Monday, 16 February 2009
ಮೊಲಗಳಗಿ೦ತ ಹೆಚ್ಚಾಗಿ ಆಮೆಗಳು.. ರಸ್ತೆಯ ವಿಷಯ ಹೇಳಬಲ್ಲವು....
ಸ೦ತ ಅಲಾಷಿಯಸ್ ಸ೦ಧ್ಯಾ ಶಾಲೆಯ annual dayಗೆ ಹೋಗಿದೆ. ಎಲ್ಲಾ ಶಾಲೆಯ೦ತೆ ಇದು ಕೂಡ annual day ಯನ್ನು ಸ೦ಭ್ರಮದಿ೦ದ ಅದ್ಧೂರಿಯಾಗಿ ಆಚರಿಸಿಕೊ೦ಡಿತ್ತು. ನಾನತರದ ಕಾರಣಗಳಿ೦ದ ವಿಧ್ಯಾಭ್ಯಾಸಕ್ಕೆ goodbye ಹೇಳಿ, ಪರಿಸ್ಥಿತಿಯ ತುಳಿತಕ್ಕೆ ಸಿಕ್ಕಿ ಅವಿದ್ಯಾ ವ೦ತ ಹೊಸ್ತಿಲಲ್ಲಿರುವ ಮಕ್ಕಳನ್ನು ಪುನ: ಶಾಲೆಗೆ ಕರೆತ೦ದು ವಿದ್ಯಾರ್ಜನೆಯಲ್ಲಿ ತೊಡಗಿಸಿ, ವಿದ್ಯಾವ೦ತರಾಗಿಸುವ ಉದ್ದೇಶ ಹೊತ್ತು ನಡೆಯುತ್ತಿರುವ ವಿಶೇಷ ಶಾಲೆ ಇದು. ಶಾಲೆಯ ವಾರ್ಷಿಕೋತ್ಸವ ಸಲುವಾಗಿ ಸ೦ಧ್ಯಾ ಶಾಲೆಯ ವಿದ್ಯಾರ್ಥಿಗಳು ಸಾ೦ಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಕಾರ್ಯಕ್ರಮ ಚಿಕ್ಕದಾಗಿದರೂ ಚೊಕ್ಕದಾಗಿತ್ತು. ಯಾವುದು ಕೂಡ ಅತಿಯಾಗಿರಲಿಲ್ಲ.ನಾನು ಭಾಗವಹಿಸಿರುವ ಇ೦ತಹ ಅನೇಕ ಕಾರ್ಯಕ್ರಮಗಳಲ್ಲಿ... ಇದು ಮಾತ್ರ ನನ್ನ ಕಣ್ಣುತೆರೆಸಿದ ಕಾರ್ಯಕ್ರಮ ಅ೦ತ ದೃಢವಾಗಿ ಹೇಳಬಹುದು ಅನು. ರಶ್ಮಿಅ೦ತಾ ಒ೦ದು ದೈಹಿಕವೈಕಲ್ಯ ಹೊ೦ದಿದ ಹುಡುಗಿ.. ವಿದ್ಯಾರ್ಥಿನಿ.. ಸಭಾ೦ಗಣಕ್ಕೆ ತಾಯಿಯ ಸಹಾಯದಿ೦ದ ಬ೦ದು “ಅರುಳುವ ಹೂವುಗಳೇ ಆಲಿಸಿರಿ... ಬಾಳೊ೦ದು ಹೋರಾಟ ಮರೆಯದಿರಿ...ಎ೦ದು ಹಾಡಿ...ನೆರೆದಿದ್ದ ಜನರ ಹುರಿದು೦ಬಿಸಿದು... ನಿಜವಲ್ಲೂ ಸ್ಮರಣೀಯ ಅನು. ಹಾಡಿನ ನ೦ತರ..ಶಾಲೆಯ ಅಡಳಿತಾಧಿಕಾರಿ ಆ ಹುಡುಗಿಯ ಬಗ್ಗೆ ಹೇಳಿದ ಕಥೆ ನಿನಗೆ ನಾನು ಹೇಳ್ಲೇಬೇಕು ಅನು.
ರಶ್ಮಿ ದೈಹಿಕ ವೈಕಲ್ಯ ಹೊ೦ದಿದ ಹುಡುಗಿಯಾಗಿದ್ದರಿ೦ದ.. ಅವಳು ದಿನ೦ಪ್ರತಿ ಶಾಲೆಗೆ ಬರಲು ಸಾಧ್ಯವಾಗುತ್ತಿಲ್ಲ. ಆದ್ದರಿ೦ದ ಅವಳ ತಾಯಿ, ಪ್ರತಿದಿನ ಬೆಳಗಿನಿ೦ದ ಸ೦ಜೆಯವರೆಗೆ ದುಡಿದು, ಸಾಯ೦ಕಾಲ, ಸ೦ಧ್ಯಾಶಾಲೆಯಲ್ಲಿ.. ನೆಡೆಯುವ ತರಗತಿಗಳಿಗೆ ಹಾಜರಾಗಿ ಕಲಿತು, ಕಲಿತಿದ್ದನ್ನು ಮನೆಯಲ್ಲಿರುವ ಮಗಳಿಗೆ ಕಲಿಸಿಕೊಡುತ್ತಾಳೆ. ಒ೦ದು ತರ ತಾಯಿ ಹಕ್ಕಿ ಆಹಾರ ಹುಡುಕಿ ತ೦ದು ಗೂಡಿನಲ್ಲಿರುವ ತನ್ನ ಮರಿಗಳಿಗೆ ತಿನ್ನಿಸಿದ್ದ ಹಾಗೆ. ಅನು ಅದಕ್ಕೆ ಹೇಳೋದು ತಾಯಿಗಿ೦ತ ದೇವರಿಲ್ಲವೆ೦ದು. ಆ ತಾಯಿ ವಿಧವೆ... ಆದರೂ ತನ್ನ ಮಗಳ ಆಸೆ ಈಡೇರಿಸುವ ದೃತಿಗೆಡದ ಛಲ ಅವಳದು. ಇನ್ನೂ೦ದು ಕಡೆ, ತನ್ನ ದೈಹಿಕ ವೈಕಲ್ಯ ಬಗ್ಗೆ ತಲೆಕೆಡಿಸಿಕೊಳ್ಳದೆ.. ತಾನು ಹತ್ತನೇ ತರಗತಿಯ ಪರೀಕ್ಷೆಯನ್ನು ಬರೆದು ಒಳ್ಳೆಯ ಫಲಿತಾ೦ಶದಿ೦ದ ತೇರ್ಗಡೆಯಾಗಬಲ್ಲೆ ಎನ್ನುವ ನಿಸ್ಸ೦ದೇಹದ ರಶ್ಮಿ ಎ೦ಬ ಛಲಗಾರ್ತಿ. ಇ೦ತವರು ನಮಗೆ ಬದುಕಿನ ಪಾಠಗಳಾಗಿಬಿಡುತ್ತಾರೆ. ಇನ್ನೂ೦ದು ವಿಷಯ, ಶಾಲೆಯು ನಡೆಸುವ ಪರೀಕ್ಷೆಗಳಲ್ಲಿ... ತಾಯಿ ಮತ್ತು ಮಗಳದೇ ಕಾರುಬಾರು... ಎಲ್ಲದರಲ್ಲೂ ಪ್ರಥಮ.... ಹೌದು ಅನು ಇ೦ತಹ ವಿಶೇಷ ವ್ಯಕ್ತಿಗಳು.. ಘಟನೆಗಳು.. ನಮಗೆ ತಿ೦ದು ಕರಗುವಷ್ಟು ಸ೦ದೇಶಗಳನ್ನು ಕೊಡುತ್ತಾದ್ದರೂ... ನಾವು ನಮ್ಮದೇ ಪ್ರಪ೦ಚದಲ್ಲಿ...ಅವುಗಳ ಬಗ್ಗೆ ತಲೆಕೆಡಿಸುಕೊಳ್ಳುವುದಕ್ಕೆ ಹೋಗುವುದಿಲ್ಲ.
ಈ ನನ್ನ ಪತ್ರವನ್ನು ಒ೦ದು ಘಟನೆಯ ಮೂಲಕ ಕೊನೆಗೊಳ್ಳಿಸುತ್ತೇನೆ ಅನು. ಯುವ ಉದ್ಯಮಿಯೊಬ್ಬ ತನ್ನ ಶ್ರಿಮ೦ತ ಕಾರಿನಲ್ಲಿ ವೇಗವಾಗಿ ಚಲಿಸುತ್ತಿದ್ದ೦ತೆ... ರಸ್ತೆಯ ಎಡಬದಿಯಿ೦ದ ಒ೦ದು ಇಟ್ಟಿಗೆ ರಭಸವಾಗಿ ಅವನ ಅಮೂಲ್ಯವಾದ ಕಾರಿಗೆ ಅಪ್ಪಳಿಸಿ ಹಾನಿಮಾಡಿತ್ತು. ಕುಪಿತನಾದ ಉದ್ಯಮಿ... ಕಾರಿನಿ೦ದ ರಭಸವಾಗಿ, ಹೊರಬ೦ದು.. ಇಟ್ಟಿಗೆ ಎಸೆದವನನ್ನು ಹುಡುಕಲು ಪ್ರಾರ೦ಭಿಸಿದನು. ಅಲ್ಲೇ ಇದ್ದ ಒಬ್ಬ ಚಿಕ್ಕ ಹುಡುಗ ಇವನ ಕೈಗೆ ಸಿಕ್ಕಿಕೊ೦ಡನು. “ನೀನು ಯಾರು? ಯಾಕೇ ಈ ಇಟ್ಟಿಗೆಯನ್ನು ನನ್ನ ಕಾರಿನ ಮೇಲೆ ಎಸೆದು ನನ್ನ ಕಾರಿಗೆ ಹಾನಿಮಾಡಿದೆ...? ಕೋಪದಿ೦ದ ಆ ಚಿಕ್ಕ ಹುಡುಗನನ್ನು ಗದರಿಸುತ್ತಿದ್ದ೦ತೆ... ಆ ಹುಡುಗ ಭಯ ತು೦ಬಿದ ದನಿಯಲ್ಲಿ ”ನನ್ನನ್ನು ಕ್ಷಮಿಸಿ.. ನನಗೆ ಏನು ಮಾಡಬೇಕೆ೦ದು ತೋಚಲಿಲ್ಲ.. ಅದಕ್ಕೆ ಕಾರಿಗೆ ಇಟ್ಟಿಗೆ ಎಸೆದೆ” ಮು೦ದುವರಿಸಿದ.. “ನನ್ನ ಅ೦ಗವಿಕಲ ತಮ್ಮ wheel chair ನಿ೦ದ ಬಿದ್ದು ಗಾಯಗೊ೦ಡಿದ್ದಾನೆ.. ಅವನನ್ನು ಮೇಲೆತ್ತಲು ನನಗೆ ಸಾಧ್ಯವಾಗುತ್ತಿಲ್ಲ.. ರಸ್ತೆಯಲ್ಲಿ ಹೋಗುವ ಎಲ್ಲಾ ವಾಹನಗಳಿಗೆ ಕೈ ತೋರಿಸಿ ನಿಲ್ಲಿಸಲು ಹೇಳಿದೆ... ಯಾರು ನಿಲ್ಲಿಸದ ಕಾರಣ ನಾನು ಇಟ್ಟಿಗೆ ಎಸೆಯಲು ಪ್ರಾರ೦ಭಿಸಿದೆ.... ದಯವಿಟ್ಟು ನನ್ನ ತಮ್ಮನನ್ನು ಮೇಲೆತ್ತಲು ನನಗೆ ಸಹಾಯ ಮಾಡಿ” ಬೇಡಿಕೊಳ್ಳುತ್ತಿದ್ದ೦ತೆ..ಯುವ ಉದ್ಯಮಿ... ಬಿದ್ದು wheel chairಗೆ ಸಿಕ್ಕಿಕೊ೦ಡಿದ್ದ... ಮಗುವನ್ನು ಮೇಲೆತ್ತಿ... ತನ್ನ ಕರವಸ್ತ್ರದಿ೦ದ ಹುಡುಗ ಹಾಗೂ ಮಗುವಿನ ಮುಖಗಳನ್ನು ಒರೆಸಿ... ಮನೆಗೆ ಕಳುಹಿಸುತ್ತಿದ್ದ೦ತೆ..ಆ ಮಕ್ಕಳು ಧನ್ಯತೆಯಿ೦ದ ಥ್ಯಾ೦ಕ್ಸ್ ಎ೦ದು ಹೇಳಿ ತಮ್ಮ ಮನೆಯ ಕಡೆ ಹೆಜ್ಜೆಹಾಕಿದರು... ಉದ್ಯಮಿ ಈ ಘಟನೆಯಿ೦ದ ಮೂಕವಿಸ್ಮಯನಾಗಿ... ತನ್ನ ಶ್ರಿಮ೦ತ ಕಾರಿನಡೆಗೆ ಹೆಜ್ಜೆ ಹಾಕಿದ. ಇಟ್ಟಿಗೆ ಬಿದ್ದು damage ಯಾಗಿದ್ದ ಕಾರಿನ ಸ್ಥಳವನ್ನು ಗಮನಿಸುತ್ತಾ ...ಇದು ಈ ಘಟನೆಯ ಸ್ಮಾರಕವಾಗಿದ್ದು....”ಇನ್ನೊಬ್ಬರು ಇಟ್ಟಿಗೆಯನ್ನು ಎಸೆದು ನನ್ನ ಲಕ್ಷ್ಯವನ್ನು ಪಡೆದುಕೊಳ್ಳುವಷ್ಟು ವೇಗವಾಗಿರಬಾರದು ನನ್ನ ಜೀವನ” ಎ೦ದು ನೆನಪಿಸುವ ಕುರುಹು ಇದಾಗಿರಲಿ ಎ೦ದು ಹಾನಿಯಾದ ಕಾರಿನ ಆ ಜಾಗವನ್ನು ರಿಪೇರಿಮಾಡಿಸದಿರಲು ಆ ಯುವಕ ನಿಶ್ಚಿಯಿಸಿದ.
ಆನೇಕ ವ್ಯಕ್ತಿಗಳ,,, ಘಟನೆಗಳ ಮೂಲಕ ದೇವರು ನಮ್ಮಲ್ಲಿ ಮಾತನಾಡುತ್ತಾರೆ. ಆದರೆ ಆ ಮಾತುಗಳನ್ನು ಆಲಿಸಲು ನಮಗೆ ಸಮಯವಿಲ್ಲದಾಗ.. ಆ ಭಗವ೦ತ ನಮ್ಮ ಮೇಲೆ ಇಟ್ಟಿಗೆಯನ್ನು ಎಸೆಯಬೇಕಾಗುತ್ತದೆ. ಆದ್ದರಿ೦ದ.. ಇದು ನಮ್ಮ ನಿರ್ಧಾರ... ಘಟನೆಗಳ, ಅನುಭವಗಳ ಹಾಗೂ ವ್ಯಕ್ತಿಗಳ ಮುಖಾ೦ತರ ಮಾತನಾಡುವ ಭಗವ೦ತನಿಗೆ ಕಿವಿಗೊಡೋಣವೇ ಅಥವಾ ಇನ್ನೊ೦ದು ಇಟ್ಟಿಗೆಗೆ ಕಾಯೋಣವೇ...... ?
ಜೋವಿ....
ಚಿತ್ತಾರ
ಸಾವಿರಾರು ಎದೆ ಪಟಗಳಲಿ
ದೇವರ ಚಿತ್ತಾರ ಸಾಕ್ಷತ್ಕರಿಸಿದ ಒಬ್ಬ ಚಿತ್ರಗಾರ...... 
ಕರೆದ ಕೆಲಸಕ್ಕೆ ತಕ್ಕ೦ತೆ ಕೂಲಿ
ಎ೦ದೇಳಿ ಒಪ್ಪಿಸಿದ ಕೆಲಸವ ನನಗೆ......
ಚಿತ್ರಕರನ ರೀತಿಯಲೇ ಪ್ರಾರ೦ಭಿಸಿದೆ
ದೇವರು ಕರುಣಾಮಯಿ
ಪ್ರೇಮಾಮಯಿ.. ಸ್ನೇಹಾಮಯಿ...
ದೇವರು...
ಚಿತ್ರತರ ಮಾತುಗಳೆ೦ಬ ಕು೦ಚದಲೇ
ಸಮ್ಮಿಶ್ರ ಬಣ್ಣಗಳ ಹಚ್ಚಿದೆ..
ಹಚ್ಚಿದೆ ಹೃದಯ ಪಟಗಳಲ್ಲಿ.
ಆದರೆ ಯಾವ ನನ್ನ ಮಾತು ಮೂಡಿಸಲಿಲ್ಲ
ಅವನಾಸೆಯ ಸ್ವರೂಪ....
ಪೇಚಾದೆ.. ಬೇಡವೆ೦ದು ಜಡವಾದೆ
ಚಿತ್ರಗಾರ ನಾನಲ್ಲ ಎ೦ಬ ಸ೦ಶಯ
ಬೀಜವಾಗಿ ಮೊಳೆತು ಸಸಿಯಾಗುತ್ತಿದ೦ತೆ
ನನ್ನ ಧಣಿ ಮೌನ ಮುರಿದು ಹೇಳಿದ..
“ಮೊದಲು ನಿನ್ನ ಹೃದಯದಲಿರಲಿ
ನೀ ಬಿಡಿಸಬೇಕಾದ ಚಿತ್ತಾರ...
ಆಗ ನಿನ್ನ ಜೀವವೇ ಮಾತಗಿ, ಮಾತೇ ಕು೦ಚವಾಗಿ
ಮೂಡಿಸುವುದು ಚಿತ್ತಾರ ನೀ ಬಿಡಿಸಿದ ಕಡೆಯೆಲ್ಲಾ.....
ಜೋವಿ
Saturday, 14 February 2009
ಪ್ರೀತಿಯ ಹಬ್ಬಕ್ಕೆ....

ಇ೦ದು ಪ್ರೇಮಿಗಳ ದಿನಾಚರಣೆ.ನಾವು ಪ್ರೀತಿಸುವ ವ್ಯಕ್ತಿಗಳಿಗೆ ಶುಭವನ್ನು ಹಾರೈಸುವ ಹಬ್ಬ.ಪ್ರೀತಿಯ ಸ೦ಕೇತವಾಗಿ..ತರ ತರವಾದ ಉಡುಗೊರೆಗಳನ್ನು ನೀಡುವ, ತಮ್ಮ ಪ್ರೀತಿಯನ್ನು ನಿವೇದಿಸುವ ಪ್ರೀತಿಹಬ್ಬ. ಪ್ರೀತಿಯು ಸ೦ಭ್ರಮಿಸುವ ಹಬ್ಬ. ಹೌದು... ಎಲ್ಲಾ ವಿಶೇಷ ದಿನಗಳ ಆಚರಣೆಯ೦ತೆ..ಪ್ರೀತಿಯ ಆಚರಣೆಗೆ ಪ್ರತ್ಯೇಕಿಸಲಾದ ದಿನವಿದು. ಈ ವ್ಯಾಲೆ೦ಟೃನ್ಸ್ ಡೇ ಬಗ್ಗೆ....ಈ ವರ್ಷ ಊರು ತು೦ಬ ಸುದ್ಡಿಯೇ ಸುದ್ದಿ, ಪುಕ್ಕಟೆ ಪ್ರಚಾರ ಬೇರೆ....ಕೆಲ ರಾಜಕೀಯ ಪಕ್ಷಗಳು ಈ ದಿನದ ಆಚರಣೆಗೆ ನಿರ್ಬ೦ಧ ಹೇರಿ.. ಆಚರಿಸುವ ಪ್ರೇಮಿಗಳಿಗೆ ದಮ್ಕಿಹಾಕಿದರೆ, ಇನ್ನೊ೦ದು ಕಡೆ..ಬೇರೆ ಬೇರೆ ಸ೦ಘ ಸ೦ಸ್ಥೆಗಳು ಪ್ರೇಮಿಗಳ ರಕ್ಷಣೆಗೆ ತೊಡೆ ತಟ್ಟಿ ನಿ೦ತಿದ್ದಾರೆ..ಅದಕ್ಕೆ ಹೇಳಿದ್ದು ಅನು..ಈ ವರ್ಷ ವ್ಯಾಲೆ೦ಟೈನ್ಸ್ ಗೆ ಎ೦ದಿಲ್ಲದ ಮಹತ್ವ.
ಈ ವ್ಯಾಲೆ೦ಟೈನ್ಸ್ ಡೇ ಯ ಮೂಲದ ಬೆನ್ನೇರಿ ಹೋದಾಗ..ಈ ದಿನದ ಆಚರಣೆಯ ಹುಟ್ಟನ್ನು ಯಾರು ನಿಖರವಾಗಿ ವಿವರಿಸುವುದಿಲ್ಲ. ಕೆಲವರು ಈ ದಿನದ ಆಚರಣೆಯನ್ನು ಬಹುರಾಷ್ಟ್ರೀಯ ಕ೦ಪನಿಗಳ ಲಾಭದ ದುರಾಸೆಗೆ ಹುಟ್ಟಿದ ಪಾಪದ ಕೂಸೆ೦ದು ಜರಿದರೆ...ಇನ್ನೂ ಕೆಲವರು.. ಕ್ರೈಸ್ತ ಮತ್ತು ರೋಮಿನ ಸ೦ಪ್ರದಾಯಗಳಿ೦ದ ಹುಟ್ಟಿಕೊ೦ಡ ಪಾಶ್ಚಿಮಾತ್ಯ ಸ೦ಸ್ಕೃತಿಯೆ೦ದು ವಾದಿಸುತ್ತಾರೆ. ಕ್ರೈಸ್ತರು ವ್ಯಾಲೆ೦ಟೈನ್ ಎ೦ಬ ಸ೦ತರುಗಳನ್ನು ಸ್ಮರಿಸುವ ದಿನ. ಮೂರನೇಯ ಶತಮಾನದಲ್ಲಿ ವ್ಯಾಲೆ೦ಟೈನ್ಸ್ ಎ೦ಬ ಒಬ್ಬ ಕ್ರೈಸ್ತ ಸನ್ಯಾಸಿ.. ಎರಡನೇಯ ಕ್ಲಾಡಿಯಸ್ ಎ೦ಬ ಚಕ್ರವರ್ತಿಯ ಕಾನೂನು ಉಲ್ಲ೦ಘನೆ ಮಾಡಿ, ಸಾವನ್ನಪ್ಪಿದ ದಿನ. ಕ್ಲಾಡಿಯಸ್ ರಾಜನು..ಆವಿವಾಹಿತ ಸೈನಿಕರು ವಿವಾಹಿತ ಸೈನಿಕರಿಗಿ೦ತ ಉತ್ತಮವಾಗಿ ತಮ್ಮ ಕಾರ್ಯನಿರ್ವಹಿಸುವರು ಎ೦ಬ ಅಭಿಪ್ರಾಯದಿ೦ದ... ತನ್ನ ರಾಜ್ಯದ ಯುವ ಜನಾ೦ಗದ ಮೇಲೆ ಮದುವೆಯ ನಿರ್ಬ೦ಧ ಹೇರಿದನು. ರಾಜನ ಕಾನೂನಿನ ವಿರುದ್ಧವಾಗಿ, ಈ ಕ್ರೈಸ್ತ ಸನ್ಯಾಸಿ..ಯುವಜೋಡಿಗಳಿಗೆ ರಹಸ್ಯವಾಗಿ ವಿವಾಹ ಸ೦ಸ್ಕಾರವನ್ನು ನೇರೆವೇರಿಸುತ್ತಿದ್ದ ಕಾರಣ ಆವನಿಗೆ ಮರಣದ೦ಡನೆ ವಿಧಿಸುತ್ತಾನೆ.
ಇನ್ನೊ೦ದು ಹಿ೦ದಿನಿ೦ದ ಬ೦ದಿರುವ ಆಖ್ಯಾನದ ಪ್ರಕಾರ...ವ್ಯಾಲೆ೦ಟೈನ್ಸ್ ಜೈಲಿನಲ್ಲಿದ್ದಾಗ..ಕಾರಗೃಹದ ಅಧಿಕಾರಿಯ ಮಗಳು ಆಗಿ೦ದಾಗ್ಗೆ ಕಾರಗೃಹಕ್ಕೆಬೇಟಿ ನೀಡುತ್ತಿದ್ದ ಕಾರಣ.. ಕೈದಿ ವ್ಯಾಲೆ೦ಟೈನ್ಸ್ ನು ಆ ಮಹಿಳೆಯ ಪ್ರೀತಿಯ ಕೈದಿಯಾಗುತ್ತಾನೆ.ತಾನು ಸಾಯುವ ಮುನ್ನ ಆ ಪ್ರಿಯತಮೆಗೆ..ಒ೦ದು ಪತ್ರ ಬರೆದು... ನಿನ್ನ ವ್ಯಾಲೆ೦ಟೈನ್ಸ್...(yours valentine) ಎ೦ದು ಸಹಿಮಾಡಿ ಕಳುಹಿಸುತ್ತಾನೆ. ಆದ್ದರಿ೦ದಲೇ.. the phrase (ನುಡಿಗಟ್ಟು) “Be my valentine” ಹುಟ್ಟಿಕೊ೦ಡಿದು ಎ೦ಬ ನ೦ಬಿಕೆ. ಹಾಗಿದ್ದರೂ.. ಫೆಬ್ರವರಿ ೧೪ ವ್ಯಾಲೆ೦ಟೈನ್ಸ್ ನ ಹುಟ್ಟಿದ ದಿನವೂ ಅಥಾವ ಸತ್ತದಿನವೂ ಯಾರಿಗೂ ಸರಿಯಾಗಿ ತಿಳಿದಿಲ್ಲ.
ಇನ್ನೊ೦ದು ನ೦ಬಿಕೆಯ ಪ್ರಕಾರ...ಪುರಾತನ ರೋಮನ್ನರ ಪರ೦ಪರೆಯಿ೦ದ ಹುಟ್ಟಿಕೊ೦ಡ ಆಚರಣೆ ಇದು. ನಡು ಫೆಬ್ರವರಿ ತಿ೦ಗಳು..೧೪ ಆದ ಕಾರಣ.. ಲವ್ ಲಾಟರಿ ಎ೦ಬ ಪದ್ಧತಿ ಜಾರಿಯಲ್ಲಿತ್ತು.ವಸ೦ತ ಕೂಡ ನಡು ಫೆಬ್ರವರಿಯಲ್ಲಿ ಆಗಮಿಸಿ.. ಸೃಷ್ಟಿಯಲ್ಲಿ ಹೊಸತನ ತರುತ್ತಿದ್ದ ಕಾರಣ..ಲವ್ ಲಾಟರಿ ಎ೦ಬ ಆಚರಣೆ ಫೆ ೧೪ ರ೦ದು ನಡೆಯುತಿದ್ದು... ಯುವಕ ಯುವತಿಯರನ್ನು ಜೂತೆಗೂಡಿಸುವ ಪದ್ಧತಿ ಆದಾಗಿತ್ತು.
ಹೌದು ಅನು...ಈ ಆಚರಣೆಯ ಮೂಲದ ಬಗ್ಗೆ ಆನೇಕ ಕಥೆಗಳಿರಬಹುದು.ಆದರೆ ಈ ಆಚರಣೆ ವ್ಯಾಪರೀಕರಣವಾಗದೆ...ಅ೦ತರಿಕ ಪ್ರೀತಿಯ ಬಹಿರ೦ಗದ ಆಚರಣೆಯಾಗಿರಲೆ೦ದು ಹಾರೈಸುತ್ತಾ...ಒ೦ದು ಚಿಕ್ಕ ಕಥೆಯ ಮೂಲಕ ಪತ್ರವನ್ನು ಕೊನೆಗೂಳಿಸುತ್ತೇನೆ. ಒಬ್ಬ ದೇವರನ್ನು ಕೇಳಿದ “ಪ್ರೀತಿ ಎ೦ದರೇನು? “ಅದಕ್ಕೆ ದೇವರು ಆ ವ್ಯಕ್ತಿಗೆ ಅತೀ ಸು೦ದವಾದ ಹೂವನ್ನು ತರಲು ಹೇಳಿದರು. ಕೆಲವು ಸಮಯದನ೦ತರ... ಬರಿಗೈಯಲ್ಲಿ ಬ೦ದ ಆ ವ್ಯಕ್ತಿ ದೇವರಿಗೆ ಹೇಳಿದ “ನಾನು ಸು೦ದರವಾದ ಹೂವೊ೦ದನ್ನು ಕ೦ಡೆ.. ಆದರೆ...ಇನ್ನೂ ಸು೦ದರವಾದ ಹೂವನ್ನು ಹುಡುಕಿ ಹೊರಟೆ...ಕಾಲಕ್ರಮೇಣ ನನಗೆ ಮನವರಿಕೆಯಾಯಿತ್ತು... ನಾನು ಮೊದಲು ಕ೦ಡ ಸು೦ದರ ಹೂವನ್ನುನಿರ್ಲಕ್ಷಿಸಿದನೆ೦ದು...ಆದ್ದರಿ೦ದ ಮತ್ತೆ ಆ ಹೂವನ್ನ ಹುಡಿಕಿಕೊ೦ಡು.. ಆ ಸ್ಥಳಕ್ಕೆ ಬ೦ದೆ..ಅಲ್ಲಿ ಆ ಹೂವು ಇರಲಿಲ್ಲ” ಅದಕ್ಕೆ ದೇವರು ಹೇಳಿದರು..”ಅದೇ ಪ್ರೀತಿ, ನಮ್ಮಲ್ಲಿ ಅದು ಇದ್ದಾಗ.. ಅದಕ್ಕೆ ಬೆಲೆ ಕೊಡುವುದಿಲ್ಲ... ಅದನ್ನು ಕಳೆದುಕೊ೦ಡಾಗ..ಪರಿತಪಿಸುತ್ತೇವೆ....”
ನಿಮ್ಮನ್ನು ಪ್ರೀತಿಸುವವರಿಗೆ... ಆವರ ಪ್ರೀತಿಯ ಶ್ರೇಷ್ಠತೆಗೆ ಥ್ಯಾಕ್ಸ್ ಹೇಳಿ.. ಪ್ರೀತಿಯ ಹಬ್ಬವನ್ನು ಆಚರಿಸಿಕೊಳ್ಳಿ.
ಜೋವಿ
Wednesday, 28 January 2009
ಋತುಗಳ ಚಕ್ರವು ತಿರುಗುತ ಇರಲು, ಕ್ಷಣಿಕವೇ ಕೋಗಿಲೆ ಗಾನದ ಹೊನಲು?
ಮೊನ್ನೆ ಉದಯ ಟಿ.ವಿ ಯ U2 ನೋಡುತ್ತಾ ಕುಳಿತ್ತಿದ್ದ್ದಾಗ ಬರುತ್ತಿದ್ದ ಹೊಸ ಹಾಡುಗಳು ಗಮನ ಸೆಳೆಯಿತು. ಈಗ೦ತೂ ಕನ್ನಡ ಹಾಡುಗಳ ದರ್ಬಾರು ನೋಡಿದರೆ ಖುಷಿ ಎನಿಸುತ್ತಿದೆ. FM ರೇಡಿಯೂಗಳಲ್ಲಿ, ಸಭೆ ಮಾರ೦ಭಗಳಲ್ಲಿ,ಧಾರವಾಹಿಗಳಲ್ಲಿ ಅಷ್ಟೇಕೆ pub, discothequeಗಳಲ್ಲೂ ಕನ್ನಡ ಹಾಡುಗಳು ಜನಪ್ರಿಯ. ಬರುತ್ತಿರುವ, ಬೆಳೆಯುತ್ತಿರುವ ಹೊಸ ಪ್ರತಿಭೆಗಳ ಹಾಡುಗಳ ನಡುವೆಯೇ ಬ೦ತಲ್ಲ ಒ೦ದು ಹಾಡು, ರಾಮಚಾರಿ ಚಿತ್ರದ್ದು, ಸಾವಿರ ಸಲ ಕೇಳಿದ್ದರೂ ಮತ್ತದೇ ಆನ೦ದ.
ಹಾಡುವುದ ಮರೆಸಲಿಲ್ಲ ಬೇಡಲು ಕೊನೆಗೆ
ಕೇಳುಗರ ಗುಂಡಿಗೆಯ ತಾಳಕೆ ನಾನೂ
ಹಾಡುವೆನು ಬದಲಿಗೆ ನಾ ಕೇಳೆನು ಏನೂ
ಮನೆಯೆ ನನ್ನ ಶಾಲೆಯು ಪದವೆ ನನ ಪಾಠವು
ಗುರುವೆ ನನ್ನ ಅಮ್ಮನು ನನಗೆ ನಾನೇ ಗುಮ್ಮನು
ಊರಿನಾ...ಗಿಣಿಯು ನಾ
ಒ೦ದು ಚಿತ್ರದ ನಾಯಕನ ಗುಣ ಸ್ವಭಾವ,ಅವನ ಹಿನ್ನಲೆಯನ್ನು, ಅವನ ಇಡೀ ವ್ಯಕ್ತಿತ್ವವನ್ನು ಒ೦ದು ಹಾಡಿನಲ್ಲಿ, ಇಷ್ಟೊ೦ದು ಸರಳವಾಗಿ ಹೇಳಬಹುದೆ೦ದು ಎಷ್ಟು ಚ೦ದವಾಗಿ ತೋರಿಸಿದ್ದಾರೆ ನಮ್ಮ ಹ೦ಸಲೇಖ. ಅಲ್ಲಿಗೆ ಮುಗಿಯದೇ ಮು೦ದೆ ತಾಯಿ ಮತ್ತು ನಾಯಕನ ಅನುಬ೦ಧವನ್ನು ಪದಗಳ ಮೂಲಕ ಚಿತ್ರಿಸಿರುವ ರೀತಿಗೆ hatsoff.
ದೇವರಿಗೇ ನಾನು ದಿನಾ ಮುಗಿಯುವುದಿಲ್ಲ
ಒ೦ಟಿ ನಾನು ಮರಗಳೆ ಒ೦ಟಿ ನಾನು ಎಲೆಗಳೆ
ಕೊಕ್ಕಿನಲ್ಲಿ ತಿ೦ಡಿಯ ಗುಟುಕು ನೀಡೊ ಹಕ್ಕಿಯೆ
ಸ್ವಲ್ಪ ಉಳಿಸಿ ತಿನಿಸೆಯಾ ನನಗೂ ಹಸಿವಿದೆ
ಕಾಣೆ ತಾಯಿ ಲಾಲಿಯ ಕಾಣೆ ತ೦ದೆ ಪ್ರೀತಿಯ
ತಾಯ ಮಡಿಲ ಗಿಳಿಗಳೆ ತ೦ದೆ ನೆರಳ ಮರಿಗಳೆ
ಬರಲೇ ನಾನು ಈಗಲೆ ನಿಮ್ಮಾ ಗೂಡಿಗೆ
ಹಾರಲು ಬಾರದು ಆತುರ ತಾಳದು
ಆನ೦ದದೀ ರಾಗವೆ ಸಾಗದು ..... ಚಿತ್ರ - ಚೈತ್ರದ ಪ್ರೇಮಾ೦ಜಲಿ
ಓ ಕೋಗಿಲೆ ನಾ ಹಾಡಲೇ ..ಹಾಡು ಕೇಳಿ
ಜೀವನ ಜೀವನ ಏರುಪೇರಿನಾ ಗಾಯನ ಏರುಪೇರಿನಾ ಗಾಯನ
ಓ ಜನನಿ..ಜೀವಕ್ಕೆ ಮೂಲ ನೀ...ತ್ಯಾಗಕ್ಕೆ ಕಳಶ ನೀ
ಋತುಗಳ ಚಕ್ರವು ತಿರುಗುತ ಇರಲು
-ಪ್ರಶಾಂತ್
Saturday, 3 January 2009
ಕ್ರಿಸ್ ಮಸ್ ದಿನಗಳಲ್ಲಿ ಹಾಡು.... ಪಾಡು
ಡಿಸೆ೦ಬರ್ ತಿ೦ಗಳ ಕೊರೆವ ಚಳಿಗೆ ಸೋತು ಬೆಚ್ಚನೆಯ ಕ೦ಬಳಿಯೊಳಗೆ ಮುದುರಿಕೊ೦ಡು ಮಲಗಿರುವಮೈ ಮನಸ್ಸಿಗೆ ದೂರದಿ೦ದೆಲ್ಲೋ ತೇಲಿ ಬರುವ ಮಧುರ ಗಾಯನವೊ೦ದು ಮುದ ತರುತ್ತದೆ.ಸಣ್ಣದಾಗಿ ಕೇಳುತ್ತಿದ್ದುದು ಕ್ರಮೇಣವಾಗಿ ಸ್ಪಷ್ಟವಾಗಿ ಕೇಳತೊಡಗುತ್ತದೆ. ದೂರದ ಸದ್ದು ಇಲ್ಲೇ ಹತ್ತಿರದಲ್ಲೇ ಎಲ್ಲೋ ಎ೦ಬ ಭಾವ ಮೈಮನಗಳನ್ನು ಪುಳಕಗೊಳಿಸುತ್ತದೆ. ನಿದ್ರಾಜೀವಿಗಳಿಗೆ ಆರ೦ಭದಲ್ಲಿ ಕಿರಿಕಿರಿ ಎನಿಸಿದ್ದರೂ ಸಹ ಹೊದ್ದ ಕ೦ಬಳಿ ಕೊಡಲಾಗದ೦ತಹ ಬೆಚ್ಚನೆಯ ಅನುಭವವನ್ನು ಅದು ಕ್ರಮೇಣವಾಗಿ ನೀಡುತ್ತದೆ. ಸದ್ದು ಎನಿಸಿದ್ದು ಸದ್ದಲ್ಲ,ಇ೦ಪಾದ ಸ೦ಗೀತ ಅ೦ತನ್ನಿಸೋಕೆ ಶುರು ಆಗುತ್ತಿದ್ದ೦ತೆ ನಮ್ಮ ತುಟಿಗಳೇ 'ಕ್ರಿಸ್ ಮಸ್ ಕ್ಯಾರಲ್ಸ್' ಎ೦ದು ಉದ್ಗರಿಸುತ್ತದೆ. "ಆಗಲಿ ಜಗದಲಿ ನವೋದಯ ನವೋದಯ" ಎ೦ದು ಹಾಡುವ ತ೦ಡವೇನಾದರು ನಿಮ್ಮ ಕಣ್ಣಿಗೆ ಬಿದ್ದರೆ, ಹತ್ತಿರ ಹೋಗಿ ಕೆಲವು ನಿಮಿಷ ಆನ೦ದಿಸಿರಿ, ಹಾಡು ಹಾಗೂ ಅದು ಕೊಡುವ ಅನುಭವ ನಿಮಗೆ ನಿಜಕ್ಕೂ ಇಷ್ಟವಾಗುತ್ತದೆ.
http://www.prajavani.net/Archives/dec252004/51620041225.php
-ಪ್ರಶಾ೦ತ್
Thursday, 25 December 2008
ಕ್ರಿಸ್ಮಸ್ ....

ಮತ್ತೊ೦ದು ಕ್ರಿಸ್ಮಸ್ ಬ೦ದಿದೆ. ಮನೆಗಳು, ಚರ್ಚುಗಳು, ವಾಣಿಜ್ಯಮಳಿಗೆಗಳು ವಿದ್ಯುತ್ ಅಲ೦ಕೃತ ದೀಪಗಳಿ೦ದ, ಬಣ್ಣ ಬಣ್ಣ ನಕ್ಷತ್ರಗಳಿ೦ದ ಸಿ೦ಗಾರಗೊ೦ಡು ಕ್ರಿಸ್ಮಸ್ ಹಬ್ಬಕ್ಕೆ ಸಾಕ್ಷಿಯಾಗಿದೆ. ಹೌದು ಅನು...ಕ್ರಿಸ್ಮಸ್ ದೇವರ ಪ್ರೀತಿಯ ಸ್ವರೂಪವನ್ನು ನಮಗೆ ಸದೃಶ್ಯ ಮಾಡಿದ೦ತಹ ಹಬ್ಬ. ಬೆ೦ದು ನೊ೦ದ ಮನಗಳಲ್ಲಿ ಸ೦ತೋಷದ ನಕ್ಷತ್ರಗಳನ್ನು ಮೂಡಿಸುವ, ದ್ವೇಷ, ಕೋಪ, ಮತ್ಸರ ತು೦ಬಿದ ಮನದ ಗೋದಲಿಗಳಲ್ಲಿ ಪ್ರೀತಿ, ಪ್ರೇಮ, ಸ್ನೇಹಗಳ ಪ್ರತಿಸ್ಥಾಪಿಸುವ ಒಲುಮೆಯ ಹಬ್ಬ. ಈ ಹಬ್ಬದ ಸ೦ದರ್ಭದಲ್ಲಿ ನಿನಗೆ ನನ್ನ ಕೆಳಗಿನ ಸಾಲುಗಳು....
ಕ್ರಿಸ್ಮಸ್ ....
ಕ್ರಿಸ್ತ ಈ ಜಗದ ಕತ್ತಲ ಕೋಣೆಯಲ್ಲಿ
ಎ೦ದೂ ಹುಟ್ಟಿದ ಸ್ಮರಣೆಯಲ್ಲ...
ನನ್ನ ನಿನ್ನ ಪ್ರತಿಯೊಬ್ಬರ ಬದುಕಿನಲ್ಲಿ
ಅ೦ದು, ಇ೦ದು ಎ೦ದೆ೦ದೂ
ಕ್ಷಣ ಕ್ಷಣಕ್ಕೂ ಸ೦ಭವಿಸುವ, ಆಚರಿಸುವ
ಸು೦ದರ, ಸುಮಧುರ ಪ್ರೀತಿಯ ಹಬ್ಬ...
ಮನಸ್ಸು ಮಲೀನವಾಗಿ ಹೃದಯ ಭಾರವಾಗಿ
ಕಲ್ಮಶ ಭಾವಗಳಿ೦ದ ಜೀವನ ಕಸದ ತೊಟ್ಟಿಯಾದಾಗ
ಅವನೋ, ಇನ್ಯಾರೊ ಒಡ ಬ೦ದು
ಭಯಪಡಬೇಡ ಎ೦ದು ಧೈರ್ಯದ ಮಾತಾಡಿ
ನಮ್ಮ ಜೀವನದ ಕುಸುಮ ಅರಳಿಸಿದಾಗ ಕ್ರಿಸ್ಮಸ್....
ಕನಸು ನನಸಾಗದೆ, ಯೋಜನೆಗಳು ಕೈಗೂಡದೆ..
ಬದುಕು ಒ೦ದು ಕತ್ತಲ ಕೋಣೆಯಾಗಿ
ಆತೃಪ್ತಿಯ ಕೂಗು ಕೋಣೆಯ ಆವರಿಸಿದಾಗ
ನೀನೂ, ಅವನೋ ಒ೦ದು ಬತ್ತಿಯ ಹಿಡಿದು
ನನ್ನ ಬದುಕ ಕೋಣೆಯ ಪ್ರವೇಶಿಸಿ
ಬೆಳಗಿಸಿದ ಸ್ಮರಣೆಯೇ ಕ್ರಿಸ್ಮಸ್....
ಇ೦ತಹ ಅನುಭವಗಳ ಗಣಿ ತೋಡಿ
ನಮ್ಮ ಮನಸು ಲೆಕ್ಕ ಕೂಡಿ ಹಾಡಲಿ
ನಮ್ಮ ಅವನ ಸೇಹ ಹತ್ತಬೇಕಾದ
ಮು೦ದಿನ ಮೆಟ್ಟಿಲುಗಳ ಲೆಕ್ಕ ಹಾಕಲಿ
ಮನಸು ಆರಮನೆಯಾಗಿ ಅವನ ಬರ ಮಾಡಲಿ......
ಕ್ರಿಸ್ಮಸ್ ಹಬ್ಬದ ಶುಭಾಶಯಗಳೂ೦ದಿಗೆ
ಜೋವಿ
Wednesday, 3 December 2008
ವಾಹ್ ! ತಾಜ್
ಹೀಗೊ೦ದು 10 ವರ್ಷದ ಹಿ೦ದೆ ಪುಣೆ ನಗರಕ್ಕೆ ಹೋಗಿ ಮು೦ಬೈ ನಗರದ ಮೇಲೆ ಹಾದು ಬರುವಾಗ ನೋಡಿದ ತಾಜ್ ಹೋಟೆಲ್ಲಿನ ನೆನಪು ಇನ್ನುಮಾಸಿಲ್ಲ. ಅದರ ಸೌ೦ದರ್ಯ, ಭವ್ಯತೆ, ಗಾ೦ಭಿರ್ಯ ಹಾಗೂ ಕಲಾವ೦ತಿಕೆಗೆ ಮನಸೋತು ನಿ೦ತು ಅವಕ್ಕಾಗಿ ನಿ೦ತ ನನ್ನ೦ತಹ ನೂರಾರು ಪ್ರವಾಸಿಗರ ಕಣ್ಣಲ್ಲಿ ಅದೇ ಅಚ್ಚರಿ ಬೆರೆತ ಆನ೦ದ. ಆ ಹೋಟೆಲಿನ ಮು೦ದಿನ ರಸ್ತೆಯಲ್ಲಿ ನಿ೦ತಾಗ ಒ೦ದು ಬದಿಯಲ್ಲಿ ಪ್ರಕೃತಿಯ ವಿಸ್ಮಯವಾದ ಆ ವಿಶಾಲವಾದ ಸಮುದ್ರ ಹಾಗೂ ಇನ್ನೊ೦ದು ಬದಿಯಲ್ಲಿನ ಮಾನವ ನೈಪುಣ್ಯದ, ಧೃಡ ಚಿತ್ತದ ಪ್ರತೀಕವಾದ ಈ ಭವ್ಯ ಕಟ್ಟಡದ ನಡುವೆ ನಿ೦ತಾಗ ಅವರಿಸಿದ ಭಾವ ಅನನ್ಯ.ಮೊನ್ನೆ ಧಗಧಗಿಸಿ ಉರಿಯುತ್ತಿದ್ದ ಅದೇ ತಾಜ್ ಅನ್ನು TV ಯಲ್ಲಿ ಕ೦ಡಾಗ ಯಾವುದೋ ಒ೦ದು ರೀತಿಯ ದು:ಖ ಆವರಿಸಿದ್ದು ಸುಳ್ಳಲ್ಲ. ಮಾನವ ಜೀವಕ್ಕಿ೦ತ ದೊಡ್ಡದು ಯಾವುದೂ ಇಲ್ಲ ನಿಜ, ಮಡಿದ ನೂರಾರು ಅಮಾಯಕರಿಗಾಗಿ ನೊ೦ದ ಅದೇ ಮನಸಿನ ಮೂಲೆಯಲ್ಲಿ ಹೊತ್ತಿ ಉರಿದ ತಾಜ್ ನ ಚಿತ್ರ ಮಾತ್ರ ಏಕೋ ಮರೆಯಾಗುವ೦ತೆ ಕಾಣುತ್ತಿಲ್ಲ. ಮು೦ಬೈನ ಪ್ರತಿಷ್ಠಿತ ಪ೦ಚತಾರ ಹೋಟೆಲ್ ಒ೦ದಕ್ಕೆ ಭಾರತೀಯ ಎ೦ಬ ಕಾರಣದಿ೦ದಾಗಿ ಜೆಮ್ ಶೆಡ್ ಟಾಟಾರವರಿಗೆ ಪ್ರವೇಶ ನಿರಾಕರಿಸಿದಾಗ ಹುಟ್ಟಿದ ಕನಸು ಈ ಟಾಜ್ ಹೋಟೆಲ್. ಹಲವಾರು ರಾಜರಿಗೆ,ಪ್ರಧಾನ ಮ೦ತ್ರಿಗಳಿಗೆ,ಆಟಗಾರರರಿಗೆ, ಪ್ರತಿಷ್ಠಿತರಿಗೆ ಆತಿಥ್ಯವನ್ನು ನೀಡಿದ ಈ ಭವನ ತನ್ನ ಅತಿಥಿ ಸತ್ಕಾರ ಹಾಗೂ ಪರ೦ಪರೆಗೆ ಪ್ರಸಿದ್ಧಿ.ಹೋಟೆಲ್ಲಿನಲ್ಲಿನ ದೀಪ ಸ್ತ೦ಭಗಳು,ಕಲಾ ಚಿತ್ರಗಳು,ಮರದ ಕಸೂತಿ ಕೆಲಸಗಳು ಯಾವುದೇ ವಸ್ತು ಸ೦ಗ್ರಹಾಲಯಗಳಿಗೆ ಸಾಟಿಯಾಗುವ೦ತ್ತದ್ದು.
- ಪ್ರಶಾ೦ತ್.
Monday, 1 December 2008
ಕರಾಳತೆ Vs ವಿಶ್ವ ಮಾನವತೆ

ನಿದ್ದೆಗೆ ಹೊದ್ದು ಮಲಗುವ ಮುನ್ನ ಅಷ್ಟೂ ಚಾನೆಲ್‌ಗಳನ್ನು ಒಮ್ಮೆ ಕೊಡವಿ ಹಾಕುವ [rotate] ಮಾಡುವ ಸಣ್ಣ ರೋಗಿವಿದೆ ನನಗೆ.ದಿನ ಪತ್ರಿಕೆಗಳ ತಲೆಬರಹವನ್ನು ಓದಿ ಸೀದಾ ಕೊನೆಯ ಪುಟಕ್ಕೆ ಧಾಳಿಟ್ಟು ಸುದ್ದಿಯನ್ನು ಒ೦ದೊ೦ದಾಗಿ ಜೀರ್ಣೀಸಿಕೊ೦ಡು ಬ೦ದು ಮುಗಿಸುವ ವಿಚಿತ್ರ ಲಕ್ಷಣ ಕೂಡ. ಆದರೆ ಈ ಮೂರು ನಾಲ್ಕು ದಿನಗಳಿ೦ದ ಮೊದಲ ಪುಟ ಹಾಗೂ ಪ್ರಮುಖ ಪುಟಗಳಲ್ಲೇ ಹೆಚ್ಚು ಕನ್ನಾಡುತ್ತಿತ್ತು, ನೀರಾಡುತ್ತಿತ್ತು. ಆ ರಾತ್ರಿ ಆ ಚಾನೆಲ್ ಗಳಲ್ಲಿ ಇಷ್ಟೆಲ್ಲಾ ಅವಾ೦ತರಗಳನ್ನು ನೇರ ಪ್ರಸಾರದಲ್ಲಿ ನೋಡಿ ಧಸಕ್ಕೆ೦ದಿತು ಜೀವ. ಅರಮನೆಯ೦ತೆ ಕಾಣುವ ಯಾವುದೋ ಮಹಾಕಟ್ಟಡ ನೋಡಿದ್ದೆ ತಡ ನನಗೆ ತಿಳಿದ ಅಷ್ಟೂ ಅರಮನೆಗಳ ಚಿತ್ರಗಳು ಮನಸ್ಸಿನಲ್ಲಿ ಕ್ಯಾಮರಾ ರೀಲಿನ೦ತೆ ಮುಸುಕು ಮುಸುಕಾಗಿ ಜಾರಿ ಹೋದವು. ಯಾವುದೆ೦ದು ನಿಖರವಾಗಿ ತಿಳಿಯುವುದರಲ್ಲಿ ಟಿ.ವಿಯ ನಿರೂಪಕ ಉದ್ವೇಗದಿ೦ದ ಬಡ ಬಡಾಸುತ್ತಿದ್ದಾನೆ. ಭಾರತದ ಅದೆಷ್ಟು ಮನೆಗಳ ಟಿ.ವಿ ಆ ರಾತ್ರಿ ಪೂರ್ತಿ ಶಬ್ದ ಮಾಡುತಿತ್ತೋ, ನನ್ನ ಮನೆಯ ಟಿ.ವಿ ಕೂಡ.
ಭಯೋತ್ಪಾದನೆಯ ಭೂತ ಮು೦ಬೈಯನ್ನು ತನ್ನ ಬಿಗಿ ಮುಷ್ಟಿಗೆ ತೆಗೆದುಕೊ೦ಡಿತ್ತು. ನೋಡ ನೋಡುತ್ತಿದ್ದ೦ತೆ ಯಾವ ಸಿನಿಮೀಯ ದೃಷ್ಯಕ್ಕೂ ಕಡಿಮೆ ಇರದ ಘಟನೆಗಳು ನಡೆದು ಹೋದವು. ಅದಾಗಲೇ ೯ ರಿ೦ದ ೧೦ ಜನ ಭಯೋತ್ಪಾದಕರು ಜೆಮ್ಷೆಡ್ ಜೀ ಟಾಟಾ ರವರ ಸ್ವಾಭೀಮಾನದ ಪ್ರತೀಕ, ಭಾರತೀಯರ ಹೆಮ್ಮೆಯ ಅ೦ತರರಾಷ್ಟ್ರಿಯ ಪ್ರಸಿದ್ಧ ತಾಜ್ ಹೋಟೆಲ್ ಸೇರಿದ೦ತೆ ಓಬೆರಾಯ್ [ಟ್ರೆಟೆ೦ಡ್] ಹೋಟೆಲ್, ಇಸ್ರೇಲ್ ವಸತಿ ಸ೦ಕೀರಣ ನಾರಿಮನ್ ಹೌಸಿನಲ್ಲಿ ಅಡಗಿ ಕುಳಿತು ತಮ್ಮ ವಿಷಾರ್ಭಟವನ್ನು ಆರ೦ಬಿಸಿದ್ದರು. ಗ೦ಟೆಗಳು ಕಳೆದ೦ತೆ ಈ ಮೂರು ಕಟ್ಟಡಗಳಲ್ಲಿ ಭಯೋತ್ಪಾದಕರ ಕೈಯಲ್ಲಿ ಸಿಕ್ಕಿ ಹಾಕಿಕೊ೦ಡಿದ್ದ ಜನರ ಸಾವಿನ ಸ೦ಖ್ಯೆ ಎರಡರ ಮಗ್ಗಿಯ೦ತೆ ದ್ವಿಗುಣಗೊಳ್ಳುತಲೇ ಇತ್ತು. ಇತ್ತ ಮು೦ಬೈ ಪೊಲೀಸರು ಏನನ್ನೂ ಮಾಡಲಾಗದ೦ತಹ ಪಿಕಲಾಟಕ್ಕೆ ಬಿದ್ದರು. ಒ೦ದೇ ಸಮನೆ ಕಿಟಕಿ ಗಾಜುಗಳು ಪುಡಿಪುಡಿಯಾದವು. ಗು೦ಡಿನ ಶಬ್ಧವು ಸಿಡಿಲಿನ೦ತೆ ಭರಗುಟ್ಟಿದ್ದವು. ಬೆ೦ಕಿ ಆ ಬೃಹತ್ ಕಟ್ಟಡವನ್ನು ಆಹುತಿ ತೆಗೆದುಕೊಳ್ಳುವ೦ತೆ ನು೦ಗುತ್ತಿತ್ತು.
ಇವೆಲ್ಲವನ್ನು ವಿಮರ್ಶಿಸುವಾಗ ಇದಕ್ಕೆ ಹಲವು ಕಾರಣಗಳು ನಮಗೆ ಗೊತ್ತಾದರೂ,ಕಾರಣಗಳಿಗೆ ಉತ್ತರ ಹುಡುಕಿ ಅವಲೋಕಿಸಿಕೊಳ್ಳದ ಶೂನ್ಯ ಭಾವನೆಯೇ ಈ ಭಯೋತ್ಪಾದನೆಗಿ೦ತ ಅತ್ಯ೦ತ ಅಮಾನುಷ್ಯವಾದುದು. ಧರ್ಮ ಧರ್ಮಗಳ ಸ೦ಘರ್ಷ, ಅರಾಜಕತೆಯ ರಾಜಕೀಯ, ಮನಸ್ಸು ಮನಸ್ಸುಗಳ ನಡುವೆ ಕಿಡಿ ಏಳುವ೦ತಹ ದುಶ್ಕ್ರಿಯೆಗಳು, ಆದರ್ಶ ವ್ಯಕ್ತಿಗಳನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುವ ಸಮುದಾಯ, ಒಳ್ಳೆಯದನ್ನು ಬೋಧಿಸುವ ಎಲ್ಲಾ ಧರ್ಮಗಳ ತಿರುಳನ್ನು ಆಸ್ವಾಧಿಸುವ ಮತ್ತು ಗೌರ"ಸುವ ಸ್ವಚ೦ದದ ಬದುಕು ಇಲ್ಲದಿರುವುದು ಹಾಗೂ ಪರರ ಚಿ೦ತೆ ನಮಗೇತಕಯ್ಯ ಎ೦ಬ ನಿರ್ಭಾವನೆಯುಳ್ಳ ನಿರ್ಜೀವಗಳು. ಮತಾ೦ಧಗಳ೦ತಹ ಮೂರ್ಖ ಮನಸ್ಥಿತಿ ಜಾತಿ ಜನಾ೦ಗಗಳಲ್ಲಿ ಮನೆ ಮಾಡಿರುವುದು. ಈ ಎಲ್ಲಾ ಅನೀತಿಗಳೂ ಅವ್ಶೆಜ್ಞಾನಿಕಗಳು ನಮ್ಮನ್ನು ಭಯೋತ್ಪಾದಕತೆ ಜೊತೆ ಸರಿಗಟ್ಟುವ೦ತೆ ಮಾಡಿವೆ.
ಈ ಸ೦ದರ್ಭದಲ್ಲಿ ನಮ್ಮ ರಾಷ್ಟ್ರ ಕವಿ ಕುವೆ೦ಪುರವರ ವಿಶ್ವಮಾನದ ಸ೦ದೇಶ ಅದೆಷ್ಟು ಸಮಯೋಚಿತ ಅನಿಸುತ್ತಿದೆ.ನೀವೇ ಓದಿಕೊಳ್ಳಿ, ನೀವೇ ವಿಮರ್ಶಿಸಿಕೊಳ್ಳಿ. http://kuvempu.com/vishwamaanava.html
Wednesday, 26 November 2008
ನಾಣ್ಯಗಳು

ಬೈಬಲ್ ನಲ್ಲಿ ಒ೦ದು ಕಥೆಯಿದೆ. ಒಬ್ಬ ಯಜಮಾನ ಊರಿಗೆ ಹೋಗುವಾಗ ತನ್ನ ಸೇವಕರನ್ನು ಕರೆದು ಅವರವರ ಸಾಮರ್ಥ್ಯಾನುಸಾರ ಅವರಿಗೆಲ್ಲಾ ಇಷ್ಟಿಷ್ಟೆ೦ದು ನಾಣ್ಯಗಳನ್ನು ಕೊಟ್ಟು, ಅದನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳೂವ೦ತೆ ಹೇಳುತ್ತಾನೆ. ಅ೦ತೆಯೇ ಊರಿ೦ದ ಮರಳಿ ಬ೦ದ ಮೇಲೆ ಎಲ್ಲಾ ಸೇವರನ್ನೂ ಕರೆದು ತಾನು ನೀಡಿದ ನಾಣ್ಯದಿ೦ದ ಏನು ಮಾಡಿದಿರೆ೦ದು ಪ್ರಶ್ನಿಸುತ್ತಾನೆ. ಉತ್ತಮ ರೀತಿಯಲ್ಲಿ ಉಪಯೋಗಿಸಿ ಲಾಭ ಪಡೆದವರಿಗೆ ಇನ್ನೂ ಹೆಚ್ಚಿನದನ್ನು ನೀಡಿ, ಸೋಮಾರಿಯಾಗಿ ಕಳೆದ ಸೇವಕನನ್ನು ದ೦ಡಿಸುತ್ತಾನೆ.
ಅತ್ಯುತ್ತಮ ಕಥೆಗಾರರಾಗಿದ್ದ ಯೇಸು ಈ ಕಥೆಯನ್ನು ಹೇಳುತ್ತಾ ದೇವರು ಆ ಯಜಮಾನನೆ೦ದು ನಾವೆಲ್ಲ ಅವನ ಸೇವಕನೆ೦ದು, ಕೊಟ್ಟ ನಾಣ್ಯಗಳು ನಮಗೆ ದೇವರಿತ್ತಿರುವ ಪ್ರತಿಭೆ, ಸಾಮರ್ಥ್ಯವೆ೦ದು ವಿಶ್ಲೇಷಿಸುತ್ತಾರೆ. ಎ೦ಥಹ ಅದ್ಭುತವಾದ ಕಲ್ಪನೆ, ಹೋಲಿಕೆ? ಇಲ್ಲದವುಗಳ ಚಿ೦ತೆಯಲ್ಲೇ, ಇರುವ ಸಾಮರ್ಥ್ಯಗಳನ್ನು ಸಮಾಧಿ ಮಾಡಿ ಅದರ ಮೇಲೆಯೇ ಕೂತು ಅಳುವ ನಮಗೆ ಇದಕ್ಕಿ೦ತ ಒಳ್ಳೆಯ ಕಥೆ ಬೇಕೆ?
ಅದೆಷ್ಟೇ ಕನಿಷ್ಟವಾದರೂ ದೇವರು ನೀಡಿದ ಪ್ರತಿಭೆ, ಸಾಮರ್ಥ್ಯವನ್ನು ಇ೦ಚಿ೦ಚಿಗೆ ಉಪಯೋಗಿಸಿದ ಅನೇಕರನ್ನು ನಾವು ನಮ್ಮ ನಡುವೆಯೇ ಕಾಣುತ್ತಿರುತ್ತೇವೆ. ಅ೦ತಹ ವ್ಯಕ್ತಿಗಳಲ್ಲಿ ದಿ.ಶ್ರೀ.ಸಿ.ಇನ್ನಾಸಪ್ಪ ಒಬ್ಬರು. ಬೆ೦ಗಳೂರಿನ ಕನಕಪುರ ತಾಲ್ಲೂಕಿನ ಹಾರೋಬೆಲೆ ಎ೦ಬ ಒ೦ದು ಕುಗ್ರಾಮದಲ್ಲಿ ಜನಿಸಿ, ದೇವರು ನೀಡಿದ ಪ್ರತಿಭೆಗಳನ್ನುಒ೦ದೂ ಬಿಡದೆ ಎಲ್ಲಾ ರೀತಿಯಲ್ಲೂ ಉಪಯೋಗಿಸಿ ಅಮರರಾದವರು ಶ್ರೀ.ಸಿ.ಇನ್ನಾಸಪ್ಪ.
ಹತ್ತಾರು ಧಾರ್ಮಿಕ ನಾಟಕಗಳು, ನೂರಾರು ಹಾಡು,ಭಜನೆಗಳನ್ನು ಬರೆದದ್ದು ಮಾತ್ರವಲ್ಲದೆ, ಹಾರ್ಮೋನಿಯ೦ ನುಡಿಸುತ್ತಿದ್ದ ಅವರು ಓದು ಬರಹ ಬಾರದ ಇತರ ಜನರಿಗೂ ಅವಗಳನ್ನು ಕಲಿಸುವ ಸಾಧನೆಯನ್ನು ಮಾಡಿದವರು. ಗ್ರಾಮದ ಶಾಲೆಯ ಉಪಾಧ್ಯಾಯರಾಗಿದ್ದರಿ೦ದ ಅ೦ಟಿಕೊ೦ಡ "ದೊಡ್ಡ ಮೇಷ್ಟು"ಎ೦ಬ ಅ೦ಕಿತದ ಪ್ರಭಾವವೋ ಏನೋ ನಿಸ್ವಾರ್ಥ,ಪ್ರೀತಿ,ಪರಸೇವೆ,ಸಹನೆಯ೦ತ ದೊಡ್ಡ ಗುಣಗಳನ್ನೇ ಮೈಗೂಡಿಸಿಕೊ೦ಡವರು.
ಕಥೆಯಲ್ಲಿನ ಪ್ರತಿಭಾವ೦ತ ಸೇವಕರ೦ತೆ ಮತ್ತಷ್ಟು ಜವಬ್ದಾರಿಗಳನ್ನು ಪಡೆಯುತ್ತಾ ಬ೦ದು ಗ್ರಾಮ ಪ೦ಚಾಯಿತಿಯ ಅಧ್ಯಕ್ಷ, ದೇವಾಲಯದ ಪಾಲನ ಸಮಿತಿಯ ಸದಸ್ಯ, ನ್ಯಾಯ ಪ೦ಚಾಯಿತಿಯ ಸದಸ್ಯ, ನಾಟಕ ನಿರ್ದೇಶಕ, ಹರಿಕತೆಗಾರ, ಊರಿನ ಪೋಸ್ಟ್ ಮಾಸ್ಟರ್ ಹೀಗೆ ಹತ್ತು ಹಲವು ಪಾತ್ರಗಳನ್ನು ಯಶಸ್ವಿಯಾಗಿ ನಿಭಾಯಿಸಿದವರು. ಗ್ರಾಮದ ಸಾ೦ಸ್ಕೃತಿಕ ಹಾಗೂ ಧಾರ್ಮಿಕ ಚಟುವಟಿಕೆಗಳ ಮು೦ಚೂಣಿಯಲ್ಲಿದ್ದು ಗ್ರಾಮದ ಹೆಸರು ರಾಜ್ಯ,ದೇಶಗಳ ಗಡಿ ದಾಟಿ ಜನಪ್ರಿಯವಾಗುವಲ್ಲಿ ಪಾತ್ರವಹಿಸಿದವರು.
ಅ೦ತೆಯೇ ಒ೦ದಿಡೀ ಜನಾ೦ಗಕ್ಕೆ ಸ್ಪೂರ್ತಿಯಾಗಿ ಗ್ರಾಮದ ಸರ್ವಾ೦ಗೀಣ ಪ್ರಗತಿಯಲ್ಲಿ ಭಾಗಿಯಾದವರು. ಸುಮಾರು ೧೦೨ ವರ್ಷಗಳ ಹಿ೦ದೆ ವ೦ದನೀಯ ಲಾಜರಸ್ ಎ೦ಬ ಕ್ರೈಸ್ತ ಗುರುವೊಬ್ಬರಿ೦ದ ಪ್ರಾರ೦ಭವಾದ " ಯೇಸುಕ್ರಿಸ್ತರ ಪೂಜ್ಯ ಪಾಡುಗಳ ನಾಟಕ" ವನ್ನು ಅವರ ಮರಣದ ನ೦ತರ ಸುಮಾರು ೮೦ ವರ್ಷಗಳ ಕಾಲ ನಿಭಾಯಿಸಿಕೊ೦ಡು ಬ೦ದ ಹೆಗ್ಗಳಿಕೆ ಶ್ರೀ.ಇನ್ನಾಸಪ್ಪನವರದು. ಇದರಿ೦ದ ಗ್ರಾಮವು "ಕರ್ನಾಟಕದ ಜೆರುಸಲೇಮ್" ಎ೦ದೇ ಪ್ರಸಿದ್ಧಿ ಪಡೆದದ್ದು ವಿಶೇಷ.
ಸಣ್ಣ ಗ್ರಾಮ, ಕಡು ಬಡತನ, ೧೧ ಮಕ್ಕಳ ಕುಟು೦ಬ, ಮನ್ನಣೆಯಿಲ್ಲದ ವಾತಾವರಣ, ಇದಾವುದೂ ತನ್ನ ಚಿತ್ತಕ್ಕೆ ಕನಸಿಗೆ ಅಡ್ಡಬರದ೦ತೆ, ತನ್ನದೇ ಆದ ರೀತಿಯಲ್ಲಿ, ಜನರ,ಕಲೆಯ,ದೇವರ ಸೇವೆಯಲ್ಲಿ ಕಳೆದು ಮರೆಯಾದರೂ ಮರೆಯಲಾರದ ನೆನಪುಗಳನ್ನು ಬಿತ್ತಿ ಹೋದ ಇ೦ತಹ ಚೇತನಗಳು ನಮ್ಮ ಗ್ರಾಮಗಳಲ್ಲಿ, ನಮ್ಮ ನಡುವೆಯೇ ಇನ್ನೆಷ್ಟಿವೆಯೋ?
ಅ೦ದ ಹಾಗೆ ದಿ.ಶ್ರೀ.ಸಿ.ಇನ್ನಾಸಪ್ಪನವರು ದೈಹಿಕವಾಗಿ ಮರೆಯಾಗಿ ಇ೦ದಿಗೆ ಸರಿಯಾಗಿ ೧೧ ವರ್ಷ.
-ಪ್ರಶಾ೦ತ್ -೨೬.೧೧.೦೮
ಕ್ರಿಯಾಶೀಲ ಕಲ್ಪನೆ......
ಮೀರಿದ ಕ್ರಿಯಾಶೀಲ ಕಲ್ಪನೆ ಭೇದಿಸಲು
ಅಭಿವ್ಯಕ್ತವಾಯಿತು ಹೊಸಯುಗದ ಆತ್ಮವಿಶ್ವಾಸ.
ಅಂತರ್ಗತ ಅರಿವಿಂದಲೆ ಪ್ರಕ್ರಿಯೆ ಪ್ರಾರಂಭವಾಗಿ
ಬದುಕ ಕುಲುಮೆಯಲಿ ತೇಜಸ್ಸು ಕಂಗೊಳಿಸಲು
ಹರಿಯಿತು ಗರ್ಭದಿಂದ ಬೆಳಕಿನ ಪ್ರವಾಹ.
ಸುಪ್ತ ತತ್ವಗಳ ನಡುವಿನ ದ್ವಂದ್ವದಲಿ
ನೆನಪುಗಳ ಹಿಂದಿನ ವಾಸ್ತವತೆ ಛಿದ್ರವಾಗಿ
ಕರೆದೊಯ್ತು ಭಾವನಾಶಕ್ತಿ ಉನ್ನತ ಆಶಾವಾದದತ್ತ.
ಕೋಟಿಜಂಜಾಟಗಳ ಕತ್ತಲ ಕೂಪದಲಿ
ಸಂಕೀರ್ಣಾನುಭಾವಗಳ ಬದುಕ ಶೋಧದಲಿ
ಸಂಸ್ಕೃತಿಯಾಯಿತು ಹೋರಾಟ ಸಾಧನ.
ತತ್ವ ಪ್ರತೀಕದಲ್ಲಿದ್ದ ಸೃಜನಶೀಲ ಶಕ್ತಿ
ಮಾರ್ಪಟ್ಟಿತು ಅನುಭವ ಸ್ತರಗಳಲಿ
ವ್ಯಕ್ತಿತ್ವದಾಳಕ್ಕಿಳಿದು ಹೀರಲು ಭಿನ್ನತೆಗಳ
ಸ್ಥಿರತೆಯಾಯಿತು ಜೀವನದ ದರ್ಶನತತ್ವ
ಅರ್ಥೈಸುತ್ತಾ ಸಮಸ್ತವ ಪ್ರೀತಿ ಪರಿಭಾಷೆಯತ್ತ...
ಪ್ರವೀಣ್
ದೃಷ್ಟಿಯಲ್ಲಿದೆ ಸೃಷ್ಟಿ
ಪ್ರೀತಿಯ ಅನು..
ಹಾರೈಕೆಗಳ ಗುಲಾಬಿಗಳು ನಿನ್ನ ಮಡಿಲಿಗೆ. ನೂರಾರು ಜನರ ಸ್ಫೂರ್ತಿಯ ಸೆಲೆ ನಿನ್ನ ಬದುಕು, ಸು೦ದರ ಸುಮಧುರ ಜಗತ್ತಿನ ಚು೦ಬನದಲ್ಲಿ ತೇಲಾಡುತ್ತಿರಬಹುದು! ನಾನು ಮತ್ತು ನನ್ನ ಬದುಕು ಉಪ್ಪೇ ಇಲ್ಲದ ಊಟದ೦ತೆ ಸಪ್ಪೆ..ಸಪ್ಪೆ, ಆದರೂ ಬದುಕ್ಕಿಗೆ ಸ್ವಲ್ಪ ಪುಡಿ ಉಪ್ಪು ಸೇರಿಸಿ, ಸರಿಪಡಿಸಿ ಬದುಕ ಊಟದ ಸವಿಯನ್ನು ಸವಿಯುವ ಹ೦ಬಲ. ಸಾಲವೇನಾದರೂ ನೀನು ಕೂಡುವುದಾದರೆ ನಿನ್ನ ನಗುವನ್ನು ನನಗೆ ಕೂಟ್ಟು ನನ್ನನ್ನು ನಿಮ್ಮ ಸಾಲಗಾರನಾಗಿ ಮಾಡಿಕೂಳ್ಳಬೇಕೆ೦ದು ಕೇಳಿಕೂಳ್ಳುವ ನನ್ನ ಬಿಳಿಚಿಕೊ೦ಡ ಮುಖ, ಹೌದು ನಿನಗೆ ಪತ್ರ ಬರೆಯದೆ ಸುಮಾರು ದಿನಗಾಳ್ತು. ಅ೦ದು ನೀನು ಹೇಳಿದ ”ದೃಷ್ಟಿಯಲ್ಲಿದೆ ಸೃಷ್ಟಿ” ಎ೦ಬ ಮಾತು ನನಗೆ ನೆನಪಿಗೆ ಬ೦ದು ಈ ಪತ್ರವನ್ನು ಬರೆಯಲು ಅಣುಮಾಡಿದೆ.
ನಮ್ಮ ಬದುಕು ತರತರ ಘಟನೆ, ಅನುಭವಗಳನ್ನು ಗರ್ಭಕಟ್ಟಿಕೊ೦ಡ ಒ೦ದು ಮೊತ್ತ. ಈ ಘಟನೆಗಳ, ಆನುಭವಗಳ ಸ್ವಭಾವ ನಾವು ಕಾಣುವ ದೃಷ್ಟಿಯ ಮೇಲೆ ಆಧಾರವಾಗಿರುತ್ತದೆ ಎ೦ದು ನೀನು ನನ್ನಗೆ ಹೇಳಿದು ನೆನಪು ಅನು.... ಎಲ್ಲಾ ಘಟನೆಗಳು ಅನುಭವಗಳು ನಮ್ಮ ಬದುಕ ಬೆಳವಣಿಯ ಸಹಕಾರಿಗಳಾದರೂ...ನಮ್ಮ ನಕಾರಾತ್ಮಕ ಮನೋಭಾವದಿ೦ದ,.. ಒಳ್ಳೆತನದಲ್ಲಿ ಕೆಟ್ಟದನ್ನು ಹುಡುಕುತ್ತೇವೆ, ಗೆಲ್ಲುವಿನಲ್ಲಿ ಸೋಲ್ಲನ್ನು ಅನುಭವಿಸುತ್ತೇವೆ... ಹೌದು ಅನು ಬದುಕ ತಾಜ್ಯ ಅನುಭವಗಳು, ಘಟನೆಗಳು...ನಾವು ಕಾಣುವ ದೃಷ್ಟಿಯ ಮೇಲೆ ಅಧಾರವಾಗಿರತ್ತದೆ. ಮೊನ್ನೆ ಆ೦ಗ್ಲ ಭಾಷೆಯಲ್ಲಿದ್ದ ಒ೦ದು ಕವನ ಓದಿದೆ. ನಮ್ಮ ಕಣ್ಣುಗಳನ್ನು ತೆರೆವಷ್ಟು ಅರ್ಥಗರ್ಭಿತವಾದ ಕವನ....
Attitude is everything
What happens within you
Two forces are at work around you, external and internal,
You have little control over external forces
Such, earthquake
Distress, sickness and pain
What really matters is the internal force
How do you respond to these disaster?
Over that you have complete control
No one on earth can hurt you
Unless you accept the hurt in your own mind
The problem is not other people, its your reaction to them
You can can not always control your circumstances
But you can control your own thoughts.......
ಹೀಗೆ ನಮ್ಮ ಬದುಕಿನ ಪ್ರತಿಯೊ೦ದು ಘಟನೆಗಳು.. ಕ್ರಿಯೆಗಳು... ಅನುಭವಗಳು ನಾವು ನೋಡುವ ದೃಷ್ಟಿಯ ಮೇಲೆ ..... ನಾವು ಸ್ವೀಕರಿಸುವ ಮನೋಭಾವ ಮೇಲೆ depend ಆಗಿರುತ್ತದೆ...ಆನು. ನಮ್ಮ attitude positive ಆಗಿದರೆ.. ನಾವು ಕಸದಿ೦ದ ರಸ ಕೂಡ ಮಾಡಲು ಸಹ ಸಾಧ್ಯ, ಇಲ್ಲವಾದರೆ ಜೀವನ negative feelings ತು೦ಬಿ ತುಳುಕುವ ಒ೦ದು ಭಾರವಾದ ಹೊರೆಯಾಗುವುದರಲ್ಲಿ ಸ೦ಶಯವೇ ಇಲ್ಲ...
ನನ್ನ ಮಾತನ್ನು ಒ೦ದು ಕತೆಯ ಜೊತೆ ಕೊನೆಗೊಳ್ಳಿಸುತ್ತೇನೆ ಡೇವಿಡ್ ಹಾಗೂ ಗೋಲಿಯಥ್ ಎ೦ಬುವುದು ಬೈಬಲನಲ್ಲಿ ಬರುವ ಒ೦ದು ಸು೦ದರ ಹಾಗೂ ಒಳ್ಳೆಯ ಪಾಠವನ್ನು ತಿಳಿಸುವ ಘಟನೆ. ಒ೦ದು ಹಳ್ಳಿಯಲ್ಲಿ ದೈತ್ಯನೊಬ್ಬನಿದ್ದ. ಆತ ಎಲ್ಲರಿಗೂ ಕಿರುಕುಳ ಕೊಡುತ್ತಿದ್ದ. ಒ೦ದು ದಿನ ಆ ಹಳ್ಳಿಗೆ ತನ್ನ ಸಹೋದರನನ್ನ ಭೇಟಿಯಾಗಲು ಬ೦ದ ಹದಿನೇಳು ವರ್ಷದ ಕುರುಬರ ಹುಡುಗನೊಬ್ಬ”ನೀವೆಲ್ಲ ಏಕೆ ಈ ದೈತ್ಯನ ವಿರುದ್ಧ ಎದು ನಿ೦ತು ಹೋರಾಡಬಾರದು? ಎ೦ದು ಕೇಳಿದ. ಆತನ ಮಾತು ಕೇಳಿ ಅವರೆಲ್ಲರೂ ತಲ್ಲಣಗೊ೦ಡರು. ಅತನ ವಿರುದ್ಧ ಹೋರಾಡುವುದೇ? ಆತನಿಗೆ ಹೊಡೆಯುವುದೇ? ಆತ ಹೊಡೆತಕ್ಕೆ ನಿಲ್ಲುಕದಷ್ಟು ದೈತನಾಗಿದ್ದಾನೆ”ಎ೦ದರು. ಆದಕ್ಕೆ ಕುರುಬರ ಹುಡುಗ ಹೇಳಿದ, “ಇಲ್ಲ ಹೊಡೆಯಲಾರದಷ್ಟು ಆತ ಎತ್ತರವಾಗಿಲ್ಲ, ಆದರೆ ಹೊಡೆತ ತಪ್ಪಿಸಿಕೊಳ್ಳದಷ್ಟು ಎತ್ತರವಾಗಿದ್ದಾನೆ ಎ೦ಬುವುದು ನೆನಪಿರಲ್ಲಿ.”ಮು೦ದಿನದು ಇತಿಹಾಸ. ಆನ೦ತರ ಆ ಹುಡುಗ ಆ ದೈತ್ಯನನ್ನು ಕವಣೆಯಿ೦ದ ಸಾಯಿಸಿದ. ಆದೇ ದೈತ್ಯ. ಉಪಾಯ ಮಾತ್ರ ಬೇರೆ.
ನಿನ್ನ ಪ್ರತಿಯೊ೦ದು ಬದುಕ ಅನುಭವಗಳು, ಘಟನೆಗಳು.. ನಿನ್ನ ಆಶಾವಾದ ದೃಷ್ಟಿಯಲ್ಲಿ ನಿನಗೆ ಕಾಣಲಿ.. ಎ೦ದು ಹಾರೈಸುವ
ಜೋವಿ....
Monday, 24 November 2008
ನಮ್ಮ ಮಲ್ಲ
ನಮ್ಮ ಸ್ವರಚಿತ್ತಾರ ಬಳಗದ ಹೊಸ ಪ್ರತಿನಿಧಿ ಈ ನಮ್ಮ "ಮಲ್ಲ". ಶುದ್ಧ ಲೋಕ ಸ೦ಚಾರಿ. ಎಲ್ಲೆಲ್ಲಿ ಏನೇನು ಆಗುತ್ತಿದೆಯೋ ಎಲ್ಲಾ ಗೊತ್ತು. ಆದಕ್ಕೆ ಆಗಿ೦ದ್ದಾಗೆನಮ್ಮ blogಗೂ ವರದಿಗಳನ್ನು ಕೊಡಪ್ಪ ಅ೦ತ ಕೇಳಿದಕ್ಕೆ "ಅಯ್ತು ಕಣ್ಣಣ್ಣೋ ಅ೦ದಿದ್ದಾನೆ". ಮಾತು ಜಾಸ್ತಿ ಆದ್ರೂ ತಲೆ, ಮನಸು ಮಾತ್ರ ಬಹಳ ಶುದ್ಧ.ಅದಕ್ಕೆ ಈ ಅ೦ಕಣದ ಹೆಸ್ರು - ಶುದ್ಧ ತ(ರ)ಲೆ ಅ೦ತ
ಈ ಕಬ್ಬನ್ ಪಾರ್ಕ್ ಕಡೆಯಿ೦ದ ಬರೋವಾಗ ಕೇಳ್ಸಿದ್ದು ಅ೦ತ ಒ೦ದೆರಡು ಹನಿಗವನ ಕಳ್ಸಿದ್ದಾನೆ -Enjoy ಮಾಡಿ
ಸುಳ್ಳಿನ ಮಾಲೆ
ಆ ನೀನ್ನೊ೦ದು ಸೌ೦ದರ್ಯದ ಅಲೆ
ನಾಚಿವೆ ನಿನ್ನ ಮು೦ದೆ ಆ ತಾರೆಗಳ
ಸಾಲೆಓ ನನ್ನ ಸು೦ದರ ಬಾಲೆ
ಇಗೋ ನಿನಗೆ ನನ್ನ ಸುಳ್ಳಿನ ಮಾಲೆ
ಚಿನ್ನ ಬೆಳ್ಳಿ ಮುತ್ತು
ಚಿನ್ನ ಬೆಳ್ಳಿ ಮುತ್ತು
ಏನೂ ಬೇಡ ಅ೦ದರೂ ಬರಲಾರೆಯ?
ಚಿನ್ನ ಬೆಳ್ಳಿ ಮುತ್ತು
ಏನೂ ಬೇಡ ಅ೦ದರೂ ಬರಲಾರೆಯ?
ಹಾಗೆ ಬರುವಾಗ
ಅದೆಲ್ಲವನ್ನೂ ಸ್ವಲ್ಪ ತಾರೆಯಾ?
Saturday, 1 November 2008
ಬೆ೦ಕಿ, ಮಳೆ ಮತ್ತು ಹಕ್ಕಿ
ಬೆ೦ಕಿ, ಮಳೆ ಮತ್ತು ಹಕ್ಕಿ.....
ಪ್ರೀತಿಯ ಅನು...
ನನ್ನ ಸ್ನೇಹಾ೦ಜಲಿ. ನಗುವೇ ನಿನೋ ನೀನೇ ನಗುವೋ, ಪ್ರತ್ಯೇಕಿಸಲಾಗದ ನಗುವಿನ ಸಂಭ್ರಮ ನೀನು. ನಿನ್ನ ನೆನಪು ನನ್ನನ್ನು ಆವರಿಸಿ, ನನ್ನ ಹೃದಯ ವೀಣೆಯಿ೦ದ ಈ ಪ್ರೀತಿಯ ಹಾರೈಕೆಗಳ ಸರಿಗಮ ಬರೆಸಿದೆ. ಶುಭಹಾರೈಕೆಗಳು. ನೀನು ಚೆನ್ನಾಗಿರುವೆ೦ಬ ನಂಬಿಕೆ ಮತ್ತು ಅದಕ್ಕಾಗಿ ನನ್ನ ಪ್ರಾರ್ಥನೆ ಕೂಡ. ನೀನು ಬಾಳುವ ಬದುಕು ನಿಜವಾಗ್ಲೂ ಶ್ಲಾಘನೀಯ ಮತ್ತು ನನಗೆ ಮಾದರಿ ಕೂಡ. ಕಗ್ಗತ್ತಲ ಅಮವಾಸೆಯಲ್ಲಿಯೂ ಚಂದ್ರನ ಕಾಣುವ ನಿನ್ನ ಆಶವಾದ, ಸೋಲುಗಳಲ್ಲೂ ಗೆಲ್ಲುವಿನ ಮೆಟ್ಟಿಲು ಕಟ್ಟುವ ನಿನ್ನ ಮ೦ಡು ಧೈರ್ಯ.ಸಾಮನ್ಯನಲ್ಲಿ ಅಸಾಮನ್ಯತನ ಕಾಣುವ ನಿನ್ನ ಉದರ ಬುದ್ಧಿ.... ನಿನ್ನಿಂದ ಕಲಿತಿದ್ದು ಎಣಿಸಲಾಗದ ಆಕಾಶದ ನಕ್ಷತ್ರಗಳಷ್ಟು ಅನು.
ನನಗೆ ಇನ್ನೂ ನೆನಪಿದೆ ನೀನು ನನಗೆ ಹೇಳಿದ ಮಾತು. ನಾವು ಎಷ್ಟು ವರ್ಷಗಳು ಬಾಳುತೇವೆ೦ಬುದು ಮುಖ್ಯವಲ್ಲ, ಯಾವ ರೀತಿ ಬಾಳುತ್ತೇವೆ೦ಬುದು ಮುಖ್ಯ. So thanks anu.
ಈ ನಡುವೆ ನನ್ನ ಮಾನಸಿಕ ಪರಿಸ್ಥತಿ ಮಾತ್ರ ಚಿ೦ತಾಜನಕವಾಗಿದೆ ಅನು. ಈ ನನ್ನ ಅವ್ಯಸ್ಥೆಗೆ ನನ್ನ ವೈಯಕ್ತಿಕ ಕಾರಣಗಳ೦ತೂ ಅಲ್ಲ. ಅರ್ಥಿಕವಾಗಿ, ಶಾರೀರಿಕವಾಗಿ ನಾನು very sound. ಈ ದಿನಗಳಲ್ಲಿ ನಮ್ಮ ದೇಶ ಹಾಗು ರಾಜ್ಯಗಳಲ್ಲಿ ನಡೆಯುತ್ತಿರುವ ಕೋಮುಗಲಭೆಗಳು... ಬಾ೦ಬ್ ಸ್ಟೋಟಗಳು...ಉಗ್ರರ ಮಟ್ಟಹಾಕುವ ನೆಪದಲ್ಲಿ ಅಮಾಯಕರ
ಮೇಲೆ ನಡೆಯುತ್ತಿರುವ ದೌರ್ಜ್ಯನ... ರಾಜಕೀಯ ಪುಡಾರಿಗಳ ಸ್ವಾರ್ಥದ ರಾಜಕೀಯ ಕುಮ್ಮಕಿಗೆ ಛಿದ್ರಗೊಳ್ಳುತಿರುವ ನಮ್ಮ ರಾಜ್ಯ . ಹೌದು ಅನು...nuclear bombಗಿ೦ತಲೂ ಅಪಾಯಾಕಾರಿಯಾಗಿರುವ communalism ಸಿದ್ಧಾ೦ತ ನಮ್ಮ ಜಾತ್ತ್ಯತೀತ ಭಾರತವನೇ ಧರ್ಮ,ಜಾತಿ,ಭಾಷೆಗಳ ಹೆಸರಿನಲ್ಲಿ ಚಿ೦ದಿಮಾಡ ಹೂರಟಿರುವ so called ದೇಶಭಕ್ತರ ಕೈಗಳಿ೦ದ ತಯಾರಾದ dreadful ಬಾ೦ಬ್ anu... ಇ೦ತಹ ಸಿಡಿಮದ್ದನ್ನು ವ್ಯವಸ್ಥಿತವಾಗಿ ಬೀಜದ೦ತೆ ಬಿತ್ತುತಿದ್ದರೆ ನಮ್ಮ ಕೆಲವು ರಾಜಕೀಯ ಪುಡಾರಿಗಳು. ಆವರ ಗುರಿ ಮತ್ತು ಉದ್ದೇಶ ದೇಶದ ಅಭಿವೃಧಿಯಲ್ಲ ಅನು... ಅಧಿಕಾರ. ಇದರಿ೦ದ ನನ್ನ ಮನಸ್ಸು ಕಸಿವಿಸಿಗೊ೦ಡಿದೆ.
ಈ ಸಮಸ್ಯೆಗಳನ್ನು ಹೇಗೆ ಬಗ್ಗು ಬಡಿಯಬೇಕು? ಅದು ನಮ್ಮಿ೦ದ ಸಾಧ್ಯನಾ?...ಎ೦ಬ ಪ್ರೆಶ್ನೆಗಳು ನನ್ನನ್ನು ಅವಿರತವಾಗಿ ಕಾಡುತ್ತಿದ೦ತೆ... ನನ್ನಿ೦ದ ಸಾಧ್ಯವಿಲ್ಲ ಎ೦ದು ಅಸಹಾಯಕ್ಕನಾಗಿ ಕೈತೊಳೆದುಕೊಳ್ಳುತ್ತಿದ್ದ೦ತೆ ಎಂದೊ ಕೇಳಿದ ಒಂದು ಕಥೆಯ ನೆನಪು ನನಗೆ ಬ೦ತು. ಅನು... ಅ ಕಥೆಯನ್ನು ನಿನಗೆ ಹೇಳುತ್ತಿದ್ದೇನೆ.
ಖಾ೦ಡವ ದಹನ ನಡೆಯುತ್ತಿದ್ದಾಗ ಒ೦ದು ಸಣ್ಣ ಹಕ್ಕಿ ನೀರಿನಲ್ಲಿ ಮುಳುಗಿ ತನ್ನ ರೆಕ್ಕೆಗಳನ್ನು ಒದ್ದೆ ಮಾಡಿಕೊಂಡು ಬ೦ದು ಆ ನೀರನ್ನು ಬೆ೦ಕಿಯ ಸಿ೦ಪಡಿಸಿ ಖಾ೦ಡವವನವನ್ನು ಉಳಿಸಲು ಪ್ರಯತ್ನಿಸುತ್ತಿತ್ತ೦ತೆ. ಇದನ್ನು ಕ೦ಡ ಮಳೆಯ ದೊರೆ “ ಏ ಮರಳು ಹಕ್ಕಿ ನಿನ್ನಿ೦ದ ಈ ಬೆ೦ಕಿ ನ೦ದಿಸಲು ಸಾಧ್ಯವಿದೆಯೇ ? ಎ೦ದು ಹಾಸ್ಯ ಮಾಡಿದ. ಅದಕ್ಕೆ ಹಕ್ಕಿ “ ಓ ಮಳೆಯ ದೊರೆಯೇ, ನೀನು ಮನಸ್ಸು ಮಾಡಿದ್ದರೆ ಈ ಬೆ೦ಕಿ ಈಗಲೇ ನ೦ದಿ ಹೋಗುತ್ತಿತ್ತು. ನಿನ್ನದು ಫಲ ನೀಡುವ ಪ್ರಯತ್ನವನ್ನೂ ಮಾಡದೇ ಇರುವ ನಿರ್ದಾರ. ನನ್ನದು ಹಾಗಲ್ಲ, ಫಲ ನೀಡದಿದ್ದರು ಪ್ರಯತ್ನಿಸುವ ನಿರ್ಧಾರ ಎ೦ದು ಉತ್ತರಿಸುತ್ತಾ ಬೆ೦ಕಿಗೆ ಬಲಿಯಾಯಿತು.
ಹೌದು ಅನು, ನಾವು ಪ್ರಯತ್ನ ಮಾಡುವ ನಿರ್ಧಾರದ ಫಲವೇ ಈ ಲೇಖನ. ನಮ್ಮ ರಾಜ್ಯ ಕೋಮುಗಲಭೆಯ ಬೆ೦ಕಿಗೆ ಸುಟ್ಟು ಹೋಗುತ್ತಿದೆ. ಸೋದರತ್ವದಿ೦ದ ಬಾಳುತ್ತಿದ್ದ ಜನರಲ್ಲಿ ದೇಷದ uranium ತು೦ಬುತ್ತಿದ್ದಾರೆ ನಮ್ಮ ನಾಯಕರು.ನಮ್ಮ ರಾಜ್ಯ ಸ೦ಪೂರ್ಣ ಸುಟ್ಟುಹೋಗುವ ಮೊದಲು ಶಾ೦ತಿಯ ಹನಿಗಳ ನಾವು ಸಿ೦ಪಡಿಸಿ, ಜಾತ್ಯತೀತ ರಾಜ್ಯವನ್ನುಉಳಿಸಬೇಕು. ನಮ್ಮ ಈ ಪ್ರಯತ್ನ ನಮಗೆ ಯಶಸ್ಸನ್ನ ತ೦ದುಕೊಡುತ್ತದೇಯೊ ನಮಗೆ ಗೊತ್ತಿಲ್ಲ, ಆದರೆ ವಿಶ್ವಾಸಭರಿತ ಪ್ರಯತ್ನ ನಮ್ಮದಾಗಬೇಕು. ಸಮಾಜದ ಪ್ರತಿ ಸಮಸ್ಯೆಯ ನಿವಾರಣೆ ನಮ್ಮಿ೦ದ ಅಸಾಧ್ಯವಾದರೂ ಕೈಲಾದ efforts ನಮ್ಮಿ೦ದಾಗಬೇಕು. ಆಗ ಮಾತ್ರ ನಮ್ಮ ಬದುಕಿಗೆ ಮತ್ತು ಅದರ ಆಸ್ತಿತ್ವಕ್ಕೆ ಒಂದು ಅರ್ಥವಿರುತ್ತದೆ. ಮಾನವೀಯತೆ ಕೆಲಸಗಳಲ್ಲಿ ನಮ್ಮನೇ ತೊಡಗಿಸಿಕೊಳೋಣ. ಬದುಕುಗಳ ಸ೦ಬ೦ಧ ಬೆಸೆಯೋಣ. ಈ ಒ೦ದು ಚಿಕ್ಕ ಪ್ರಯತ್ನಕ್ಕೆ ನಿನ್ನ ಒತ್ತಾಸೆ ಯಾವಗಾಲ್ಲೂ ಇರುತ್ತದೆ೦ದು ನ೦ಬುತ್ತಾ ಈ ಲೇಖನಕ್ಕೆ ಶುಭ೦ ಹೇಳುತೇನೆ...
ಇ೦ತಿ ನಿನ್ನಯ ...
ವಿನೋದ್
