Friday 1 February 2019

ನೀವೂ ನೋಡಿ - ಸೈಲೆನ್ಸ್’

ವಿಶ್ವಾಸ ಹಾಗೂ ಸ್ಥಳೀಯ ವ್ಯವಸ್ಥೆಯ ನಡುವಿನ ಸಂಘರ್ಷ ಹಾಗೂ ಅದರ ಹಿನ್ನೆಲೆಯಲ್ಲಿ ಬರುವ ಭಾವನಾತ್ಮಕ ತೊಳಲಾಟದ ಚಿತ್ರಸೈಲೆನ್ಸ್’.

ಹಾಲಿವುಡ್ ಅತ್ಯಂತ ಜನಪ್ರಿಯ ನಿರ್ದೇಶಕರುಗಳಲ್ಲಿ ಒಬ್ಬರಾದ ಮಾರ್ಟಿನ್ ಸ್ಕೋರ್ಸೆಸಿ ಚಿತ್ರಗಳನ್ನು ಜನ ಮೆಚ್ಚುವುದು ಅದರ ಚಿತ್ರಣ ಹಾಗೂ ವಸ್ತುವಿಗಾಗಿ. ಮಾರ್ಟಿನ್‍ರವರ ಯಾವುದೇ ಚಿತ್ರವು ದೊಡ್ಡ ಕ್ಯಾನ್ವಾಸಿನ ಚಿತ್ರ ಮಾತ್ರವಲ್ಲದೆ ಅಂತರಾಳದಲ್ಲಿ ಅನೇಕ ಪದರುಗಳನ್ನು ಮತ್ತು ಒಳ ಅರ್ಥಗಳನ್ನು ಒಳಗೊಂಡಿರುತ್ತವೆ. ಅವರ ಚಿತ್ರಗಳ ಅಂಶಗಳ ಬಗ್ಗೆಯೇ ದೊಡ್ಡ ಮಟ್ಟದ ಸಂವಾದಗಳನ್ನು ನಾವು ಕಾಣಬಹುದು. ಕಚ್ಚಾ ಎನಿಸುವಂತ ನಿರೂಪಣೆಅತ್ತ್ಯುತ್ತಮ ತಾಂತ್ರಿಕತೆ,   ಕಥಾವಸ್ತುವಲ್ಲಿನ ಗಾಢತೆ, ವಿಷಾದ ಹಾಗೂ ನೈಜತೆಯಿಂದಾಗಿ ಮಾರ್ಟಿನ್ ಹಾಲಿವುಡ್‍ನ ಅಗ್ರಮಾನ್ಯ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ಅಂತೆಯೇ ಅವರ ಚಿತ್ರಗಳು ವಿವಾದಾತ್ಮಕ ಚಿತ್ರಗಳ ಸಾಲಿನಲ್ಲೂ ನಿಲ್ಲುತ್ತದೆ. ಅವರ ಯಾವುದೇ ಚಿತ್ರದಲ್ಲಿ ಒಂದಷ್ಟು ಆಧ್ಯಾತ್ಮಿಕತೆ ಇದ್ದೇ ಇರುತ್ತದೆ ಎಂಬುದು ವಿಮರ್ಶಕರ, ಚಿತ್ರರಸಿಕರ ಅಭಿಪ್ರಾಯವಾಗಿದೆ. ಹಾಗೇ ನೋಡಿದರೆಸೈಲೆನ್ಸ್’ ಪೂರ್ಣ ಧಾರ್ಮಿಕ ವಸ್ತುವನ್ನೇ ಒಳಗೊಂಡ  ಮಾರ್ಟಿನ್‍ರವರ ಮೂರನೆಯ ಚಿತ್ರ. ಸಾಕಷ್ಟು ವಿವಾದ ಸೃಷ್ಟಿಸಿದ್ದದಿ ಲಾಸ್ಟ್ ಟೆಂಪ್ಟೇಶನ್ ಆಫ್ ಕ್ರೈಸ್ಟ್’ ಹಾಗೂಕುಂದನ್’ ಅವರ ಇತರ ಧಾರ್ಮಿಕ ಹಿನಲ್ಲೆಯುಳ್ಳ ಚಿತ್ರಗಳು.

 17ನೇ ಶತಮಾನದ ಜಪಾನಿನ ನಾಗಸಾಕಿ ಸುತ್ತಮುತ್ತ ನಡೆಯುವ ಘಟನೆಗಳು ಚಿತ್ರದ ಕಥಾವಸ್ತು. ಇದು ಶುಸಾಕು ಏಂಡೋ ಎಂಬ ಕಾದಂಬರಿಕಾರನಸೈಲೆನ್ಸ್’ ಹೆಸರಿನ ಕಾದಂಬರಿ ಆಧಾರಿತ ಚಿತ್ರವಾಗಿದೆ. ಕಾದಂಬರಿಯನ್ನು ಬರೆಯಲು ಪ್ರೇರಣೆಯಾದ ಸಂದರ್ಭವೇ ಆಸಕ್ತಿಕರವಾದದು. ಜಪಾನಿನ ಮ್ಯೂಸಿಯಂ ಒಂದರಲ್ಲಿ ಹದಿನಾರು, ಹದಿನೇಳನೇ ಶತಮಾನಕ್ಕೆ ಸೇರಿದ ಕ್ರಿಸ್ತನ ಚಿತ್ರವುಳ್ಳ ಫಲಕಗಳು ಕಾದಂಬರಿಕಾರನನ್ನು ಸೆಳೆಯುತ್ತದೆ. ೧೬, ೧೭ನೇ ಶತಮಾನದಲ್ಲಿ ಜಪಾನಿನಲ್ಲಿ ಕ್ರೈಸ್ತ ಧರ್ಮವನ್ನು ಅಡಗಿಸುವ ನಿಟ್ಟಿನಲ್ಲಿ ಕ್ರೈಸ್ತ ಅನುಯಾಯಿಗಳಿಗೆ ಒಂದು ಪರೀಕ್ಷೆಯನ್ನು ಒಡ್ಡಲಾಗುತ್ತಿತ್ತು. ಅವರನ್ನು ನಿಲ್ಲಿಸಿಕ್ರಿಸ್ತ ಅಥವಾ ಕ್ರೈಸ್ತ ಧರ್ಮಕ್ಕೆ ಸೇರಿದ ಕೆತ್ತನೆಯಿದ್ದ ಫಲಕವನ್ನು ನೆಲದ ಮೇಲಿಟ್ಟು ಕಾಲಿನಲ್ಲಿ ತುಳಿಯಬೇಕೆಂದು ಕ್ರೈಸ್ತರಿಗೆ ಆಜ್ಞೆಯನ್ನು ನೀಡಲಾಗುತಿತ್ತು.

ಫಲಕವನ್ನು ತುಳಿದವರನ್ನು ಬಿಡುಗಡೆ ಮಾಡಲಾಗುತ್ತಿತ್ತು, ಅದನ್ನು ಅವರು ತುಳಿಯದಿದ್ದರೆ ಅವರು ಕ್ರೈಸ್ತರು ಎಂಬುದು ಸಾಬೀತಾಗಿ ಅವರನ್ನು ಹಿಂಸೆಗೆ ಅಥವಾ ಸಾವಿಗೆ ಗುರಿ ಮಾಡಲಾಗುತ್ತಿತ್ತು. ಮ್ಯೂಸಿಯಂನಲ್ಲಿದ್ದ ಫಲಕಗಳು ಒಂದು ಪ್ರೇರಣೆಯಾದರೆ, ಜಪಾನಿಗೆ ಸೇವೆ ಮಾಡಲು ಬಂದ ಪೋರ್ಚುಗಲ್ಲಿನ ಯೇಸು ಸಭೆಯ ಗುರುಗಳ ಬಗ್ಗೆ ಸಂಶೋಧನೆಯನ್ನುಮಾಡುವಾಗ ಕ್ರೈಸ್ತ ಪಾದ್ರಿ ಕ್ರಿಸ್ಟೋವ ಫೆರೆರಾ ಎಂಬ ಗುರುಗಳ ಉಲ್ಲೇಖ ಸಿಗುತ್ತದೆ.

1630 ಹೊತ್ತಿಗೆ ಗುರುಗಳ ಬಗ್ಗೆ ಯಾವುದೇ ರೀತಿಯ ವಿವರಗಳು ಮುಂದುವರಿಯಲಿಲ್ಲ ಇದು ಏಕೆ ಎಂದು ತಿಳಿಯಲು ಪ್ರಯತ್ನಿಸಿದಾಗ, ಗುರುಗಳು ತಮ್ಮ ವಿಶ್ವಾಸವನ್ನು, ಕ್ರೈಸ್ತ ಧರ್ಮವನ್ನು ತೊರೆದರು ಎಂಬ ಸಣ್ಣ ಮಾಹಿತಿ ಸಿಗುತ್ತದೆ. ಮುಂದಿನ ಮಾಹಿತಿಗಳು ಲಭ್ಯವಾಗದೆ ಇದ್ದಾಗ ಅಂದಿನ ಜಪಾನಿನ ಸಾಮಾಜಿಕ ಹಾಗೂ ಧಾರ್ಮಿಕ ಸ್ಥಿತಿಗತಿಗಳನ್ನು ಅವಲೋಕಿಸಿ ಕಾದಂಬರಿಕಾರ ತನ್ನದೇ ಆದ ಒಂದು ಕಲ್ಪನೆಯಲ್ಲಿ ಫೆರೆರಾರವರ ಮುಂದಿನ ಜೀವನವನ್ನು ಕಾದಂಬರಿಯಲ್ಲಿ ಮುಂದುವರಿಸುತ್ತಾರೆ. ಕಥಾ ಭಾಗದ ಮುಂದುವರಿಕೆಯೇ ಚಿತ್ರದ ಒಂದು ಕಥಾವಸ್ತು.

ಚಿತ್ರದಲ್ಲಿ ಹೀಗೆ  ಕ್ರೈಸ್ತ ಧರ್ಮವನ್ನು ತ್ಯಜಿಸಿ ಫೆರೆರಾ ಸ್ಥಳೀಯ ಧರ್ಮದ ಅನುಯಾಯಿಗಳಾದರು ಎಂಬ ಸುದ್ದಿ ಬರುತ್ತದೆ. ಇದನ್ನು ನಂಬದ ಫೆರೆರಾರವರ ಇಬ್ಬರು ಶಿಷ್ಯ ಗುರುಗಳಾದ ಸೆಬಾಸ್ಟಿಯೋ ರಾಡ್ರಿಗಸ್ ಹಾಗೂ ಫ್ರಾನ್ಸಿಸ್ಕೋ ಗರುಪೆ  ಅವರನ್ನು ಹುಡುಕಿಕೊಂಡು ಜಪಾನ್ ದೇಶಕ್ಕೆ ಬರುತ್ತಾರೆ.
ತಮ್ಮ ಜೀವಕ್ಕೆ ಮುಳುವಾಗಬಹುದು ವಿಷಯ ತಿಳಿದಿದ್ದರೂ ಕ್ರಿಸ್ತನ ಮೇಲಿನ ಪ್ರೇಮಕ್ಕಾಗಿ ಮತ್ತು ತಮ್ಮ ಗುರುಗಳ ಮೇಲಿನ ಅಭಿಮಾನಕ್ಕಾಗಿ ಜಪಾನಿಗೆ ಇಬ್ಬರು ಗುರುಗಳು ಬರುತ್ತಾರೆ. ಸಮಯದಲ್ಲಿ ಜಪಾನಿನಲ್ಲಿ ಕ್ರೈಸ್ತ ಧರ್ಮ ಅವನತಿಯೆಡೆಗೆ ಸಾಗುತ್ತಿರುತ್ತದೆ. ಸುಮಾರು 3 ಲಕ್ಷದಷ್ಟಿದ್ದ ಕ್ರೈಸ್ತರ ಸಂಖ್ಯೆ ಕೆಲವೇ ಸಾವಿರದಷ್ಟಾಗಲು ಕಾರಣಗಳು ಅವರಿಗೆ ಸಿಗುತ್ತದೆ. ಇಬ್ಬರು ಗುರುಗಳು ಅಲ್ಲಿ ಕ್ರೈಸ್ತ ಧರ್ಮವನ್ನು ಕಟ್ಟುವ ಕೈಂಕರ್ಯಕ್ಕೆ ಮುಂದಾಗುತ್ತಾರೆ

ಸಮಯದಲ್ಲಿ ಅವರಿಬ್ಬರೂ ಅನುಭವಿಸುವ ಯಾತನೆ ಮತ್ತು ಅಲ್ಲಿನ ಧಾರ್ಮಿಕ ನಾಯಕರು ಅವರಿಗೆ ನೀಡುವ ಚಿತ್ರ ಹಿಂಸೆಯನ್ನು ಚಿತ್ರದಲ್ಲಿ ನಾವು ಕಾಣಬಹುದಾಗಿದೆ. ಚಿತ್ರದಲ್ಲಿ ಅನೇಕ ಹೃದಯಂಗಮ ದೃಶ್ಯಗಳನ್ನು ಮಾರ್ಟಿನ್ ತಮ್ಮ ಎಂದಿನ ಶೈಲಿಯಲ್ಲಿ ಮೂಡಿಸಿದ್ದಾರೆ ಕೆಲವೊಮ್ಮೆ ದೃಶ್ಯಗಳು ಮನಕಲುಕುವುದು ಮಾತ್ರವಲ್ಲದೆ, ನಮ್ಮ ಹೃದಯವನ್ನೇ ತಿವಿಯುತ್ತದೆ. ಜಪಾನಿನಲ್ಲಿ ಅಂದಿನ  ಧಾರ್ಮಿಕ ಸ್ಥಿತಿಗತಿಗಳನ್ನು, ಹಾಗೂ ಕ್ರೈಸ್ತರು ಅನುಭವಿಸುವ ಅನೇಕ ರೀತಿಯ ಕಷ್ಟ ಹಿಂಸೆಗಳನ್ನು ಚಿತ್ರದಲ್ಲಿ ಚಿತ್ರಿಸಲಾಗಿದೆ.

ತಮ್ಮ ಗುರುಗಳನ್ನು ಹುಡುಕಿಕೊಂಡು ಬಂದ ಇಬ್ಬರು ಪಾದ್ರಿಗಳು ಕ್ರೈಸ್ತ ವಿಶ್ವಾಸಕ್ಕೆ ಕಟ್ಟುಬಿದ್ದ ಪರಿಣಾಮವಾಗಿ ಗರುಪೆ ತಮ್ಮ ಜೀವವನ್ನೇ ತೆರಬೇಕಾಗುತ್ತದೆ. ರಾಡ್ರಿಗಸ್ ಅದಕ್ಕಿಂತ ಘೋರವಾದ ಪ್ರಸಂಗವನ್ನು ಮುಂದೆ ಅನುಭವಿಸಬೇಕಾಗುತ್ತದೆ. ಹುಡುಕಿಕೊಂಡು ಬಂದ ತಮ್ಮ ಗುರುಗಳಾದ ಫೆರೆರಾ  ವಿಶ್ವಾಸವನ್ನು ತ್ಯಜಿಸಿ ಅಲ್ಲಿನ ಧಾರ್ಮಿಕ ವ್ಯವಸ್ಥೆಯ ಒಂದು ಭಾಗವಾಗಿ, ಯಾವುದೇ ರೀತಿಯ ಸಂಕಟವಿಲ್ಲದೆ, ನೋವಿಲ್ಲದೆ ಬದುಕುತ್ತಿರುವುದನ್ನು ಕಂಡ ರಾಡ್ರಿಗಸ್ ಅನುಭವಿಸುವ ನೋವು ಹಾಗೂ ಮಾನಸಿಕ ತಳಮಳದ ದೃಶ್ಯ ಚಿತ್ರದ ಹೈಲೈಟ್ ಗಳಲ್ಲಿ ಒಂದು

ಮುಂದೆ ಪರಿಸ್ಥಿತಿಯ ಶಿಶುವಾಗಿ  ಹಾಗೂ ತಮ್ಮ ಜನರನ್ನು ರಕ್ಷಿಸುವ ಸಲುವಾಗಿ ರಾಡ್ರಿಗಸ್ ಕೂಡ ಕ್ರೈಸ್ತ ಧರ್ಮವನ್ನು ಬಿಟ್ಟು ಅಲ್ಲಿನ ಧಾರ್ಮಿಕ ವ್ಯವಸ್ಥೆಯಲ್ಲಿ ಒಂದಾಗುವಂತಹ ಪ್ರಸಂಗ ಬರುತ್ತದೆ. ಪರಿಸ್ಥಿತಿಯ ಭಾಗವಾಗಿ ಅವರು ಕ್ರಿಸ್ತನ ಫಲಕವನ್ನು ತುಳಿಯಬೇಕಾದ ಪ್ರಸಂಗ ಬರುತ್ತದೆಮಾನಸಿಕ ಹಾಗೂ ಧಾರ್ಮಿಕ ತೊಳಲಾಟದಲ್ಲಿ ಬಿದ್ದ ಅವರಿಗೆ ಕ್ರಿಸ್ತನ ಮಾತುಗಳು ಕೇಳಿಸುತ್ತದೆ. ತನ್ನ ಚಿತ್ರವು ಇರುವ ಫಲಕವನ್ನು ತುಳಿ ಎಂದು ಕ್ರಿಸ್ತನೇ ಹೇಳಿದಂತೆ ಭಾಸವಾಗುತ್ತದೆ. ಇಲ್ಲಿ ಕ್ರಿಸ್ತ ಒಬ್ಬ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಬಲ್ಲ ದೇವರು ಎಂಬುದನ್ನು ಹಾಗೂ ನೋವು, ಕಷ್ಟ ಪಡುವವರ ಪರವಾಗಿ ನಿಲ್ಲಬಲ ದೇವರು ಎಂಬುದನ್ನು ನಿರ್ದೇಶಕರು ತೋರಿಸಿದ್ದಾರೆ.

ಕೊನೆಗೆ ರಾಡ್ರಿಗಸ್ ಸ್ವಾಭಾವಿಕ ಸಾವಿಗೀಡಾಗಿ ಅಲ್ಲಿನ ಸಂಪ್ರದಾಯದಂತೆಯೇ ಅಗ್ನಿ ಸ್ಪರ್ಶಕ್ಕೆ ಗುರಿಯಾಗುತ್ತಾರೆ. ಅಲ್ಲಿ ಕ್ರೈಸ್ತ ಧರ್ಮದ ಲವಲೇಶವೂ ಕಾಣುತ್ತಿಲ್ಲ ಎಂಬ ಸಂದರ್ಭದಲ್ಲಿ ಚಿತ್ರ ಮುಗಿಯುತ್ತಿದ್ದಂತೆ, ಅಗ್ನಿಸ್ಪರ್ಷಕ್ಕೆ ಗುರಿಯಾಗುವ ರಾಡ್ರಿಗಸ್‍ರವರ ಕೈ ಒಂದು ಮರದ ಸಣ್ಣ ಶಿಲುಬೆನ್ನು ಭದ್ರವಾಗಿ ಹಿಡಿದಿಟ್ಟುಕೊಂಡಿರುವುದನ್ನು ಕಾಣುತ್ತದೆ. ನೋಡುಗರ ಎದೆಯನ್ನು ನಾಟುವಂತ ಪರಿಣಾಮವನ್ನು ಚಿತ್ರ ಮೂಡಿಸುವುದರಲ್ಲಿ ಎಂದಿನಂತೆ ಮಾರ್ಟಿನ್ ಸ್ಕೋರ್ಸೆಸಿ ಯಶಸ್ವಿಯಾಗಿದ್ದಾರೆ. ಯುವ ಪಾದ್ರಿ ರಾಡ್ರಿಗಸ್ ಪಾತ್ರದಲ್ಲಿ ನಟ ಆಂಡ್ರೂ ಗಾರ್ಫೀಲ್ಡ್‍ರವರದು ಮನೋಜ್ಞ ಅಭಿನಯಚಿತ್ರದಲ್ಲಿ ಬರುವ ಜಪಾನ್ ಪಾತ್ರಧಾರಿಗಳ ಅಭಿನಯ ಅದೆಷ್ಟು ತನ್ಮಯವಾಗಿದೆ ಎಂದರೆ ಚಿತ್ರ ಕೆಲವೇ ನಿಮಿಷಗಳಲ್ಲಿ ನಿಮ್ಮನ್ನು ಜಪಾನ್ ಹಾಗೂ ೧೭ನೇ ಶತಮಾನಕ್ಕೆ ಕರೆದ್ಯೊಯ್ಯುತ್ತದೆ. ಚಿತ್ರದ ಸಂಗೀತ, ಛಾಯಗ್ರಹಣವೆಲ್ಲವೂ ಉತ್ಕೃಷ್ಟ ಮಟ್ಟದಾಗಿದೆ.

ಸುಮಾರು 3 ಗಂಟೆಯಷ್ಟು ದೀರ್ಘವಾದ ಚಿತ್ರವನ್ನು ಬಿಡುವು ಮಾಡಿಕೊಂಡು ನೋಡಬೇಕಾಗುತ್ತದೆ.

No comments:

Post a Comment