Saturday 31 August 2013

ಬೆಂಗ್ಳೂರಿನ್ ಸಾವಾಸ ಟ್ರಾಫಿಕ್ಕಿನ್ ವನವಾಸ

ಮೊನ್ನೆ ಭಟ್ಟರ ಡ್ರಾಮ ಚಿತ್ರದ ಹಾಡು ಕೇಳುತ್ತಾ 
ಮತ್ತೊಂದು ಟ್ರಾಫಿಕ್ಕು ಜ್ಯಾಮಿನಲ್ಲಿ ನಿಂತಾಗ
ಹುಟ್ಟಿಕೊಂಡ ಹಾಡು...

ಡ್ರಾಮದ ತುಂಡ್ ಹೈಕ್ಳ ಸಾವಾಸ ಧಾಟಿಯಲ್ಲಿ
--------------------------

ಲಕ್ಕಂಡಿ ಕಡ್ಡಿಪುಡಿ ಒನೆವೇ ನೋ ಟೂವೇ ನೋ
ಲಂಗುಲಗಾಮಿಲ್ಲದೆ ಓಡ್ಸೋ ಫಕೀರ
ರಾಂಗ್ ಸೈಡಲ್ಲ್ ಓಡ್ಸೋನೇ ಹಮ್ಮೀರ
ಕಾರೋರು ಬಿಡೊಲ್ಲ ಬೈಕೋರು ಬಗ್ಗಲ್ಲ
ಮಾಡ್ಬೇಡ ಸನ್ನೆ ನುಗ್ತಾಯಿರು ಸುಮ್ನೆ
ವಾಲಾಡು ಸವಾರ ವಾಲಾಡು
ಪೆಟ್ರೋಲ್ ಹಾಕ್ಕೊಂಡ್.... ತೇಲಾಡು



ಹಾಡು
ಬೆಂಗ್ಳೂ..ರಿನ್ ಸಾವಾಸ ಟ್ರಾಫ್ಹಿಕ್ಕಿನ್ ವನವಾಸ
ಬಯ್ಯ್ ಬೇಡಿ ಪೋಲಿಸಾ
ಅವ್ರೂ ನಮಂಗ್ ನರ್ ಮನಸಾ
ರೋಡು ಹಾಳು ಮಾಡಕ್ಕೆ ಮೆಟ್ರೋನ ಮಾಡ್ತಾವ್ರೆ
ಇನ್ನೂ ಒಂದೇ ಒಂದು ಫೇಸು ಮಾತ್ರ ಮುಗ್ಸವ್ರೆ
ಅಮುಕಿ ಅಮುಕಿ ಕ್ಲಚ್ಚು ಕೈಯಿ ನೋಯ್ತದೆ
ಹಿಡ್ದು ಹಿಡ್ದೂ ಬ್ರೇಕು ಕಾಲು ಹೊಯ್ತದೆ
ಪ್ರತಿ ಜ್ಯಾಮಿನಲ್ಲೂ ವಯಸ್ಸು ಆಗ್ತಾದೆ
ಹೊಳೇಲಿ ಹುಣ್ಸೆ ಹಣ್ಣು ತೊಳ್ದಂಗಾಯ್ತಾದೆ
ಟ್ರ್ರಾಫಿಕ್ಕ್ ನ ಸಾವಾಸ ಮೂರ್‍ಹೊತ್ತು ವನವಾಸ

(೧)
ಎಲ್ಲಿ ನುಗ್ಗಕಾಗ್ಗುತ್ತೋ ಅದೇ ರೋಡು
ಇಲ್ಲಿ ಡ್ರೈವಿಂಗು ಲೈಸನ್ಸು ಬೇರೆ ಕೇಡು
ಮಾಡೊಲ್ಲ ರೂಲ್ಸು ಇಲ್ಲಿ ಯಾರೂ ಫಾಲೋ
ನಾಯಿ ಹಸು ಬೆಕ್ಕುಗಳೇ ಎಷ್ಟೋ ಮೇಲೋ
ಬೆಳಗಾಗೆದ್ದು ಆಫೀಸ್ ಗೆ ಕಾರಿನಲ್ಲಿ ಹೊಂಟರೆ
ಹಳ್ಳಿ ಎತ್ತಿನ್ ಗಾಡಿನೇ ಎಷ್ಟೋ ವಾಸಿ ಅಂತಾರೆ
ಗಾಳಿನಾ ತೆಗ್ದುಕೊಂಡ್ರೆ ಮೂಗು ನೊಯ್ತದೆ
ಹೊಗೆಗೆ ಕಣ್ಣು ಕೂಲಿಂಗ್ ಗ್ಲಾಸು ಕೇಳ್ತದೆ
ಎದೆಯ ಗೂಡಿನಲ್ಲಿ  ಸದ್ದು ಕೇಳ್ತದೆ
ಉಬ್ಸಕ್ಕೆ ಅಲ್ಲಿ ಗೊರ ಗೊರ ಅಂತದೆ

(೨)
ಜಾಗಾನೇ ಕೊಡೊದಿಲ್ಲ ಫೋರ್ ವೀಲರ್‍ಸು
ಪುಟ್ಪಾತಿಗೆ ಹಾರುತ್ತಿವೆ ಟೂ ವೀಲರ್‍ಸು
ಬೇಕಿಲ್ಲ ಪ್ರಳಯಕ್ಕೆ ಕಾಯೋದಿನ್ನು
ಟ್ರಾಫಿಕ್ಕೆ ಮುಳುಗಿಸುತ್ತೆ ಊರನ್ನು
ಮಳೆ ಗಿಳೆ ಬಂದಾಗ ಗುಂಡಿಗಳ ರಾದ್ಧಾಂತ
ಜ್ಯಾಮಿನಲ್ಲಿ ನಿಂತಾಗ ಎಲ್ರ ಬಾಯ್ಲೂ ವೇದಾಂತ
ಪ್ರತಿ ಸಿಗ್ನಲ್ಲಿನಲ್ಲೂ ರೆಡ್ಡು ಇರ್‍ತದೆ
ಪರಮಾತ್ಮ ಕಣ್ಣು ಬಿಟ್ರೆ ಗ್ರೀನು ಸಿಗ್ತದೆ
ರಾಂಗೂ ಸೈಡಿನಿಂದ ಗಾಡಿ ಬರ್‍ತದೆ
ನಿಮ್ಗೆ ಟಚ್ಚು ಕೊಟ್ಟು ಮುಂದೆ ಹೋಯ್ತದೆ

-ಪ್ರಶಾಂತ್ ಇಗ್ನೇಷಿಯಸ್

No comments:

Post a Comment