ಪಳ ಪಳ ಪಳ ಪಳ ಹೊಳೆಯುತ್ತಿರುವ 'ಚುಕ್ಕಿ'
![]() |
ಸಂದುಗೊಂದು ನುಸುಳಿಕೊಂಡು ಎತ್ತ ಓಡುವೀ ಹೀಗೆ?
ಮಿಂಚುಹುಳುವು ಬೆದರಿಯಾವ ನಿನ್ನ ನೋಡಿ ಕಡೆಗೆ
ನದಿಯ ಮೇಲೆ ಬೆರಳ ಚಾಚಿ ನೀರು ಬೆಳ್ಳಿ ಕುಲುಮೆ
ಹೊಲವ ಸಾಗಿ ತೆನೆಯ ತೂಗಿ ಪರುವತಗಳತ್ತಿಜಾರಿದಿರಿಮೆ
ಬಾನುಬಳಗ ಬೆಚ್ಚಿಬಿದ್ದು ನಿನ್ನೆ ನೋಡುತಿರಲು
ಒಂಟಿ ತಾರೆ ಮಿನುಗು ಕೋಟಿ ತಾರೆಗೂ ಮಿಗಿಲು
ಇರುಳ ರಾಜ ಹರೆಯದಲ್ಲೂ ತೋರದಾದ ಬೆಳಗ
ಹೊತ್ತು ನಡೆದಿಹೆ ಎತ್ತ ನೆಡಲು ಪೂರ್ವದೆಡೆಯ ಪಯಣಿಗ
ಭರದಿ ಭುವಿಯ ಪಯಣ ಯಾರ ನೋಡ್ವ ತವಕ
ನಿನ್ನ ಲೋಕಕ್ಕಿಂತ ಭಿನ್ನ ಏನು? ಈ ಮಣ್ಣಲೋಕ
ಬಾನು ಭುವಿಯ ಒಂದು ಮಾಡುವ ಭವ್ಯ ನಡಿಗೆ
ಹಿಂದೆ ಕುಲಕೋಟಿ ಜಗತ್ತು ಹೊರಟಿದೆ ಮೆರವಣಿಗೆ
ಯಾರ ಜನನ ಯಾವ ಸುದಿನ ಯಾರು ಇತ್ತ ಆಮಂತ್ರಣ
ನಾನೂ ಕಾದೆ ಅಷ್ಟುದಿನವು ನೋಡಿ ಮುಗಿಲ ಚಿತ್ರಣ
ಪ್ರೀತಿಗಾಗಿ ಶಾಂತಿಗಾಗಿ ಬರುವನೊಬ್ಬ ಕರ್ತನು
ಅವನ ನೋಡ ಹೋದರೆ ತಿಳಿಸು ನಾನು ಕೂಡ ಬರುವೆನು.
-ಸಂತೋಷ್.ಇ.
great Santhosh...keep it up
ReplyDelete