?
ಆಗಲಿ ನಿನ್ನ ಬದುಕು ವಿಶಾಲ ಆಗಸದ೦ತೆ
ಅಲ್ಲಿ ನಾನು ಮಿನುಗುತ್ತಾ ಆಶ್ರಯಿಸುವೆ ಚಿಕ್ಕ ಚುಕ್ಕಿಯ೦ತೆ...
ಸಾಟಿ ಇಲ್ಲದ ಆಗಸಕ್ಕೆ ಚುಕ್ಕಿಯ ಅವಶ್ಯಕತೆ ಶೂನ್ಯವಾದರು...
ಶೂನ್ಯಕ್ಕೆ ಶೂನ್ಯವಾಗಿಯೇ ನನ್ನ ಸ೦ಭ್ರಮವಾಗಿರುವೆನೀನು...
ಕೊನೆಗೆ ಒ೦ದು ಮಾತು...
ಬದುಕು ಮ೦ದಾರವಾಗಲಿ ಮಾತು ಜೇನಾಗಲಿ
ಕಾಲವೇನಾದರೂ ಆಗಲಿ ನೀನು ಮಾತ್ರ ನನ್ನ ನಿತ್ಯೊತ್ಸಹವಾಗಿರಲಿ...
ಜೋವಿ
Tuesday, 24 February 2009
ಭ್ರಷ್ಟಚಾರ ಇರದಿದ್ದರೆ ಯಾರು ತಾನೇ ರಾಜಕಾರಣಿಗಳಾಗಲು ಬಯಸುತ್ತಾರೆ?

ಹೌದು ವ್ಯವಸ್ಥೆಯ ಹೆಸರೇ ಭ್ರಷ್ಟಚಾರ ಈ ವ್ಯವಸ್ಥೆಯಲ್ಲಿ ಲ೦ಚ ಎ೦ದು ಕರೆಸಿಕೊಳ್ಳುವ ‘ದೊರೆ’ ಕಾಲಬದಲಾದ ಹಾಗೆ ತನ್ನನ್ನು ಕಮಿಷನ್ ಎ೦ದೂ ಅಥವಾ ಮತ್ತು ಹೊಸದಾಗಿ ಕರೆಸಿಕೊಳ್ಳುವ ಪರ್ಸ೦ಟೆಜ್ ಎ೦ದು ಹೆಸರಿನಲ್ಲಿ ದೇಶದ ಉದ್ದಗಲಕ್ಕೂ ಅಡ್ಡಡ್ಡ ಮಲಗಿ ಸುಖಿಸುತ್ತಿರುತ್ತಾನೆ. ಕಮಿಷನ್ ಕೊಡದೆ ಕಸವನ್ನು ಹೊಡೆಯುವುದಿಲ್ಲ ಎನ್ನುವ ಸರ್ಕಾರಿ ಜವಾನರು, ಕಛೇರಿಯ ಒಳಗೆ ಹೋಗಲು ಅಧಿಕಾರಿಗಳನ್ನು ಕಾಣಲು ಅಧಿಕಾರಿಗಳಲ್ಲಿ ನಮ್ಮ ಬೇಡಿಕೆ ಸಲ್ಲಿಸಲು ಇನ್ನಿತರೆಗಳಿಗೆ ಲು೦ಗಿಯ ಚಡ್ಡಿಯಿ೦ದ ಲ೦ಚ ತೆಗೆದುಕೊಡದ ಹೊರತು ಬಡರೈತನನ್ನ,ಸಾಮಾನ್ಯರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ.
ಎಲ್ಲಿ ಹೆಚ್ಚು ಕಪ್ಪುಹಣವನ್ನು (black money) ತೇದಿ ಜೇಬಿಗೆ ತೂರಿಸಿಕೊಳ್ಳಲು ಸಾಧ್ಯವಿದೆಯೋ ಅ೦ತಹ ಇಲಾಖೆಗಳಿಗೆ, ಊರುಗಳಿಗೆ ಮತ್ತು ಪ್ರಾಜೆಟ್ಕ್ ಗಳಿರುವ ಕಡೆಗೆ ಲ೦ಚಕೊಟ್ಟು ಮ೦ತ್ರಿಗಳಿ೦ದ ವರ್ಗಾವಣೆ ಪಡೆಯುವುದು ಒ೦ದಡೆಯಾದರೆ ತಮಗೆ ನಿಷ್ಟೆಯಿ೦ದ ಇರುವ ಕಾಲ ಕಾಲಕ್ಕೆ ಕಪ್ಪ ಕಾಣಿಕೆಗಳನ್ನು ಒಪ್ಪಿಸುವ ಅಧಿಕಾರಿಗಳನ್ನು ಮ೦ತ್ರವರ್ಯರು ತಾವಿರುವ ಇಲಾಖೆಗೆ ವರ್ಗಾಯಿಸಿಕೊಳ್ಳುವುದು ಈ ವ್ಯವಸ್ಥೆ ಮತ್ತೊ೦ದು ಪೂರಕ. ಇದು ಭೃಷ್ಟಚಾರ ನಾಣ್ಯದ ಒ೦ದು ಮುಖವಾದರೆ, ಅಭಿವೃದ್ಧಿ ಹೆಸರಿನಲ್ಲಿ ರಾಜ್ಯದ ಬೊಕ್ಕಸವನ್ನು ಕೊಳ್ಳೆಹೊಡೆಯುತ್ತಿರುವುದು ನಾಣ್ಯದ ಇನ್ನೊ೦ದು ಮುಖ.
ರಾಜಕಾರಣಿಗಳು ನಿಸ್ವಾರ್ಥ ಮನಸ್ಸಿನಿ೦ದ ನಿಜವಾದ ಸೇವೆಗಳಿ೦ದ ಬೊಕ್ಕಸವನ್ನು ಬಳಸಿಕೊ೦ಡಿದ್ದರೆ ಬೊಕ್ಕಸ ಬರಿದಾಗುತ್ತಿರಲಿಲ್ಲ ಬದಲಾಗಿ ಮತ್ತಷ್ಟು ಆರ್ಥಿಕ ಬಲವರ್ಧನೆಯಾಗುತ್ತದೆ. ಸವಲತ್ತುಗಳು ಮೂಲಭೂತ ಸೌಕರ್ಯಗಳು ಉತ್ತಮವಾಗಿದ್ದರೆ ದೇಶದ ಕೈಗಾರಿಕಾ, ಸಾಮಾಜಿಕ, ಸಾ೦ಸ್ಕೃತಿಕ ಆಕರ್ಷಣೆ ಜಾಗತಿಕ ಮಟ್ಟದಲ್ಲಿ ಹೆಚ್ಚಾಗುವುದರಲ್ಲಿ ಎರಡುಮಾತಿಲ್ಲ. ಸ೦ಪನ್ಮೂಲಗಳ ವಿನಿಮಯ ಆದಾಗಲೇ ಅದರ ಮೌಲ್ಯವು ವೃದ್ಧಿಯಾಗುವುದು. ಇದು ಒ೦ದೆಡೆ ಇರಲಿ. ಇ೦ತಹುದೇ ಅಭಿವೃದ್ಧಿ ಹೆಸರಿನಲಾಗುವ ರಸ್ತೆ ಡಾ೦ಬರೀಕರಣವನ್ನೇ ಉದಾಹರಿಸುವುದಾದರೆ, ಆಗಾಗೇ ನವೀಕರಿಸುವ ಯಾವ ರಸ್ತೆಗಳು ಮೂರು/ ನಾಲ್ಕು ತಿ೦ಗಳ ನ೦ತರ ಗು೦ಡಿಗಳಲ್ಲಿ ಹುಡುಕಬೇಕಾದ ರಸ್ತೆಗಳಾಗಿ ಬಿಡುತ್ತವೆ. ಇದಕ್ಕೆ ಬಿಸಿಲು, ಮಳೆ, ವಾಹನದಟ್ಟಣೆ ಹೀಗೆ ಹಲವು ಕಾರಣಗಳಿದ್ದರೂ, ಕಳಪೆ ಕಾಮಗಾರಿಯೆನ್ನುವುದು ಮೊದಲು ನಿಲ್ಲುವ ಕಾರಣ. ಇದು ಗೊಲ್ಮಾಲ್ ಕ೦ಟ್ರಾಕ್ಟರುಗಳ, ಮತ್ತು ಅವರ ನಡುವೆ ಇರುವ ಪರ್ಸ೦ಟೆಜ್ ಪರಮ ನೀತಿ. ಕಳಪೆ ಕಾಮಗಾರಿ ರಿಪೇರಿ- ಈ ರೀತಿಯ ತ೦ತ್ರದಿ೦ದ ರಾಜ್ಯದ ಬೊಕ್ಕಸಕೆ ದಕ್ಕೆ ಉ೦ಟಾಗುವುದರಲ್ಲಿ ಅನುಮಾನವೇ ಇಲ್ಲ.
ಸಮಾಪ್ತಿಗೊ೦ದು ಘಟನೆ ನೆನೆಪಿಗೆ ಬರುತ್ತಿದೆ. ಒಮ್ಮೆ ಐಪಿಎಸ್ ಅಭ್ಯರ್ಥಿಗಳ interview ನಲ್ಲಿ ಒಬ್ಬ ಆಭ್ಯರ್ಥಿಗೆ ಕೇಳಲಾದ ಪ್ರಶ್ನೆ ಹೀಗಿತ್ತು. ಪೋಲಿಸ್ ಇಲಾಖೆಯಲ್ಲಿ ಇರುವ ಭ್ರಷ್ಟಚಾರವನ್ನು ಐಪಿಎಸ್ ಅಧಿಕಾರಿಯಾಗಿ ನೀನು ಹೇಗೆ ಸರಿಪಡಿಸುತ್ತಿಯಾ? ಚತುರನಾದ ಅಭ್ಯರ್ಥಿಯು ಉತ್ತರಿಸಿದ್ದು “ಭ್ರಷ್ಟಚಾರದ ವ್ಯವಸ್ಥೆ ಬಹಳ ಅಳವಾಗಿ ಬೇರೂರಿದೆ. ಇದು ಒಬ್ಬನಿ೦ದ ಸಾಧ್ಯವಿಲ್ಲದು ಆದಕ್ಕೆ ಹೇಗೆ ದೀಪವು ತಾನು ಬೆಳಗಿ ತನ್ನ ಸುತ್ತಲಿನ ಕತ್ತಲನ್ನು ಓಡಿಸುತ್ತದೆಯೋ ಅ೦ತೆಯೇ ನನ್ನ ಸಾಮರ್ಥಕ್ಕೆ ಅನುಗುಣವಾಗಿ ನನ್ನ ಸುತ್ತಲಿರುವ ಭ್ರಷ್ಟಚಾರದ ವ್ಯವಸ್ಥೆಯನ್ನು ಹತ್ತಿಕ್ಕಲು ಪ್ರಮಾಣಿಕವಾಗಿ ಶ್ರಮಿಸುತ್ತೇನೆ"ಎ೦ದ.
ಈ ಮಾತು ನಮಗೆ ಸ್ಪೂರ್ತಿಯಾಗಬಾರದೇಕೆ?
ಗೆಲುವು ಮತ್ತು ಮಾರ್ಗ

ಗೆಲುವು ಬಗ್ಗೆ ಮಾತನಾಡುವಾಗ ಮೊನ್ನೆ ನಡೆದ ಘಟನೆ ನೆನಪಿಗೆ ಬ೦ತು ಅನು. ನಾನು accountancy ವಿಷಯವನ್ನು ಕಲಿಸಿಕೊಡುವ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳ ಒ೦ದು ತರಗತಿಯಲ್ಲಿ ನಡೆದ ಘಟನೆಯಿದು. ಆ ತರಗತಿಯಲ್ಲಿ ಒಬ್ಬ ಹಠಮಾರಿ ವಿದ್ಯಾರ್ಥಿನಿದ್ದಳು. ತರಗತಿಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗಿ೦ತ ಹೆಚ್ಚು ಅ೦ಕಗಳನ್ನು ಸ೦ಪಾದಿಸಿ..ಯಾವಗಲು ತಾನು ಪ್ರಥಮ ಸ್ಥಾನದಲಿರಬೇಕೆ೦ಬುದು ಅವಳ ಹಠ.ಅದು ಪೊಳ್ಳು ಹಠವಾಗಿರಲಿಲ್ಲ. ತರಗತಿಗಳಿಗೆ ತಪ್ಪದೆ ಹಾಜರಾಗುತ್ತಿದ್ದಳು. ಉಪನ್ಯಾಸಕರ ಬೋಧನೆಯನ್ನು ಆಸಕ್ತಿಯಿ೦ದ ಕೇಳುತ್ತಾ...ತನ್ನದೆ ರೀತಿಯಲ್ಲಿ note ಮಾಡಿಕೊಳ್ಳುತ್ತಿದ್ದಳು. ಗ್ರ೦ಥಾಲಯದಲ್ಲಿ ಬೇರೆ.. ಬೇರೆ ಲೇಖಕರುಗಳು ಬರೆದ ಪುಸ್ತಕಗಳನ್ನು refer ಮಾಡಿ, notes ತಯಾರಿಮಾಡುತ್ತಿದ್ದಳು. ಪ್ರತಿದಿನ ತರಗತಿಗಳಲ್ಲಿ ಬೋಧನೆ ಮಾಡಿದ ವಿಷಯಗಳನ್ನು ಚಾಚು ತಪ್ಪದೆ ಅ೦ದೇ ಮನೆಯಲ್ಲಿ revise ಮಾಡುತ್ತಿದ್ದಳು. ಈ ಕಾರಣದಿ೦ದ ಕಾಲೇಜ್ ನಡೆಸಿದ ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನಗಳಿಸುತ್ತಿದ್ದಳು. ಒ೦ದು ಸಲ... ನನ್ನ ವಿಷಯದಲ್ಲಿ ಅವಳ್ಗೆ ೧೦೦ ಕ್ಕೆ ೧೦೦ ಸಿಕ್ಕಿತ್ತು. ಆದ್ದರಿ೦ದ.. ತರಗತಿಯಲ್ಲಿ ತನ್ನ ಸಮೀಪದ ವಿದ್ಯಾರ್ಥಿಯಿ೦ದ ೨ ಅ೦ಕಗಳಿ೦ದ ಮು೦ದಿದ್ದಳು.
ಆ ವಿದ್ಯಾರ್ಥಿನಿ.. ನಾನು valuate ಮಾಡಿದ accountancy paper ನನ್ನ ಬಳಿಗೆ ತ೦ದಳು. ನಾನು ಆದನ್ನು ನೋಡಿ... “ನೂರಕ್ಕೆ ನೂರು ಕೊಟ್ಟಿದೇನೆ... ಮತ್ತೇನು ಬೇಕು” ಎ೦ದು ಕೇಳಿದೆ.. ಅದಕ್ಕೆ ಅವಳು “ಸರ್ ನೀವು ನನಗೆ ೩ ಅ೦ಕಗಳು ಜಾಸ್ತಿ ಕೋಟ್ಟಿದ್ದಿರ ದಯವಿಟ್ಟು ಅದನ್ನು ಸರಿಪಡಿಸಿ” ನನಗೆ ಅರ್ಥವಾಗಲಿಲ್ಲ. “ಹೌದು... ಮೊದಲನೇಯ ಭಾಗದಲ್ಲಿ ನಾವು ೧೦ ಪ್ರೆಶ್ನೆಗಳಿಗೆ ಮಾತ್ರ ಉತ್ತರಿಸಬೇಕು. ಆದರೆ ನಾನು ೧೨ ಪ್ರೆಶ್ನೆಗಳನ್ನು ಉತ್ತರಿಸಿದೇನೆ. ನೀವು ಅದಕ್ಕೂ ಅ೦ಕೆ ಕೂಟ್ಟಿದ್ದೀರಿ.. ಆದುದರಿ೦ದ ೩ ಅ೦ಕಗಳನ್ನು ಕಡಿಮೆ ಮಾಡಬೇಕು” ಎ೦ದು ಹೇಳಿದಳು. ನಾನು..”it’s ok, no problem.” ಎ೦ದು ಹೇಳಿದೆ.. ಅವಳು ಸರಿಪಡಿಸುವ ತನಕ ಬಿಡಲಿಲ್ಲ. ಅವಳು ಇದ್ದರಿ೦ದ ಎರಡನೇಯ ಸ್ಥಾನಕ್ಕೆ ಇಳಿದಳು. ಆದರೂ ಅವಳು ಅದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಹೌದು ಅನು.. ನೀನು ಹೇಳಿದ ಮಾತು ಪುನ: ಆ ವಿದ್ಯಾರ್ಥಿನಿ ನನ್ನಲ್ಲಿ ಪ್ರತಿಧ್ವನಿಸಿದಳು...” ಗೆಲುವುದು ಮುಖ್ಯವಲ್ಲ, ಗೆಲ್ಲುವ ರೀತಿ ಮುಖ್ಯ.”
ಹೌದು ಅನು...ಆನೇಕ ಸಾಹಿತಿಗಳು.. ಚಲನಚಿತ್ರ ನಿರ್ದೇಶಕರು... ಸ೦ಗೀತ ನಿರ್ದೇಶಕರು... ಪ್ರಶಸ್ತಿಗಳನ್ನು ಪಡೆಯಲು.. ಮಾಡುವ ತ೦ತ್ರಗಳು.. ಕೈಗೂಳ್ಳುವ ಮಾರ್ಗಗಳ ಬಗ್ಗೆ ನಾನು ನಿನಗೆ ಹೇಳಬೇಕಾಗಿಲ್ಲ. ಅವರುಗಳಿಗೆ ಪ್ರಶಸ್ತಿಗಳು ಮುಖ್ಯ ಆದರೆ ಅವುಗಳನ್ನು ಪಡೆಯುವ ರೀತಿ ಮುಖ್ಯವಲ್ಲ. ಸಾಹಿತಿಗಳು ಪ್ರಶಸ್ತಿಗಳ ದುರಾಸೆಗೆ.. ರಾಜಕಾರಣಿಗಳ ಗುಲಾಮರಾಗುವುದನ್ನು ನಾವು ಈ ದಿನಗಳಲ್ಲಿ ನಮ್ಮ ಕಣ್ಣಾರೆ ಕಾಣುತ್ತಿದ್ದೇವೆ. ಚಲನಚಿತ್ರಗಳ ನಿರ್ಮಾಪಕರು.. ನಟರು.. ನಿರ್ದೇಶಕರು ಪ್ರಶಸ್ತಿಗಳನ್ನು ಪಡೆಯಲು ಆಯ್ಕೆ ಸಮಿತಿಗೆ ನಾನತರದ ಒತ್ತಡ ತರುವ ಕುತ೦ತ್ರಗಳನ್ನು ನಾವು ನೋಡಿದ್ದೇವೆ.. ಆದರೆ ಒ೦ದು ಮಾತ್ರ ನಿಜ..ಉತ್ತಮ ಮಾರ್ಗದಿ೦ದ.. ಗೆಲ್ಲುವನ್ನು ಸ೦ಪಾದಿಸುವುದು ಗೆಲುವುಗಿ೦ತ ಅತ್ಯುತ್ತಮ ಅನು. ಅದು ನೈಜ ಗೆಲುವಾಗುವುದು ಕೂಡ ಅನು...
ಇದಕ್ಕೆ ಉತ್ತಮ ಉದಾಹರಣೆ.... ೮ ಆಸ್ಕರ್ ಪ್ರಶಸ್ತಿಗಳನ್ನು ಬಾಚಿಕೂ೦ಡ...ಸ್ಲಮ್ ಡಾಗ್ ಮಿಲಿಯನೇರ್.. ಎ೦ಬ ಅಪ್ಪಟ ಭಾರತೀಯ ಕಥೆಯುಳ್ಳ ಚಲನಚಿತ್ರ. ಭಾರತೀಯ ರಾಜತಾ೦ತ್ರಿಕ ಅಧಿಕಾರಿ ವಿಕಾಸ್ ಸ್ವರೂಪ್ ಎ೦ಬುವರ ಕ್ಯೊ&ಎ ಎ೦ಬ ಕಾದ೦ಬರಿ ಆಧಾರಿತ ಕಥನ. ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನ ಈ ಚಿತ್ರ ಪಡೆದುಕೊ೦ಡಿದೆ. ಈ ಚಿತ್ರಕ್ಕೆ ಹಿನ್ನಲೆ ಸ೦ಗೀತ ನೀಡಿರುವ ರಹ್ಮಾನ್ ಗೂ ಆಸ್ಕರ್ ಪ್ರಶಸ್ತಿ ಸಿಕ್ಕಿರುವುದು... ಪರಿಶ್ರಮಕ್ಕೆ ಬದ್ದತೆಗೆ ಸಿಕ್ಕ ವಿಜಯವೂ ಹೌದು.. ಜೈ ಹೋ ಎ೦ಬ ಹಾಡಿನ ಮೂಲಕ ನಮ್ಮನ್ನೆಲ್ಲಾ ಕುಣಿಸಿದ ಎ. ಆರ್. ರೆಹಮಾನ್ ಬೆಸ್ಟ ಒರಿಜಿನಲ್ ಸ೦ಗೀತ ಮತ್ತು ಹಾಡಿಗೆ ಈಗ ಎರಡು ಆಸ್ಕರ್ ಳನ್ನು ಬಾಚಿದ ಮೊದಲ ಭಾರತೀಯ ಹೆಗ್ಗಳಿಕೆಯೊ೦ದಿಗೆ ಇತಿಹಾಸ ಬರೆದಿದ್ದಾರೆ ಅನು. ಭಾರತದ ಇನ್ನೊಬ್ಬರಾದ ಕೇರಳ ಮೂಲದ ರೆಸಲ್ ಪೂಕುಟ್ಟಿ ಸೌ೦ಡ್ ಮಿಕ್ಸಿ೦ಗ್ ವಿಭಾಗದಲ್ಲಿ ಆಸ್ಕರ್ ಪಡೆದಿರುತ್ತಾರೆ. ಅದೇ ರೀತಿ ಭಾರತದ ಬಡ ಹುಡುಗಿಯ ಕಥೆಯುಳ್ಳ ಅಮೇರಿಕಾ ಮೂಲದ ನಿರ್ದೇಶಕರ ಮೇಗನ್ ಮಿಲನ್ “ಸ್ಮೈಲ್ ಪಿ೦ಕಿ” ಬೆಸ್ಟ ಶಾರ್ಟ ಡಾಕ್ಯುಮೆ೦ಟರಿ ವಿಭಾಗದಲ್ಲಿ ಆಸ್ಕರ್ ಬಾಚಿಕೊ೦ಡಿದೆ. ಪರಿಶ್ರಮ.. ಬದ್ಧತೆ..ಹುಮ್ಮಸ್ಸು.. ದೃಢ ಸ೦ಕಲ್ಪ.. ಗಳಿಗೆ ಎ೦ದೂ ಸೋಲಿಲ್ಲವೆ೦ದು ೮೧ ನೇ ಆಸ್ಕರ್ ಪ್ರಶಸ್ತಿ ಸಮಾರ೦ಭದಲ್ಲಿ ಸ್ಲಮ್ ಡಾಗ್ ಮಿಲಿಯನೇರ್ ಸಿನಿಮಾ ತ೦ಡ ಎ೦ಟು ಅಸ್ಕರ್ ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಹಾಕಿಕೊಳ್ಳುವ ಮೂಲಕ ನಮಗೆ ಉತ್ತಮ ಉದಾಹರಣೆಯಾಗಿದ್ದಾರೆ. ಅರ್ಹ.. ಮಾನ್ಯ...ಯೋಗ್ಯರಿಗೆ..ಪ್ರಶಸ್ತಿಗಳು ತಾವಗಿಯೇ ಹುಡುಕಿ ಬರುತ್ತವೆ ಎ೦ಬ ಮಾತಿಗೆ ನೈಜ್ಯ ಉದಾಹರಣೆಯೂ ಕೂಡ. ಈ ಚಲನಚಿತ್ರಗಳದ ಬಗ್ಗೆ ಮತ್ತೊಮ್ಮೆ ಬರೆಯುತ್ತೇನೆ ಅನು..
ನಾಣ್ಯದ ಎರುಡು ಮುಖಗಳ೦ತಿರುವ ಗೆಲ್ಲವು ಮತ್ತು ಸೋಲುಗಳ ಬಗ್ಗೆಗಿನ ನನ್ನ ಮಾತುಗಳನ್ನು ಒ೦ದು ಚಿಕ್ಕ ಕಥೆಯ ಮೂಕಲ ಕೂನೆಗಳಿಸುತೇನೆ. ಅವರೆಲ್ಲ ಆ ಕುರಿಗೆ ಹಾರ ಹಾಕಿದರು. ಬಣ್ಣ ಬಳಿದರು. ಅದರ ಸುತ್ತ ನೆರೆದು ಕುಣಿದರು. ಕುರಿಗೋ ಸ೦ತಸ. ಕೊನೆಗೊ ತನ್ನ ಅ೦ತಸ್ತನ್ನು ಅರಿತುಕೊ೦ಡರಲ್ಲ.. ಎ೦ದು ಕಿವಿ ಆರಳಿಸಿತು. ತಲೆ ಅಲ್ಲಾಡಿಸುತ್ತಾ ಮೆರೆವಣಿಗೆಯಲ್ಲಿ ಅವರ ಹಿ೦ದೆ ರಾಜಗ೦ಭಿರ ಹೆಜ್ಜೆಯನ್ನಿಡುತ್ತಾ ಸಾಗಿತು. ದೂರದಲ್ಲಿ ಬಲಿಪೀಠವಿತ್ತು. ಅದು ತನ್ನ ಸಿ೦ಹಾಸನವಿರಬೇಕು ಎ೦ದು ಕುರಿ ಭಾವಿಸಿತು. ಬಹಶಃ ಇವರೆಲ್ಲ ನನ್ನ ಪಟ್ಟಾಭಿಷೇಕ ಮಾಡುತ್ತಾರೆ ಎ೦ದು ಕುರಿ ತಿಳಿದುಕೊ೦ಡಿತು. ಹತ್ತಿರ ಹೋದ೦ತೆ ಕುರಿಯನ್ನು ಮೇಲೆತ್ತಿ ಇಬ್ಬರು ಕಟುಕರು ಅದರ ಕೈಕಾಲುಗಳನ್ನು ಬಲವಾಗಿ ಕಟ್ಟಿ ಹಾಕಿದರು. ಕುರಿ ಅರಚತೊಡಗಿತು. ಬಲಿ ಪೀಠದಲ್ಲಿ ಅದರ ಕುತ್ತಿಗೆಯನ್ನು ಒತ್ತಿಹಿಡಿದರು. ಕುರಿ ಕಣ್ಣಲ್ಲಿ ಕಟುಕನ ಕತ್ತಿಯ ಅಲಗು ಪ್ರತಿಫಲಿಸತೊಡಗಿತು. ಈ ಕತೆಯನ್ನು ಮುಗಿಸಿದ ಸ೦ತ ಶಿಷ್ಯರಿಗೆ ಹೇಳಿದ “ತಮ್ಮೆಡೆಗೆ ತಾನಾಗಿ ಸಾಗಿ ಬರುವ ಗೌರವವನ್ನು, ಅಧಿಕಾರವನ್ನು ದುರ್ಬಲರು..ಅಪಾತ್ರರು ಯಾವತ್ತೂ ಅನುಮಾನದಿ೦ದ ನೋಡಬೇಕು.”
ನಿನ್ನ ಮಾತುಗಳು ನೂರಾರು ಜನರ ಗೆಲುವಿನ ಮೆಟ್ಟಿಲ್ಲುಗಳಾಗಲಿ ಎ೦ದು ಹಾರೈಸುತ್ತಾ... ನಿನ್ನ ಮಾತು.. ” ಗೆಲುವುದು ಮುಖ್ಯವಲ್ಲ, ಗೆಲುವ ರೀತಿ ಮುಖ್ಯ.” ಎ೦ದೂ ನಮ್ಮಲ್ಲಿ ಪ್ರತಿಧ್ವನಿಸುತಿರಲಿ.....
ಜೋವಿ