Friday 27 July 2012


ರವೀಂದ್ರನಾಥ ಠಾಕೂರರ ’ಗೀತಾಂಜಲಿ’ಯಿಂದ…

(ಫಾ. ಜೀವನ್ ಪ್ರಭು ಅನುವಾದಿಸಿರುವ ಸೌಹಾರ್ದ ಪುಸ್ತಕದಿಂದ)


ಅವನ ಸದ್ದಿಲ್ಲದ ಹೆಜ್ಜೆಗಳನ್ನು ಆಲಿಸಿದ್ದೀರಾ?
ಅವನು ಬರುತ್ತಾನೆ, ಬರುತ್ತಾನೆ, ಎಂದೆಂದೂ ಬರುತ್ತಾನೆ.
ಪ್ರತಿಯೊಂದು ಕ್ಷಣದಲ್ಲಿ, ಪ್ರತಿಯೊಂದು ಯುಗದಲ್ಲಿ
ಪ್ರತಿಯೊಂದು ಹಗಲು ಇರುಳಿನಲ್ಲಿ ಅವನು ಬರುತ್ತಾನೆ
ಬರುತ್ತಾನೆ, ಎಂದೆಂದೂ ಬರುತ್ತಾನೆ.
ಅನೇಕ ಮನಃಸ್ಥಿತಿಗಳಲ್ಲಿ ಅನೇಕ ಹಾಡುಗಳನ್ನು ಹಾಡಿದ್ದೇನೆ ನಾನು,
ಆದರೆ ಅವುಗಳ ಸ್ವರಗಳೆಲ್ಲ ಘೋಷಿಸಿವೆ-
ಅವನು ಬರುತ್ತಾನೆ.. ಬರುತ್ತಾನೆ, ಎಂದೆಂದೂ ಬರುತ್ತಾನೆ.
ಬಿಸಿಲ ಚೈತ್ರ ಕಂಪಿನ ದಿನಗಳಲ್ಲಿ
ಅಡವಿದಾರಿಯಲ್ಲಿ ಅವನು ಬರುತ್ತಾನೆ
ಬರುತ್ತಾನೆ, ಬರುತ್ತಾನೆ, ಎಂದೆಂದೂ ಬರುತ್ತಾನೆ.
ಶ್ರಾವಣದ ಇರುಳುಗಳು ಮಳೆ ಮಬ್ಬಿನಲ್ಲಿ
ಮೋಡಗಳ ಗುಡುಗಿದ ರಥದ ಮೇಲೆ
ಅವನು ಬರುತ್ತಾನೆ, ಬರುತ್ತಾನೆ, ಎಂದೆಂದೂ ಬರುತ್ತಾನೆ.
ಪುಂಖಾನುಪುಂಖ ದುಃಖಗಳಲ್ಲಿ
ನನ್ನ ಎದೆಯನ್ನೊತ್ತುವುವು ಅವನ ಹೆಜ್ಜೆಗಳು
ನನ್ನ ಸಂತಸ ಹೊಳೆಯುವಂತೆ ಮಾಡುವುದು
ಅವನ ಪಾದಗಳ ಸ್ಪರ್ಶ..Read more!

2 comments:

  1. ಬರುತ್ತಾನೆ, ಬರುತ್ತಾನೆ, ಎಂದೆಂದೂ ಬರುತ್ತಾನೆ can be ಬರ್ತಾನೆ ಬರ್ತಾನೆ ಬರ್ತಲೇ ಇರ್ತಾನೆ...He comes in forms of Spring & fragrance, rain & cloud . . brings cheers in moments of grief.

    ReplyDelete
  2. Have you not heard his silet steps? ಬತ್ತಾನೆ ಬತ್ತಾನೆ ಬರ್ತಲೇ ಇರ್ತಾನೆ...he comes as spring & fragrance, brings cheers in grief.. but we never notice him.

    ReplyDelete