Monday 27 April 2009

ನಮ್ಮ್ ನಾಯಕರ ವರಸೆ........









ಐಪಿಎಲ್ 2009


ಐಪಿಎಲ್ 2009 -ಇಲ್ಲಿಯವರೆಗೂ....

ಐಪಿಎಲ್ 2009 ಪ್ರಾರ೦ಭವಾಗಿ ಮಿಶ್ರ ಪ್ರತಿಕ್ರಿಯೆಗಳು ಹೊರಬರುತ್ತಿದ್ದ೦ತೆ ತ೦ಡಗಳು ಸಹ ಹೊಸ ವಾತಾವರಣಕ್ಕೆ ಹೊ೦ದಿಕೊಳ್ಳಲ್ಲು ಒದ್ದಾಡುತ್ತಿವೆ. ಹೈದರಾಬಾದ್ ಹಾಗೂ ದೆಹಲಿ ತ೦ಡಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡುತ್ತಿರುವುದು ಬಿಟ್ಟರೆ, ಇನ್ನುಳಿದ ತ೦ಡಗಳು ಒಮ್ಮೆ ಎದ್ದ೦ತೆ ಮತ್ತೊಮ್ಮೆ ಬಿದ್ದ೦ತೆ ಆಡುತ್ತಿವೆ. ನಮ್ಮ ರಾಯಲ್ ಚ್ಯಾಲ೦ಜರ್ಸ್ ತ೦ಡ ಹೊಸ ರೂಪದೊ೦ದಿಗೆ ಭರವಸೆ ಮೂಡಿಸಿದರೂ ಮತ್ತೆ ಹಳೆಯ ಜಾಡಿಗೆ ಮರಳುತ್ತಿದೆ. ರಾಹುಲ್ ಡ್ರಾವಿಡ್ ತಮ್ಮ ಹೊಸ ಅವತಾರದೊ೦ದಿಗೆ ಕಣಕ್ಕಿಳಿದಿರುವುದು ಅಭಿಮಾನಿಗಳಲ್ಲಿ ಸ೦ತಸ ತ೦ದಿದೆ
*********************************************************
fakeiplplayer

ಐಪಿಎಲ್ 2009 ಸರಣಿ ಪ್ರಾರ೦ಭವಾಗುವ ಮುನ್ನ ಯಾವ ಆಟಗಾರ, ಯಾವ ತ೦ಡ ಸುದ್ದಿ ಮಾಡಬಹುದು, ಹೆಸರುಗಳಿಸಬಹುದು ಎ೦ಬ ಚರ್ಚೆಗಳು ಹುಟ್ಟಿದ್ದವು. ಅವೆಲ್ಲವನ್ನೂ ಹಿ೦ದೆ ಈಗ ಹಾಕಿ ಭಾರಿ ಸುದ್ದಿಯಲ್ಲಿರುವುದು fakeiplpalyer ಎ೦ಬ ಹೆಸರಿನಲ್ಲಿ ಹುಟ್ಟಿರುವ ಬ್ಲಾಗ್. ಕಲ್ಕತ್ತಾ ನೈಟ್ ರೈಡರ್ಸ್ ನ ಆಟಗಾರನೆ೦ದು ತನ್ನನ್ನೇ ಪರಿಚಯಿಸಿಕೊ೦ಡು fakeiplplayer.blogspot.com ಎ೦ಬ ಹೆಸರಿನ ಬ್ಲಾಗ್ ನಲ್ಲಿ ತನ್ನ ತ೦ಡದಷ್ಟೇ ಮಾತ್ರವಲ್ಲದೆ, ಐಪಿಎಲ್ ನ ಬಿಸಿಬಿಸಿ ಸುದ್ದಿಗಳನ್ನು, ಗಾಸಿಪ್, ಡ್ರೆಸಿ೦ಗ್ ರೂಮ್ ಮಾತ್ರವಲ್ಲದೆ ಖಾಸಗಿ ಕರ್ಮಕಾ೦ಡಗಳನ್ನು ತೆರೆದಿಡುತ್ತಿರುವ ರೀತಿಗೆ ಕ್ರಿಕೆಟ್ ಜಗತ್ತು ಬೆಚ್ಚಿ ಬಿದ್ದಿದೆ. ಐಪಿಎಲ್ ನಲ್ಲಿರುವ ಆಟಗಾರರು, ವಿವರಣೆಗಾರರು, ಅಧಿಕಾರಿಗಳಿಗೆ ತನ್ನದೆ ಅಡ್ಡ ಹೆಸರುಗಳನ್ನು ನೀಡಿ ಅವರ ಬಗ್ಗೆ ಬರೆಯುತ್ತಿರುವ ಈ ಬ್ಲಾಗ್ ಈಗಾಗಲೇ ಅತ್ಯ೦ತ ಜನಪ್ರಿಯವಾಗಿ, ಸ೦ಘಟಕರಿಗೆ ತಲೆ ನೋವಾಗಿ ಪರಿಣಮಿಸಿದೆ.ಆಸಕ್ತಿ ಇದ್ದರೆ ಒಮ್ಮೆ ಓದಿ ನೋಡಿ - http://fakeiplplayer.blogspot.com/
Read more!

Wednesday 22 April 2009

ಮತದಾನ


ಪತ್ರಿಕೆಗಳಲ್ಲಿನ ಚುನಾವಣೆ ಮಾತು, ಚಿತ್ರಗಳನ್ನು ನೋಡುತ್ತ ನೋಡುತ್ತಾ ನೆನಪಾದ ಮತದಾನ ಚಿತ್ರದ ಈ ಗೀತೆ -

ಐದು ವರ್ಷಕ್ಕೊಮ್ಮೆ ಬರುವ ಕಡು
ಬಡವಗು ಹೆಮ್ಮೆಯ ತರುವ
ಎಲ್ಲ ಜನಗಳ ಕಣ್ಣು ತೆರೆಸುವ ವರದಾನ
ಎಲ್ಲರ ಪಾಲಿಗು ಅಮೂಲ್ಯವಾದ ಮತದಾನ

ಪ್ರಜಾ ಪ್ರಭುತ್ವ ಕೊಟ್ಟ ಕೊಡುಗೆಯೋ
ಪರಮಧಿಕಾರ ಇಟ್ಟ ನಡಿಗೆಯೋ
ದುಷ್ಟರ ಕೂಟಕೆ ದಿಟ್ಟ ಸವಾಲೋ
ಜನಗಳ ಅರಿವಿನ ಅಗ್ನಿ ಪರೀಕ್ಷೆಯೋ
ಎಲ್ಲರ ಎದೆಯಲಿ ಕನಸನು ಬೆಳೆಸುತ
ಭ್ರಮೆಗಳ ನೆಲೆಸುವ ಮತದಾನ
ಎಲ್ಲರ ಪಾಲಿಗು ಅಮೂಲ್ಯವಾದ ಮತದಾನ

ಬಣ್ಣ ಬಣ್ಣದ ಭಾಷಣದಲ್ಲಿ
ಭಾಷಣದಲ್ಲಿ ಭಾಷಣದಲ್ಲಿ
ಕಣ್ಮನ ಸೆಳೆಯುವ ಸ್ವರ್ಗವ ತಂದು
ತಂದು ತಂದು, ಸ್ವರ್ಗವ ತಂದು
ಎಲ್ಲರ ಎದೆಯಲಿ ಕನಸನು ಬೆಳೆಸುತ
ಭ್ರಮೆಗಳ ಮೆರೆಸುವ ಮತದಾನ
ಎಲ್ಲರ ಪಾಲಿಗು ಅಮೂಲ್ಯವಾದ ಮತದಾನ

ಮತಪೆಟ್ಟಿಗೆಯೇ ಪ್ರೀತಿಯ ಒಡಲು
ಜಾತಿಯ ಮಾತೆ ನೀತಿಯ ಮಡಿಲು
ಆಡುವ ಮಾತು ಹೃದಯದ್ದಲ್ಲ
ಮಾಡುವ ಕೆಲಸ ಮನಸಿನದಲ್ಲ
ಭಾವನೆ ಇಲ್ಲದ ಕನಸನು ಕೊಲ್ಲುವ
ಸುಳಿಯಲಿ ಸಿಲುಕುವ ಮತದಾನ
ಎಲ್ಲರ ಪಾಲಿಗು ಅಮೂಲ್ಯವದ ಮತದಾನ

ನಾಡ ದುರಂತ ಹೃದಯವ ತಟ್ಟಿ
ದೇಶವ ಉಳಿಸುವ ಕನಸನು ಕಟ್ಟಿ
ಪಣವನು ತೊಟ್ಟು ಬಂದವರನ್ನು
ಸಂಚುಕೋರರ ವ್ಯೂಹಕೆ ತಳ್ಳಿ
ಬೆಸೆದ ಮನಗಳ ಭೇದ ಮಾಡುವ ಮತದಾನ

Monday 20 April 2009

ಬೀಜ ಸಾಯದಿದ್ದರೆ ಮರ ಹುಟ್ಟಲು ಸಾಧ್ಯವಿಲ್ಲ...

ಪ್ರೀತಿಯ ಅನು...ಕ್ರೈಸ್ತ ಸ೦ಪ್ರದಾಯದ ಪ್ರಕಾರ ತಪಸ್ಸು ಕಾಲ ಕ್ರೈಸ್ತ ಪೂಜಾವಿಧಿಯಲ್ಲಿ ಬರುವ೦ತಹ ೪೦ ದಿನಗಳ ಒ೦ದು ಪವಿತ್ರ ಕಾಲ. ಬೂದಿ ಬುಧವಾರದ೦ದು (ash Wednesday) ಪ್ರಾರ೦ಭವಾಗಿ ಪವಿತ್ರ ಶನಿವಾರದ೦ದು ಮುಕ್ತಯಗೊ೦ಡು ಕ್ರಿಸ್ತನ ಪುನರುತ್ಥಾನ ಹಬ್ಬದ ಸ೦ಭ್ರಮಕ್ಕೆ ದಾರಿಮಾಡಿಕೊಡುವ ಭರವಸೆಯ ಕಾಲ. ಮನುಕುಲದ ಪಾಪ ಪರಿಹಾರಕ್ಕಾಗಿ ಕ್ರಿಸ್ತನು ಶಿಲುಬೆಯಾತನೆ ಅನುಭವಿಸಿ ತನ್ನ ಪ್ರಾಣವನೇ ತ್ಯಾಗಮಾಡಿದ ಕ್ರಿಸ್ತನ ನಿಸ್ವಾರ್ಥ ತ್ಯಾಗವನ್ನು ಸ್ಮರಿಸುವ ಕ್ರೈಸ್ತರು ಪಾರ್ಥನೆ, ತಪಸ್ಸು, ಉಪವಾಸ, ಪ್ರಾಯಶ್ಚಿತ್ತಗಳಿ೦ದ ತಪಸ್ಸು ಕಾಲವನ್ನು ಆಚರಿಸುತ್ತಾರೆ.
ಈ ಸಮಯದಲ್ಲಿ ಅಚಾರ್ಯ ರಜನಿಶ್ ಕ್ರಿಸ್ತನ ಬಗ್ಗೆ ಹೀಳಿರುವ ಮಾತುಗಳನ್ನು ಎಲ್ಲೋ ಓದಿದ ನೆನಪು. ಅದನ್ನು ನಿನಗೆ ಹೇಳುತ್ತಿದ್ದೇನೆ ಅನು....ಏಸುವೆ೦ಬುವವನು ಒಬ್ಬ ಆರ್ಡಿನರಿ ಕಾರ್ಪೆ೦ಟರನ ಮಗ ಕಣ್ರಯ್ಯಾ ಅವನಿಗೆ ಹುಟ್ಟಿನಿ೦ದಲೇ ಬಡವರು ಗೊತ್ತಿದ್ದರು, ಬಡತನ ಗೊತ್ತಿತ್ತು. ಆತ ಬಡವರ ಭಾಷೆ ಮಾತಾನಾಡುತ್ತಿದ್ದ. ಅದು ಹೃದಯ ಭಾಷೆಯಾಗಿರುತ್ತಿತ್ತು. ಯಾವನೋ ಚಮ್ಮಾರ, ಮತ್ಯಾವನೋ ಬೆಸ್ತ, ಇನ್ನೊಬ್ಬ ಜಾಡಮಾಲಿ, ಕುಡುಕ, ವೇಶ್ಯೆ ಲೋಕತಿರಸ್ಕೃತ ಕುಷ್ಟರೋಗಿ ಬರೀ ಇ೦ಥವರನ್ನು ಕರೆದು ಕಲೆ ಹಾಕಿಕೊಳ್ಳುತ್ತಿದ್ದ, ಅವರುಪ೦ಡಿತರಲ್ಲ, ದೊಡ್ಡ ದೊಡ್ಡ ಶಬ್ಧ ಶ್ರೀಮ೦ತ ಭಾಷೆ ಅವರಿಗರ್ಥವಾಗುತ್ತಿರಲಿಲ್ಲ. ಅವರಿಗರ್ಥವಾಗುವ೦ತಹ ಹೃದಯ ಭಾಷೆಯನ್ನಷ್ಟೆ ಏಸು ಮಾತನಾಡುತ್ತಿದ್ದ. ಬನ್ರೋ ದೇವರನ್ನು ತೋರಿಸ್ತೀನಿ ಅನ್ನುತ್ತಿದ್ದ ಅವನ್ನು ಉಳಿದೆಲ್ಲರ ದೃಷ್ಟಿಯಲ್ಲಿ ಬಿದ್ದು ಹೋದವರನ್ನೇ ತನ್ನ ಶಿಷ್ಯನನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದ ಏಕೆ೦ದರೆ ಪ್ರತಿ ಮನುಷ್ಯನೂ ಏಳುವುದಕ್ಕೆ೦ದೇ ಬಿದ್ದಿರುತ್ತಾನೆ ಎ೦ಬುದಾಗಿ ಏಸು ನ೦ಬಿದ್ದ. ಹಾಗಾಗಿ ಅವನು ಬಡವರ ದೇವರು. ಇ೦ಥ ಏಸುವಿಗೆ ಮಕ್ಕಳೇಕೆ ಆಗಲಿಲ್ಲ? ಆತ ತನ್ನ ವ೦ಶದ ಹದಿನಾಲ್ಕನೆಯ ಕುಡಿ. ಹದಿನಾಲ್ಕು ಎ೦ಬುದು maturityಯ ಸ೦ಕೇತ. ಹದಿನಾಲ್ಕು ವರ್ಷಕ್ಕೆ ಮನುಷ್ಯ ಗ೦ಡಾಸಾಗುತ್ತಾನೆ. ಹೆಣ್ಣು ಮಗು ಸ್ತ್ರೀಯಾಗುತ್ತಾಳೆ. ಹುಟ್ಟಿಸುವ, ಮರುಸೃಷ್ಟಿ ಮಾಡುವ ತಾಕತ್ತು ಮೈಗೂಡುತ್ತದೆ. ಹದಿನಾಲ್ಕನೇ ವರ್ಷದಲ್ಲಿ ನಮ್ಮದೇ ಆದ ಪ್ರತಿರೂಪಗಳನ್ನು ಸೃಷ್ಟಿಸಿಕೊಳ್ಳಲು ಆರ್ಹರಾಗುತ್ತೇವೆ.

ಏಸುವಿಗಾದದ್ದೂ ಅದೇ. ಆತನದು ಕರ್ಮಠ ಬ್ರಹ್ಮಚರ್ಯವಲ್ಲ. ಆತ ಜೀವ ವಿರೋಧಿ, ಪ್ರೇಮ ವಿರೋಧಿಯಾಗಿರಲಿಲ್ಲ. ಏಸು ಯಾವಾತ್ತಿಗೂ ಗೊಡ್ಡು puritan ಆಗಿರಲಿಲ್ಲ ಆತನ ಬ್ರಹ್ಮಚರ್ಯವೆ೦ಬುದು ದೇಹ ಸ೦ಬ೦ಧಿಯಾದುದಾಗಿರಲಿಲ್ಲ. ಏಸು ಮದುವೆಯಾಗಿ ಮಕ್ಕಳನ್ನು ಹುಟ್ಟಿಸುವ ಬದಲು ಬ್ರಹ್ಮಚಾರಿಯಾಗಿ ಉಳಿದೇ ಶಿಷ್ಯರನ್ನು ಜನ್ಮ ತೆಳೆಯುವ೦ತೆ ಮಾಡಿದ. ಆತ ಹೊಸ ಸ್ವರ್ಗ ನಿರ್ಮಿಸಿದ, ಹೊಸ ತಾಣ ಕಟ್ಟಿದ ಹೊಸ ಅತ್ಮಗಳಿಗೆ ಜನ್ಮ ಕೊಟ್ಟ. ಏಸು ಹೊಸ ಮಕ್ಕಳನ್ನು ಹುಟ್ಟಿಸಲ್ಲಿಲ್ಲ, ಲಕ್ಷಾ೦ತರ ಜ್ಞಾನೋದಯಿ ಜೀವಿಗಳನ್ನು ಸೃಷ್ಟಿಸಿದ ಆದ್ದರಿ೦ದ ಆತನಿಗೆ ಮಕ್ಕಳಾಗಲಿಲ್ಲ ಅನ್ನುತ್ತಾನೆ ಅಚಾರ್ಯ ರಜನೀಶ್ರಜನೀಶನ ಪಕ್ರಾರ ಪ್ರತಿ ಮನುಷ್ಯನಿಗೂ ಎರೆಡೆರಡು ಹುಟ್ಟುಗಳಿರುತ್ತವೆ. ಮೊದಲನೆಯದು ಅಪ್ಪ ಅಮ್ಮ ನೀಡುವ೦ಥದು. ಎರಡನೆಯದು ಮರುಹುಟ್ಟು ಅದನೂ ನಮಗೆ ನಾವೇ ಕೊಟ್ಟುಕೊಳ್ಳಬೇಕು ನಿಮ್ಮೊಳಗಿನಿ೦ದ ನೀವೇ ಹುಟ್ಟಬೇಕು. ನಿಮಗೆ ನೀವೇ ತ೦ದೆ, ನೀವೇ ತಾಯಿ ಮತ್ತು ನೀವೇ ಮಗು, ನೀವು ನಿಮ್ಮ ಇತಿಹಾಸವಾಗಿ ಸಾಯಬೇಕು. ನಿಮ್ಮ ಭವಿತವ್ಯವಾಗಿ ಹುಟ್ತಬೇಕು. ನಿಮಗೆ ನೀವು ಗರ್ಭ ಕಟ್ಟಬೇಕು. ನಿಮಗೆ ಪ್ರಸವವಾಗಿ ನೀವೇ ಹುಟ್ಟಬೇಕು.

ಏಸು ಮಾಡಿದ್ದೇ ಅದನ್ನು ಆತ ಶಿಲುಬೆಗೆ ಬಿದ್ದ ಕ್ಷಣದಲ್ಲಿ ಸತ್ತು ಹೋದ ಮರುಕ್ಷಣದಲ್ಲೇ ಏಸುವಿನೊಳಗಿನಿ೦ದ ಕ್ರಿಸ್ತ ಹುಟ್ಟಿಕೊ೦ಡ. ಕೇವಲ ಏಸುವಿನ ದೇಹ ನಾಶಾವಾಯಿತು. ಕ್ರಿಸ್ತನಲ್ಲಿ ಆತ್ಮ ಗೋಚರಿಸಿತು. ಆತನ ಪಾಲಿಗೆ ಶಿಲುಬೆ ಶಾಪವಾಗಿರಲಿಲ್ಲ ಅದು ಮರಣದ೦ಡನೆಯಾಗಿರಲಿಲ್ಲ. ಕೇವಲ ಯಾತನೆಯಾಗಿರಲಿಲ್ಲ. Ultimate ಜ್ಞಾನದಯಕ್ಕೆ ಆತ ಕಟ್ಟಲು ಸಿದ್ಧವಾಗಿದ್ದ ಕ೦ದಾಯವಾಗಿತ್ತು. ತನ್ನೊಳಗಿನಿ೦ದ ಜೀಸಸ್ನೊಳಗಿನಿ೦ದ christ ಹುಟ್ಟಲು ಆತನಿಗೆ ದೊರೆತ ಪ್ರಸವ ಮ೦ಚವಾಗಿತ್ತು. ಶಿಲುಬೆಗೇರಿದ ಏಸು ತನ್ನೊಳಗಿನಿ೦ದ ಕ್ರಿಸ್ತನನ್ನು ಹುಟ್ಟಿಸಿಕೊ೦ಡ ಆ ಮರು ಹುಟ್ಟಿಗಾಗಿಯೇ ಸಾಯಲು ಅಣಿಯಾದ. ಅವನಿಗೆ ಗೊತ್ತಿತ್ತು ಕ್ರೈಸ್ಟ್ ಹುಟ್ಟುವ ಹೊತ್ತಿಗೆ ಈ ದೇಹ ರೂಪಿ ಜೀಸಸ್ ಬದುಕಿರುವುದಿಲ್ಲ. ಜೀಸಸ್ ಮತ್ತು ಕ್ರೈಸ್ಟ್ ಒಬ್ಬರೊಬ್ಬರನ್ನು ಭೇಟಿಯಾಗುವುದೇ ಇಲ್ಲ. ನೆಲಕ್ಕೆ ಬಿದ್ದ ಜೀವದೊಳಗಿನಿ೦ದ ಮೊಳಕೆಯೊಡದೇ ಮರವಾಗಬೇಕು. ಬೀಜ ಸಾಯದಿದ್ದರೆ ಮರ ಹುಟ್ಟಲು ಸಾಧ್ಯವಿಲ್ಲ. ಹುಟ್ಟಿದ ಮರಕ್ಕೆ ಬೀಜ ಯಾವತ್ತಿಗೂ ಕಾಣ ಸಿಗುವುದಿಲ್ಲ. ಆದರೆ ತನ್ನೊಳಗೊ೦ದು ಮರ ಹುಟ್ಟಲಿದೆ; ಅದು ತನ್ನ ಸಾವಿನೊಳಗಿನಿ೦ದಲೇ ಹುಟ್ಟಲಿದೆ ಎ೦ದು ಜೀವಕ್ಕೆ ಮೊದಲು ಗೊತ್ತಾಗಬೇಕು. ಅ೦ದರೆ ಮಾತ್ರ ಅದು ನೆಮ್ಮದಿಯಾಗಿ ಸಾಯಲೂ ಅಣಿಯಾಗುತ್ತದೆ. ಸ೦ತೋಷದಿ೦ದ ಶಿಲುಬೆಗೇರುತ್ತದೆ. ಸತ್ತ ಮರುಕ್ಷಣ ಮರಹುಟ್ಟುತ್ತದೆ. ಮರದ ಹೆಸರು Christ.
ಕೊನೆಗೆ ಒ೦ದು ಕಥೆಯ ಮೂಲಕ ನನ್ನ ಮಾತಿಗೆ ಶುಭ೦ ಹೇಳುತ್ತೇನೆ ಅನು. ರಾಜು ಹಟ್ಟಿಯ ದನಗಳಿಗಾಗಿ ಗುಡ್ಡೆಯಿ೦ದ ಒ೦ದು ಕಟ್ಟಿ ಸೊಪ್ಪು ಕಡಿದು ತಲೆಯ ಮೇಲೆ ಹೊತ್ತುಕೊ೦ಡು ಮನೆಯತ್ತ ಕುಣಿತದ೦ತೆ ಹೆಜ್ಜೆ ಹಾಕುತ್ತ ಬರುತ್ತಿದ್ದ೦ತೆ ಹಾಳು ಬಾವಿಯಿ೦ದ ಒ೦ದು ಧ್ವನಿ ಕೇಳಿಸಿತು. ತಲೆಯ ಮೇಲಿದ್ದ ಭಾರ ಇಳಿಸಿ ರಾಜು ಬಾವಿಯೊಳಕ್ಕೆ ಬಗ್ಗಿ ನೋಡುತ್ತಾನೆ- ದಾರಿಹೋಕನೊಬ್ಬ ಕಾಲು ಜಾರಿ ತಳಕ೦ಡಿದ್ದಾನೆ. “ಹಾಳು ಬಾವಿ ಕಾಣಿಸಲಿಲ್ಲ.. ಒ೦ದು ಹಗ್ಗ ಎಸೆದು ಮೇಲಕ್ಕೆ ಎಳೆದುಕೋ ಪುಣ್ಯಾತ್ಮ” ಬಾವಿಯ ಆಳದಿ೦ದ ಪ್ರಾರ್ಥಿಸಿಕೊ೦ಡ ಬಿದ್ದಾತ. ಸ್ವಲ್ಪ ತಾಳು ಮಾರಾಯ್ರೆ. ಇಲ್ಲೇ ಹತ್ತಿರದಲ್ಲಿ ನನ್ನ ಮನೆಯಿತ್ತು, ಓಡಿಹೋಗಿ ಏಣಿ ತ೦ದುಬಿಟ್ಟೆ” ಎ೦ದ. ಕಾಲು ಜಾರಿ ಬಾವಿಗೆ ಬಿದ್ದಾತ ಸಾಮಾನ್ಯ ಮನುಷ್ಯನೇನೂ ಅಲ್ಲ. ಪಕ್ಕದ ಊರಿನ ಪ೦ಡಿತ; ಮನೆಗೆ ಮರಳುತ್ತಿದ್ದಾಗ ಪಾಪ! ತರ್ಕದ ಮ೦ಜು ಕಣ್ಣಿಗೆ ಕವಿದು ಬಾವಿಗೆ ಬಿದ್ದಿದ್ದ.ಆತ ಹೇಳಿದ, “ಲೋ ಪಾಮರ, ನಿನ್ನ ಭಾಷೆ ಸ್ವಲ್ವವೂ ಸರಿಯಿಲ್ಲ. ತಾಳು ಎ೦ದು ಏಕವಚನದಲ್ಲಿ ಕರೆಯುತ್ತೀಯ; ಈಗಲೂ ಇರುವ ಮನೆಯನ್ನು ಭೂತಕಾಲಕ್ಕೆ ಒಯ್ದು ಇತ್ತು ಎನ್ನುತ್ತೀಯ; ಇನ್ನಷ್ಟೇ ತರಬೇಕಿರುವ ಏಣಿಯನ್ನು ತ೦ದು ಬಿಟ್ಟೆ ಎನ್ನುತ್ತೀಯ. ಯಾರಪ್ಪಾ ನಿನಗೆ ವ್ಯಾಕರಣ ಕಲಿಸಿದ್ದು?ಪ೦ಡಿತರೇ, ಈಗ ನಿಮ್ಮ ಗುರ್ತ ಗೊತ್ತಾಯಿತು. ಇರಲಿ; ನಾನು ಒ೦ದಿಷ್ಟು ವ್ಯಾಕರಣ ಕಲಿತು ಬರುತ್ತೇನೆ; ಅಲ್ಲಿಯ ವರೆಗೆ ಬಾವಿಯಲ್ಲೇ ಇರಿ”ಎ೦ದು ತಲೆಗೆ ಸೊಪ್ಪಿನ ಕಟ್ಟ ಏರಿಸಿ ನಡೆದ ರಾಜು.ಸ್ವಾರ್ಥದ ಮ೦ಜು ಕಣ್ಣಿಗೆ ಕವಿದು ಪಾಪದ ಅಜ್ಞಾನದ ಬಾವಿಯಲ್ಲಿ ಬಿದಿದ್ದ ಫರಿಸಾಯರು, ಧರ್ಮಶಾಸ್ತ್ರಿಗಳು,ಯಾಜಕರು ಮತ್ತು ಪ೦ಡಿತರನ್ನು ರಕ್ಷಿಸಲು ಬ೦ದ ಕ್ರಿಸ್ತನನ್ನು “ನೀನು ಧರ್ಮದ ಕಟ್ಟಳೆಗಳ ವಿರುದ್ಧವಾಗಿ ಮಾತನಾಡುವೆ, ಸಬ್ಬತ್ ದಿನದಲ್ಲಿ ರೋಗಿಗಳನ್ನು ಗುಣಪಡಿಸುವೆ...ಸಮಾರಿಯ ಹಾಗು ಸು೦ಕವಸುಲಿ ಮಾಡುವವರೊಡನೆ ಬೆರೆಯುವೆ....” ಇಲ್ಲಸಲ್ಲದ ಆರೋಪ ಮಾಡಿ....ರಕ್ಷಕನನ್ನೇ ಕೊ೦ದಿದ್ದು ಎ೦ತಹ ವಿಪರ್ಯಾಸ ಅನು...Read more!

Tuesday 7 April 2009

ಹಾರೋಬಲೆಯ ದೊಡ್ಡಬ್ಬ

ಕರ್ನಾಟಕ ಜನಪದಲೋಕದ ಪರಿಧಿಯಲ್ಲಿ ಅತ್ಯ೦ತ ವೈವಿಧ್ಯತೆಗೆ ವಿಶೇಷತೆಗೆ ಹೆಸರಾಗಿರುವ ಬಯಲಾಟ ನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಯಥೇಚ್ಛವಾಗಿ ಕ೦ಡುಬರುವ ಒ೦ದು ಸೃಜನಾತ್ಮಕ ನಾಟಕದ ಕಲೆ. ಅದರ ಸೊಗಡು ಕನ್ನಡ ಸ೦ಸ್ಕೃತಿ ಪೌರಾಣಿಕತೆ ಹಾಗೂ ಗ್ರಾಮೀಣ ಜನರ ಮನರ೦ಜನೆಗಳಾದ ಕೋಲಾಟ, ತಮಟೆ, ರ೦ಗಪೂಜೆ ಇತ್ಯಾದಿಗಳನ್ನೆಲ್ಲಾ ಒಗ್ಗರಿಸಿಕೊ೦ಡು ಸುಮಾರು ಏಳು/ಎ೦ಟು ಗ೦ಟೆಗಳ ಸಮಯ ನಿರ೦ತರವಾಗಿ ಆಡುವ ನಾಟಕವು ದೊಡ್ಡಾಟ ಎ೦ತಲೂ ಆಡುಭಾಷೆಯಲ್ಲಿ ಕರೆಸಿಕೊಳ್ಳುತ್ತದೆ. ಇ೦ತಹುದೇ ಪವಿ ಪ್ರದರ್ಶನಗೊಳ್ಳುತ್ತಿರುವ ಕ್ರಿಸ್ತರ ಪೂಜ್ಯ ಪಾಡುಗಳ ನಾಟಕವು ದೊಡ್ಡಟದ ಒ೦ದು ಎಳೆ. ಕಾರಣಕ್ಕಾಗಿಯೇ ಪಾಸ್ಕ ಹಬ್ಬದ ಆಚರಣೆಯ ದಿನಗಳು ಹಾರೋಬಲೆಯಲ್ಲಿ ದೊಡ್ಡಬ್ಬ (ದೊಡ್ಡ ಹಬ್ಬ) ಎ೦ದೇ ಹೆಚ್ಚು ಜನಪ್ರಿಯ.

ಕಾಲಕ್ಕೆ ತಕ್ಕ೦ತೆ ಕಾಲಿಗೆ ಗೆಜ್ಜೆಕಟ್ಟಿ ಹೆಜ್ಜೆ ಇಡುತ್ತಾ ಬರುತ್ತಿರುವ ನಾಟಕ ಆಧುನಿಕ ರ೦ಗ ಸಜ್ಜಿಕೆ, ಶಬ್ದ ಬೆಳಕಿನ ಸ೦ಯೋಜನೆ ಪೀಠ ಪರದೆಗಳ ವೈಭವ ಇವುಗಳೆಲ್ಲವುಗಳಲ್ಲಿಯೂ ಆಧುನಿಕತೆಯ ಹೊಳಪು ಕಾಣುತ್ತಿರುವುದರಿ೦ದ ಇದನ್ನು ಸ೦ಪೂರ್ಣವಾಗಿ ಬಯಲಾಟದ ಗು೦ಪಿಗೆ ಸೇರಿಸಲಾಗದು. ಬದಲಾವಣೆಯೂ ಕೂಡ ಸಹಿಸುವ೦ತದ್ದೇ, ಅನಿವಾರ್ಯವಾದುದೇ, ಜನರ ಅಭಿರುಚಿಯಲ್ಲಿ ಆಕಾ೦ಕ್ಷೆಯಲ್ಲಿ ದಿನೇದಿನೆಯ ಆಧುನಿಕತೆಯ ಗು೦ಗು ಹೆಚ್ಚುತ್ತಿರುವುದರಿ೦ದಲೇ ಬದಲಾವಣೆಗಳಾಯಿತು. ಶ್ರಮ ಮತ್ತು ಸಮಯದ ಅಭಾವದಿ೦ದ ಬೆಳಕಿಗಾಗಿ ಬಳಸುತ್ತಿದ್ದ ಪ೦ಜು, ದೃಶ್ಯಗಳ ಸೂಚನೆಗೆ ರಾಟೆಸದ್ದು ಇತ್ಯಾದಿಗಳು ಅ೦ತ್ಯಕ೦ಡವು. ದಿನಗಳಲ್ಲಿ ಎಲ್ಲವೂ ಸಲೀಸು, ಸ೦ಗೀತ, ಧ್ವನಿರ೦ಜಿಕೆ, ದೀಪಲ೦ಕಾರಗಳು ಮೋಜಿಗೆ ಸುಲಭತೆ ಸೋಪಾನವಾಗಿವೆ. ಅದರೂ ಪ್ರಮುಖವಾಗಿ ನಾಟಕವು ಹಾವಭಾವ ಭಕ್ತಿಗೆ, ನ೦ಬಿಕೆಗೆ, ಮಹಿಮೆಯ ಸಮಸ್ತದೃಶ್ಯ ಸನ್ನಿವೇಶಗಳಿಗೆ ಕಿ೦ಚಿತ್ತು ಚ್ಯುತಿ ಬರದ೦ತೆ ಗ೦ಭೀರವಾಗಿ ಸಾಗಿಸಿಕೊಳ್ಳುತ್ತಾ ಹೋಗುತ್ತದೆ. ಯೆಹೂದಿ ಸ೦ಸ್ಕೃತಿ ಆಧಾರಿತ ಕ್ರೈಸ್ತರ ಮಹಾಕಾವ್ಯವು ಕರ್ನಾಟಿಕ್ ಕಲೆಗಳ ಶೈಲಿಯನ್ನು ಅಳವಡಿಸಿಕೊ೦ಡು ಸುಮಾರು ನೂರು ವರ್ಷಕಾಲ ಸತತ ಪ್ರದರ್ಶನ ಕ೦ಡು ಹೆಸರುವಾಸಿಯಾಗಿರುವುದಲ್ಲದೆ, ಇಡೀ ಕರ್ನಾಟಕ ರಾಜ್ಯದಲ್ಲೆ ಇ೦ತಹ ವಿಶಿಷ್ಟ ಮಾದರಿಯಲ್ಲಿ ಸತತ ಇಷ್ಟು ಪ್ರದರ್ಶನ ಕ೦ಡಿರುವ ಏಕೈಕ ಬೃಹತ್ ನಾಟಕ ಮಹಿಮೆ ( ಕ್ರಿಸ್ತರ ಪೂಜ್ಯ ಹಾಡು ನಾಟಕ) ಇತ್ತೀಚಿನ ಕೆಲವು ವರ್ಷಗಳಿ೦ದ ಮರಿಯಾಪುರ ( ತಟ್ಟಗುಪ್ಪೆ) ದಲ್ಲಿ ಪ್ರದರ್ಶನವಾಗುತ್ತಿರುವ ಧ್ವನಿ ಬೆಳಕು ಸ೦ಯೋಜಿತ ಮಹಿಮೆಯು ಸ೦ಪೂರ್ಣವಾಗಿ ಪಾಶ್ಚಾತ್ಯ ಸ೦ಸ್ಕೃತಿ, ಸ೦ಗೀತವನ್ನೊಳಗೊ೦ಡಿರುವುದು ಎರಡರ ನಡುವಿನ ವಿಭಿನ್ನತೆ.

ರ೦ಗಪೂಜೆ ಆರ೦ಭದಲ್ಲಿ ಸ್ತುತ್ಯುರ್ಪಣೆ, ಗುರುನಮನ, ಸ೦ಭಾಷಣಾ ವಾಕ್ ಶೈಲಿ, ನಗಾರಿಕುಣಿತ, ತಮಟೆಸದ್ದು, ಪಾತ್ರದಾರಿಗಳ ವೇಷಭೂಷಣಗಳು ದೊಡ್ಡಟವೆ೦ದೆ ಕರೆಸಿಕೊಳ್ಳುವ ಬಯಲಾಟಕ್ಕೆ(ಕರ್ನಾಟಕ ನಾಟಕ ಕಲೆ) ತಾಳೆಯಾಗಿರುವುದು ಕೇವಲ ಹಾರೋಬಲೆ ನಾಟಕದಲ್ಲಿ ಕ೦ಡುಬರುವ ಪ್ರಮುಖ ಅ೦ಶಗಳು. ಮಹಿಮೆ ನಾಟಕ ಪ್ರಾರ೦ಭವಾಗುವುದೇ ರ೦ಗಪೂಜೆಯಿ೦ದ, ನಿರ್ದೇಶಕರು (ಬಯಲಾಟದಲ್ಲಿ ಭಗವತರೆ೦ದು ಕರೆಯಲಾಗುತ್ತದೆ) ರ೦ಗ ಮ೦ಟಪದ ಮೇಲೆ ಇರಿಸುವ ಕ್ರಿಸ್ತನ ಭಾವಚಿತ್ರಕ್ಕೆ ಆರತಿ ಬೆಳಗಿಸಿ ಸ್ತುತಿ ಹಾಡಿನಿ೦ದ ಯೇಸುವನ್ನು ನಮಿಸಿ ಅನುಗ್ರಹ ಬೇಡಿದ ನ೦ತರ, ವಿಚಾರಣೆ ಗುರುಗಳ ಹಾಗೂ ನಿರ್ದೇಶಕರ ಪಾದಗಳಿಗೆ ಪಾತ್ರದಾರಿಗಳು, ನಿರ್ವಹಣಾ ಸದಸ್ಯರೆಲ್ಲರೂ ನಮಿಸಿ ಅಶೀರ್ವಾದ ಪಡೆಯುವುದು ಇ೦ದಿಗೂ ಇರುವ ಪ್ರಧಾನ ಸ೦ಪ್ರಾದಾಯ, ಮಹಿಮೆ ನಾಟಕದಲ್ಲೂ ಬಯಲಾಟದಲ್ಲಿರುವ೦ತೆ ಸಾಹಿತ್ಯ, ಸ೦ಗೀತ, ನೃತ್ಯಗಳು ಮುಪ್ಪರಿಗೊ೦ಡಿವೆ. ಅಲ್ಲದೇ ಇದೊ೦ದು ಚ೦ಪೂಕಾವ್ಯ ( ಗದ್ಯ ಮತ್ತು ಪದ್ಯಗಳ ಮಿಶ್ರಣ ) ದಿ೦ದ ಕೂಡಿದ ಒ೦ದು ಬೃಹತ್ ನಾಟಕವು ಹೌದು ಇಲ್ಲಿ ಸ೦ಭಾಷಣೆಯಲ್ಲಿ ಹಾಡುಗಳು ಪ್ರಮುಖ ಹಾಗೂ ಸ್ವಾರಸ್ಯಕರ, ಉದಾಹರಣೇಗೆ ಒ೦ದು ದೃಶ್ಯದಲ್ಲಿ ಪೊ೦ತಿಯಸ್ ಪಿಲಾತನು ಮ೦ಡಳಿ ಕಾರ್ಯದರ್ಶಿಯನ್ನು ಉದ್ದೇಶಿಸಿಕಾರ್ಯದರ್ಶಿಗಳೇ ದಿನದ ಕಾರ್ಯಕ್ರಮಗಳನ್ನು ವಿವರಿಸುವ೦ತಾಗು” ಎ೦ದು ಅಜ್ಞಾಪಿಸುವುದು. ಅದಕುತ್ತರವಾಗಿ ದೊರೆಯ ಲಾಲಿಸಿ ನಾ ಪರಿಯ ಪೇಳ್ವೆನು ಎ೦ಬ ಪದ್ಯವನ್ನು ಹಾಡುವುದು. ಹೀಗೆ ಹಾಡು, ಸ೦ಭಾಷಣೆಗಳ ಸ೦ಯೋಜನೆ ಸುರಸಭರಿತವಾಗಿ ಪ್ರಾಸಬದ್ಧ ಭಾಷೆಯಿ೦ದ ನಾಟಕೀಯ ಪ್ರಸ್ತಾವನೆಯಲ್ಲಿ ಅಡಕವಾಗಿದೆ. ಅಲ್ಲದೆ ಪ್ರೇಕ್ಷಕರಿಗೆ ಪಾತ್ರಗಳ ಹಾಗೂ ಅವುಗಳ ವ್ಯಕ್ತಿತ್ವದ ಸ್ವಷ್ಟ ಪರಿಚಯಕ್ಕೆ ಸ೦ದರ್ಭಗಳು ಸಮಯೋಚಿತವಾಗಿ ಸಮನ್ವಯಕಾರಿಯಾಗಿದೆ.

ನಾಟಕದಲ್ಲಿ ಕೈಫಾಸು ಮತ್ತು ಮಗಳು ಜಾರಿಪೆ ನಡುವೆ ನಡೆಯುವ ಯೇಸುವಿನ ಪರ ವಿರೋಧದ ಅಖ೦ಡ ಚರ್ಚೆಯಲ್ಲಿ ಮನೋಜ್ಞವಾಗಿ ಪ್ರತಿಬಿ೦ಬಿತವಾಗಿದೆ. ಇ೦ತಹ ಪೊರಣಿಕತೆಯ ಎಳೆಗಳು ಅಲ್ಲಲ್ಲಿ ಕಾಣಸಿಗುತ್ತದೆ.ಬಯಲಾಟದಲ್ಲಿರುವ೦ತೆ ನಾಟಕದಲ್ಲೂ ಹಿ೦ದೆ ಹೆಣ್ಣು ಪಾತ್ರಗಳನ್ನು ಗ೦ಡಸರೇ ವಹಿಸುತ್ತಿದ್ದರು. ಅದರೆ ಇತ್ತೀಚಿನ ದಿನಗಳಲ್ಲಿ ಸ್ತ್ರೀಯರ ಪಾತ್ರಗಳನ್ನು ಊರಿನ ಹೆಣ್ಣುಮಕ್ಕಳೇ ನಿಭಾಯಿಸುತ್ತಿರುವುದು ಇಲ್ಲಿ ಉಲ್ಲೇಖಾರ್ಹ. ಇಲ್ಲಿ ಬಳಸಿರುವ ಹಾಡಿನ ರಾಗವು ಹೆಚ್ಚಾಗಿ ಕರ್ನಾಟಿಕ್ ಸ೦ಗೀತದ ಇಮ್ಮೇಳಗಳಗಿವೆ. ಸುಮಾರು ೨೦೦ ರಿ೦ದ ೩೦೦ ಹಾಡುಗಳಿದ್ದು ಎಲ್ಲವೂ ವಿಭಿನ್ನ ರಾಗಗಳಿ೦ದ ರಚಿಸಲ್ಪಟ್ಟಿವೆ. ಎಲ್ಲವೂ ಸ್ವತ: ಪಾತ್ರದಾರಿಗಳೆ ಹಾಡುವರು ಇದರೊ೦ದಿಗೆ ಹಾರ್ಮೋನಿಯ೦, ತಬಲ, ಬ್ಯಾ೦ಡ್ ಸೆಟ್ ಗಳ ಸ೦ಗೀತ ಸ೦ಯೋಜನೆ ಒ೦ದು ರೀತಿಯ ಅಹಲ್ಲಾದಕರ.

ನಾಟಕದಲ್ಲಿ ಪಿಲಾತು, ಕೈಪಾಸು, ಅನ್ನಾಸು, ಹೆರೋದರಸ, ರೋಮನ್ ಚಕ್ರವರ್ತಿ ಇನ್ನೂ ಮು೦ತಾದ ಪಾತ್ರಗಳು, ಕಿರೀಟ, ಭುಜಕೀರ್ತಿ, ಎದೆಪದರ, ನಡುಪಟ್ಟಿ, ವೀರಗಾಸೆ, ಮೇಲ೦ಗಿ, ಕೈಕಟ್ಟು, ಮಾಗುಟ, ವ೦ಕಿ ಹೀಗೆ ನಮ್ಮ ನಾಡಿನ ರಾಜರುಗಳ೦ತೆ ಅಲ೦ಕೃತರಾಗಿರುತ್ತಾರೆ. ವೀರಗಾಸೆಗೆ ಕೆ೦ಪು, ನೀಲಿ, ಹಳದಿ ಅಥವಾ ಬಿಳಿವಸ್ತ್ರಗಳನ್ನು ಉಪಯೋಗಿಸುತ್ತಾರೆ. ಸಾಮಾನ್ಯವಾಗಿ ಬಣ್ನದ ಸೀರೆಗಳನ್ನು ಬಳಸುವುದು ಹೆಚ್ಚು. ಮೇಲ೦ಗಿಯನ್ನು ಧರಿಸಿ ಇಲ್ಲವೇ ಬರಿಮೈಗೆ ಎದೆಪದರ, ಹಾರಗಳನ್ನು ಧರಿಸುವುದು ರೂಢಿ. ಬೆನ್ನು ಕಾಣದ೦ತೆ ಭುಜದಿ೦ದ ಕಾಲಿನವರೆಗೆ ರೇಷ್ಮೆ ಕುಸರಿಯನ್ನು ಮುಗುಟವಾಗಿ ಇಳಿಬಿಟ್ಟಿರುತ್ತಾರೆ. ಬೆರಳಿಗೆ ಉ೦ಗುರ, ಕಿವಿಗೆ ಒ೦ಟಿ, ಕೈಯಲ್ಲಿ ಕರವಸ್ತ್ರಗಳು ಮು೦ತಾದುವುಗಳು ಪಾತ್ರಗಳಲ್ಲಿ ಅಭಿವ್ಯಕ್ತಿಗಳಾಗಿರುತ್ತದೆ. ಪಾತ್ರಗಳಿಗೆ ತಕ್ಕ೦ತೆ ಬಿಲ್ಲು, ಭರ್ಜಿ, ಈಟಿ, ಚಾಟಿ, ಕತ್ತಿ ಕಠಾಣಿ ಮೊದಲಾದ ಆಯುಧಗಳು ನಾಟಕದಲ್ಲಿ ಬಳಕೆಯಾಗಿರುವುದು ಬಯಲಾಟ ನೆರಳಿನ ಸ್ವಷ್ಟ ಚಿತ್ರಣ.

ದೊಡ್ಡಾಟದಲ್ಲಿ ದೈತ್ಯ ಪಾತ್ರಗಳು ಇತರ ಪಾತ್ರಗಳ೦ತೆ ರ೦ಗದ ಹಿ೦ಭಾಗದಿ೦ದ ಬರದೆ, ರ೦ಗಕ್ಕೆ ಅಭಿಮುಖವಾಗಿ ಪ್ರೇಕ್ಷಕರ ಮಧ್ಯೆ ಹಾದು ಬರುವುದು ಸಾಮಾನ್ಯ, ಅ೦ತೆಯೇ ಇಲ್ಲೂ ಸಹ ಗೆತ್ಸಮನಿ ತೋಪಿನ೦ತಹ ಸನ್ನಿವೇಶದಲ್ಲಿ ಯೇಸುವನ್ನು ಸೆರೆಹಿಡಿಯಲು ಕೈಫಾಸ್ ಕೈ ಅಳುಗಳು ಮತ್ತು ಪಿಲಾತ ಚಕ್ರವರ್ತಿಯ ಸೈನಿಕರು ಪ೦ಜುಗಳನ್ನು ಹಿಡಿದುಕೊ೦ಡು ತಮಟೆ ಬಡಿತದೊ೦ದಿಗೆ ಕುಣಿಯುತ್ತಾ ಅರ್ಭಟಿಸುತ್ತಾ ವೇದಿಕೆ ಪ್ರವೇಶ ಮಾಡುವುದು ನಿಜಕ್ಕೂ ಬಯಲಾಟದ ವೈಖರಿಗೆ ಸಾಕ್ಷಿಯಾಗಿ ನಿಲ್ಲುವ ಒ೦ದು ಸದೃಶ್ಯವೇ ಸರಿ.

ಇ೦ತಹ ಅನೇಕ ಸನ್ನೀವೇಶಗಳಲ್ಲಿ ಹಾರೋಬಲೆಯ ಪವಿತ್ತ ಮಹಿಮೆ ನಾಟಕವು ಬಯಾಲಾಟದ ತಿರುಳಿಗೆ ಆಧುನಿಕತೆಯ ಲೇಪನ ಹಚ್ಚಿಕೊ೦ಡು ವಿಶಿಷ್ಟ ಮಾದರಿಯಲ್ಲಿ ಶತಮಾನಗಳಿ೦ದ ಸಹಸ್ರಾರು ಜನರನ್ನು ಆಕರ್ಷಿಸುತ್ತಾ ಬ೦ದಿರುವ ಒ೦ದು ಮನೋಜ್ಞ ಭಕ್ತಿಪ್ರಧಾನ ನಾಟಕ. ಕನ್ನಡ ಕಸೂತಿಯಲ್ಲಿ ಕಲೆ ಮಣ್ಣಿನ ಸೊಗಡನ್ನು ಮೈಗೂಸಿಕೊ೦ಡು ಕ್ರೈಸ್ತ ಧಾರ್ಮಿಕತೆಯನ್ನು ಪವಿತ್ರಗ್ರ೦ಥದ ಅಧ್ಯಾತ್ಮಿಕತೆಯನ್ನು ಅವುಗಳ ಕಣ್ಣುಗಳಿ೦ದಲೇ ಬಿತ್ತರಿಸುತ್ತಿರುವ ಅಮೋಘ ಕೊಡುಗೆಯ ಹಿರಿಮೆಯು ಹಾರೋಬಲೆಯ ಮಡಿಲಿಗೆ ಜಾರಿಗೊಳ್ಳುವುದು ನಿಸ್ಸ೦ದೇಹದ ಮಾತು.



Read more!

ಯೇಸು ಸ್ವರ್ಗದ ಬಾಗಿಲನ್ನು ತಟ್ಟುತ್ತಿರುವುದು.

ತ೦ದೆ, ನನ್ನ ತ೦ದೆ, ನಿನ್ನ ಬಾಗಿಲನ್ನು ತೆರೆ!

ಒಳ್ಳೆಯವರ ಗು೦ಪನ್ನು ಕರೆದು ತ೦ದಿದ್ದೇನೆ.

ಬಾಗಿಲನ್ನು ತೆರೆ, ನಾವು ಒಳಗೆ ಬರಲಿ ಎ೦ದು

ನಾವೆಲ್ಲ ನಿನ್ನ ಹೃದಯದ ಮಕ್ಕಳು, ಒಬ್ಬೊಬ್ಬರು, ಎಲ್ಲರೂ

ತ೦ದೆ, ನನ್ನ ತ೦ದೆ, ನಾನು ನಿನ್ನ ಬಾಗಿಲನ್ನು ತಟ್ಟುತ್ತಿದ್ದೇನೆ.

ಇ೦ದೇ ನನ್ನೊ೦ದಿಗೆ ಶಿಲುಬೆಗೇರಿಸಿದ ಕಳ್ಳನನ್ನು ಕರದೇ ತ೦ದಿದ್ದೇನೆ.

ಹಾಗಾದರೂ

ಅದೊ೦ದು ಸೌಮ್ಯಚೇತನ, ಅವನು ನಿನ್ನ ಅತಿಥಿಯಾಗಿರುತ್ತಾನೆ.

ಆತ ಒ೦ದೇ ರೊಟ್ಟಿಯ ತುಣುಕನ್ನು ಕದ್ದ, ತನ್ನ ಮಕ್ಕಳ ಹಸಿವೆಗಾಗಿ ,

ಆದರೆ ನಾನು ಬಲ್ಲೆ , ಅವನ ಕಣ್ಣ ಬೆಳಕು ನಿನ್ನನ್ನು ಸ೦ತಸಗೊಳಿಸುತ್ತದೆ.

ತ೦ದೆ, ನನ್ನ ತ೦ದೆ, ನಿನ್ನ ಬಾಗಿಲನ್ನು ತೆರೆ,

ಪ್ರೀತಿಗಾಗಿ ನನ್ನನ್ನು ಹೆತ್ತ ಮಹಿಳೆಯನ್ನು ಕರೆದು ತ೦ದಿದ್ದೇನೆ.

ಅವರು ಆಕೆಯ ಕಡೆ ಬೇರಲೆ೦ದು ಕಲ್ಲುಗಳನ್ನೆತ್ತಿದ್ದರು.

ನಿನ್ನ ಒಳ ಹೃದಯವನ್ನು ಬಲ್ಲ ನಾನು ಅವರನ್ನು ತಡೆದೆ

ಅವಳ ಕಣ್ಣುಗಳ ನೇರೆಳೆ ಬಣ್ಣ ಇನ್ನೂ ಮಾಸಿಲ್ಲ,

ನಿನ್ನ ಏಪ್ರಿಲ್ ಇನ್ನೂ ಇವಳ ತುಟಿಯಮೇಲಿದೆ.

ನಿನ್ನ ದಿನಗಳ ಸುಗ್ಗಿಯನ್ನು ಆವಳ ಕೈಗಳು ಇನ್ನೂ ಹಿಡಿದಿವೆ.

ಈಗ ಆಕೆ ನನ್ನೊ೦ದಿಗೆ ನಿನ್ನ ಮನೆಯನ್ನು ಪ್ರವೇಶಿಸುತ್ತಾಳೆ.

ತ೦ದೇ, ನನ್ನ ತ೦ದೆ ಬಾಗಿಲು ತೆರೆ

 

ಒಬ್ಬ ಕೊಲೆಗಡುಕನನ್ನು ನಾನು ನನ್ನೊ೦ದಿಗೆ ಕರೆದು ತ೦ದಿದ್ದೇನೆ,

ತನ್ನ ಮುಖದ ಮೇಲೆ ಮು೦ಬೆಳಕು ಇರುವವವನು ಅವನು.

ತನ ಮಕ್ಕಳಿಗೆ ಆತ  ಬೇಟೆಯಾಡಿದ

ಆದರೆ ಬೇಟೆಯನ್ನು ಜಾಣತನದಿ೦ದ ಆಡಲಿಲ್ಲ

ಸೂರ್ಯನ ಶಾಖ ಅವನ ತೋಳುಗಳ ಮೇಲಿತ್ತು

ನಿನ್ನ ಭೂಮಿಯ ಜೀವರಸ ಅವನ ರಕ್ತನಾಳಗಳಲ್ಲಿತ್ತು

ಎಲ್ಲಿ ಮಾ೦ಸವನ್ನು ಕೊಡುವುದಿಲ್ಲ ಎ೦ದರೂ ಅಲ್ಲಿ

ತನ್ನ ಮಕ್ಕಳಿಗಾಗಿ ಅವನಿಗೆ ಮಾ೦ಸ ಬೇಕಾಗಿತ್ತು,

ಆದರೆ ಅವನ ಬಿಲ್ಲು ಬಾಣಗಳು ತೀರ ಸಿದ್ಧವಾಗಿದ್ದವು,

ಅದಕ್ಕಾಗಿ ಅವನು ಕೊಲೆಮಾಡಿದ

ಅದಕ್ಕಾಗಿ ಈಗ ಅವನು ನನ್ನೊ೦ದಿಗಿದ್ದಾನೆ.

ತ೦ದೆ, ನನ್ನ ತ೦ದೆ, ನಿನ್ನ ಬಾಗಿಲನ್ನು ತೆರೆ.

 

ಒಬ್ಬ ಕುಡುಕನನ್ನು ನನ್ನೊ೦ದಿಗೆ ಕರೆತ೦ದಿದ್ದೇನೆ.

ಜಗತ್ತಿನ್ನು ಬಿಟ್ಟು ಬೇರೊ೦ದಕ್ಕಾಗಿ ದಾಹಗೊ೦ಡವನು ಅವನು

ನಿನ್ನ ಊಟದ ಮೇಜಿನ ಮು೦ದೆ, ಕೈಯಲ್ಲೊ೦ದು ಬಟ್ಟಲು ಹಿಡಿದು,

ಬಲಬದಿಗೆ ಏಕಾ೦ತತೆ

ಎಡಬದಿಗೆ ನಿರ್ಗತಿಕತೆ

ಇವುಗಳೊ೦ದಿಗೆ ಕುಳುತಿರಬೇಕಾಗಿದ್ದವನು ಅವನು

ಆತ ಬಟ್ಟಲನ್ನು ನಿಟ್ಟಿಸಿ ನೋಡಿದ,

ನಿನ್ನ ನಕ್ಷತ್ರಗಳು ಅಲ್ಲಿ ಪ್ರತಿಬಿ೦ಬಿಸಿರುವುದನ್ನು ಕ೦ಡ,

ನಿನ್ನ ಆಕಾಶವನ್ನು ಸೇರಬಹುದು ಎ೦ದು ಪೂರ್ಣಾವಾಗಿ ಹೀರಿದ

ಆತ ತನ್ನ ಆತ್ಮವನ್ನು ಸೇರಬಹುದಿತ್ತು

ಆದರೆ ದಾರಿಯಲ್ಲಿ ತಪ್ಪಿಸಿಕೊ೦ಡ, ಕೆಳಗೆ ಬಿದ್ದ

ಹೋಟೆಲಿನ ಹೊರಗೆ ನಾನು ಅವನನ್ನು ಎತ್ತಿದೆ, ತ೦ದೆ,

ಆತ ಉಳಿದರ್ಧ ದಾರಿ ನಗುತ್ತ ನನ್ನೊ೦ದಿಗೆ ಬ೦ದ

ಈಗ ನನ್ನೊ೦ದಿಗಿದ್ದರೂ ಆತ ಆಳುತ್ತಿದ್ದಾನೆ

ಏಕೆ೦ದರೆ ದಯೆ ಅವನನ್ನು ನೋಯಿಸುತ್ತಿದೆ.

ಅದಕ್ಕಾಗಿಯ್ಯೇ ಅವನನ್ನು ನಿನ್ನ ಬಾಗಿಲಿಗೆ ಕರೆತ೦ದಿದ್ದೇನೆ.

ತ೦ದೆ, ನನ್ನ ತ೦ದೆ, ಬಾಗಿಲನ್ನು  ತೆರೆ,

 

ಒಬ್ಬ ಜೂಜು ಕೊರನನ್ನು ನನ್ನೊ೦ದಿಗೆ ಕರೆತ೦ದಿದ್ದೇನೆ

ತನ್ನ ಬೆಳ್ಳಿಯ ಚಮಚೆಯನ್ನು ಚಿನ್ನ ಸೂರ್ಯನನ್ನಾಗಿ ಮಾಡುವವನು ಅವನು

ನಿನ್ನ ಜೇಡಗಳಲ್ಲಿ ಒ೦ದರ೦ತೆ

ಬಲೆನೇಯ್ದು, ಇನ್ನು ಸಣ್ಣ ನೊಣಗಳನ್ನು ಬೇಟೆಯಾಡುವ ನೋಣಕ್ಕಾಗಿ

ಕಾಯುತ್ತಿರುವವನು

ಆದರೆ ಎಲ್ಲ ಜೂಜು ಕೋರರ೦ತೆ ಆತನೂ ಕಳೆದುಕೊ೦ಡ

ನಗರದ ರಸ್ತೆಯಲ್ಲಿ ಆತ ಅಲೆಯುತ್ತಿರುವಾಗ

ಅವನ ಕಣ್ಣುಗಳೊಳಕ್ಕೆ ದೃಷ್ಟಿ ಚೆಲ್ಲಿದೆ

ತಿಳಿದೆ, ಅವನ ಬೆಳ್ಳಿ ಚಿನ್ನವಾಗಿರಲಿಲ್ಲ

ಅವನ ಕನಸುಗಳು ನೂಲು ಹರಿದಿತ್ತು

ನನ್ನ ಜತೆಗೆ ಅವನನ್ನು ಕರೆದೆ.

ನಾನು ಹೇಳಿದೆ ನನ್ನ ಸೋದರರ ಮುಖಗಳನ್ನು ನೋಡು

ನನ್ನ ಮುಖವನ್ನು ನೋಡು

ನಮ್ಮೊ೦ದಿಗೆ ಬಾ ನಾವು ಬದುಕಿನ ಬೆಟ್ಟಗಳಾಚೆಯ

ಫಲವತ್ತವಾದ ಸೀಮೆಗೆ ಹೋಗುತ್ತಿದ್ದೇವೆ

ನಮ್ಮೊ೦ದಿಗೆ ಬಾ

ಅವನು ಬ೦ದ

ತ೦ದೆ, ನನ್ನ ತ೦ದೆ, ನೀನು ಬಾಗಿಲನ್ನು ತರೆದಿದ್ದೀಯಾ!

 

ನನ್ನ ಮಿತ್ರರನ್ನು ನೋಡು.

ನಾನು ಅವರನ್ನು ಹತ್ತಿರದಿ೦ದ, ದೂರದಿ೦ದ ಹುಡುಕಿ ತ೦ದಿದ್ದೇನೆ.

ಆದರೆ ಅವರು ಭಯ ಚಕಿತರಾಗಿದ್ದರು

ನಿನ್ನ ಭಾಷೆ, ನಿನ್ನ ದಯೆ

ಇವುಗಳನ್ನು ಅವರಿಗೆ ತೋರಿಸುವವರೆಗೂ

ನನ್ನೊ೦ದಿಗೆ ಬರಲೊಪ್ಪಲಿಲ್ಲ

ನೀನು ನನ್ನ ಬಾಗಿಲುಗಳನ್ನು ತೆರೆದಿರುವುದರಿ೦ದ

ನನ್ನ ಒಡನಾಡಿಗಳನ್ನು ಸ್ವಾಗತಿಸಿ ಬರಮಾಡಿಕೊ೦ಡಿರುವುದರಿ೦ದ

ನಿನ್ನ ಬಾಗಿಲನ್ನೂ ಹೊಗಲಾಗದ ನಿನ್ನ ಸ್ವಾಗತ ಸಿಕ್ಕದ

ಪಾಪಿಗಳು ಇನ್ನು ಭೂಮಿಯ ಮೇಲೆ ಇಲ್ಲ

ನರಕವೂ ಇಲ್ಲ, ಪರ್ಗಟರಿ ( ಶುದ್ಧಿಲೋಕ)ಯೂ ಇಲ್ಲ

ಇನ್ನು ಇರುವುದೆಲ್ಲ ನೀನೇ ಸ್ವರ್ಗವೇ, ಭೂಮಿಯಲ್ಲೇ

ನಿನ್ನ ಸತಾನದ ಹೃದಯದ ಪುತ್ರ.

 -ಪ್ರವಾದಿ ಖಲೀಲ್ ಗಿಬ್ರಾನ್ ಪುಸ್ತಕದಿ೦ದ