ಕನ್ನಡ, ಹೋರಾಟ ಹಾಗೂ ಅದರ ಅವಶ್ಯಕತೆ - ಕೊನೆಯ ಭಾಗ

ಇಲ್ಲಿನ ವಾಣಿಜ್ಯೋದ್ಯಮಕ್ಕೆ, ವ್ಯಾಪರಕ್ಕೆ ಬರುವ ಅನ್ಯ ರಾಜ್ಯದವರಿಗೆ, ವಿದೇಶಿ ಸಂಸ್ಥೆಗಳಿಗೆ ಇಲ್ಲಿನ ನಾಡು, ನುಡಿಯ ಬಗ್ಗೆ ಯಾವುದೇ ರೀತಿಯ ಕಾಳಜಿ, ಪ್ರೀತಿಯಂತೂ ಇರಲು ಸಾಧ್ಯವಿಲ್ಲ. ಇಲ್ಲಿನ ಜನರಿಗೇ ಇಲ್ಲವೆಂದ ಮೇಲೆ ಅವರಿಗೆಲ್ಲಿಂದ ಬರಬೇಕು? ಮಾನವ ಸಂಪನ್ಮೂಲವೂ ಒಳಗೊಂಡಂತೆ ಇಲ್ಲಿನ ಎಲ್ಲಾ ಸಂಪತ್ತು, ಸಂಪನ್ಮೂಲ ಹಾಗೂ ಸೌಲಭ್ಯಗಳನನ್ನು ಬಳಸಿಕೊಂಡು ತಮ್ಮ ವ್ಯಾಪರವನ್ನು ನಡೆಸುತ್ತಾರೆ. ಆಗ ಸಾಮರ್ಥ್ಯ, ಪ್ರತಿಭೆ ಹೆಸರಲ್ಲಿ ಬೇರೆ ರಾಜ್ಯದ ಜನರೂ ಬರುತ್ತಾರೆ. ಅದರಲ್ಲಿ ತಪ್ಪೇನಿಲ್ಲ.

Read more!

ನಿರೀಕ್ಷಿಸಿ : "ಸಚಿನ್ ಎಂಬ ಮಾಯಲೋಕ" ಲೇಖನ ಮಾಲಿಕೆ.

ಮೊನ್ನೆಯ ಹೈದರಾಬಾದ್ ಪಂದ್ಯದಲ್ಲಿ ಅರಳಿ ನಿಂತಿತ್ತಲ್ಲ ಒ೦ದು ಕ್ರಿಕೆಟ್ ಕಾವ್ಯ? ಆ ಸಂದರ್ಭದಲ್ಲಿ  ಸಚಿನ್ ಎಂಬ ಮಾಂತ್ರಿಕನ ಜೊತೆ ಇನ್ನೊಂದು ಬದಿಯಲ್ಲಿ ಆಡುತ್ತಿದ್ದ ರವೀಂದ್ರ ಜಡೇಜ ಎಂಬ ಹುಡುಗನ ವಯಸ್ಸು 20 ವರ್ಷ 10 ತಿಂಗಳು.
- ಅಂದರೆ ಸಚಿನ್ ಅಂತರಾಷ್ಥ್ರೀಯ ಕ್ರಿಕೆಟ್ ರಂಗಕ್ಕೆ ಕಾಲಿಟ್ಟಾಗ ಜಡೇಜ ಇನ್ನೂ 10 ತಿಂಗಳ ಮಗು
-ಸಚಿನ್ ಶತಕ ಹೊಡೆದ ಮತ್ತೊಂದು ಪಂದ್ಯದಲ್ಲಿ ಭಾರತ ಪರಾಭವ ಎಂಬ ಸಿನಿಕರ ಉದ್ಘಾರ. ಆದರೆ ಸಚಿನ್ ಭಾರತ ಗೆದ್ದಾಗಿನ ಪಂದ್ಯದಲ್ಲಿ ಬಾರಿಸಿರುವ ಶತಕಗಳ ಒಟ್ಟು ಮೊತ್ತ 32. ಅದು ಇನ್ನ್ಯಾವುದೇ ಆಟಗಾರ ಹೊಡೆದ ಒಟ್ಟು ಒಂದು ದಿನದ ಶತಕಗಳಿಗಿಂತ 4 ಹೆಚ್ಚು
-ಸಚಿನ್ ಬಂದು ಐದಾರು ವರ್ಷಗಳ ನಂತರ ಪ್ರಸಿದ್ಧಿಗೆ ಬಂದ ಸೌರವ್ ಗಂಗೂಲಿ, ಪಂದ್ಯದ ನಂತರ ಮಾತನಾಡುತ್ತಿದ್ದದ್ದು ’ವೀಕ್ಷಕ ವಿವರಣೆಗಾರನಾಗಿ’

ಇ೦ತಹ ಹಲವಾರು ವಿಶೇಷತೆಗಳನ್ನೊಳಗೊಂಡ ಸಚಿನ್ ರಮೇಶ್ ತೆಂಡೂಲ್ಕರ್ ನ ಈ ಇಪ್ಪತ್ತು ವರ್ಷಗಳ ಕ್ರಿಕೆಟ್ ಜೀವನದ ಬಗೆಗಿನ ನಾಲ್ಕೈದು ಕಂತುಗಳ ಲೇಖನ ಮಾಲಿಕೆ "ಸಚಿನ್ ಎಂಬ ಮಾಯಲೋಕ",ಇಷ್ಟರಲ್ಲೇ ಸ್ವರಚಿತ್ತಾರದಲ್ಲಿ ....
Read more!

ಕನ್ನಡ, ಹೋರಾಟ ಹಾಗೂ ಅದರ ಅವಶ್ಯಕತೆ - ಭಾಗ 2

ಹೊರಗಿನ ಶಕ್ತಿಗಳಿಗಿಂತ ಒಳಗಡೆಯೇ ನೆಲಸಿ ಇಲ್ಲಿನ ಭಾಷೆ,ಸಂಸ್ಕೃತಿಗಳ ವಿರುದ್ಧವಾಗಿಯೇ ಕೆಲಸ ಮಾಡುತ್ತಿದ್ದ, ನಿರ್ಭಾವುಕವಾಗಿದ್ದ ಒಳಗಿನ ಶಕ್ತಿಗಳ, ಪಿತೂರಿಗಳ ವಿರುದ್ಧವೂ ದೊಡ್ಡ ಹೋರಾಟಗಳೇ ನಡೆದಿವೆ. ಬೀದಿಗಿಳಿದ ಚಳುವಳಿ ನಾಯಕರ ಹೋರಾಟದ ಜೊತೆಯಲ್ಲೇ ಸಾಹಿತಿಗಳ ಅಕ್ಷರ ರೂಪದ ಹೋರಾಟಗಳು ಈ ಹೋರಾಟದ ಜ್ಯೋತಿಯನ್ನು ನಿರಂತರವಾಗಿ ಬೆಳಗಿಸಿಕೊಂಡು ಬಂದಿತು. ಅನಕೃರವರ೦ತ ಸಾಹಿತಿಗಳು ಬೀದಿಗಿಳಿದ್ದು ಕನ್ನಡ ಪರ ದನಿಯೆತ್ತಿದ್ದೂ ಉ೦ಟು.

ಕಲಾವಿದರನ್ನೂ ಒಳಗೊಂಡಂತೆ ಸಮಾಜದ ಎಲ್ಲಾ ಸ್ತರದ ಜನರೂ ಭಾಗವಹಿಸಿದ ಗೋಕಾಕ್ ಚಳುವಳಿಯ ರಭಸ, ಭಾವತೀವ್ರತೆಯ ಎಷ್ಟಿತ್ತೆಂದರೆ ಅನ್ಯರಾಜ್ಯದವರೂ, ಬೇರೆ ಭಾಷಿಕರೂ ಸಹಾ ಕತ್ತೆತ್ತಿ ನೋಡುವಂತೆ ಮಾಡಿದ್ದು ಮಾತ್ರವಲ್ಲದೆ ಸಕಾಲವಾದ ಎಚ್ಚರಿಕೆಯ ಘಂಟೆಯನ್ನು ಮೊಳಗಿಸಿತು.ಎ೦ಬತ್ತರ ದಶಕದ ರೈತ ಚಳುವಳಿಗಳು ಸಹಾ ಇದಕ್ಕಿಂತ ಭಿನ್ನವಾಗಿರಲಿಲ್ಲ. ಅದೂ ಒ೦ದು ರೀತಿಯ ಕನ್ನಡ ರೈತರ ಆಶೋತ್ತರಗಳಿಗಾಗಿ ನಡೆದ ಕನ್ನಡದ ಹೋರಾಟವೇ.

ಕನ್ನಡ, ಹೋರಾಟ ಹಾಗೂ ಅದರ ಅವಶ್ಯಕತೆ - ಭಾಗ 1

ಕನ್ನಡ ಪರ ಹೋರಾಟದ ಮಾತಿರಲಿ, ಕೆಲವೂಮ್ಮೆ ಕನ್ನಡ, ಕನ್ನಡಿಗರ ಬಗೆಗಿನ ನ್ಯಾಯಪರ ಹಕ್ಕುಗಳ ಬಗ್ಗೆ ಮಾತನಾಡಿದರೂ ಇವೆಲ್ಲ ಬೇಕೇ ಎಂದೋ, ದುರಾಭಿಮಾನಿಗಳೆ೦ದೋ ಮೂದಲಿಸುವ ಜನಕ್ಕೆ ಕಡಿಮೆಯಿಲ್ಲ, ಅದರಲ್ಲೂ ನಮ್ಮ ಕನ್ನಡಿಗರೇ ಹೀಗೆ೦ದಾಗ ಇನ್ನೇನು ಹೇಳೋಣ?


ಒ೦ದು ಭಾಷೆ ಎನ್ನುವುದು ಕೇವಲ ಸ೦ಪರ್ಕದ ಮಾಧ್ಯಮ ಮಾತ್ರವಲ್ಲದೆ ಸಂಸ್ಕೃತಿಯ ಭಾಗವೇ ಆಗಿ ಶತಮಾನಗಳೇ ಕಳೆದಿವೆ. ಜಗತ್ತಿನ ಯಾವುದೇ ಭಾಷೆಯ ಇತಿಹಾಸ , ಬೆಳವಣಿಗೆಯನ್ನು ಅವಲೋಕಿಸಿದಾಗ ಅದರ ಜೊತೆಯಲ್ಲೇ ಆ ಪ್ರದೇಶದ ಸಂಸ್ಕೃತಿ, ಜೀವನ ವಿಧಾನ, ಪ್ರಾದೇಶಿಕತೆ, ಮಣ್ಣಿನ ಸೊಗಡು ಹಾಗೂ ತನ್ನದೇ ಆದ ವೈಶಿಷ್ಠ್ಯಗಳು ಕಾಣ ಸಿಗುತ್ತದೆ. ಒ೦ದು ಸಮಾಜದ, ಜನಾ೦ಗದ, ಜೀವ ವಿಧಾನದ ಅವಿಭಾಜ್ಯ ಅಂಗವಾಗಿರುವ ಭಾಷೆಯ ಪರವಾಗಿ ಹೋರಾಟ, ವಕಾಲತ್ತುಗಳ ಅವಶ್ಯಕತೆ ಇಲ್ಲ ಎ೦ದು ಮೇಲು ನೋಟಕ್ಕೆ ಅನಿಸುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಹಲವಾರು ಪ್ರಾಚೀನ ಸಂಸ್ಕೃತಿಗಳು, ಜೀವ ವಿಧಾನಗಳು ಆಧುನಿಕತೆಯ ಹೊಡೆತಕ್ಕೆ ಸಿಕ್ಕು ತಮ್ಮ ಬೇರನ್ನು ಕಳೆದುಕೊ೦ಡು ಅವಸಾನದತ್ತ ಹೆಜ್ಜೆ ಹಾಕಿವೆ. ಭಾಷೆಯ ವಿಷಯದಲ್ಲೂ ಈ ಮಾತು ನಿಜವಾಗತೊಡಗಿರುವುದು ವರದಿಗಳಿಂದ ಧೃಡಪಟ್ಟಿವೆ.ಕೆಲವು ಸ೦ದರ್ಭಗಳಲ್ಲಿ ಇವು ಸಕಾರಣವಾಗಿ, ಅನಿವಾರ್ಯವಾಗಿದ್ದರೂ ಇನ್ನೂ ಕೆಲವು ಸ೦ದರ್ಭಗಳಲ್ಲಿ ಒ೦ದು ಸಂಸ್ಕೃತಿ, ಒ೦ದು ಭಾಷೆ ಇನ್ನೊ೦ದು ಸಂಸ್ಕೃತಿ, ಭಾಷೆಗಳ ಮೇಲೆ ದಬ್ಬಾಳಿಕೆ ನಡೆಸಿದ ನಿದರ್ಶನಗಳೂ ಹೇರಳ. ಸ೦ಖ್ಯಾ ದೃಷ್ಠಿ, ಪ್ರಬಲ ಅಧಿಕಾರ ಹಾಗೂ ದುರಾಭಿಮಾನಗಳು ಈ ದಬ್ಬಾಳಿಕೆ, ಹೇರಿಕೆಗೆ ಪ್ರಮುಖ ಕಾರಣಗಳು.

ಒಪ್ಪು-ತಪ್ಪು

ಪ್ರೀತಿಯ ಅನು...

ನನ್ನ ಹಾರೈಕೆಗಳ ಶುಭ್ರ ಕೋಮಲ ಗುಲಾಬಿಗಳು ನಿನ್ನ ಮಡಿಲಿಗೆ. ನೂರಾರು ಜನರ ಸ್ಫೂರ್ತಿಯ ಸೆಲೆ ನಿನ್ನ ಬದುಕು ಸುಂದರ ಸುಮಧುರ ಜಗತ್ತಿನ ಚುಂಬನದಲ್ಲಿ ತೇಲಾಡುತ್ತಿರಬಹುದು! ಮಂದಾರದ ಆ ನಿನ್ನ ಮೊಗವು ಅನೇಕರಲ್ಲಿ ಸಂತೋಷದ ಒರತೆಗಳನ್ನು ಹರಿಸುತ್ತಿರಬಹುದು. ನಾನು ಮತ್ತು ನನ್ನ ಬದುಕು ಉಪ್ಪೇ ಇಲ್ಲದ ಸಾರಿನಂತೆ ಸಪ್ಪೆ, ಸಪ್ಪೆ... ಆದರೂ ಅನ್ನಕ್ಕೆ ಸ್ವಲ್ಪ ಪುಡಿ ಉಪ್ಪು ಸೇರಿಸಿ ಬದುಕನ್ನು ಸರಿಪಡಿಸುವ ಹಂಬಲ. ಸರಿಪಡಿಸಿ ಬದುಕ ಊಟದ ಸವಿಯನ್ನು ಸವಿಯುವ ತೀವ್ರತೆ. ಸಾಲವೇನಾದರೂ ನೀನು ಕೊಡುವುದಾದರೆ ನಿನ್ನ ನಗುವನ್ನು ಸ್ವಲ್ಪ ನನಗೆ ಕೊಟ್ಟು ನನ್ನನು ನಿನ್ನ ಸಾಲಗಾರನಾಗಿಸಬೇಕೆಂದು ಕೇಳಿಕೊಳ್ಳುವ ನನ್ನ ಕಂಟು ಮೊಗ.

ಅನು ನಿನಗೆ ಪತ್ರ ಬರೆಯದೆಸುಮಾರು ದಿನಗಳಾಯ್ತು. ಪ್ರಾರಂಭಿಸುವ ಸಮಸ್ಯೆ ನನ್ನ ಪೆಡಂಭೂತವಾಗಿ ಕಾಡಿಸಿ, ಈ ದಿನ ಲೇಖನವನ್ನು ಕೈಯಲ್ಲಿಡಿಸಿದೆ. ಏನು ಬರೆಯುವುದು? ಪತ್ರದ ವಸ್ತು ಏನು? ಯಾವುದೇ ರೀತಿಯ preplanning ಇಲ್ಲದೆ ಈ ಪತ್ರ ಬರೆಯಲು ಕೈಹಾಕಿದ್ದೇನೆ.

ಆಯ್ಕೆ - ಭಾಗ 2


ವೇದಾಂತ ಅಭ್ಯಾಸ ಮಾಡುತ್ತಿದ್ದ ಶಿಷ್ಯನೊಬ್ಬ ಗುರುವಿನೊಡನೆ ಮಾತನಾಡುತ್ತಾ “ ಗುರುಗಳೇ ನನ್ನೊಳಗೆ ಸಂಘರ್ಷ ಕಾಡುತ್ತದೆ ಆ ಸಂಘರ್ಷ ನಿವಾರಿಸಲು ಸಹಾಯ ಮಾಡಿ” ಎಂದ ಅದಕ್ಕೆ ಉತ್ತರವಾಗಿ “ಹೋಗಿ ತಪಸ್ಸು ಮಾಡು ಸಂಘರ್ಷದ ಕಾರಣಗಳನ್ನು ಸಂಶೋಧಿಸು” ಶಿಷ್ಯ ಕೆಲಕಾಲ ತಪಸ್ಸು ಮಾಡಿ ಹಿಂದಿರುಗುತ್ತಾನೆ “ಗುರುಗಳೇ ನಾನು ಆಯ್ಕೆಗಳಿರುವುದೇ ಸಂಘರ್ಷಕ್ಕೆ ಕಾರಣ ಎಂದು ಕಂಡುಕೊಂಡಿದ್ದೇನೆ. ಪ್ರಾಣಿಗಳಿಗೆ ಆಯ್ಕೆಯ ಸಮಸ್ಯೆ ಇಲ್ಲ. ಅವು ಪ್ರಾಕೃತಿಕ ಪವೃತ್ತಿಗಳಂತೆ ನಡೆದುಕೊಳ್ಳುತ್ತವೆ. ಆದರೆ ನನಗೆ ಮದುವೆಯಾಗಬೇಕೋ, ಬೇಡವೋ, ಸಸ್ಯಾಹಾರಿಯಾಗಲೋ, ಮಾಂಸಾಹಾರಿಯಾಗಲೋ, ಪ್ರವಚನಕೇಳಲೋ, ಬೇಡವೋ -ಹೀಗೆ ಆಯ್ಕೆಗಳಿವೆ. ಆಯ್ಕೆಯಿರುವಲ್ಲಿ ಸಂಘರ್ಷವಿರುತ್ತದೆ” ಎಂದು ಹೇಳಿದ. ಗುರು ಹೀಗೆಂದ “ಕೇವಲ ಅಯ್ಕೆಗಳಿರುವುದರಿಂದಲೇ
Read more!

ಆಯ್ಕೆ - ಭಾಗ 1

ಆಯ್ಕೆ ಮಾನವನ ಬದುಕಿನ ಅವಿಭಾಜ್ಯ ಅಂಗ. ದಿನನಿತ್ಯ ಹಲವು ಆಯ್ಕೆಗಳ ನಡುವೆಯೂ ಸುಗಮವಾಗಿಯೂ, ಕೆಲವೊಮ್ಮೆ ದ್ವಂದ್ವಮಯವಾಗಿಯೂ ಜೀವನವನ್ನು ಸಾಗಿಸುತ್ತೇವೆ. ನಮ್ಮ ಬದುಕನ್ನು ರೂಪಿಸುವುದು ಅಥವಾ ಅದನ್ನು ಕೆಡಿಸುವುದು ನಮ್ಮ ಆಯ್ಕೆಯ ಮೇಲೆ ಹೊಂದಿದೆ. ನಮ್ಮ ಬದುಕಿಗೆ ನಾವೇ ಜವಾಬ್ದಾರರಾಗಿರುವಾಗ ನಮ್ಮ ಆಯ್ಕೆಗಳಿಗೂ ಕೂಡ ನಾವು ಜವಾಬ್ದಾರರು. ಜಾಗತೀಕರಣಗೊಂಡ ಈ ಯುಗದಲ್ಲಿ ಮಾನವ ಸಮಾಜ ಕೊಳ್ಳುಬಾಕ ಸಂಸ್ಕೃತಿಗೆ ಮಾರುಹೋಗಿರುವುದನ್ನು ಕಾಣುತ್ತೇವೆ. ಅದು ಬೇಕು, ಇದು ಬೇಕು, ಮತ್ತೊಂದು ಬೇಕೆಂದು ಬೆದಕುತ್ತಿರುವುದು ಇಂದಿನ ಸಮಾಜ. ಈ ಬೆದಕಾಟದ ಬದುಕು ಕ್ಷಣ ಕ್ಷಣಕ್ಕೂ ಬೇರೆ ಬೇರೆ ಬೇಕುಗಳನ್ನು ಹುಟ್ಟಿಸುತ್ತದೆ. ತನ್ನ ಜೀವಮಾನದಲ್ಲಿ ಈ ಬೇಕುಗಳನ್ನು ಪ್ರತೀಕ್ಷಣ ಹೊಂದಿಸಿಕೊಳ್ಳಬೇಕಾದಾಗ ಜೀವಕ್ಕೆ ಸುಖ, ನೆಮ್ಮದಿ ಶಾಂತಿ ಎಲ್ಲಿಂದ ತಾನೇ ಬರಬೇಕು?
Read more!

ಹಿತ ನುಡಿ

ರಾತ್ರಿಯ ಪಥದ ಮೂಲಕ ಅಲ್ಲವೇ ಮು೦ಜಾವನ್ನು ಮುಟ್ಟಲಾಗದು.. ಖಲೀಲ್ ಗಿಬ್ರಾನ್.