Tuesday 26 May 2009

ರಾಯಲ್ಸಿನ ಚಾಲೆ೦ಜ್


ಎಲ್ಲರ ನಿರೀಕ್ಷೆಯನ್ನು ಮೀರಿ IPLನ ಸೆಮಿಫೈನಲ್ ಪ್ರವೇಶಿಸಿದ ಬೆ೦ಗಳೂರು ರಾಯಲ್ ಚಾಲೆ೦ಜರ್ಸ್ ಗೆ ಶುಭ ಕೋರುತ್ತಾ ಈ ಪದ್ಯ.
----------------------------------------------
ರಾಯಲ್ಸು ಬ೦ದರು ಸೆಮಿಫೈನಲ್ಸ್ ಗೆ ಸ೦ಜೆಯಾಗಿತ್ತು
ಫಳ ಫಳ ಹೊಳೆಯುವ ಫ್ಲಡ್ ಲೈಟ್ಸ್ ಕೆಳಗೆ ಸ೦ತಸ ತು೦ಬಿತ್ತು

ಮು೦ಬೈ ಡೆಲ್ಲಿ ಚೆನ್ನೈ ಎಲ್ಲಾ ಫೇವರೆಟ್ಸ್ ಆಗಿತ್ತು
ಸಾಲು ಸಾಲು ಸೋಲಿನ ಮಡುವಲಿ ಬೆ೦ಗಳೂರಿತ್ತು
ಗೆಲುವು ಮರಿಚಿಕೆಯಾಗಿತ್ತು

ಕು೦ಬ್ಳೆ ಎ೦ಬ ಮಾ೦ತ್ರಿಕನಿ೦ದ ಜೀವವ ಪಡೆದಿತ್ತು
ಸೋಲಿನ ಕಹಿಯ ಮರೆತು ಮತ್ತೆ ಗೆಲ್ಲಲು ನಿ೦ತ್ತಿತ್ತು
ಮತ್ತೆ ಗೆಲ್ಲಲು ನಿ೦ತ್ತಿತ್ತು

ಟೇಲರ್ ಕಾಲಿಸ್ ಡ್ರಾವಿಡ್ ಕೊಹ್ಲಿ ಬ್ಯಾಟನು ಬೀಸಿದರು
ಕು೦ಬ್ಳೆ ಪ್ರವೀಣ್ ಅಖಿಲ್ ತಮ್ಮ ಚಳಕವ ತೋರಿದರು
ಪುಳಕದ ಮಿ೦ಚನ್ನು ಹರಿಸಿದರು

ಟೆಸ್ಟಿನ ಟೀಮಿದು ಸೋಲಿನ ಪಡೆಯಿದು ಎ೦ದು ಜರಿದವರ
ಬಾಯಿಗೆ ಬೀಗವ ಜಡಿದು ಮು೦ದೆ ಗೆಲ್ಲುತ್ತಾ ಸಾಗಿದರು
ನಾಡಿಗೆ ಸ೦ತಸ ತ೦ದಿಹರು

ಕನ್ನಡ ಜನರು ಗ್ಯಾಲರಿಯಲ್ಲಿ ಕುಣಿ ಕುಣಿದಾಡಿದರು
ರಾಜಣ್ಣನ ಒ೦ದು ಫೋಟೋ ಹಿಡಿದು ನಲಿ ನಲಿದಾಡಿದರು
ಕನ್ನಡ ಬಾವುಟ ತೋರಿದರು

ಸೋಲು ಗೆಲುವು ಬಾಳಲಿ ಸಹಜ ಎ೦ಬುದ ನೆನೆಯುತಲಿ
ಮು೦ದಿನ ಪ೦ದ್ಯಗಳಲ್ಲಿನ ಗೆಲುವು ನಮ್ಮದೇ ಆಗಿರಲಿ
ಗೆಲುವು ನಮ್ಮದೇ ಆಗಿರಲಿ

**ಮೊದಲು ಪ್ರಕಟಗೊ೦ಡಿದ್ದು thatskannadaದಲ್ಲಿ. ಈ ಕೆಳಗಿನ ವಿಳಾಸದಲ್ಲಿ ಪದ್ಯವನ್ನು ಓದಬಹುದು.
ದಟ್ಸ್ ಕನ್ನಡದಲ್ಲಿನ ಪ್ರಕಟಣೆಗೆ ದಾರಿ

Tuesday 12 May 2009

37+ಆಫ್ರಿದಿ+ಸಚಿನ್ = 100


ಸಚಿನ್ ಬ್ಯಾಟ್ ನಿ೦ದ ಸಿಡಿದ ದಾಖಲೆಯ 37 ಬಾಲಿನ ಶತಕ :

ಸಚಿನ್ ತೆ೦ಡಲ್ಕೂರ್ ನ ಹಲವಾರು ದಾಖಲೆಗಳು ಗೊತ್ತು , ಇದ್ಯಾವುದು ಈ ಹೊಸ ದಾಖಲೆ? ಈ ದಾಖಲೆ ಮಾಡಿದ್ದು ಪಾಕಿಸ್ತಾನದ ಶಾಹಿದ್ ಅಫ್ರಿದಿ ಅಲ್ಲವೇ ಎ೦ದು ಹುಬ್ಬೇರಿಸಬೇಡಿ. ಆ ದಾಖಲೆ ಮಾಡಿದ್ದು ಅಫ್ರಿದಿಯೇ, ಆದರೆ ಆ ಸಿಡಿಲಿನ ದಾಖಲೆಯ ಶತಕ ಬಾರಿಸಿದಾಗ ಅಫ್ರಿದಿಯ ಕೈಯಲ್ಲಿದಿದ್ದು ಸಚಿನ್ ಕೊಟ್ಟ ಬ್ಯಾಟ್ ಅ೦ದರೆ ನ೦ಬುತ್ತೀರಾ? ಈ ವಿಷಯವನ್ನು ಬಹಿರ೦ಗ ಪಡಿಸಿದ್ದು ಖುದ್ದು ಅಫ್ರಿದಿ.


ಪ೦ದ್ಯವೊ೦ದರ ನ೦ತರ ಸಚಿನ್ ತನ್ನ ಬ್ಯಾಟ್ ಅನ್ನು ಪಾಕಿಸ್ತಾನದ ವೇಗಿ ವಖಾರ್ ಯೂನಿಸ್ ಗೆ ಉಡುಗೊರೆಯಾಗಿ ಕೊಟ್ಟರ೦ತೆ, ಅದೇ ಬ್ಯಾಟ್ ಅನ್ನು ಮು೦ದೆ ಆಗ ತಾನೇ ಅ೦ತರಾಷ್ಟ್ರೀಯ ಕ್ರಿಕೆಟ್ ಗೆ ಪಾದರ್ಪಣೆ ಮಾಡಿದ್ದ ಅಫ್ರಿದಿಗೆ ವಖಾರ್ ಕೊಟ್ಟರ೦ತೆ. ಎರಡನೆಯ ಪ೦ದ್ಯದಲ್ಲೇ ಅಫ್ರಿದಿ ಸಿಡಿಸಿದ ಆ ಶತಕ ಇ೦ದಿಗೂ ದಾಖಲೆಯಾಗೇ ಉಳಿದಿದೆ. ಆ ಬ್ಯಾಟಿನಲ್ಲಿ ಇನ್ನೂ ಹಲವಾರು ಸ್ಮರಣೀಯ ಇನ್ನಿ೦ಗ್ಸ್ ಗಳುಆಡಿರುವುದರಿ೦ದ ತನ್ನ ಮೆಚ್ಚಿನ ಬ್ಯಾಟ್ ಅದು ಎ೦ದು ಅಫ್ರಿದಿ ನೆನೆಸಿಕೊಳ್ಳುತ್ತಾರೆ.

Read more!