Friday 1 March 2013

ನಾನೊಂದು ಸಣ್ಣ ನೆಪವಷ್ಟೇ


ನಿನ್ನ ಕೈಯಿಂದ ಜಾರಿ ಬಿದ್ದು
ಮಣ್ಣ ಹಾಸುಹೊಕ್ಕಿ
ಮೊಳಕೆಯೊಡೆಯುವ ತೀವ್ರತೆಯಿಂದ
ಹಾಕಿದ ಅಷ್ಟು ಇಷ್ಟುನೀರಲ್ಲಿ 
ಮಿಂದು ಮೊಳೆತ
ಕ್ರಿಯಾಶೀಲ ಪ್ರತೀಕ
ಒಂದು ಬೀಜ ನಾನು

ಋತುಗಳ ಬೆಚ್ಚನೆಯ ಶಾಖಕ್ಕೆ
ಜಗವು ಕೊಟ್ಟ ಬಗೆಬಗೆಯ ರದ್ದಾಂತಕ್ಕೆ
ಸೋಲ್ಲದೇ ಬಿದ್ದು ಎದ್ದು
ಎದ್ದು ಬಿದ್ದು ಎಲೆಗಳ ಸಮೃದ್ಧಿಯಲ್ಲಿ
ಮರವಾಗಲು ಬಯಸಿ ನಿಂತ
ಮನೋಭಿಲಾಷೆಯ
ಒಂದು ಸಸಿ ನಾನು

ಕಾಲಚಕ್ರವ ಕೂಡಿ
ಬೆಳೆದೆ ದಿನೇ ದಿನೇ ನೋಡಿ
ಬೇರು ಕಾಂಡ ರೆಂಬೆ ಕೊಂಬೆ ಎಲೆಗಳ
ಸಮೃದ್ಧಿಯ ಹಣ್ಣಿನ ರಸಸ್ಥಿತಿಯಲ್ಲಿ
ಪರಮಾಭಿವ್ಯಕ್ತಿಯಾದ
ಒಂದು ಮರ ನಾನು

ಯಾರೋ ಚಪಲಕ್ಕೆ
ನನ್ನನ್ನೇ ಮೈಯೊಡ್ಡಿ
ನೀಡಿ ಹಣ್ಣುಗಳ
ಕಣ್ಮರೆಯಾಗಿಬಿಡುವಷ್ಟೇ ನನ್ನ ಬದುಕಲ್ಲ
ಕೊಡುವಾತ ಮನಸ್ಸಿನ
ಪ್ರಕಟಾಭಿವ್ಯಕ್ತಿಗೆ ಉದರತೆಯ ಮನೋಭಿಲಾಷೆಯ
ಕ್ರಿಯಾಶೀಲ ರಸಸ್ಥಿತಿಯ ಪರಮಾಭಿವ್ಯಕ್ತಿಗೆ
ವಿಶ್ವಸೃಷ್ಠಿಯ ನಾನೊಂದು ಸಣ್ಣ ನೆಪವಷ್ಟೇ!!!

-ಜೋವಿ

Read more!

1 comment:

  1. Beautiful. ನೀವು ಸಸಿಯಾದ ಸಾಲುಗಳಂತೂ ಅದ್ಭುತ. -SI

    ReplyDelete