Monday 26 March 2012

ಹಾಗೆ ಸುಮ್ಮನೆ





ಕುಳಿತು ದಿಟ್ಟಿಸಿದೆ..
ಹೊಸ ಮನೆಯ ನಿರ್ಮಾಣಕ್ಕಾಗಿ
ಇದ್ದ ಹಳೆ ಮನೆಯ ಕೆಡುವ ಕಾರ್ಯ..
ಕ್ಷಣ ಮಾತ್ರದಲ್ಲಿ ಗೋಡೆಗಳು ನೆಲಕುರುಳಿದವು..
ಎಚ್ಚರಿಕೆಯಿಂದ ಜೋಡಿಸಿದ ಇಟ್ಟಿಗೆಗಳ ಸಾಲು ಸಾಲು ನೆಲಸಮವಾದವು
ಮೂಡಿದ ಸ್ಥಿತ ಮನಸ್ಸಿನ ವಿನ್ಯಾಸಗಳು ಕಾಣೆಯಾದವು
ಇದ್ದ ಮನೆ ಬುಲ್‍ಡೋಜರ್‍ ಬಾಯಿಗೆ ಮಣ್ಣಾಗಿ ಹೋಗಿತ್ತು

ಇನ್ನೊಂದು ಕಡೆ..
ಹೊಸ ಮನೆಯ ನಿರ್ಮಾಣ ಕಾರ್ಯ
ಎಚ್ಚರಿಕೆಯ ಜೋಡನೆ..
ಸ್ಥಿತ ಮನಸ್ಸಿನ ಯೋಜನೆ..
ಪ್ರತಿ ಸಾಲಿಗೆ ಅಳತೆಯ ಚಿಂತನೆ

ಆಗ ಮನಸ್ಸು ಹೇಳಿತು...
"ಹತ್ತಾರು ತಿಂಗಳ ಶ್ರಮದ ಕಟ್ಟಡ...
ಉರಳಲು ಬೇಕು ಕ್ಷಣ ಮಾತ್ರ..."

ಆಗ ಮನಸ್ಸಿನ ಕನ್ನಡಿಯಲ್ಲಿ ಅಜರುದ್ದೀನ್..ಆಶ್ವಿನಿ..ಯಡಿಯೂರಪ್ಪ
ಹೀಗೆ ನೂರಾರು ಮಂದಿ ಕಾಣಿಸತೊಡಗಿದರು..

ಜೋವಿ

Read more!

1 comment:

  1. ನಿಮ್ಮ ಪರಿಕಲ್ಪನೆ ಚೆನ್ನಾಗಿದೆ. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಅನ್ನೋಹಾಗೆ.

    ಶಬ್ದಗಳ ಜೋಡಣೆಯೂ ಚೆನ್ನಾಗಿರಲಿ ಎಂದು ಹಾರೈಸುವೆ.

    -ಸಿ ಮರಿಜೋಸೆಫ್

    ReplyDelete