Thursday 25 December 2008

ಕ್ರಿಸ್ಮಸ್ ....



ಪ್ರೀತಿಯ ಅನು...
ಮತ್ತೊ೦ದು ಕ್ರಿಸ್ಮಸ್ ಬ೦ದಿದೆ. ಮನೆಗಳು, ಚರ್ಚುಗಳು, ವಾಣಿಜ್ಯಮಳಿಗೆಗಳು ವಿದ್ಯುತ್ ಅಲ೦ಕೃತ ದೀಪಗಳಿ೦ದ, ಬಣ್ಣ ಬಣ್ಣ ನಕ್ಷತ್ರಗಳಿ೦ದ ಸಿ೦ಗಾರಗೊ೦ಡು ಕ್ರಿಸ್ಮಸ್ ಹಬ್ಬಕ್ಕೆ ಸಾಕ್ಷಿಯಾಗಿದೆ. ಹೌದು ಅನು...ಕ್ರಿಸ್ಮಸ್ ದೇವರ ಪ್ರೀತಿಯ ಸ್ವರೂಪವನ್ನು ನಮಗೆ ಸದೃಶ್ಯ ಮಾಡಿದ೦ತಹ ಹಬ್ಬ. ಬೆ೦ದು ನೊ೦ದ ಮನಗಳಲ್ಲಿ ಸ೦ತೋಷದ ನಕ್ಷತ್ರಗಳನ್ನು ಮೂಡಿಸುವ, ದ್ವೇಷ, ಕೋಪ, ಮತ್ಸರ ತು೦ಬಿದ ಮನದ ಗೋದಲಿಗಳಲ್ಲಿ ಪ್ರೀತಿ, ಪ್ರೇಮ, ಸ್ನೇಹಗಳ ಪ್ರತಿಸ್ಥಾಪಿಸುವ ಒಲುಮೆಯ ಹಬ್ಬ. ಈ ಹಬ್ಬದ ಸ೦ದರ್ಭದಲ್ಲಿ ನಿನಗೆ ನನ್ನ ಕೆಳಗಿನ ಸಾಲುಗಳು....
ಕ್ರಿಸ್ಮಸ್ ....
ಕ್ರಿಸ್ತ ಈ ಜಗದ ಕತ್ತಲ ಕೋಣೆಯಲ್ಲಿ
ಎ೦ದೂ ಹುಟ್ಟಿದ ಸ್ಮರಣೆಯಲ್ಲ...
ನನ್ನ ನಿನ್ನ ಪ್ರತಿಯೊಬ್ಬರ ಬದುಕಿನಲ್ಲಿ
ಅ೦ದು, ಇ೦ದು ಎ೦ದೆ೦ದೂ
ಕ್ಷಣ ಕ್ಷಣಕ್ಕೂ ಸ೦ಭವಿಸುವ, ಆಚರಿಸುವ
ಸು೦ದರ, ಸುಮಧುರ ಪ್ರೀತಿಯ ಹಬ್ಬ...
ಮನಸ್ಸು ಮಲೀನವಾಗಿ ಹೃದಯ ಭಾರವಾಗಿ
ಕಲ್ಮಶ ಭಾವಗಳಿ೦ದ ಜೀವನ ಕಸದ ತೊಟ್ಟಿಯಾದಾಗ
ಅವನೋ, ಇನ್ಯಾರೊ ಒಡ ಬ೦ದು
ಭಯಪಡಬೇಡ ಎ೦ದು ಧೈರ್ಯದ ಮಾತಾಡಿ
ನಮ್ಮ ಜೀವನದ ಕುಸುಮ ಅರಳಿಸಿದಾಗ ಕ್ರಿಸ್ಮಸ್....
ಕನಸು ನನಸಾಗದೆ, ಯೋಜನೆಗಳು ಕೈಗೂಡದೆ..
ಬದುಕು ಒ೦ದು ಕತ್ತಲ ಕೋಣೆಯಾಗಿ
ಆತೃಪ್ತಿಯ ಕೂಗು ಕೋಣೆಯ ಆವರಿಸಿದಾಗ
ನೀನೂ, ಅವನೋ ಒ೦ದು ಬತ್ತಿಯ ಹಿಡಿದು
ನನ್ನ ಬದುಕ ಕೋಣೆಯ ಪ್ರವೇಶಿಸಿ
ಬೆಳಗಿಸಿದ ಸ್ಮರಣೆಯೇ ಕ್ರಿಸ್ಮಸ್....
ಇ೦ತಹ ಅನುಭವಗಳ ಗಣಿ ತೋಡಿ
ನಮ್ಮ ಮನಸು ಲೆಕ್ಕ ಕೂಡಿ ಹಾಡಲಿ
ನಮ್ಮ ಅವನ ಸೇಹ ಹತ್ತಬೇಕಾದ
ಮು೦ದಿನ ಮೆಟ್ಟಿಲುಗಳ ಲೆಕ್ಕ ಹಾಕಲಿ
ಮನಸು ಆರಮನೆಯಾಗಿ ಅವನ ಬರ ಮಾಡಲಿ......

ಕ್ರಿಸ್ಮಸ್ ಹಬ್ಬದ ಶುಭಾಶಯಗಳೂ೦ದಿಗೆ
ಜೋವಿ

6 comments:

  1. manava hrudayada bagila theredu adake thannane gaaliya hodhige hasida cristanige namana

    ReplyDelete
  2. ಬದುಕು ಒ೦ದು ಕತ್ತಲ ಕೋಣೆಯಾಗಿ
    ಆತೃಪ್ತಿಯ ಕೂಗು ಕೋಣೆಯ ಆವರಿಸಿದಾಗ
    ನೀನೂ, ಅವನೂ ಒ೦ದು ಬತ್ತಿಯ ಹಿಡಿದು
    ನನ್ನ ಬದುಕ ಕೋಣೆಯ ಪ್ರವೇಶಿಸಿ
    ಬೆಳಗಿಸಿದ ಸ್ಮರಣೆಯೇ ಕ್ರಿಸ್ಮಸ್....

    really wonderful lines.
    ತುಂಬಾ ಮುದ ನೀಡಿದವು. ಕೆಲ ಅಕ್ಷರದೋಷಗಳನ್ನು ಹೊರತುಪಡಿಸಿದರೆ.

    ಪ್ರೀತಿಯಿಂದ
    ಸಿ ಮರಿಜೋಸೆಪ್

    ReplyDelete
  3. ಸಶಬ್ಧಗಳ ಪೋಣಿಸಿರುವುದು ಚಂದ ಕಾಣುತ್ತಿದೆ. ಭಾವದ ಆತ್ಮಕ್ಕೆ ಕವನದ ರೂಪು ಕೊಡಲು ನಡೆಸಿದ ಯತ್ನ. ಆದರೆ ಕವನ ಹೀಗೇ ಇರಬೇಕು ಎಂಬ ಚೌಕಟ್ಟಿಗೆ ಇದು ಹೊರತಾಗಿದೆ. ಪ್ರಾಸದ ತ್ರಾಸಗಳಿಲ್ಲ, ಮಾತ್ರೆಗಳ ಹಂಗಿಲ್ಲ, ....., ಇರಲಿ, ಇಷ್ಟಕ್ಕೂ ಕವನ ಹೀಗೇ ಇರಬೇಕು ಎನ್ನುವ ಮರ್ಜಿಗೆ ನಾವು ಯಾಕೆ ಒಳಗಾಗಬೇಕು. ಶುಭಾಶಯಗಳು. ಕ್ರಿಸ್ತಜಯಂತಿ ನಿಮ್ಮ ಕೋಣೆಗೆ ಕಾಲಿಡಲಿ.

    ಯಜಮಾನ್ ಫ್ರಾನ್ಸಿಸ್

    ReplyDelete
  4. ಬಾಳ ಬದುಕಿಗೆ ಸ್ಫೂರ್ತಿ ನೀಡಿ ಬದುಕನ್ನು ಹಸನಾಗಿಸು ನಿಮ್ಮ ಕವನ, ಬರಹಗಳು ಸದಾ ಕ್ರಿಸ್ಮಸ್ ಹಾಗೆ ಎಲ್ಲರ ಮನಗಳಲ್ಲಿ ದೀವಿಗೆಯಾಗಲಿ. ಕ್ರಿಸ್ಮಸ್ ಹಾಗೂ ಹೊಸ ವರ್ಷದ ಶುಭಾಶಯಗಳು.

    ReplyDelete
  5. ಬಾಳ ಬದುಕಿಗೆ ಸ್ಫೂರ್ತಿ ನೀಡಿ ಬದುಕನ್ನು ಹಸನಾಗಿಸು ನಿಮ್ಮ ಕವನ, ಬರಹಗಳು ಸದಾ ಕ್ರಿಸ್ಮಸ್ ಹಾಗೆ ಎಲ್ಲರ ಮನಗಳಲ್ಲಿ ದೀವಿಗೆಯಾಗಲಿ. ಕ್ರಿಸ್ಮಸ್ ಹಾಗೂ ಹೊಸ ವರ್ಷದ ಶುಭಾಶಯಗಳು.

    ReplyDelete
  6. ನಿಮ್ಮ ಲೇಖನ, ಕವನ ಹಾಗೂ ಚಿಂತನೆಗಳು ಸೂಕ್ಷ್ಮವಾಗಿರುವುದಲ್ಲದೆ ಹಿತಕರವೆನಿಸುತ್ತದೆ. ಕ್ರಿಸ್ತನ ಹಬ್ಬದಂತೆ ನಿಮ್ಮ ಬರಹಗಳು ಇತರರ ಬಾಳಿಗೆ ಬೆಳಕಾಗಲಿ ಎಂದು ಅಶಿಸುತ್ತೇನೆ. ಕ್ರಿಸ್ಮಸ್ ಹಬ್ಬದ ಶುಭಾಶಯಗಳು.

    ReplyDelete