Watch Lucia MovieRead more!
Tuesday, 15 October 2013
Thursday, 19 September 2013
ಆಡಿಯೋ ಅನಿಸಿಕೆ : ಬೃಂದಾವನ
ಯಾವ ನಟನಿಗೆ ಯಾವ ರೀತಿ ಸಂಗೀತ, ಆಯಾ ನಟರ ಅಭಿಮಾನಿಗಳ ನಿರೀಕ್ಷೆ, ಅಪೇಕ್ಷೆಗಳ ಸುತ್ತ ಗಿರಕಿ ಹೊಡೆಯುತ್ತಾ, ನಿರ್ದೇಶಕ ಇಷ್ಟಪಡುವ ಸಂಗೀತವನ್ನು ಕೊಡುವ ಕಲೆ ಹರಿಕೃಷ್ಣರಿಗೆ ಸಿದ್ಧಿಸಿದೆ ಎಂದೇ ಹೇಳಬಹುದು. ತಮ್ಮದೇ ಆದ ಇತಿ ಮಿತಿಯಲ್ಲೇ ಆಯಾ ನಟ, ನಿರ್ದೇಶಕನಿಗೆ ತಕ್ಕಂತೆ ಹಾಡುಗಳನ್ನು ನೀಡುತ್ತಾ ವಿಭಿನ್ನವಾಗಿ ನಿಲ್ಲುವುದರಲ್ಲಿ ಹರಿಕೃಷ್ಣ ಇತ್ತೀಚಿನ ದಿನಗಳಲ್ಲಿ ಗೆದ್ದಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ. ದರ್ಶನ್ ಅಭಿನಯದ ಬೃಂದಾವನ ಚಿತ್ರದ ಗೀತೆಗಳು ಇದಕ್ಕೆ ಇತ್ತೀಚಿನ ಉದಾಹರಣೆ. ದರ್ಶನ್ ರ ಯಶಸ್ಸು, ಅಭಿಮಾನಿ ವೃಂದ, ಇಮೇಜ್ ಗೆ ತಕ್ಕುದಾದ ಹಾಡುಗಳು ಚಿತ್ರದಲ್ಲಿದೆ. ಈಗಾಗಲೇ ಹಾಡುಗಳು ಅಭಿಮಾನಿಗಳ ಮೆಚ್ಚುಗೆಯೂ ಪಡೆದಿದೆ. ಹೇಗಿದೆ ಹಾಡುಗಳು ?
ಹಾರ್ಟಲ್ಲಿರೋ ಹಾರ್ಮೋನಿಯಂ : ಟ್ಯೂನ್ ಹಾಕಿದೆ ಈ ಮನಸ್ಸಿನ FM ನಲ್ಲಿ ನಿಂದೆ ಹಾಡಿದೆ ಎಂದು ಪ್ರಾರಂಭವಾಗುವ ಹಾಡನ್ನು ಟಿಪ್ಪು ತಮ್ಮ ಎಂದಿನ ಶೈಲಿಯಲ್ಲೇ ಹಾಡಿದ್ದಾರೆ. ಕವಿರಾಜ್ ರ ಸಾಹಿತ್ಯದಲ್ಲಿ ಕನ್ನಡದಷ್ಟೆ ಸಮನಾಗಿ ಇತರ ಭಾಷೆಗಳೂ ಸೇರಿಕೊಂಡಿವೆ. ಇದು ಈಗಿನ ಟ್ರೆಂಡ್ ಹೌದಾದರೂ ಅದೇನು ಅಷ್ಟು ಸುಲಲಿತವಾಗಿ ಸೇರದ ಭಾವನೆ ಮೂಡುತ್ತದೆ. ದರ್ಶನ್ ಹಾಗೂ ಅವರ ಅಭಿಮಾನಿಗಳನ್ನು ಮನಸಿನಲ್ಲಿಟ್ಟುಕೊಂಡೇ ಹರಿ ಈ ಹಾಡನ್ನು ಸಂಯೋಜಿಸಿದರೇನೋ ಎಂಬಷ್ಟು ಗಟ್ಟಿಯಾಗಿ ದರ್ಶನ್ ಗೆ ಈ ಹಾಡು ಒಪ್ಪುತ್ತದೆ.
ಬೆಳ್ಳಂ ಬೆಳಗಾ : ಬಹಳ ದಿನಗಳ ನಂತರ ಕೇಳ ಸಿಗುವ ಹೇಮಂತರ ಧ್ವನಿಯಿರುವ ಈ ಗೀತೆ, ಅವರಿಂದಾಗಿಯೇ ಇಷ್ಟವಾಗುತ್ತದೆ. ಕನ್ನಡ ಹಾಗೂ ಕನ್ನಡಾಭಿಮಾನದ ಬಗೆಗಿನ ನಾಗೇಂದ್ರ ಪ್ರಸಾದರವರ ಸಾಹಿತ್ಯಕ್ಕೆ ಹಾಗೂ ಗೀತೆಯ ಗ್ರಾಮೀಣ ಸೊಗಡಿನ ಲಯಕ್ಕೆ ಹೇಮಂತ್ ರವರನ್ನೇ ಆರಿಸಿಕೊಂಡಿರುವಲ್ಲಿ ಹರಿಯವರ ಜಾಣ್ಮೆ ಎದ್ದು ಕಾಣುತ್ತದೆ.
ಇಷ್ಟೆಲ್ಲಾ ಸಾಧನೆ ಹಾಗೂ ಪ್ರತಿಭೆಯ ನಡುವೆಯೂ ಮತ್ತೊಮ್ಮೆ ಶ್ರೇಯಾ ಘೋಷಲ್ ಹಳ್ಳಿ ಲಾವಣಿಯ ಧಾಟಿಯ ಗಾಯನದಿಂದ ಅಚ್ಚರಿ ಮೂಡಿಸುತ್ತಾರೆ. ಉತ್ತಮವಾದ ಗೀತೆಗೆ ನಡು ನಡುವೆ ಒದಗಿ ಬಂದಿರುವ ಕೋರಸ್ ಮತ್ತಷ್ಟು ಮೆರಗು ದೊರಕುತ್ತದೆ.
ಮಿರ್ಚಿ ಹುಡುಗಿ : ಇದು ಮತ್ತೊಂದು ಪಕ್ಕಾ ಹರಿ ಹಾಗೂ ದರ್ಶನ್ ಕಾಂಬಿನೇಶನ್ ಗೀತೆ. ಅಭಿಮಾನಿಗಳಿಗೆ ತುಸು ಹೆಚ್ಚೇ ಇಷ್ಟವಾಗಬಹುದಾದ ಸ್ವರ ಸಂಯೋಜನೆ ಹಾಡಿಗಿದೆ. ಇಲ್ಲಿ ಕವಿರಾಜರ ಸಾಹಿತ್ಯಕ್ಕಿಂತ ಹರಿಯ ಸಂಗೀತ, ನೃತ್ಯ ಯೋಜನೆ ಹಾಗೂ ಪರದೆಯ ಮೇಲಿನ ಚಿತ್ರೀಕರಣವೇ ಹೆಚ್ಚು ಗಮನ ಸೆಳೆಯುವ ಅಂಶಗಳಾಗುತ್ತವೇನೋ. ಸಂತೋಷ್ ವೆಂಕಿಯ ಗಾಯನ ಹಾಗೂ ಧ್ವನಿ ಹಾಡಿನ ಆಶಯಕ್ಕೆ ತಕ್ಕ ಆಗಿದೆ.
ತಂಗಾಳಿ ಹಾಡಿದೆ : ಶಂಕರ್ ಮಹಾದೇವನ್, ಕೈಲಾಶ್ ಕೈರ್, ಕಾರ್ತಿಕ್, ಹೇಮಂತ್ ಎಲ್ಲರ ಧ್ವನಿ ಒಟ್ಟಿಗೆ ಕೇಳ ಸಿಗುವ ಬಂಪರ್ ಹಾಡು ಇದು. ಕುಟುಂಬವೆಲ್ಲ ಸೇರಿ ಸಂತೋಷವಾಗಿ ಹಾಡುವ ಇಂಥಹ ಗೀತೆಗಳ ಸಾಹಿತ್ಯದಲ್ಲಿ ನಾಗೇಂದ್ರ ಪ್ರಸಾದ್ ಎಂದಿಗೂ ಸಿದ್ಧ ಹಸ್ತರೇ. ಹರಿಕೃಷ್ಣ ಪೂರ್ಣ ಪ್ರಮಾಣದಲ್ಲಿ ಈ ಹಾಡಿನ ಮೂಲಕ ತಮ್ಮತನ ಮೆರೆಯುತ್ತಾರೆ. ವಾದ್ಯ ತಾಳಗಳ ಬಳಕೆ ಹಾಗೂ ಉತ್ತಮ ಗಾಯಕರ ಸಂಗಮದ ಮಟ್ಟಿಗೆ ಇದೊಂದು ಶ್ರೀಮಂತ ಗೀತೆಯೇ.
ಓಯ್ ಕಳ್ಳ : ಹರಿಕೃಷ್ಣರ ಸಂಗೀತ, ಯೋಗರಾಜರ ಭಟ್ಟರ ಸಾಹಿತ್ಯದ ಜೋಡಿಗೆ ಉಪ್ಪಿ ಭರ್ಜರಿಯಾಗಿಯೇ ಬಂದು ಸೇರಿಕೊಂಡಿದ್ದಾರೆ. ಭಟ್ಟರ ಎಂದಿನ ತುಂಟತನಕ್ಕೆ ಉಪ್ಪಿಯೂ ಸರಿಸಮಾನವಾಗಿ ಧ್ವನಿಗೂಡಿಸಿದ್ದಾರೆ. ಇಂದು ನಾಗರಾಜ್ ಹಾಗೂ ಪ್ರಿಯದರ್ಶಿ ಮಾತ್ರವೇನು ಹಿಂದೆ ಬಿದ್ದಿಲ್ಲ. ಇಬ್ಬರು ಹುಡುಗಿಯರ ನಡುವಿನ ಪ್ರೇಮದಾಟದ ಸಾಹಿತ್ಯಕ್ಕೆ ಪಕ್ಕಾ ನೃತ್ಯಕ್ಕೆ ಹೇಳಿ ಮಾಡಿಸಿದಂತಿರುವ ಗೀತೆಯನ್ನಾಗಿ ಹರಿ ಪರವರ್ತಿಸಿದ್ದಾರೆ.
- ಪ್ರಶಾಂತ್ ಇಗ್ನೇಷಿಯಸ್
ಹಾರ್ಟಲ್ಲಿರೋ ಹಾರ್ಮೋನಿಯಂ : ಟ್ಯೂನ್ ಹಾಕಿದೆ ಈ ಮನಸ್ಸಿನ FM ನಲ್ಲಿ ನಿಂದೆ ಹಾಡಿದೆ ಎಂದು ಪ್ರಾರಂಭವಾಗುವ ಹಾಡನ್ನು ಟಿಪ್ಪು ತಮ್ಮ ಎಂದಿನ ಶೈಲಿಯಲ್ಲೇ ಹಾಡಿದ್ದಾರೆ. ಕವಿರಾಜ್ ರ ಸಾಹಿತ್ಯದಲ್ಲಿ ಕನ್ನಡದಷ್ಟೆ ಸಮನಾಗಿ ಇತರ ಭಾಷೆಗಳೂ ಸೇರಿಕೊಂಡಿವೆ. ಇದು ಈಗಿನ ಟ್ರೆಂಡ್ ಹೌದಾದರೂ ಅದೇನು ಅಷ್ಟು ಸುಲಲಿತವಾಗಿ ಸೇರದ ಭಾವನೆ ಮೂಡುತ್ತದೆ. ದರ್ಶನ್ ಹಾಗೂ ಅವರ ಅಭಿಮಾನಿಗಳನ್ನು ಮನಸಿನಲ್ಲಿಟ್ಟುಕೊಂಡೇ ಹರಿ ಈ ಹಾಡನ್ನು ಸಂಯೋಜಿಸಿದರೇನೋ ಎಂಬಷ್ಟು ಗಟ್ಟಿಯಾಗಿ ದರ್ಶನ್ ಗೆ ಈ ಹಾಡು ಒಪ್ಪುತ್ತದೆ.
ಬೆಳ್ಳಂ ಬೆಳಗಾ : ಬಹಳ ದಿನಗಳ ನಂತರ ಕೇಳ ಸಿಗುವ ಹೇಮಂತರ ಧ್ವನಿಯಿರುವ ಈ ಗೀತೆ, ಅವರಿಂದಾಗಿಯೇ ಇಷ್ಟವಾಗುತ್ತದೆ. ಕನ್ನಡ ಹಾಗೂ ಕನ್ನಡಾಭಿಮಾನದ ಬಗೆಗಿನ ನಾಗೇಂದ್ರ ಪ್ರಸಾದರವರ ಸಾಹಿತ್ಯಕ್ಕೆ ಹಾಗೂ ಗೀತೆಯ ಗ್ರಾಮೀಣ ಸೊಗಡಿನ ಲಯಕ್ಕೆ ಹೇಮಂತ್ ರವರನ್ನೇ ಆರಿಸಿಕೊಂಡಿರುವಲ್ಲಿ ಹರಿಯವರ ಜಾಣ್ಮೆ ಎದ್ದು ಕಾಣುತ್ತದೆ.
ಇಷ್ಟೆಲ್ಲಾ ಸಾಧನೆ ಹಾಗೂ ಪ್ರತಿಭೆಯ ನಡುವೆಯೂ ಮತ್ತೊಮ್ಮೆ ಶ್ರೇಯಾ ಘೋಷಲ್ ಹಳ್ಳಿ ಲಾವಣಿಯ ಧಾಟಿಯ ಗಾಯನದಿಂದ ಅಚ್ಚರಿ ಮೂಡಿಸುತ್ತಾರೆ. ಉತ್ತಮವಾದ ಗೀತೆಗೆ ನಡು ನಡುವೆ ಒದಗಿ ಬಂದಿರುವ ಕೋರಸ್ ಮತ್ತಷ್ಟು ಮೆರಗು ದೊರಕುತ್ತದೆ.
ಮಿರ್ಚಿ ಹುಡುಗಿ : ಇದು ಮತ್ತೊಂದು ಪಕ್ಕಾ ಹರಿ ಹಾಗೂ ದರ್ಶನ್ ಕಾಂಬಿನೇಶನ್ ಗೀತೆ. ಅಭಿಮಾನಿಗಳಿಗೆ ತುಸು ಹೆಚ್ಚೇ ಇಷ್ಟವಾಗಬಹುದಾದ ಸ್ವರ ಸಂಯೋಜನೆ ಹಾಡಿಗಿದೆ. ಇಲ್ಲಿ ಕವಿರಾಜರ ಸಾಹಿತ್ಯಕ್ಕಿಂತ ಹರಿಯ ಸಂಗೀತ, ನೃತ್ಯ ಯೋಜನೆ ಹಾಗೂ ಪರದೆಯ ಮೇಲಿನ ಚಿತ್ರೀಕರಣವೇ ಹೆಚ್ಚು ಗಮನ ಸೆಳೆಯುವ ಅಂಶಗಳಾಗುತ್ತವೇನೋ. ಸಂತೋಷ್ ವೆಂಕಿಯ ಗಾಯನ ಹಾಗೂ ಧ್ವನಿ ಹಾಡಿನ ಆಶಯಕ್ಕೆ ತಕ್ಕ ಆಗಿದೆ.
ತಂಗಾಳಿ ಹಾಡಿದೆ : ಶಂಕರ್ ಮಹಾದೇವನ್, ಕೈಲಾಶ್ ಕೈರ್, ಕಾರ್ತಿಕ್, ಹೇಮಂತ್ ಎಲ್ಲರ ಧ್ವನಿ ಒಟ್ಟಿಗೆ ಕೇಳ ಸಿಗುವ ಬಂಪರ್ ಹಾಡು ಇದು. ಕುಟುಂಬವೆಲ್ಲ ಸೇರಿ ಸಂತೋಷವಾಗಿ ಹಾಡುವ ಇಂಥಹ ಗೀತೆಗಳ ಸಾಹಿತ್ಯದಲ್ಲಿ ನಾಗೇಂದ್ರ ಪ್ರಸಾದ್ ಎಂದಿಗೂ ಸಿದ್ಧ ಹಸ್ತರೇ. ಹರಿಕೃಷ್ಣ ಪೂರ್ಣ ಪ್ರಮಾಣದಲ್ಲಿ ಈ ಹಾಡಿನ ಮೂಲಕ ತಮ್ಮತನ ಮೆರೆಯುತ್ತಾರೆ. ವಾದ್ಯ ತಾಳಗಳ ಬಳಕೆ ಹಾಗೂ ಉತ್ತಮ ಗಾಯಕರ ಸಂಗಮದ ಮಟ್ಟಿಗೆ ಇದೊಂದು ಶ್ರೀಮಂತ ಗೀತೆಯೇ.
ಓಯ್ ಕಳ್ಳ : ಹರಿಕೃಷ್ಣರ ಸಂಗೀತ, ಯೋಗರಾಜರ ಭಟ್ಟರ ಸಾಹಿತ್ಯದ ಜೋಡಿಗೆ ಉಪ್ಪಿ ಭರ್ಜರಿಯಾಗಿಯೇ ಬಂದು ಸೇರಿಕೊಂಡಿದ್ದಾರೆ. ಭಟ್ಟರ ಎಂದಿನ ತುಂಟತನಕ್ಕೆ ಉಪ್ಪಿಯೂ ಸರಿಸಮಾನವಾಗಿ ಧ್ವನಿಗೂಡಿಸಿದ್ದಾರೆ. ಇಂದು ನಾಗರಾಜ್ ಹಾಗೂ ಪ್ರಿಯದರ್ಶಿ ಮಾತ್ರವೇನು ಹಿಂದೆ ಬಿದ್ದಿಲ್ಲ. ಇಬ್ಬರು ಹುಡುಗಿಯರ ನಡುವಿನ ಪ್ರೇಮದಾಟದ ಸಾಹಿತ್ಯಕ್ಕೆ ಪಕ್ಕಾ ನೃತ್ಯಕ್ಕೆ ಹೇಳಿ ಮಾಡಿಸಿದಂತಿರುವ ಗೀತೆಯನ್ನಾಗಿ ಹರಿ ಪರವರ್ತಿಸಿದ್ದಾರೆ.
- ಪ್ರಶಾಂತ್ ಇಗ್ನೇಷಿಯಸ್
Monday, 16 September 2013
ಹೃದಯವಂತಿಕೆಯ ಪ್ರತೀಕ - ಕರ್ನಾಟಕ ಕ್ರಿಕೆಟ್
ಅದು 1980 ರ ಭಾರತ ಹಾಗೂ ಇಂಗ್ಲೆಂಡ ತಂಡಗಳ ನಡುವಿನ ಕ್ರಿಕೆಟ್ ಪಂದ್ಯ. ಭಾರತ ಕ್ರಿಕೆಟ್ ಮಂಡಳಿಯ ಸ್ವರ್ಣ ಮಹೋತ್ಸವದ ನೆನಪಿನ ಜೂಬಿಲಿ ಟೆಸ್ಟ್. 58 ರನ್ನಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿದ್ದ ಇಂಗ್ಲೆಂಡ ತಂಡದ ಏಳನೇ ಬ್ಯಾಟ್ಸ್ ಮ್ಯಾನಾಗಿ ಬಂದಿದ್ದ ಬಾಬ್ ಟೇಲರ್ ವಿಕೆಟ್ ಕೀಪರ್ ಸ್ಯಯದ್ ಕಿರ್ಮಾನಿಗೆ ಕ್ಯಾಚ್ ಇತ್ತಾಗ, ಅಂಪೈರ್ ಔಟೆಂದು ತೀರ್ಪು ಕೊಟ್ಟರು. ಬಾಬ್ ಟೈಲರ್ ಆಶ್ಚರ್ಯ ಹಾಗೂ ಅಸಮಧಾನದಿಂದ ತಲೆ ಅಲ್ಲಾಡಿಸುತ್ತ ಪೆವೆಲಿಯನ್ ನ್ ಕಡೆ ನಡೆಯಲು ಅನುವಾಗುತ್ತಿದ್ದಂತೆ ಕ್ರಿಕೆಟ್ ಚರಿತ್ರೆಯಲ್ಲಿ ಅಳಿಸಲಾಗದಂತಹ ಘಟನೆಯೊಂದು ನಡೆಯಿತು. ಅಲ್ಲೇ ಸ್ಲಿಪ್ ನಲ್ಲಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಆಗಿನ ಭಾರತ ತಂಡದ ನಾಯಕ, ಬ್ಯಾಟ್ಸ್ ಮೆನ್ ಬಾಬ್ ಟೈಲರ ಬಳಿ ಚೆಂಡು ಬ್ಯಾಟಿಗೆ ತಗುಲಿತೇ ಎಂದು ಕೇಳುತ್ತಾರೆ, ಟೈಲರ್ ಇಲ್ಲ ಎಂದಾಗ, ಅಂಪೈರ್ ನ ಬಳಿ ಹೋಗಿ ತಮ್ಮ ತಂಡ ಮಾಡಿದ್ದ ಮನವಿಯನ್ನು( ಅಪೀಲ್) ಹಿಂದೆ ಪಡೆಯುತ್ತಾರೆ. ಬಾಬ್ ಟೈಲರ್ ಮತ್ತೆ ಬ್ಯಾಟಿಂಗ್ ಆಡುತ್ತಾರೆ. ಮುಂದಿನದು ಇತಿಹಾಸ. ಅದೇ ಬಾಬ್ ಟೈಲರ್ ಜೊತೆ ದಾಖಲೆಯ ಜೊತೆಯಾಟವಾಡಿದ ಪ್ರಖ್ಯಾತ ಆಲ್ ರೌಂಡರ್ ಇಯನ್ ಬಾತಮ್, ಬೌಲಿಂಗ್ ನಲ್ಲೂ ಮಿಂಚಿ ಇಂಗ್ಲೆಂಡ್ ತಂಡಕ್ಕೆ ಗೆಲುವನ್ನು ತಂದು ಕೊಡುತ್ತಾರೆ. ಭಾರತ 10 ವಿಕೆಟ್ಟುಗಳ ಹೀನಾಯ ಸೋಲು ಕಾಣುತ್ತದೆ. ಆದರೆ ಇಂದಿಗೂ ಬಾತಮಿನ್ನ ಪ್ರಚಂಡ ಆಲ್ ರೌಂಡ್ ಆಟಕ್ಕಿಂತ, ಸ್ವರ್ಣ ಮಹೋತ್ಸವದ ಟೆಸ್ಟ್ ಎನ್ನುವುದಕ್ಕಿಂತ ಮೇಲಾಗಿ ಕ್ರೀಡಾ ಜಗತ್ತು ಆ ಟೆಸ್ಟ್ ಅನ್ನು ಭಾರತ ತಂಡದ ನಾಯಕನ ಆ ಉದಾರತೆಗಾಗಿ,sportsman spirit ಗಾಗಿ, ಕ್ರೀಡಾ ಮನೋಭಾಕ್ಕಾಗಿ ನೆನಪಿಸಿಕೊಳ್ಳತ್ತದೆ. ಕ್ರಿಕೆಟ್ ಒಂದು ಸಜ್ಜನ, ಸಭ್ಯ ಕ್ರೀಡೆ ಎಂಬ ಮಾತು ಬಂದಾಗಲೆಲ್ಲಾ ಈ ಘಟನೆಯನ್ನು, ಆಗಿನ ಭಾರತ ತಂಡದ ನಾಯಕನನ್ನು ನೆನೆಪಿಸಿಕೊಳ್ಳಲಾಗುತ್ತದೆ. ಅ ನಾಯಕ ಮತ್ತಾರೂ ಅಲ್ಲ, ನಮ್ಮ ಕರ್ನಾಟಕದವರೇ ಆದ ಜಿ.ಆರ್.ವಿಶ್ವನಾಥ್. ಇಂದಿಗೂ ವಿಶಿಯನ್ನು ಕ್ರಿಕೆಟ್ ಜಗತ್ತು ಕಲಾತ್ಮಕ ಬ್ಯಾಟ್ಸ್ ಮ್ಯಾನ್ ಎಂದು ಮಾತ್ರವಲ್ಲದೆ Gentleman ಕ್ರಿಕೆಟರ್ ಎಂದೇ ಕರೆಯುತ್ತದೆ. ಈ ಘಟನೆ ಒಂದು ಉದಾಹರಣೆಯಷ್ಟೆ, ಈ ಮಾತು ವಿಶ್ವನಾಥ್ ಅವರೊಬ್ಬರಿಗೆ ಮಾತ್ರವಲ್ಲದೆ ಇಡೀ ರಾಜ್ಯದ ಕ್ರಿಕೆಟ್ಟಿಗೇ ಸಲ್ಲುವಂತೆ ಮಾಡಿರುವುದು ನಮ್ಮ ಕರ್ನಾಟಕದ ಇತರ ಎಲ್ಲಾ ಕ್ರಿಕೆಟ್ ಆಟಗಾರರೂ ಎಂದರೆ ತಪ್ಪಾಗಲಾರದೇನೋ.
1933-34ರಲ್ಲಿ ಸ್ಥಾಪನೆಗೊಂಡ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಇತ್ತೀಚೆಗೆ ತಾನೇ ತನ್ನ ವಜ್ರ ಮಹೋತ್ಸವವನ್ನು ಆಚರಿಸಿದೆ. ತನ್ನದೇ ಶ್ರೀಮಂತವಾದ ಇತಿಹಾಸವನ್ನು, ಕ್ರಿಕೆಟ್ ಪರಂಪರೆಯನ್ನು ಉಳಿಸಿಕೊಂಡು ಬೆಳಸಿಕೊಂಡೂ ಬಂದಿದೆ. ಇನ್ನೂ ಭಾರತ ಕ್ರಿಕೆಟ್ ಇತಿಹಾಸದಲ್ಲಿ ಕರ್ನಾಟಕದ ಪಾಲು ಬಹಳ ದೊಡ್ಡದು. ಕ್ರಿಕೆಟ್ ಆಟದ ಘನತೆ ಹಾಗೂ ಸಂಸ್ಕೃತಿಯನ್ನು ಎತ್ತಿಡಿದಿರುವುದರಲ್ಲಿ ಸಹಾ ಕರ್ನಾಟಕ ಕ್ರಿಕೆಟ್ ಎಂದಿಗೂ ಮುಂದೆ. ಕ್ರಿಕೆಟ್ ಜಗತ್ತಿನಲ್ಲಿ ಕರ್ನಾಟಕದ ಆಟಗಾರರು ತಮ್ಮ ಆಟಕ್ಕೆ ಮಾತ್ರವಲ್ಲದೆ ಕ್ರಿಕೆಟ್ ಒಂದು ಸಜ್ಜನ, ಸುಸಂಸ್ಕೃತ ಕ್ರೀಡೆ ಎಂಬುದರ ಪ್ರತೀಕ ಹಾಗೂ ರಾಯಭಾರಿಗಳಾಗಿದ್ದಾರೆ.
ಸೆಂಟ್ರಲ್ ಕಾಲೇಜಿನ ಮೈದಾನವನ್ನೇ ತನ್ನ ಕಾರ್ಯಕ್ಷೇತ್ರವಾಗಿಸಿದ್ದ ಸಂಸ್ಥೆಯು, ಕ್ರಿಕೆಟ್ ಆಡುವುದು ಮಾತ್ರವಲ್ಲದೇ ಅಲ್ಲೇ ತನ್ನ ಕಛೇರಿಯನ್ನೂ ಸ್ಥಾಪಿಸಿಕೊಂಡಿತ್ತು. ಇಂದಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಚಾಲನೆ ದೊರಕಿದ್ದು 1969ರಲ್ಲಿ. 1974 ರ ನವೆಂಬರ್ ನಲ್ಲಿ ಇನ್ನೂ ಪೂರ್ಣಗೊಳ್ಳದ ಕ್ರೀಡಾಂಗಣದಲ್ಲೇ ಮೊದಲ ಟೆಸ್ಟ್ ನಡೆಯಿತು. ವೆಸ್ಟ್ ಇಂಡೀಸ್ ವಿರುದ್ಧದ ಈ ಪಂದ್ಯದಲ್ಲೇ ಕ್ರಿಕೆಟ್ ದಂತಕಥೆಗಳಾದ ಗಾರ್ಡನ್ ಗ್ರೀನಿಡ್ಜ್ ಹಾಗೂ ವಿವಿಯನ್ ರಿಚರ್ಡ್ಸ್ ಟೆಸ್ಟ್ ರಂಗಕ್ಕೆ ಪಾದಾರ್ಪಣೆ ಮಾಡಿದರು ಎಂಬುದು ವಿಶೇಷ. ಮುಂದೆ ಹಲವಾರು ಸ್ಮರಣೀಯ ಟೆಸ್ಟ್ ಹಾಗೂ ಒಂದು ದಿನದ ಪಂದ್ಯಗಳಿಗೆ ಈ ಕ್ರೀಡಾಂಗಣ ವೇದಿಕೆಯಾಗಿದೆ. 1996 ರ ವಿಶ್ವಕಪ್ ನ ಭಾರತ ಪಾಕಿಸ್ತಾನ ಕ್ವಾಟರ್ ಫೈನಲ್ಸ್, 1987ರ ಭಾರತ ಪಾಕಿಸ್ತಾನ ಟೆಸ್ಟ್ ಪಂದ್ಯ, ಇತ್ತೀಚಿನ 2011ರ ವಿಶ್ವಕಪ್ ನ ಭಾರತ ಇಂಗ್ಲೆಂಡ ನಡುವಿನ ಟೈ ಪಂದ್ಯ ಇವು ಕೆಲವು ಉದಾಹರಣೆಗಳಷ್ಟೇ. ತಮ್ಮ ಕೊನೆಯ ಟೆಸ್ಟ್ ಇನ್ನಿಂಗ್ಸ್ ನಲ್ಲಿ ಗವಾಸ್ಕ್ ರ್ ಹೊಡೆದ 97 ರನ್ನು, ಅನಿಲ್ ಕುಂಬ್ಳೆ ರ 400ನೇ ವಿಕೆಟ್, ರಿಚರ್ಡ್ ಹ್ಯಾಡ್ಲಿ ದಾಖಲೆ ಮಾಡಿದ್ದು, ಕಪಿಲ್ ದೇವ್ ಹ್ಯಾಡ್ಲಿ ದಾಖಲೆ ಸರಿಗಟ್ಟಿದ್ದು ಮುಂತಾದವುಗಳಿಗೆ ಈ ಕ್ರೀಡಾಂಗಣ ಸಾಕ್ಷಿಯಾಗಿದೆ, ವಿದೇಶಿ ತಂಡಗಳೂ ಸಹ ಇಲ್ಲಿನ ವಾತಾವರಣ, ಹವೆ ಮಾತ್ರವಲ್ಲದೆ ಇಲ್ಲಿನ ಪ್ರೇಕ್ಷಕರ ಕ್ರಿಕೆಟ್ ಜ್ಞಾನ ಹಾಗೂ ಕ್ರೀಡಾ ಮನೋಭಾದಿಂದಾಗಿ ಬೆಂಗಳೂರಿನಲ್ಲಿ ಆಡುವುದಕ್ಕೆ ಇಷ್ಟಪಡುತ್ತವೆ. ಇತ್ತೀಚಿನ ವರ್ಷಗಳಲ್ಲಿ ಐಪಿಎಲ್ ನಿಂದಾಗಿ ಕ್ರೀಡಾಂಗಣಕ್ಕೆ ಮತ್ತಷ್ಟು ರಂಗು ದೊರಕಿದೆ.
ಇನ್ನೂ ಕರ್ನಾಟಕ ತಂಡದ ರಣಜಿ ಇತಿಹಾಸ ಒಂದು ಸುಂದರ ಕಥಾನಕ. ಕರ್ನಾಟಕ ಕ್ರಿಕೆಟಿನ ಸುವರ್ಣ ಯುಗವೆಂದೇ ಹೇಳಬಹುದಾದ 90ರ ದಶಕದಲ್ಲಿ ನಾಲ್ಕು ವರ್ಷದ ಅಂತರದಲ್ಲಿ 3 ಬಾರಿ ರಣಜಿ ಟ್ರೋಫಿ ಗೆದ್ದ ಹೆಗ್ಗಳಿಕೆ ಅದರದು. ಭಾರತ ವಿಶ್ವ ಕಪ್ ಗೆದ್ದ 1983ರಲ್ಲೂ ಕರ್ನಾಟಕವೇ ರಣಜಿ ಚಾಂಪಿಯನ್. ಆದರೆ ಇವೆಲ್ಲಕ್ಕಿಂತಲೂ 70ರ ದಶಕದ ಗೆಲವುಗಳೇ ರೋಚಕ. 1959 ರಿಂದ 1973 ರ ವರೆಗೂ ದೇಶದ ರಣಜಿ ಸರಣಿಯಲ್ಲಿ ಆಗಿನ ಬಾಂಬೆ ತಂಡಕ್ಕೆ ಸರಿಸಾಟಿಯೇ ಇಲ್ಲ. 58 ರಲ್ಲಿ ಒಮ್ಮೆ ಬರೋಡ ತಂಡ ಗೆದ್ದದ್ದು ಬಿಟ್ಟರೆ ಎರಡು ದಶಕಗಳ ಪಾರಪತ್ಯ ಬಾಂಬೆ ತಂಡದು. ಅಂತಹ ಬಾಂಬೆ ತಂಡದ ನಾಗಲೋಟಕ್ಕೆ 1974 ರಲ್ಲಿ ತಡೆ ಹಾಕಿ ಟ್ರೋಫಿ ಗೆದ್ದು ಕೊಂಡದ್ದು ಕರ್ನಾಟಕ ತಂಡ. ಮುಂದೆ 78ರಲ್ಲಿ ಮತ್ತೇ ಟ್ರೋಫಿ ಗೆದ್ದು ತನ್ನ ಪ್ರಾಬಲ್ಯವನ್ನು ಮೆರೆಯಿತು. ಯಾವ ಅಂತರರಾಷ್ಟ್ರೀಯ ಪಂದ್ಯಗಳಿಗೂ ಕಡಿಮೆಯಿಲ್ಲದಂತೆ ಪ್ರೇಕ್ಷಕರು ಈ ರಣಜಿ ಪಂದ್ಯಗಳಿಗೆ ಸೇರುತ್ತಿದ್ದದ್ದನ್ನು ಹಿರಿಯರು ಇಂದಿಗೂ ನೆನಪಿಸಿಕೊಳ್ಳುತ್ತಾರೆ, ವಿಶ್ವನಾಥ್, ಬ್ರಿಜೇಶ್ ಪಟೇಲ್, ರಘುರಾಮ್ ಭಟ್ ಮುಂತಾದವರ ಆಟಕ್ಕೆ ಗ್ಯಾಲರಿಗಳು ತುಂಬುತ್ತಿದ್ದ ರೀತಿ ಅನನ್ಯ.ರಣಜಿಯಲ್ಲಿ ರಾಜ್ಯಕ್ಕೆ ಗೌರವ ತಂದು ಕೊಟ್ಟ ದೊಡ್ಡ ಪಟ್ಟಿಯೇ ಇದೆ. ಎಂ.ಚಿನ್ನಸ್ವಾಮಿ , ಶ್ರೀನಿವಾಸನ್ ಮುಂತಾದವರ ತೆರೆಮರೆಯ ಸೇವೆ ಅಪಾರ.
ಕರ್ನಾಟಕ ತಂಡದಿಂದ ಭಾರತವನ್ನು ಪ್ರತಿನಿಧಿಸಿದ ಆಟಗಾರರ ಪಟ್ಟಿಯೇ ಎಲ್ಲವನ್ನು ಹೇಳುತ್ತದೆ, ಕರ್ನಾಟಕದ ನವಾಬ್ ಪಟೌಡಿ ಎಂದೇ ಖ್ಯಾತರಾದ ವಿ.ಸುಬ್ರಮಣ್ಯರದು ಟೆಸ್ಟ್ ನಲ್ಲಿ ಸಾಧಾರಣ ಯಶಸ್ಸಾದರೂ, ಕರ್ನಾಟಕ ರಣಜಿ ತಂಡವನ್ನು ಕ್ಲಬ್ ಮಟ್ಟದಿಂದ ಮೇಲಕೇರಿಸಿದ ಕೀರ್ತಿ ಅವರು ಪಾತ್ರರು. ಇನ್ನೂ ಎರಪಳ್ಳಿ ಪ್ರಸನ್ನ ಈ ದೇಶ ಕಂಡ ಆತ್ತ್ಯುತ್ತಮ ಆಫ್ ಸ್ಪಿನ್ನರ್ ಎಂಬ ಮಾತಿದೆ. ಕ್ಲಾಸಿಕಲ್ ಆಫ್ ಸ್ಪಿನ್ ಎಂದಾಕ್ಷಣ ಪ್ರಸನ್ನರ ಹೆಸರು ವಿಶ್ವ ಕ್ರಿಕೆಟಿನಲ್ಲಿ ಮುಂಚೂಣಿಯಲ್ಲಿ ಕಾಣುತ್ತದೆ. ಪೋಲಿಯೋದಿಂದಾಗಿ ಸ್ವಲ್ಪ ಮಟ್ಟಗಿನ ಶಕ್ತಿಹೀನವಾದ ಕೈಯನ್ನೇ ಅಸ್ತ್ರವನ್ನಾಗಿಸಿಕೊಂಡ ಬಿ.ಎಸ್. ಚಂದ್ರಶೇಖರ್ ಭಾರತ ತಂಡಕ್ಕೆ ವಿದೇಶಗಳಲ್ಲಿ ಮರಿಚಿಕೆಯಾದ ಟೆಸ್ಟ್ ಗೆಲವನ್ನು ತಂದುಕೊಟ್ಟ ಪ್ರಮುಖ ರುವಾರಿ. ಮೂಲತ: ಲೆಗ್ ಸ್ಪಿನರಾದರೂ ಅವರ ವೇಗದ ಬಾಲುಗಳು ವೇಗದ ಬೌಲರುಗಳಿಗಿಂತ ತೀಕ್ಷ್ನತೆ ಪಡೆದಿದ್ದವು ಎಂದು ಅಂದಿನ ಆಟಗಾರರು ನೆನಪಿಸಿಕೊಳ್ಳುತ್ತಾರೆ. ರಣಜಿಯಲ್ಲಿ ಅಸಾಧಾರಣ ಪ್ರತಿಭೆಯಾಗಿದ್ದ ಗ್ಲಾಮರ್ ಬಾಯ್ ಬ್ರಿಜೇಶ್ ಪಟೇಲ್ ಗೆ ಅಂತರಾಷ್ಟ್ರೀಯ ಯಶಸ್ಸು ಮರಿಚಿಕೆಯಾಯಿತು. ಸೈಯದ್ ಕಿರ್ಮಾನಿ ವಿಶ್ವದ ಅತ್ತ್ಯುತ್ತಮ ವಿಕೆಟ್ ಕೀಪರ್ ಗಳಲ್ಲಿ ಒಬ್ಬರು ಎಂಬುದರಲ್ಲಿ ಯಾರಿಗೂ ಅನುಮಾನವೇ ಇಲ್ಲ. ಬ್ಯಾಟಿಂಗ್ ನಲ್ಲಿ ಸಹಾ ಅಪತ್ಭಾಂಧವನಂತೆ ಭಾರತದ ನೆರವಿಗೆ ಬಂದ ಉದಾಹರಣೆಗಳೆಷ್ಟೋ. 1983ರ ವಿಶ್ವಕಪ್ ನಲ್ಲಿ ಆತಿ ಹೆಚ್ಚು ವಿಕೆಟ್ ಪಡೆದು ಭಾರತದ ವಿಜಯದ ಪ್ರಮುಖ ರುವಾರಿಯಾಗಿದ್ದವರು ರೋಜರ್ ಬಿನ್ನಿ. ಜಿ,ಆರ್. ವಿಶ್ವನಾಥ್ ರವರಂತೂ ತಮ್ಮ ಕಲಾತ್ಮಕ ಆಟದಿಂದಾಗಿ ಕ್ರಿಕೆಟ್ ಜಗತ್ತಿನ ಕಣ್ಮಣಿಯಾದವರು. ಬ್ಯಾಟಿಂಗ್ ನ ಆಫ್ ಡ್ರೈವ್,ಸ್ಕ್ವೇರ್ ಕಟ್, ಫ್ಲಿಕ್ ಗಳಿಗೆ ವಿಶಿ ಇಂದಿಗೂ ಹೆಸರುವಾಸಿ.
ಇದಕ್ಕೆಲ್ಲಾ ಕಳಶವಿಟ್ಟಿದ್ದು 90 ಹಾಗೂ ನಂತರದ ದಶಕ, ಈ ದಶಕದಲ್ಲಿ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ರಾಹುಲ್ ಡ್ರಾವಿಡ್, ಸುನಿಲ್ ಜೋಶಿ, ವಿಜಯ್ ಭರದ್ವಾಜ್, ಗಣೇಶ್, ಡೇವಿಡ್ ಜಾನ್ಸನ್, ಸೋಮಸುಂದರ್, ರಾಬಿನ್ ಉತ್ತಪ್ಪ ಭಾರತವನ್ನು ಪ್ರತಿನಿಧಿಸಿದರು, ಕಪಿಲ್ ದೇವ್ ನಂತರ ಯಾರು ಎಂಬ ಪ್ರಶ್ನೆಗೆ ತಕ್ಕ ಉತ್ತರ ಕೊಟ್ಟವರು ಜಾವಗಲ್ ಶ್ರೀನಾಥ್.ವಿಶ್ವ ಕಪ್ ನ ಪಂದ್ಯದಲ್ಲಿ ಕೆಣಕಿದ ಅಮೀರ್ ಸೋಹೆಲ್ ನ ವಿಕೆಟ್ ಪಡೆದೇ ಅಪಾರ ಖ್ಯಾತಿ ಪಡೆದ ವೆಂಕಟೇಶ್ ಪ್ರಸಾದ್ ಸ್ವಿಂಗ್ ಬೌಲಿಂಗೆ ಹೆಸರು ಮಾಡಿದವರು. ಇನ್ನೂ ಅನಿಲ್ ಕುಂಬ್ಳೆ ಹಾಗೂ ರಾಹುಲ್ ಡ್ರಾವಿಡರ ಸಾಧನೆ ಎಲ್ಲರಿಗೂ ತಿಳಿದಿರುವುದೇ. ಭಾರತದ ಪರವಾಗಿ ಅತಿ ಹೆಚ್ಚು ವಿಕೆಟ್ ಪಡೆದ ಹೆಗ್ಗಳಿಕೆ ಮಾತ್ರವಲ್ಲದೆ ಭಾರತ ಕ್ರಿಕೆಟಿನ ಅನೇಕ ಹುದ್ದೆಗೆ ಕೇಳಿ ಬರುವ ಪ್ರಮುಖ ಹೆಸರು ಕುಂಬ್ಳೆಯದು. ಗೋಡೆಯೆಂದೇ ಪ್ರಖ್ಯಾತರಾಗಿರುವ ರಾಹುಲ್ ಡ್ರಾವಿಡ್ ಈಗ ವಿಶ್ವ ಕ್ರಿಕೆಟಿನ ದಂತಕಥೆ. ರನ್ನು ಹಾಗೂ ಜನಪ್ರಿಯತೆಯಲ್ಲಿ ಸಚಿನ್ ನಂತರದ ಹೆಸರು ಡ್ರಾವಿಡ್ ರದು
ಕರ್ನಾಟಕ ಕ್ರಿಕೆಟ್ ಹಾಗೂ ಅದರ ಆಟಗಾರರ ಇಷ್ಟೆಲ್ಲಾ ಕ್ರಿಕೆಟ್ ಸಾಧನೆಗಳ ನಡುವೆಯೂ ಇಂದಿಗೂ ಅದರ ಹೆಗ್ಗಳಿಕೆ ಇರುವುದು ಅದರ ಸಜ್ಜನಿಕೆ ಹಾಗೂ ಸಭ್ಯತೆಯಲ್ಲೇ. ಕರ್ನಾಟಕ ಕ್ರಿಕೆಟಿನ ಅಭಿಮಾನಿಗಳಿಗೆ ಇದಕ್ಕಿಂತ ದೊಡ್ಡ ಉಡುಗೊರೆ ಬೇಕೆ?
-ಪ್ರಶಾಂತ್ ಇಗ್ನೇಶಿಯಸ್
Tuesday, 10 September 2013
ಲೂಸಿಯಾ.......
ಪ್ರೇಕ್ಷಕರಿಂದ ಪ್ರೇಕ್ಷಕರಿಗಾಗಿಯೇ ಎಂಬ ಹೊಸ ಮಂತ್ರದಿಂದ ಪ್ರೇಕ್ಷಕರ ಹಣದಿಂದಲೇ ಪ್ರಾರಂಭವಾದ ಪವನ್ ಕುಮಾರ್ ರವರ ಹೊಸ ಕನಸು ’ಲೂಸಿಯಾ’ ಕನ್ನಡ ಚಿತ್ರ ಪ್ರೇಮಿಗಳ ನಡುವೆ ಒಂದು ಹೊಸ ನಿರೀಕ್ಷೆಯನ್ನೆ ಸೃಷ್ಟಿಸಿದೆ. ಅದರಲ್ಲೂ ಅಂತರಜಾಲ ಹಾಗೂ ಫೇಸ್ ಬುಕ್ಕಿನಲ್ಲಿ ಈ ಹೊಸ ಆಲೋಚನೆಯನ್ನು ಕನ್ನಡದ ಯುವ ಸಮುದಾಯ ಪ್ರೀತಿಯಿಂದ ಅಪ್ಪಿಕೊಂಡಿದೆ. ಲಂಡನ್ ಚಿತ್ರೋತ್ಸವದಲ್ಲಿ ಪ್ರೇಕ್ಷಕರ ಮೆಚ್ಚಿನ ಸಿನಿಮಾ ಎನ್ನುವ ಪ್ರಶಸ್ತಿ ಪವನ್ ಕುಮಾರರ ಈ ಕನಸಿನ ರೆಕ್ಕೆ ಮತ್ತಷ್ಟು ಗರಿಗಳನ್ನು ಮೂಡಿಸಿದೆ. ಈಗ ಇದು ಕೇವಲ ಪವನ್ ಚಿತ್ರ ಮಾತ್ರವಲ್ಲದೆ ಲೂಸಿಯದಲ್ಲಿ ತೊಡಗಿಸಿಕೊಂಡ, ಕೇವರ ೫೦೦ ರಷ್ಟು ಕಾಣಿಕೆ ನೀಡಿರುವ ಎಲ್ಲರದೂ ಎನ್ನುವಷ್ಟು ಬೆಳೆವಣಿಗೆ ಕಂಡಿದೆ. ಚಿತ್ರರಂಗ ಕೂಡ ವಾರೆ ಗಣ್ಣಿನಲ್ಲಿ ಇದನೆಲ್ಲಾ ಗಮನಿಸುತ್ತಿರಬಹುದು. ಮಾಧ್ಯಮಗಳ ಬೆಂಬಲ ಈಗಾಗಲೇ ಚಿತ್ರಕ್ಕೆ ಭಾರಿ ಎನ್ನುವ ಮಟ್ಟಿಗೇ ದೊರಕಿದೆ. ಈ ಎಲ್ಲಾ ಹಿನ್ನಲೆಯಲ್ಲೇ ಚಿತ್ರದ ಹಾಡುಗಳನ್ನು ಕೇಳಿದಾಗ ಯಾವುದೇ ಚಿತ್ರ ಹಿನ್ನಲೆಯಿಲ್ಲದ ಹೊಸ ಸಂಗೀತ ನಿರ್ದೇಶಕ ಹಾಗೂ ಬಡ್ಜೆಟ್ ನ ಇತಿ ಮಿತಿ ಇಲ್ಲಿನ ಹಾಡುಗಳಲ್ಲಿ ಎದ್ದು ಕಾಣುತ್ತದೆ.
ತಿನ್ನ ಬೇಡ ಕಮ್ಮಿ
ಇಂದಿನ ಹಾಡುಗಳ ಧಾಟಿಯಲ್ಲೇ ಸಾಗುವ ಈ ಗೀತೆ ಯುವಕರಿಗೆ ಮೆಚ್ಚುಗೆಯಾಗಬಹುದಾದ ಸಾಧರಣ ಗೀತೆ. ಕನ್ನಡ ಬಾರದ ಹುಡುಗಿಯೊಬ್ಬಳಿಗೆ ಕನ್ನಡದ ಬಗ್ಗೆ ಹೇಳುತ್ತಾ ಛೇಡಿಸುವ ಸಾಹಿತ್ಯವಿರುವ ಗೀತೆಯಲ್ಲಿ ತಾಳ ವಾದ್ಯವೇ ಹೈಲೈಟ್. ತೇಜಸ್ವಿಯವರೇ ಬರೆದು ಧ್ವನಿಗೂಡಿಸಿರುವ ಹಾಡು ಒಳ್ಳೆಯ ನೃತ್ಯದಿಂದ ಪರದೆಯ ಮೇಲೆ ಇಷ್ಟುವಾಗಬಹುದು.
ನೀ ತೊರೆದ ಗಳಿಗೆಯಲ್ಲಿ
ಆನನ್ಯ ಭಟ್ ಹಾಗೂ ಉದಿತ್ ಹ್ಯಾರಿಸ್ ಹಾಡಿರುವ ಗೀತೆ ಈ ಆಲ್ಬಂ ನ ಅತ್ತ್ಯುತ್ತಮ ಗೀತೆ ಎನ್ನಲು ಅಡ್ಡಿಯಿಲ್ಲ. ರಘು ಶಾಸ್ರ್ತಿಯವರ ಉತ್ತಮವಾದ ಸಾಹಿತ್ಯವು ಇದಕ್ಕೆ ಕಾರಣ. ಕೇಳುತ್ತ ಕೇಳುತ್ತ ಇಷ್ಟವಾಗುವ ಇಂಪಾದ ಗೀತೆ ತನ್ನ ಮಾಧುರ್ಯದಿಂದಲೇ ಮನ ಸೆಳೆಯುತ್ತದೆ. ಈ ಹಾಡಿನಿಂದ ಸಂಗೀತ ನಿರ್ದೇಶಕ ತೇಜಸ್ವಿ ಭರವಸೆ ಮೂಡಿಸುತ್ತಾರೆ. ಹಾಡು ನಡುವೆಯಲ್ಲಿ ಸಾಮಾನ್ಯದ ಮಟ್ಟ ಮುಟ್ಟಿದರೂ ಗೀತೆಯ ಪ್ರಾರಂಭದಲ್ಲಿ ಬರುವ ಸಾಲುಗಳು ಸಾಹಿತ್ಯದಿಂದಲೂ ಸಂಗೀತ ಸಂಯೋಜನೆಯಿಂದಲೂ ಕೇಳುಗರನ್ನು ಅವರಿಸುತ್ತದೆ.
ಜಮ್ಮ ಜಮ್ಮ
ಮತ್ತೊಂದು ಮಾಸ್ ಹಾಡು. ನವ ಗಾಯಕ ನವೀನ್ ಸಜ್ಜುರವರ ಧ್ವನಿ ಹಾಗೂ ಉತ್ಸಾಹ ಎದ್ದು ಕಾಣುವಂತ ಈ ಹಾಡಿನ ಯಶಸ್ಸು ನವೀನಷ್ಟೇ ನಿರ್ದೇಶಕ ಪವನ್ ಹಾಗೂ ತೇಜಸ್ವಿಯವರಿಗೆ ಸಲ್ಲಬೇಕು. ಆರ್ಕೇಷ್ಟ್ರಾ ಹಾಡುಗಾರನಿಗೆ ಅವಕಾಶಕೊಟ್ಟು ಹುರಿದುಂಬಿಸಿದ ಪರಿಣಾಮ ಹಾಡಿನಲ್ಲಿ ಕಾಣುತ್ತದೆ. ಉತ್ತಮ ವಾದ ಬೀಟ್ಸ್ ಹಾಗೂ ಉತ್ಸಾಹಭರಿತವಾದ ಗಾಯನದಿಂದ ಹಾಡು ಲವಲವಿಕೆಯಿಂದ ಕೂಡಿದೆ.
ಜಮ್ಮ ಜಮ್ಮ ( ದು:ಖ)
ಇದೇ ಹಾಡು ಮತ್ತೆ ದು:ಖದ ಸನ್ನಿವೇಶದಲ್ಲಿ ಬಂದಾಗಲೂ ನವೀನ್ ತಮ್ಮ ಗಾಯನದಿಂದ ಗಮನ ಸೆಳೆಯುತ್ತಾರೆ. ತೇಜಸ್ವಿಯವರ ಸಾಹಿತ್ಯ ಸಾಮಾನ್ಯವಾಗಿದೆಯಾದರೂ ರಾಗ ಹಾಗೂ ವಾದ್ಯಸಂಯೋಜನೆ ಹಾಡಿನ ಭಾವಲಹರಿಗೆ ತಕ್ಕ ಹಾಗೆ ಮೂಡಿ ಬಂದಿದೆ. ಮತ್ತೊಮ್ಮೆ ನವೀನ್ ಅಭಿನಂದನಾರ್ಹರು.
ಯಾಕೋ ಬರಲಿಲ್ಲ
ಅನಂತಸ್ವಾಮಿಯವರ :ನೀನ್ ನನ್ನಟ್ಟಿಗೆ ಬೆಳಕ್ ಕಿದ್ದೆ ನಂಜಿ" ಎಂಬ ಗೀತೆ ನೆನಪಿಸುವಂತೆ ಅದೇ ಧಾಟಿಯಲ್ಲಿ ಸಾಗುವ ಗೀತೆ ಯಾಕೋ ಬರಲಿಲ್ಲ. ವಿಭಿನ್ನವಾದ ರಾಗ ಸಂಯೋಜನೆ ಹಾಗೂ ಹಾಡುಗಾರಿಕೆ ಇದೆ ಎನ್ನುವುದು ಈ ಗೀತೆಯ ಹೆಗ್ಗಳಿಕೆ. ಕೇಳುತ್ತ ಕೇಳುತ್ತ ಇಷ್ಟವಾಗಬಹುದಾದ ಗುಣ ಇರುವುದರಿಂದ ಚಿತ್ರದಲ್ಲಿ ಹೇಗೆ ಬಳಕೆಯಾಗಿದೆ ಎನ್ನುವುದರ ಮೇಲೆ ಹಾಡಿನ ಯಶಸ್ಸು ನಿಲ್ಲಬಹುದು. ಮಿತವಾದ ವಾದ್ಯಗಳು ಹಾಗೂ ಅಬ್ಬರವಿಲ್ಲದಿರುವುದರಿಂದ ಸಾಹಿತ್ಯ ಎದ್ದು ಕೇಳುತ್ತದೆ.
ಹೇಳು ಶಿವ
ಪವನ್ ಸಿನಿಮಾ ಎಂದ ಮೇಲೆ ಯೋಗರಾಜ್ ಭಟ್ಟರ ಹಾಡು ಇಲ್ಲದಿರಲು ಸಾಧ್ಯವೇ ಹೇಳು ಶಿವಾ, ಹೇಳು ಶಿವಾ ಹಾಡಿಗೆ ಸಾಹಿತ್ಯ ಒದಗಿಸಿ ಧ್ವನಿಯನ್ನೂ ನೀಡಿರುವ ಭಟ್ಟರು ಮತ್ತೆ ತಮ್ಮ ತುಂಟತನ ಮೆರೆಯುತ್ತಾರೆ. ಹುಡುಗಿ, ಸೆಲ್ ಫೋನ್, ಹಾಸ್ಯ, ವೇದಾಂತ, ’ಗಳು’ ಎಲ್ಲವೂ ಇದು ಅವರ್ದೇ ಹಾಡು ಎಂಬುದನ್ನು ಧೃಢ ಪಡಿಸುತ್ತದೆ. ಹರಿಕೃಷ್ಣರ ಗೀತೆಯೇನೋ ಎನ್ನುವಷ್ಟು ಮಜವಾಗಿ ಶ್ರೀಮಂತವಾಗಿ ಹಾಡು ಮೂಡಿ ಬಂದಿದೆ. ನವೀನ ಹಾಗೂ ರಕ್ಷಿತ್ ನಗರ್ಲೆ ಉತ್ತಮವಾಗಿ ಹಾಡಿದ್ದಾರೆ.
ತಿನ್ನ ಬೇಡ
ಕೊನೆಯಲ್ಲಿ ಸಂಗೀತ ರಾಜೀವ್, ನಿತಿನ್ ಹಾಗೂ ಸ್ಪರ್ಷರವರ ಧ್ವನಿಯಲ್ಲಿ ಮೂಡಿಬಂದಿರುವ ತಿನ್ನ್ ಬೇಡ ಹಾಡು ಮೊದಲಿನ ಗೀತೆಗಿಂತೆಗಿಂತ ಲವಲವಿಕೆಯಾಗಿ ಮೂಡಿ ಬಂದಿದೆ. ಸಂಗೀತ ರಾಜೀವ ರವರ ಧ್ವನಿ ಗೀತೆಗೆ ಹೇಳಿ ಮಾಡಿಸಿದಂತಿದೆ. ಗ್ರಾಮೀಣ ಆಡು ಬಾಷೆಯ ಸಾಹಿತ್ಯವಿರುವುದು ನಿಜಕ್ಕೂ ಹಾಡಿಗೆ ಮೆರಗನ್ನು ನೀಡಿದೆ. ಕೊನೆಯಲ್ಲಿ ಸರ್ ಪ್ರೈಸ್ ಪ್ಯಾಕ್ ಎಂದೇ ಹೇಳಬಹುದಾದ ಹಾಡು ಗುನುಗುನಿಸುವಂತಿದೆ. ಮತ್ತಷ್ಟು ಅವಕಾಶ ಹಾಗೂ ಇತಿ ಮಿತಿಯ ಸಂಕೋಲೆ ಇಲ್ಲದಿದ್ದರೆ ಉತ್ತಮ ಸಂಗೀತ ನಿರ್ದೇಶಕರಾಗುವ ಭರವಸೆ ಮೂಡಿಸುತ್ತಾರೆ ಪೂರ್ಣ ಚಂದ್ರ ತೇಜಸ್ವಿ.
- ಪ್ರಶಾಂತ್ ಇಗ್ನೇಶಿಯಸ್
ಕನ್ನಡ ಸಾಹಿತ್ಯದ ದಿವ್ಯ ತಾರೆ ’ಕರ್ವಾಲೋ’
ಪೂರ್ಣ ಚಂದ್ರ ತೇಜಸ್ವಿಯವರು ಕುವೆಂಪುರವರ ಮಗ ಎಂದು ತಿಳಿದಿತ್ತಾದರೂ ಅವರ ಬರಹಗಳ ಪರಿಚಯ ಆಗಿದ್ದು ಲಂಕೇಶ್ ಪತ್ರಿಕೆಯಲ್ಲಿನ ’ಆಣ್ಣನ ನೆನಪು’ ಅಂಕಣದಿಂದಾಗಿಯೇ. ಆಗ ಲಂಕೇಶ್ ಪತ್ರಿಕೆ ಬಹಳ ಜನಪ್ರಿಯವಾಗಿದ್ದರೂ ಅದರಲ್ಲಿ ನನಂಥವನಿಗೆ ಅರ್ಥವಾಗುತ್ತಿದ್ದದ್ದು, ನೀಲು ಚುಟುಕುಗಳು, ಸಿನಿಮಾ, ಅನಂತ್ ನಾಗ್ ರ ’ನನ್ನ ತಮ್ಮ ಶಂಕರ’, ಅಣ್ಣನ ನೆನಪು ಯಂಥ ಅಂಕಣಗಳು ಮಾತ್ರವೇ. ಅಲ್ಲಿಂದಲೇ ತೇಜಸ್ವಿಯವರ ಬರಹಗಳ ಬಗ್ಗೆಯೂ ಒಂದು ಕುತೂಹಲ ಮೂಡಿತು.
----------------------------------------------------------------------------------------------------------------
-ಪ್ರಶಾಂತ್ ಇಗ್ನೇಶಿಯಸ್
----------------------------------------------------------------------------------------------------------------
"ನಾನು ಮೂಡುಗೆರೆ ಜೇನು ಸೊಸೈಟಿಯ ಬಾಗಿಲುಗಳನ್ನು ತಳ್ಳಿ ಒಳಗೆ ಪ್ರವೇಶಿಸಿದಾಗ...." ಎಂದು ಪ್ರಾರಂಭವಾಗುವ ತೇಜಸ್ವಿಯವರ ಕರ್ವಾಲೋ ಕಾದಂಬರಿಯ ಮೊದಲ ಸಾಲುಗಳಲ್ಲೇ ಒಂದು ರೀತಿಯ ಗೊಂದಲ ಮೂಡುತ್ತಿತ್ತು. ಹಾಗೇ ನೋಡಿದರೆ ತೇಜಸ್ವಿಯವರ ಕಾದಂಬರಿ, ಕತೆಗಳನ್ನು ಅದರ ಮೊದಲ ಸಾಲು, ಪುಟ ಅಥವಾ ಅಧ್ಯಾಯದಿಂದ ಅಳೆಯಲಾಗದು. ಎಲ್ಲಿಯೋ ಅರಂಭವಾಗಿ ಯಾವುದೇ ಅನಗತ್ಯ ತಿರುವುಗಳಿಲ್ಲದೆ, ಹಂತ ಹಂತವಾಗಿ ಅಚ್ಚರಿಗೊಳಿಸುತ್ತ ಮತ್ತೆಲ್ಲಿಯೋ ಹೋಗಿ ಮುಟ್ಟುವ ಪರಿ ಅವರ ಓದುಗರಿಗೆ ಪರಿಚಿತವೇ. ಆದರೂ ಹಾರುವ ಓತಿಯ ಹುಡುಕಾಟದ ಬಗೆಗಿನ ಕಾದಂಬರಿ ಎಂದು ಗೊತ್ತಿತ್ತಾದರಿಂದ, ಈ ಕರ್ವಾಲೋ ಎಂಬ ವಿಚಿತ್ರ ಹೆಸರು ಯಾರದು? ಇದ್ಯಾವುದೋ ಕ್ರಾಂತಿಕಾರಿ ವ್ಯಕ್ತಿಯ ಹೆಸರಿರಬಹುದೇ, ಹಾರುವ ಓತಿಗೂ ಮೂಡುಗೆರೆಗೂ ಎಲ್ಲಿಯ ಸಂಬಂಧ, ಅದು ಕಾಡಿನ ಸಾಹಸ ಕತೆಯಾದರೆ ಅದಕ್ಕೂ ಮೂಡುಗೆರೆ ಜೇನು ಸೊಸೈಟಿಗೂ ಯಾವುದು ನಂಟು ಎಂಬುದರಲ್ಲೇ ಕರ್ವಾಲೋ ಓದುವುದನ್ನು ಬೇಕಂತಲೇ ಮುಂದೂಡತ್ತಲೇ ಬಂದಿದ್ದೆ.
ಪೂರ್ಣ ಚಂದ್ರ ತೇಜಸ್ವಿಯವರು ಕುವೆಂಪುರವರ ಮಗ ಎಂದು ತಿಳಿದಿತ್ತಾದರೂ ಅವರ ಬರಹಗಳ ಪರಿಚಯ ಆಗಿದ್ದು ಲಂಕೇಶ್ ಪತ್ರಿಕೆಯಲ್ಲಿನ ’ಆಣ್ಣನ ನೆನಪು’ ಅಂಕಣದಿಂದಾಗಿಯೇ. ಆಗ ಲಂಕೇಶ್ ಪತ್ರಿಕೆ ಬಹಳ ಜನಪ್ರಿಯವಾಗಿದ್ದರೂ ಅದರಲ್ಲಿ ನನಂಥವನಿಗೆ ಅರ್ಥವಾಗುತ್ತಿದ್ದದ್ದು, ನೀಲು ಚುಟುಕುಗಳು, ಸಿನಿಮಾ, ಅನಂತ್ ನಾಗ್ ರ ’ನನ್ನ ತಮ್ಮ ಶಂಕರ’, ಅಣ್ಣನ ನೆನಪು ಯಂಥ ಅಂಕಣಗಳು ಮಾತ್ರವೇ. ಅಲ್ಲಿಂದಲೇ ತೇಜಸ್ವಿಯವರ ಬರಹಗಳ ಬಗ್ಗೆಯೂ ಒಂದು ಕುತೂಹಲ ಮೂಡಿತು. ಈ ಕುತೂಹಲದಿಂದಾಗಿ ಮುಂದೆ ಚಿದಂಬರ ರಹಸ್ಯ, ಜುಗಾರಿ ಕ್ರಾಸ್, ಕಿರುಗೂರಿನ ಗಯ್ಯಾಳಿಗಳು ಮುಂತಾದ ಪುಸ್ತಕಗಳು ಓದುವಂತೆಯೂ ಆಯಿತು. ಮತ್ತೊಂದು ಪುಸ್ತಕದಲ್ಲಿ ತಮ್ಮ ಮನೆಯ ಬಳಿ ಹಾವೊಂದು ಕಪ್ಪೆಯನ್ನು ನುಂಗಿ, ಅದರ ಭಾರಕ್ಕೆ ಮುಂದೆ ಸಾಗಲಾರದೆ ಸಣ್ಣ ಪಕ್ಷಿಯೊಂದಕ್ಕೆ ಆಹಾರವಾಗುವ ಪ್ರಸಂಗವನ್ನು ತೇಜಸ್ವಿ ಎಷ್ಟು ಅದ್ಭುತವಾಗಿ ವರ್ಣಿಸಿದ್ದಾರೆಂದರೆ ಅವರ ಎಲ್ಲಾ ಬರಹಗಳನ್ನೂ ಓದಬೇಕೆಂಬ ಆಸೆ ಬೆಳೆಯಿತು. ಅದರೂ ಎಲ್ಲರೂ ಕ್ಲಾಸಿಕ್ ಎಂದೇ ಕರೆಯುತ್ತಿದ್ದ ’ಕರ್ವಾಲೋ’ ಓದಲು ಮನಸ್ಸಾಗಿರಲಿಲ್ಲ.
ಒಂದಷ್ಟು ಪುಟಗಳನ್ನು ಓದಿ ಬಿಟ್ಟಿದ್ದ ಅದನ್ನು ಓದಲು ಮತ್ತೆ ಶುರು ಮಾಡಿದ್ದೊಂದೆ ನೆನಪು. ಹೇಗೆ ಮುಗಿಯಿತೋ ಕಾಣೆ. ಕರ್ವಾಲೋ ಒಂದು ಹೊಸ ಜಗತ್ತನ್ನೆ ತೆರೆದಿಟ್ಟಂತೆ ಆಯಿತು ಎಂಬುದು ನಿಜವಾದರೂ, ಅದಕ್ಕಿಂತ ಮುಖ್ಯವಾಗಿ ಈ ಕಾದಂಬರಿಯಲ್ಲಿ ಅಷ್ಟೇನೂ ಮುಖ್ಯವಲ್ಲದ ಎಷ್ಟೊ ಸಣ್ಣ ಸಣ್ಣ ಪ್ರಶ್ನೆಗಳಿಗೆ ಉತ್ತರ ದೊರಕುತ್ತಾ ಹೋಯಿತು. ಇನ್ನೂ ಕಾದಂಬರಿಗೆ ಕರ್ವಾಲೋ ಎಂಬ ಹೆಸರು ಇದೆಯಾದರೂ ಅಲ್ಲಿನ ಯಾವ ಪಾತ್ರದ ಹೆಸರನ್ನೂ ಇಟ್ಟರೂ ಸರಿಯೇ ಎಂಬಷ್ಟು ಎಲ್ಲಾ ಪಾತ್ರಗಳೂ ಲೀಲಾಜಾಲವಾಗಿ ನಮ್ಮನ್ನು ಅವರಿಸಿಕೊಳ್ಳುತ್ತವೆ. ಜಗತ್ತಿನ ವಿಕಸನದ ರಹಸ್ಯದ ಅಧ್ಯಾಯವೊಂದನ್ನು ತನ್ನಲೇ ಇಟ್ಟುಕೊಂಡು ಅದರ ಬಗ್ಗೆ ಯಾವುದೇ ಅರಿವಿಲ್ಲದಂತೆ ಬಾಳುತ್ತಿರುವ ಓತಿ, ಅದನ್ನು ಹುಡುಕಿಕೊಂಡು ಹೊರಟವರಲ್ಲಿನ ಅದೇ ನಿರ್ಭಾವ, ಕರ್ವಲೋ ಗೆ ಮಾತ್ರ ತಿಳಿದಿರುವ ಅದರ ಮಹತ್ವ ಹಾಗೂ ಆದರೂ ಅವರು ತೋರುವ ಸಂಯಮ, ಮಂದಣ್ಣನ ಬೇಜವಬ್ದಾರಿ, ಬಿರಿಯಾನಿ ಕರಿಯಪ್ಪನ ರಸಿಕತನ, ನಾಯಿ ’ಕಿವಿ’ ಯ ನಾಯ್ತನ(?), ಸ್ವತ: ತೇಜಸ್ವಿಯವರ ಉತ್ಸಾಹ, ಹಾಸ್ಯ, ಹತಾಶೆ, ಬೇಸರ, ಪ್ರಭಾಕರನ ಪ್ರಜ್ಞೆ, ಕೆಲಸದಾಳು ಪ್ಯಾರನ ಮುಗ್ದತೆ, ಮೂಡುಗೆರೆಯಂಥ ಊರುಗಳಲ್ಲಿನ, ಕಾಡುಗಳಲ್ಲಿನ ಭಾರತ, ಎಲ್ಲವೂ ಓದುಗನ ಭಾವ ಪ್ರಪಂಚದಲ್ಲಿ ಲೀನವಾಗಿತ್ತಾ ಹೋಗುವ ಪರಿಯಿಂದಾಗಿಯೇ ಕರ್ವಾಲೋ ಏಕೆ ಕನ್ನಡ ಸಾಹಿತ್ಯದಲ್ಲಿ ಒಂದು ಆಪ್ತ ಹೆಸರು ಎಂಬ ಸತ್ಯ ಅರಿವಾಗುತ್ತದೆ. ಆ ಹುಡುಕುವ ಪಯಣದ ರೋಮಾಂಚದಲ್ಲಿ ಮುಳುಗಿ ಏಳುವ ಓದುಗನಿಗೆ ಓತಿ ಸಿಕ್ಕರೂ ಸಿಕ್ಕದಿದ್ದರೂ ನಿರಾಸೆಯಂತೂ ಆಗುವುದಿಲ್ಲ.
ಈ ಕಾದಂಬರಿಯಲ್ಲಿ ಮೂಡುಗೆರೆಯಂತ ಊರುಗಳ, ಜನರ ಬವಣೆಗಳ ವಿವರಗಳ ಜೊತೆಗೆ ಕಾಡಿನ ಅಗಾಧತೆ, ಅನಂತತೆಯ ಬಗೆಗಿನ ವಿವರಗಳು ಆಶ್ಚರ್ಯ, ಭಯ, ರೋಮಾಂಚ ಎಲ್ಲವನ್ನೂ ಉಂಟು ಮಾಡುತ್ತದೆ. ತೇಜಸ್ವಿಯವರು ಮೂಡುಗೆರೆಗೆ ಬಂದು ಮನೆಗೆ ಇನ್ನೂ ವಿದ್ಯುತ್ ಶಕ್ತಿ ಸಂಪರ್ಕ ಹಾಕಿಸಕೊಳ್ಳದ ವರ್ಷಗಳಲ್ಲಿ ಈ ಕಾದಂಬರಿಯನ್ನು ಬರೆದರು ಎಂಬ ತೇಜಸ್ವಿಯವರ ಪತ್ನಿ ರಾಜೇಶ್ವರಿ ನೀಡುವ ಮಾಹಿತಿಯಿಂದಾಗಿ ’ಕರ್ವಾಲೋ’ ಕತ್ತಲ್ಲಲ್ಲಿ ಹೊಳೆಯುವ ದಿವ್ಯ ತಾರೆಯಂತೆ ಆಪ್ತವಾಗಿ ಕಾಣುತ್ತದೆ.
Wednesday, 4 September 2013
ಓದಬೇಕು ಮಿತ್ರರೇ......
ಒಂದು ಪುಸ್ತಕ, ಕಾದಂಬರಿ, ಆತ್ಮ ಚರಿತ್ರೆಯನ್ನು ಓದುತ್ತಿದ್ದರೆ ಆ ಕಥಾವಸ್ತು, ವ್ಯಕ್ತಿಗೆ ಮೀರಿದ ವಸ್ತುಗಳು ಅದರೊಂದಿಗೆ ನಮ್ಮ ಭಾವನಾ ಪ್ರಪಂಚಕ್ಕೆ ದೊರಕುತ್ತದೆ. ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕೇವಲ ಒಂದು ಹಳ್ಳಿಯ, ಒಂದೆರಡು ಕುಟುಂಬದ, ಒಂದು ಕಾಲದ ಕಥೆಯಾಗದೆ, ಇಡೀ ಮಲೆನಾಡಿನ ಜೀವನ ಶೈಲಿ, ಕಾಡಿನ ಸೊಬಗು, ಭಾಷೆಯ ಸೊಗಡನ್ನು ಅದ್ಭುತವಾಗಿ ತೆರೆದಿಡುತ್ತದೆ. ಮಲೆನಾಡನ್ನು ನೋಡದವನೂ ಸಹಾ ಅಲ್ಲಿನ ಪಾತ್ರಗಳೊಂದಿಗೆ ಅಲ್ಲಿನ ಹೊಲಗದ್ದೆ, ಕಾಡುಗಳಲ್ಲಿ ಓಡಾಡುತ್ತಾ ಮಳೆಯಲ್ಲಿ ನೆಂದಂತ ಅನುಭವ ಸಿಗುತ್ತದೆ
***************************************************************************
ಮೊನ್ನೆ, ಲೇಖಕ ವಿಕ್ರಮ್ ಸೇಥ್‌ಗೆ ಪೆಂಗ್ವಿನ್ ಪ್ರಕಾಶನ ಸಂಸ್ಥೆ ನೀಡಿದ ಮುಂಗಡವನ್ನು ವಾಪಸ್ ಕೇಳಿತು ಎಂಬ ಸುದ್ದಿ ದಿನಪತ್ರಿಕೆಯಲ್ಲಿತ್ತು. ಆ ಸಂಸ್ಥೆ ಲೇಖಕನಿಗೆ ಕೊಟ್ಟಿದ್ದ ಹಣ 9.5 ಕೋಟಿಯಷ್ಟು. ಅದು ಮುಂಗಡ, ಅಂದರೆ ಅಡ್ವಾನ್ಸ್ ಅಷ್ಟು. ಮುಂಗಡದ ಹಣವೇ ಅಷ್ಟು ಎಂದ ಮೇಲೆ ಪೂರ್ತಿ ಹಣ ಇನ್ನೆಷ್ಟಿರಬೇಕು? ಇನ್ನೂ ಆ ಪುಸ್ತಕದಿಂದ ಬರಬಹುದಾದ ಲಾಭವೆಷ್ಟಿರಬಹುದು? ಅಂದರೆ ಇನ್ನೂ ಬರೆದು ಮುಗಿಯದ ಆ ಪುಸ್ತಕವನ್ನು ಕೊಳ್ಳುವವರು ಎಷ್ಟಿರಬಹುದು? ಅಷ್ಟು ಜನ ಕೊಂಡು ಓದುತ್ತಾರೆ ಎಂಬುದೇ ಸಂತೋಷದ ವಿಷಯ ಅಚ್ಚರಿಯ ವಿಷಯವೂ ಹೌದು. ಏಕೆಂದರೆ ನನ್ನ ಬಳಿಯೇ ಇರುವ ಎಷ್ಟೋ ಕನ್ನಡ ಪುಸ್ತಕಗಳನ್ನು ತೆಗೆದು ಪ್ರಾರಂಭದಲ್ಲಿ ಸಿಗುವ ಪ್ರತಿಗಳ ವಿವರವನ್ನು ನೋಡಿದಾಗ ಬಹಳಷ್ಟು ಪುಸ್ತಕಗಳು 1000 ಎಂದಿವೆ. ದುಂಡಿರಾಜರ ಹನಿಗವನದ ತರಹ ಪುಸ್ತಕಗಳು 2000 ಅಚ್ಚಾಗುತ್ತವೆ. ನಾಲ್ಕೈದು ಕೋಟಿಯಷ್ಟಿರುವ ಕರ್ನಾಟಕದ ಜನಸಂಖ್ಯೆಯಲ್ಲಿ ಜನಪ್ರಿಯ ಪುಸ್ತಕಗಳೂ ಸೇರಿದಂತೆ ಓದುವುದು 2000 ಜನರು ಮಾತ್ರವೇ?? ಸುಮಾರು 17 ಮರು ಮುದ್ರಣಗಳನ್ನು ಕಂಡ ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ಓದಿದ ಅಷ್ಟೂ ಜನರು ಏನಾದರು? ಬೇಂದ್ರೆ, ಬೈರಪ, ಅನಂತಮೂರ್ತಿ, ಮಾಸ್ತಿ, ಮುಂತಾದವರ ಪುಸ್ತಕಗಳನ್ನು ಮುಗಿಬಿದ್ದು ಓದುತ್ತಿದ್ದ ಆ ಓದುವ ಪರಂಪರೆ ಎಲ್ಲಿ ಹೋಯಿತು? ನಮ್ಮ ನಾಯಕರ, ಸಿನಿಮಾ ನಟ ನಟಿಯರ, ಸಮಾಜದ ಪ್ರಮುಖ ವ್ಯಕ್ತಿಗಳ ಮಾತು, ಸಂದರ್ಶನಗಳನ್ನು ನೋಡುತ್ತಿದ್ದರೆ ಅರಿವಾಗುತ್ತದೆ. ಅವರೆಲ್ಲಾ ಹೆಚ್ಚು ಓದುತ್ತಿಲ್ಲ ಎಂಬ ಸಂಗತಿ.
***************************************************************************
ಮೊನ್ನೆ, ಲೇಖಕ ವಿಕ್ರಮ್ ಸೇಥ್‌ಗೆ ಪೆಂಗ್ವಿನ್ ಪ್ರಕಾಶನ ಸಂಸ್ಥೆ ನೀಡಿದ ಮುಂಗಡವನ್ನು ವಾಪಸ್ ಕೇಳಿತು ಎಂಬ ಸುದ್ದಿ ದಿನಪತ್ರಿಕೆಯಲ್ಲಿತ್ತು. ಆ ಸಂಸ್ಥೆ ಲೇಖಕನಿಗೆ ಕೊಟ್ಟಿದ್ದ ಹಣ 9.5 ಕೋಟಿಯಷ್ಟು. ಅದು ಮುಂಗಡ, ಅಂದರೆ ಅಡ್ವಾನ್ಸ್ ಅಷ್ಟು. ಮುಂಗಡದ ಹಣವೇ ಅಷ್ಟು ಎಂದ ಮೇಲೆ ಪೂರ್ತಿ ಹಣ ಇನ್ನೆಷ್ಟಿರಬೇಕು? ಇನ್ನೂ ಆ ಪುಸ್ತಕದಿಂದ ಬರಬಹುದಾದ ಲಾಭವೆಷ್ಟಿರಬಹುದು? ಅಂದರೆ ಇನ್ನೂ ಬರೆದು ಮುಗಿಯದ ಆ ಪುಸ್ತಕವನ್ನು ಕೊಳ್ಳುವವರು ಎಷ್ಟಿರಬಹುದು? ಅಷ್ಟು ಜನ ಕೊಂಡು ಓದುತ್ತಾರೆ ಎಂಬುದೇ ಸಂತೋಷದ ವಿಷಯ ಅಚ್ಚರಿಯ ವಿಷಯವೂ ಹೌದು. ಏಕೆಂದರೆ ನನ್ನ ಬಳಿಯೇ ಇರುವ ಎಷ್ಟೋ ಕನ್ನಡ ಪುಸ್ತಕಗಳನ್ನು ತೆಗೆದು ಪ್ರಾರಂಭದಲ್ಲಿ ಸಿಗುವ ಪ್ರತಿಗಳ ವಿವರವನ್ನು ನೋಡಿದಾಗ ಬಹಳಷ್ಟು ಪುಸ್ತಕಗಳು 1000 ಎಂದಿವೆ. ದುಂಡಿರಾಜರ ಹನಿಗವನದ ತರಹ ಪುಸ್ತಕಗಳು 2000 ಅಚ್ಚಾಗುತ್ತವೆ. ನಾಲ್ಕೈದು ಕೋಟಿಯಷ್ಟಿರುವ ಕರ್ನಾಟಕದ ಜನಸಂಖ್ಯೆಯಲ್ಲಿ ಜನಪ್ರಿಯ ಪುಸ್ತಕಗಳೂ ಸೇರಿದಂತೆ ಓದುವುದು 2000 ಜನರು ಮಾತ್ರವೇ?? ಸುಮಾರು 17 ಮರು ಮುದ್ರಣಗಳನ್ನು ಕಂಡ ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ಓದಿದ ಅಷ್ಟೂ ಜನರು ಏನಾದರು? ಬೇಂದ್ರೆ, ಬೈರಪ, ಅನಂತಮೂರ್ತಿ, ಮಾಸ್ತಿ, ಮುಂತಾದವರ ಪುಸ್ತಕಗಳನ್ನು ಮುಗಿಬಿದ್ದು ಓದುತ್ತಿದ್ದ ಆ ಓದುವ ಪರಂಪರೆ ಎಲ್ಲಿ ಹೋಯಿತು? ನಮ್ಮ ನಾಯಕರ, ಸಿನಿಮಾ ನಟ ನಟಿಯರ, ಸಮಾಜದ ಪ್ರಮುಖ ವ್ಯಕ್ತಿಗಳ ಮಾತು, ಸಂದರ್ಶನಗಳನ್ನು ನೋಡುತ್ತಿದ್ದರೆ ಅರಿವಾಗುತ್ತದೆ. ಅವರೆಲ್ಲಾ ಹೆಚ್ಚು ಓದುತ್ತಿಲ್ಲ ಎಂಬ ಸಂಗತಿ.
ಈಗ ಎಲ್ಲದಕ್ಕೂ ಟ್ರಾಫಿಕ್, ಕೆಲಸ, ಟಿ.ವಿಯನ್ನು ದೂಷಿಸುವುದು ಅಭ್ಯಾಸವಾಗಿ ಹೋಗಿದೆ ನಮಗೆ. ಇಂದು ಯಾರಾದರೂ ಎಲ್ಲಿಗಾದರೂ ತಡವಾಗಿ ಬಂದರೆ ತಟ್ಟನೆ ಕೊಡುವ ಉತ್ತರ ತುಂಬಾ ಟ್ರಾಫಿಕ್, ಟ್ರಾಫಿಕ್ ಎನ್ನುವುದು ನಿಜವಾದರೂ ಬೆಂಗಳೂರಿನ ಮಟ್ಟಿಗಂತೂ ಇದು ಸುಮಾರು ಹತ್ತು ವರ್ಷದಿಂದ ಇರುವಂಥದ್ದೆ. ಇಂದು ನಾವೆಲ್ಲಿಗೆ ಹೊರಟರೂ ಆ ಟ್ರಾಫಿಕ್ ನಮ್ಮ ಪ್ರಯಾಣದ ಲೆಕ್ಕಚಾರದಲ್ಲಿ ಇದ್ದೆ ಇದೆ. ಆದರೂ ಟ್ರಾಫಿಕ್ಕನ್ನು ಸಮಜಾಯಿಸಿ ಕೊಡುವುದು ಇನ್ನು ಬಿಟ್ಟಿಲ್ಲ. ನಮ್ಮ ಟ್ರಾವೆಲ್ಸ್‌ನ ಡ್ರೈವರುಗಳು, ಕಾರ್ಖಾನೆ, ಕಛೇರಿ, ಶಾಲೆ ವಿದ್ಯಾರ್ಥಿಗಳೆಲ್ಲಾ ತಮ್ಮ ಕೆಲಸ, ಶಾಲೆಗಳಿಗೆ ಸರಿಯಾಗಿಯೇ ಹೋಗುತ್ತಾರೆ, ಏಕೆಂದರೆ ಅಲ್ಲಿಗೆ ಹೋಗುವಾಗಲೆಲ್ಲಾ ಟ್ರಾಫಿಕ್‌ನ ಲೆಕ್ಕಾಚಾರಗಳೊಂದಿಗೆ ನಾವು ಪ್ರಯಾಣ ಮಾಡುವುದು. ಅದೇ ಸಭೆ ಸಮಾರಂಭ, ದೇವಾಲಯ, ಪೂಜೆಗಳಿಗೆ ಹೋಗುವಾಗ ಮಾತ್ರ ತಡವಾಗಿ ಹೋಗುವುದಕ್ಕೆ ಟ್ರಾಫಿಕ್ ನೆಪವಾಗುತ್ತದೆ.
ಅಂತೆಯೇ ಈ ನಮ್ಮ ಓದುವ ಅಭ್ಯಾಸ, ಹವ್ಯಾಸ ಕಡಿಮೆಯಾಗುತ್ತಿರುವುದಕ್ಕೆ ನಾವು ಕೊಡುತ್ತಿರುವ ನೆಪ ಅದೇ. ಕೆಲಸ, ಸಮಯದ ಅಭಾವ ಇತ್ಯಾದಿ. ಆದರೆ ನಿಜಕ್ಕೂ ಓದು ಎನ್ನುವುದರ ಅರ್ಥವೇ ಬದಲಾಗತೊಡಗಿದೆಯೇನೋ ಎಂದೆನಿಸುತ್ತಿದೆ. ಇಂದು ಓದು ಎನ್ನುವುದು ಶಾಲೆಯ ಓದು ಬರಹ ಎನ್ನುವುದಕ್ಕಷ್ಟೇ ಸೀಮಿತವಾಗುತ್ತದೆ. ಅದು ಬಿಟ್ಟರೆ ಓದು ಬೇಕಾಗಿರುವುದು ಮಾಹಿತಿಗಾಗಿ ಮಾತ್ರ. ಹಿಂದೆಲ್ಲಾ ಓದುವುದು ಎನ್ನುವುದಕ್ಕೆ ಅದೆಷ್ಟು ಆಯಾಮಗಳಿದ್ದವು. ಓದು ಜ್ಞಾನಾರ್ಜನೆಯ ಪ್ರಮುಖ ಸಾಧನವಾದರೆ, ಸಂತೋಷಕ್ಕಾಗಿ, ಮನೋರಂಜನೆಗಾಗಿ, ಜೀವನಪ್ರೀತಿ, ಕೊನೆಗೆ ಬೇಸರ ಕಳೆಯುವಿಕೆಗೂ ಮುಖ್ಯವಾದ ಮಾಧ್ಯಮವಾಗಿತ್ತು. ಇವುಗಳ ಜೊತೆ ಜೊತೆಗೆ ಮಾಹಿತಿ, ತೃಪ್ತಿ, ಆತ್ಮವಿಶ್ವಾಸ ಎಲ್ಲವನ್ನೂ ಓದು ನೀಡುತ್ತಿತ್ತು. ಆದರೆ ಇಂದು ಇವಕ್ಕೆಲ್ಲಾ ಬೇರೆ ಬೇರೆ ಮಾಧ್ಯಮಗಳು ಬಂದು ಕೂತಿವೆ. ಜ್ಞಾನ, ಮಾಹಿತಿಗಳು ಕಂಪ್ಯೂಟರ್ ಮೂಲಕ ಬೆರಳ ತುದಿಯಲ್ಲಿವೆ. ಮನೋರಂಜನೆಯ ನೆಪದಲ್ಲಿ ಟಿ.ವಿ. ನಮ್ಮೆನ್ನೆಲ್ಲಾ ಆಳುತ್ತಾ ಮನೆಯಲ್ಲಿ ಕೆಡವಿ ಬೀಳಿಸಿವೆ. ಸಿಗುತ್ತಿರುವ ಸಾವಿರ ಸಾವಿರ ಸಂಬಳದಲ್ಲೇ ತೃಪ್ತಿ, ಆತ್ಮ ವಿಶ್ವಾಸಗಳನ್ನು ಕಂಡುಕೊಳ್ಳುತ್ತಾ, ಸಿಕ್ಕಿದ್ದನ್ನು ಕೊಂಡುಕೊಳ್ಳುತ್ತಿರುವಾಗ ಓದಿನಿಂದ ಸಿಗುವ ಲಾಭವಾದರೂ ಏನು ಎಂಬುದು ಮನಸಿನಾಳದ ಪ್ರಶ್ನೆ.
ಓದುವುದಕ್ಕೆ ಸಮಯವಿಲ್ಲವೆನ್ನುವುದು ಸ್ವಲ್ಪ ಮಟ್ಟಿಗೆ ನಿಜವೆನಿಸಿದರೂ ಅದು ಸುಳ್ಳೂ ಹೌದು. ನಮ್ಮ ಬಹುತೇಕ ಗೆಳೆಯರು ಚಾಟ್‌ಗಳಲ್ಲಿ, ಫೇಸ್ ಬುಕ್ಕಿನಲ್ಲಿ ಟ್ವಿಟ್ಟರ್‌ನಲ್ಲಿ, ಇಂದು ಸಿಗುತ್ತಾರೆ. ಸಿಗುವುದೇನು ಸಾಕಷ್ಟು ಸಮಯ ಅಲ್ಲಿ ಕಳೆಯುತ್ತಾರೆ. ಅದು ಕಂಪ್ಯೂಟರ್‌ನಲ್ಲಿ ಕೆಲಸ ಉದ್ಯೋಗ ಮಾಡುವವರಿಗೆ ಸಿಗುವ ಸೌಲಭ್ಯ. ಕೆಲಸ ಮಾಡುತ್ತಿರುವಂತೆಯೇ ಒಂದು ಸುತ್ತು ಇವೆಲ್ಲದರ ಬಳಿಗೆ ಹೋಗಿ ಬಂದುಬಿಡಬಹುದು. ಅಷ್ಟೇ ಸಮಯದಲ್ಲಿ ಒಂದು ಪುಸ್ತಕವನ್ನು ಓದಲು ಸಾಧ್ಯವಿಲ್ಲ ಅಲ್ಲವೇ, ಅವಕಾಶವೂ ಇಲ್ಲ. ಆದರೆ ಇಂದು ನಾವೆಲ್ಲ ಓದುವುದಿಲ್ಲ ಎನ್ನುವುದಕ್ಕೆ ಸಮಯವಿಲ್ಲವೆನ್ನುವುದು ಮಾತ್ರ ಕಾರಣವೇನಲ್ಲ. ಉದ್ಯೋಗಕ್ಕೆ, ನಮ್ಮ ಮಾಹಿತಿಗಷ್ಟೇ ನಮ್ಮ ಓದು ಸೀಮಿತವಾಗಿದೆಯಷ್ಟೇ.ನಮ್ಮ ಗೆಳೆಯರ ನಡುವಲ್ಲೇ ಒಂದು ವಿಷಯದ ಬಗ್ಗೆ, ಪುಸ್ತಕಗಳ ಬಗ್ಗೆ ಮಾತನಾಡೋಣವೆಂದರೆ ಪುಸ್ತಕ, ಕಾದಂಬರಿ, ಕಥೆಯಿರಲಿ ಪತ್ರಿಕೆ ಮನೆಗೆ ತರೆಸಿ ಓದುವವರೇ ಹತ್ತಕ್ಕಿಂತ ಹೆಚ್ಚಾಗಿ ಸಿಗುವುದು ಕಷ್ಟವಾಗಿದೆ. ಟಿ.ವಿ.ಗಳ ಬ್ರೇಕಿಂಗ್ ನ್ಯೂಸ್‌ಗಳೇ ಇಂದಿನ ಸುದ್ದಿಗಳ ಪ್ರಮುಖ ಮೂಲ. ನಾವೇಕೆ ಓದಬೇಕು? ಓದುವುದರಿಂದ ಬರುವ ಲಾಭವಾದರೂ ಏನು ಎಂಬುದಕ್ಕೆ ನಿಖರವಾದ ಉತ್ತರ ಹೊಳೆಯುತ್ತಿಲ್ಲವಾದರೂ ಒಂದು ಶಾಲೆ, ವಿಶ್ವವಿದ್ಯಾಲಯ ನೀಡುವಂಥ ಜ್ಞಾನ ಸಂಪಾದನೆ ಓದಿನಿಂದಲೂ ಸಾಧ್ಯವಿದೆ. ತಂದೆ ತಾಯಿ, ಕುಟುಂಬ ಮನೆಯ ವಾತಾವರಣದಿಂದ ದೊರಕುವ ಸಂಸ್ಕಾರ ಓದಿನಿಂದಲೂ ಸಾಧ್ಯ. ನಮ್ಮ ಮನೆಯ ಮುಂದಿನ ಕಸಗುಡಿಸುತ್ತಾ ಪಕ್ಕದ ಮನೆಯ ಮುಂದೆ ತಳ್ಳಬಾರದೆಂಬ ಸೂಕ್ಷ್ಮ ಗ್ರಹಿಕೆಗಳು, ರಸ್ತೆಯಲ್ಲಿ ವಾಹನ ಓಡಿಸುವಾಗ ನಮ್ಮ ಬದಿ ಬಿಟ್ಟು ಮತ್ತೊಂದು ಬದಿಗೆ ಹೋದರೆ ಎದುರಿನಿಂದ ಬರುವವರಿಗೆ ತೊಂದರೆಯಾಗುತ್ತದೆ, ಟ್ರಾಫಿಕ್ ಅಡಚಣೆಯಾಗುತ್ತದೆ ಎಂಬ ಸಂವೇದನೆಯುಳ್ಳ ಮನಸ್ಸು, ನೊಂದ ಗೆಳೆಯನಿಗೆ ನೆರವಾಗುವ ಮಿಡಿತ, ಎದುರಿಸುತ್ತಿರುವ ಅನ್ಯಾಯ, ದೌರ್ಜನ್ಯವನ್ನು ಸಣ್ಣದಾಗೆ ಪ್ರತಿಭಟಿಸುವ ತುಡಿತ, ಇಂಥ ಅನೇಕವುಗಳನ್ನು ಪುಸ್ತಕಗಳ ಓದು ನಮಗೆ ಒದಗಿಸಿಕೊಡುತ್ತದೆ. ಓದಿದನ್ನು ಗ್ರಹಿಸಿ, ಅಳವಡಿಸಿಕೊಳ್ಳದಿದ್ದರೆ ಪುಸ್ತಕದ ಬದನೆಕಾಯಿ ಆಗುವುದು ಇದೆ. ಅದು ಮತ್ತೊಂದು ವಿಷಯ. ಇಷ್ಟೆಲ್ಲಾ ಆಗಿ ಏನಾಗಬೇಕಾಗಿದೆ, ಇದರಿಂದ ಜೀವನ ನಡೆವುದೇ? ಜೀವನಕ್ಕೆ ಏನು ಲಾಭ ಎಂಬ ಪ್ರಶ್ನೆ ಬಂದರೆ ಅದಕ್ಕೆ ಉತ್ತರವಿಲ್ಲ. ಓದುವ ರೂಢಿ ರುಚಿ ಬೆಳೆಸಿಕೊಂಡಿರುವ ಹಾಗೆ ಕೇಳುವುದೂ ಇಲ್ಲ. ಬಲ್ಲವನೇ ಬಲ್ಲ ಬೆಲ್ಲದ ರುಚಿ ಎಂಬಂತೆ.
ಒಂದು ಪುಸ್ತಕ, ಕಾದಂಬರಿ, ಆತ್ಮ ಚರಿತ್ರೆಯನ್ನು ಓದುತ್ತಿದ್ದರೆ ಆ ಕಥಾವಸ್ತು, ವ್ಯಕ್ತಿಗೆ ಮೀರಿದ ವಸ್ತುಗಳು ಅದರೊಂದಿಗೆ ನಮ್ಮ ಭಾವನಾ ಪ್ರಪಂಚಕ್ಕೆ ದೊರಕುತ್ತದೆ. ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕೇವಲ ಒಂದು ಹಳ್ಳಿಯ, ಒಂದೆರಡು ಕುಟುಂಬದ, ಒಂದು ಕಾಲದ ಕಥೆಯಾಗದೆ, ಇಡೀ ಮಲೆನಾಡಿನ ಜೀವನ ಶೈಲಿ, ಕಾಡಿನ ಸೊಬಗು, ಭಾಷೆಯ ಸೊಗಡನ್ನು ಅದ್ಭುತವಾಗಿ ತೆರೆದಿಡುತ್ತದೆ. ಮಲೆನಾಡನ್ನು ನೋಡದವನೂ ಸಹಾ ಅಲ್ಲಿನ ಪಾತ್ರಗಳೊಂದಿಗೆ ಅಲ್ಲಿನ ಹೊಲಗದ್ದೆ, ಕಾಡುಗಳಲ್ಲಿ ಓಡಾಡುತ್ತಾ ಮಳೆಯಲ್ಲಿ ನೆಂದಂತ ಅನುಭವ ಸಿಗುತ್ತದೆ. ಒಂದು ಕಾಲದ ಜನರ ಸಾಮಾಜಿಕ, ಆರ್ಥಿಕ, ಸ್ಥಿತಿಗತಿಗಳ ಕಡೆ ಬೆಳಕು ಚೆಲ್ಲುತ್ತದೆ. ಇನ್ನೂ ಅನೇಕ ಸೂಕ್ಷ್ಮ ಸಂಗತಿಗಳು ನಮಗೆ ಕಾಣಸಿಗುತ್ತವೆ. ಇದು ಒಂದು ಕಾದಂಬರಿಯ ಲಾಭ. ಬೈರಪ್ಪನವರ ಭಿತ್ತಿ ಆತ್ಮಕಥೆಯಾದರೂ ಬಾಲಕನೊಬ್ಬನ ತಲ್ಲಣ, ಹತಾಶೆ, ಪ್ರಯತ್ನಗಳ ಜೊತೆ ಜೊತೆಯಲ್ಲೇ ಒಂದು ಕಾಲಘಟ್ಟದ ಸಾಮಾಜಿಕ ಪರಿಸ್ಥಿತಿ, ವ್ಯವಸ್ಥೆ ಎಲ್ಲವನ್ನೂ ಎಳೆ ಎಳೆಯಾಗಿ ಬಿಡಿಸಿಡುತ್ತದೆ. ಒಬ್ಬ ಬರಹಗಾರನ ಪ್ರೇರಣೆ, ಬೆಳವಣಿಗೆ, ಒಂದು ಕೃತಿ ಹುಟ್ಟಿಕೊಳ್ಳುವ, ಹಂತ ಹಂತವಾಗಿ ಬೆಳೆಯುವ, ಅದರ ಹಿಂದಿನ ತಯಾರಿ ಎಲ್ಲವೂ ಅದರಲ್ಲಿ ಸಿಗುತ್ತವೆ. ಅಷ್ಟರ ಮಟ್ಟಿಗೆ ಅದರ ಓದುಗ ಅನುಭವದಲ್ಲಿ ಶ್ರೀಮಂತ. ತೇಜಸ್ವಿಯವರ ಅಣ್ಣನ ನೆನಪು ಪುಸ್ತಕದಲ್ಲಿ ಕುವೆಂಪುರವರು ಒಬ್ಬ ರಾಷ್ಟ್ರಕವಿ ಎನ್ನುವುದಕ್ಕಿಂತ ತಂದೆಯಾಗಿ, ಪತಿಯಾಗಿ, ಕುಲಪತಿಯಾಗಿ, ಬೆಳಗಿನ ದಿನಪತ್ರಿಕೆಗಾಗಿ ಕಾಯುವ ಸಾಮಾನ್ಯವಾಗಿ ನಮಗೆ ಓದಲು ಸಿಗುತ್ತಾರೆ. ಮೈಸೂರು ಹಾಗೂ ಸುತ್ತಮುತ್ತದ ೬೦, ೭೦ ದಶಕದ ಜೀವನ ಹೇಗಿತ್ತು ಎಂಬುದರ ಒಳ ಸುಳಿವು, ಪೇಚಾಟಗಳು ನಮ್ಮ ಅನುಭವಕ್ಕೆ ಸಿಗುತ್ತದೆ. ತೇಜಸ್ವಿಯವರ ಇನ್ನಿತರ ಕಾದಂಬರಿ, ಪುಸ್ತಕಗಳಂತೂ ನಮ್ಮಂಥ ನಗರದವರು ಕಾಣದ, ಇನ್ನೆಂದೂ ನೋಡಲು ಸಾಧ್ಯವಾಗದಂಥ ಅದ್ಭುತ ಪ್ರಪಂಚವನ್ನೆ ತೆರೆದಿಡುತ್ತದೆ. ಒಬ್ಬ ದಲಿತನ, ಸಮಾಜದಲ್ಲಿ ಶೋಷಣೆಗೊಳಗಾದವನ ನೋವು, ಹತಾಶೆ ಸಿದ್ಧಲಿಂಗಯ್ಯ, ದೇವನೂರರ ಕವಿತೆಗಳು ನಮ್ಮ ಮನಸ್ಸಿಗೆ ದಾಟಿಸುತ್ತವೆ, ಸೂಕ್ಷ್ಮ ಕವಿ ಮನಸ್ಸಿನ ತುಂಟತನ ಲಕ್ಷ್ಮಣರಾವ್‌ರವರ ಕವಿತೆಗಳಲ್ಲಿ ಸಿಗುತ್ತವೆ. ಜಿ.ಪಿ. ರಾಜರತ್ನಂರವರ ರತ್ನನ ಪದಗಳು ಮೇಲೆ ಕಣ್ಣಾಡಿಸುತ್ತಿದ್ದಂತೆ ಅವುಗಳಿಗೆ ಸಂಗೀತ ರೂಪ ಕೊಟ್ಟ ಮೈಸೂರು ಅನಂತಸ್ವಾಮಿಯವರ ತಾಳ ಜ್ಞಾನದ ಬಗ್ಗೆ ಆಶ್ಚರ್ಯ ಮೂಡುತ್ತದೆ. ಶಿಶುನಾಳ ಶರೀಫರ ಪದ್ಯಗಳು ಸಿ. ಅಶ್ವತ್ಥರ ಧ್ವನಿಯಲ್ಲಿ ಕಂಡುಕೊಳ್ಳುವ ಪರಿಪೂರ್ಣತೆಗೆ ಮನಸ್ಸು ತುಂಬಿಕೊಳ್ಳುತ್ತದೆ.
ಇನ್ನೂ ನಮ್ಮದೇ ಬೈಬಲಿನ ವಿಷಯಕ್ಕೆ ಬಂದರೆ, ಜಗತ್ತಿನ ಅತಿ ಹೆಚ್ಚು ಮಾರಾಟವಾಗುವ ಪುಸ್ತಕವೆಂಬ ಹೆಗ್ಗಳಿಕೆ ಅದರದು. ಆದರೆ ಬೈಬಲ್ ನಿಜಕ್ಕೂ ಅತಿ ಹೆಚ್ಚು ಮಂದಿ ಓದುವ ಪುಸ್ತಕವೇ ಎಂಬ ಪ್ರಶ್ನೆಯೂ ಜೊತೆಗೇ ಕೇಳಿ ಬರುತ್ತವೆ. ಇಂದಿಗೂ ಬೈಬಲನ್ನು ನಾವು ಒಂದು ಧಾರ್ಮಿಕ ಅಥವಾ ಆಧ್ಯಾತ್ಮಿಕ ನೆಲೆಯಲ್ಲಿ ಮಾತ್ರ ಓದುತ್ತೇವೆ. ಆದರೆ ಅದನ್ನು ಮೀರಿದ ಮೌಲಿಕ,
ಮಾನವೀಯ, ಸಾಹಿತ್ಯಿಕ ಆಯಾಮಗಳು ಅದರಲ್ಲಿದೆ ಎಂಬ ಸತ್ಯವನ್ನು ನಾವು ಮನಗಾಣಬೇಕಾಗಿದೆ. ನಮ್ಮ ಓದುವ ಅಭ್ಯಾಸ ಹಾಗೂ ಹವ್ಯಾಸ ಇಲ್ಲಿ ಮತ್ತೆ ಕೆಲಸಕ್ಕೆ ಬರುತ್ತದೆ. ಕುವೆಂಪು, ಜಿ.ಎಸ್. ಶಿವರುದ್ರಪ್ಪ, ಖಲೀಲ್ ಗಿಬ್ರಾನರ ಬರಹಗಳಲ್ಲಿ ಯೇಸು ಕ್ರಿಸ್ತನ ಜೀವನ ಬೋಧನೆಯ ಅನೇಕ ಒಳನೋಟಗಳು ಕಾಣಸಿಗುತ್ತವೆ. ಯು.ಆರ್. ಅನಂತಮೂರ್ತಿ, ಎಚ್.ಎಸ್. ವೆಂಕಟೇಶ್ ಮೂರ್ತಿ, ಸಾ.ಶಿ. ಮರುಳಯ್ಯನವರು ಮುಂತಾದವರು ಯೇಸುಕ್ರಿಸ್ತನನ್ನು ಅರ್ಥ ಮಾಡಿಕೊಂಡಿರುವ ಪರಿಯನ್ನು ಅವರ ಭಾಷಣಗಳಲ್ಲಿ ಕೇಳಿ ಅಚ್ಚರಿಗೊಂಡಿದ್ದೇನೆ. ಸಾ.ಶಿ. ಮರುಳಯ್ಯನವರಂತೂ ತಮ್ಮ ಒಂದು ಭಾಷಣದಲ್ಲಿ ಯೇಸು ಮಾನವನನ್ನು ಉಪ್ಪಿಗೆ ಹೋಲಿಸಿದರ ಮಹತ್ವವನ್ನು ಎಳೆ ಎಳೆಯಾಗಿ ಬಿಡಿಸಿ ವಿವರಿಸಿದ್ದು ಇಂದಿಗೂ ಯಾವುದೇ ಪ್ರಬೋಧನೆಗಿಂತ ಹೆಚ್ಚು ನೆನಪಿದೆ. ನಮ್ಮಲ್ಲೂ ಫಾ. ಅಂತಪ್ಪ, ಚಸರಾ, ವಿಲಿಯಂ, ನಾ. ಡಿಸೋಜ, ತಲ್ವಾಡಿ, ಶ್ರೀ.ಸ್ವಾಮಿ, ನಂದಗಾವ್, ಮರಿಜೋಸೆಫ್ ಮುಂತಾದವರು ಬರಹಗಳು ನಮಗೆ ಸಿಗುತ್ತವೆ. ಇದೆಲ್ಲವೂ ಅವರಿಗೆ ಸಾಧ್ಯವಾಗಿರುವುದು ಬೈಬಲ್ಲನ್ನು ಸಹಾ ಒಂದು ಉನ್ನತವಾದ ಗ್ರಂಥದಂತೆ ಓದುವ, ಅಭ್ಯಾಸಿಸುವ, ಅವರ ಅಧ್ಯಯನಶೀಲ, ಸಂವೇದನಾಶೀಲ ಮನಸ್ಸಿನಿಂದ. ಆ ಮನಸ್ಸು ದೊರಕುವುದು ಬಹುಮಟ್ಟಿಗೆ ಓದಿನಿಂದಲೇ.
ಹಾಗೆಂದ ಮಾತ್ರಕ್ಕೆ ಓದು ಎಲ್ಲವನ್ನು ನೀಡುತ್ತದೆ, ಅದೇ ಅಂತಿಮ ಎನ್ನುವುದೂ ತಪ್ಪಾಗುತ್ತದೆಯೇನೋ. ಓದು ಬರಹವಿಲ್ಲದ ನಮ್ಮ ಪೂರ್ವಜರು, ಹಿರಿಯರು ಸಹಾ ಸಜ್ಜನರು,ಸಾಂಸ್ಕೃತಿಕ ರಾಯಭಾರಿಗಳು,ಸಂವೇದನಾಶೀಲರಾಗಿದ್ದರು.ಆದರೆ ಅವೆಲ್ಲವೂ ಅವರಿಗೆ ತಮ್ಮ ಜೀವನಾನುಭವದಿಂದ, ತಮ್ಮ ಹಿರಿಯರಿಂದ ಪರಂಪರೆಯಿಂದ ಬಳುವಳಿಯಾಗಿಯೂ ಬಂದಿತ್ತು. ಮನುಷ್ಯ ಹೆಚ್ಚು ಸಮಾಜಮುಖಿಯಾಗಿದ್ದ ಹಾಗೂ ಇತರರೊಡನೆ, ಪರಿಸರದೊಡನೆ ಹೆಚ್ಚು ಒಡನಾಟವಿಟ್ಟುಕೊಂಡಿದ್ದ ಸಂದರ್ಭವಾಗಿತ್ತು. ಒಂದು ತುಂಬು ಕುಟುಂಬದಲ್ಲಿ ಬೆಳೆದ ಮಗುವಿನ ಮೇಲೆ ತಂದೆ ತಾಯಿ ಮಾತ್ರವಲ್ಲದೆ, ಅದರ ಅಜ್ಜನನಡುವಳಿಕೆ, ಅಜ್ಜಿಯ ಲಾಲನೆ, ಕಥೆಗಳು, ದೊಡ್ಡಪ್ಪ, ಚಿಕ್ಕಪ್ಪರ ಮಾತು, ಹಾಸ್ಯಪ್ರಜ್ಞೆ ಎಲ್ಲವೂ ಪ್ರಭಾವ ಬೀರುತ್ತಿತ್ತು. ಆದರೆ ಇಂದಿನ ಮಕ್ಕಳಿಗೆ, ಯುವಕರಿಗೆ ಆ ಸೌಲಭ್ಯಗಳಿಲ್ಲ. ಆಧುನಿಕ ಜೀವನದ ರಭಸದಲ್ಲಿ ಇವೆಲ್ಲವನ್ನು ಇನ್ನೆಲ್ಲಿಯಾದರೂ ನೋಡಿ, ಕೇಳಿ, ಓದಿ ಪಡೆಯಬೇಕಾಗಿದೆ. ಅದಕ್ಕೆ ಓದು ಒಂದು ಉತ್ತಮ ಸಾಧನವಾಗಬಹುದೆಂಬ ಒಂದು ಸಣ್ಣ ಆಸೆ ನಮ್ಮದಾಗಬೇಕು.
-ಪ್ರಶಾಂತ್ ಇಗ್ನೇಶಿಯಸ್
Saturday, 31 August 2013
ಬೆಂಗ್ಳೂರಿನ್ ಸಾವಾಸ ಟ್ರಾಫಿಕ್ಕಿನ್ ವನವಾಸ
ಮೊನ್ನೆ ಭಟ್ಟರ ಡ್ರಾಮ ಚಿತ್ರದ ಹಾಡು ಕೇಳುತ್ತಾ
ಮತ್ತೊಂದು ಟ್ರಾಫಿಕ್ಕು ಜ್ಯಾಮಿನಲ್ಲಿ ನಿಂತಾಗ
ಹುಟ್ಟಿಕೊಂಡ ಹಾಡು...
ಡ್ರಾಮದ ತುಂಡ್ ಹೈಕ್ಳ ಸಾವಾಸ ಧಾಟಿಯಲ್ಲಿ
--------------------------

ಲಕ್ಕಂಡಿ ಕಡ್ಡಿಪುಡಿ ಒನೆವೇ ನೋ ಟೂವೇ ನೋ
ಲಂಗುಲಗಾಮಿಲ್ಲದೆ ಓಡ್ಸೋ ಫಕೀರ
ರಾಂಗ್ ಸೈಡಲ್ಲ್ ಓಡ್ಸೋನೇ ಹಮ್ಮೀರ
ಕಾರೋರು ಬಿಡೊಲ್ಲ ಬೈಕೋರು ಬಗ್ಗಲ್ಲ
ಮಾಡ್ಬೇಡ ಸನ್ನೆ ನುಗ್ತಾಯಿರು ಸುಮ್ನೆ
ವಾಲಾಡು ಸವಾರ ವಾಲಾಡು
ಪೆಟ್ರೋಲ್ ಹಾಕ್ಕೊಂಡ್.... ತೇಲಾಡು
ಹಾಡು
ಬೆಂಗ್ಳೂ..ರಿನ್ ಸಾವಾಸ ಟ್ರಾಫ್ಹಿಕ್ಕಿನ್ ವನವಾಸ
ಬಯ್ಯ್ ಬೇಡಿ ಪೋಲಿಸಾ
ಅವ್ರೂ ನಮಂಗ್ ನರ್ ಮನಸಾ
ರೋಡು ಹಾಳು ಮಾಡಕ್ಕೆ ಮೆಟ್ರೋನ ಮಾಡ್ತಾವ್ರೆ
ಇನ್ನೂ ಒಂದೇ ಒಂದು ಫೇಸು ಮಾತ್ರ ಮುಗ್ಸವ್ರೆ
ಅಮುಕಿ ಅಮುಕಿ ಕ್ಲಚ್ಚು ಕೈಯಿ ನೋಯ್ತದೆ
ಹಿಡ್ದು ಹಿಡ್ದೂ ಬ್ರೇಕು ಕಾಲು ಹೊಯ್ತದೆ
ಪ್ರತಿ ಜ್ಯಾಮಿನಲ್ಲೂ ವಯಸ್ಸು ಆಗ್ತಾದೆ
ಹೊಳೇಲಿ ಹುಣ್ಸೆ ಹಣ್ಣು ತೊಳ್ದಂಗಾಯ್ತಾದೆ
ಟ್ರ್ರಾಫಿಕ್ಕ್ ನ ಸಾವಾಸ ಮೂರ್‍ಹೊತ್ತು ವನವಾಸ
(೧)
ಎಲ್ಲಿ ನುಗ್ಗಕಾಗ್ಗುತ್ತೋ ಅದೇ ರೋಡು
ಇಲ್ಲಿ ಡ್ರೈವಿಂಗು ಲೈಸನ್ಸು ಬೇರೆ ಕೇಡು
ಮಾಡೊಲ್ಲ ರೂಲ್ಸು ಇಲ್ಲಿ ಯಾರೂ ಫಾಲೋ
ನಾಯಿ ಹಸು ಬೆಕ್ಕುಗಳೇ ಎಷ್ಟೋ ಮೇಲೋ
ಬೆಳಗಾಗೆದ್ದು ಆಫೀಸ್ ಗೆ ಕಾರಿನಲ್ಲಿ ಹೊಂಟರೆ
ಹಳ್ಳಿ ಎತ್ತಿನ್ ಗಾಡಿನೇ ಎಷ್ಟೋ ವಾಸಿ ಅಂತಾರೆ
ಗಾಳಿನಾ ತೆಗ್ದುಕೊಂಡ್ರೆ ಮೂಗು ನೊಯ್ತದೆ
ಹೊಗೆಗೆ ಕಣ್ಣು ಕೂಲಿಂಗ್ ಗ್ಲಾಸು ಕೇಳ್ತದೆ
ಎದೆಯ ಗೂಡಿನಲ್ಲಿ ಸದ್ದು ಕೇಳ್ತದೆ
ಉಬ್ಸಕ್ಕೆ ಅಲ್ಲಿ ಗೊರ ಗೊರ ಅಂತದೆ
(೨)
ಜಾಗಾನೇ ಕೊಡೊದಿಲ್ಲ ಫೋರ್ ವೀಲರ್‍ಸು
ಪುಟ್ಪಾತಿಗೆ ಹಾರುತ್ತಿವೆ ಟೂ ವೀಲರ್‍ಸು
ಬೇಕಿಲ್ಲ ಪ್ರಳಯಕ್ಕೆ ಕಾಯೋದಿನ್ನು
ಟ್ರಾಫಿಕ್ಕೆ ಮುಳುಗಿಸುತ್ತೆ ಊರನ್ನು
ಮಳೆ ಗಿಳೆ ಬಂದಾಗ ಗುಂಡಿಗಳ ರಾದ್ಧಾಂತ
ಜ್ಯಾಮಿನಲ್ಲಿ ನಿಂತಾಗ ಎಲ್ರ ಬಾಯ್ಲೂ ವೇದಾಂತ
ಪ್ರತಿ ಸಿಗ್ನಲ್ಲಿನಲ್ಲೂ ರೆಡ್ಡು ಇರ್‍ತದೆ
ಪರಮಾತ್ಮ ಕಣ್ಣು ಬಿಟ್ರೆ ಗ್ರೀನು ಸಿಗ್ತದೆ
ರಾಂಗೂ ಸೈಡಿನಿಂದ ಗಾಡಿ ಬರ್‍ತದೆ
ನಿಮ್ಗೆ ಟಚ್ಚು ಕೊಟ್ಟು ಮುಂದೆ ಹೋಯ್ತದೆ
-ಪ್ರಶಾಂತ್ ಇಗ್ನೇಷಿಯಸ್
ಮತ್ತೊಂದು ಟ್ರಾಫಿಕ್ಕು ಜ್ಯಾಮಿನಲ್ಲಿ ನಿಂತಾಗ
ಹುಟ್ಟಿಕೊಂಡ ಹಾಡು...
ಡ್ರಾಮದ ತುಂಡ್ ಹೈಕ್ಳ ಸಾವಾಸ ಧಾಟಿಯಲ್ಲಿ
--------------------------

ಲಕ್ಕಂಡಿ ಕಡ್ಡಿಪುಡಿ ಒನೆವೇ ನೋ ಟೂವೇ ನೋ
ಲಂಗುಲಗಾಮಿಲ್ಲದೆ ಓಡ್ಸೋ ಫಕೀರ
ರಾಂಗ್ ಸೈಡಲ್ಲ್ ಓಡ್ಸೋನೇ ಹಮ್ಮೀರ
ಕಾರೋರು ಬಿಡೊಲ್ಲ ಬೈಕೋರು ಬಗ್ಗಲ್ಲ
ಮಾಡ್ಬೇಡ ಸನ್ನೆ ನುಗ್ತಾಯಿರು ಸುಮ್ನೆ
ವಾಲಾಡು ಸವಾರ ವಾಲಾಡು
ಪೆಟ್ರೋಲ್ ಹಾಕ್ಕೊಂಡ್.... ತೇಲಾಡು
ಹಾಡು
ಬೆಂಗ್ಳೂ..ರಿನ್ ಸಾವಾಸ ಟ್ರಾಫ್ಹಿಕ್ಕಿನ್ ವನವಾಸ
ಬಯ್ಯ್ ಬೇಡಿ ಪೋಲಿಸಾ
ಅವ್ರೂ ನಮಂಗ್ ನರ್ ಮನಸಾ
ರೋಡು ಹಾಳು ಮಾಡಕ್ಕೆ ಮೆಟ್ರೋನ ಮಾಡ್ತಾವ್ರೆ
ಇನ್ನೂ ಒಂದೇ ಒಂದು ಫೇಸು ಮಾತ್ರ ಮುಗ್ಸವ್ರೆ
ಅಮುಕಿ ಅಮುಕಿ ಕ್ಲಚ್ಚು ಕೈಯಿ ನೋಯ್ತದೆ
ಹಿಡ್ದು ಹಿಡ್ದೂ ಬ್ರೇಕು ಕಾಲು ಹೊಯ್ತದೆ
ಪ್ರತಿ ಜ್ಯಾಮಿನಲ್ಲೂ ವಯಸ್ಸು ಆಗ್ತಾದೆ
ಹೊಳೇಲಿ ಹುಣ್ಸೆ ಹಣ್ಣು ತೊಳ್ದಂಗಾಯ್ತಾದೆ
ಟ್ರ್ರಾಫಿಕ್ಕ್ ನ ಸಾವಾಸ ಮೂರ್‍ಹೊತ್ತು ವನವಾಸ
(೧)
ಎಲ್ಲಿ ನುಗ್ಗಕಾಗ್ಗುತ್ತೋ ಅದೇ ರೋಡು
ಇಲ್ಲಿ ಡ್ರೈವಿಂಗು ಲೈಸನ್ಸು ಬೇರೆ ಕೇಡು
ಮಾಡೊಲ್ಲ ರೂಲ್ಸು ಇಲ್ಲಿ ಯಾರೂ ಫಾಲೋ
ನಾಯಿ ಹಸು ಬೆಕ್ಕುಗಳೇ ಎಷ್ಟೋ ಮೇಲೋ
ಬೆಳಗಾಗೆದ್ದು ಆಫೀಸ್ ಗೆ ಕಾರಿನಲ್ಲಿ ಹೊಂಟರೆ
ಹಳ್ಳಿ ಎತ್ತಿನ್ ಗಾಡಿನೇ ಎಷ್ಟೋ ವಾಸಿ ಅಂತಾರೆ
ಗಾಳಿನಾ ತೆಗ್ದುಕೊಂಡ್ರೆ ಮೂಗು ನೊಯ್ತದೆ
ಹೊಗೆಗೆ ಕಣ್ಣು ಕೂಲಿಂಗ್ ಗ್ಲಾಸು ಕೇಳ್ತದೆ
ಎದೆಯ ಗೂಡಿನಲ್ಲಿ ಸದ್ದು ಕೇಳ್ತದೆ
ಉಬ್ಸಕ್ಕೆ ಅಲ್ಲಿ ಗೊರ ಗೊರ ಅಂತದೆ
(೨)
ಜಾಗಾನೇ ಕೊಡೊದಿಲ್ಲ ಫೋರ್ ವೀಲರ್‍ಸು
ಪುಟ್ಪಾತಿಗೆ ಹಾರುತ್ತಿವೆ ಟೂ ವೀಲರ್‍ಸು
ಬೇಕಿಲ್ಲ ಪ್ರಳಯಕ್ಕೆ ಕಾಯೋದಿನ್ನು
ಟ್ರಾಫಿಕ್ಕೆ ಮುಳುಗಿಸುತ್ತೆ ಊರನ್ನು
ಮಳೆ ಗಿಳೆ ಬಂದಾಗ ಗುಂಡಿಗಳ ರಾದ್ಧಾಂತ
ಜ್ಯಾಮಿನಲ್ಲಿ ನಿಂತಾಗ ಎಲ್ರ ಬಾಯ್ಲೂ ವೇದಾಂತ
ಪ್ರತಿ ಸಿಗ್ನಲ್ಲಿನಲ್ಲೂ ರೆಡ್ಡು ಇರ್‍ತದೆ
ಪರಮಾತ್ಮ ಕಣ್ಣು ಬಿಟ್ರೆ ಗ್ರೀನು ಸಿಗ್ತದೆ
ರಾಂಗೂ ಸೈಡಿನಿಂದ ಗಾಡಿ ಬರ್‍ತದೆ
ನಿಮ್ಗೆ ಟಚ್ಚು ಕೊಟ್ಟು ಮುಂದೆ ಹೋಯ್ತದೆ
-ಪ್ರಶಾಂತ್ ಇಗ್ನೇಷಿಯಸ್
Wednesday, 26 June 2013
ಸ್ವರ್ಗದ ಬಾಗಿಲು
ಇನ್ನೇನು ಮೂರೇ ಜನ
ನನ್ನ ಮುಂದೆ ಸಾಲಲ್ಲಿ ಇದ್ದವರು
ನನ್ನಂತೆಯೇ ನ್ಯಾಯ ತೀರ್ಪಿಗಾಗಿ
ಸ್ವರ್ಗದ ಬಾಗಿಲಲ್ಲಿ ನಿಂತವರು
ನನ್ನ ಮನದಲ್ಲಾವುದೋ ಅನಂದ
ಸಂತೋಷ ಸಮಾಧಾನ
ಭೂಲೋಕದ ಬಾಳಲ್ಲಿ ಉತ್ತಮ
ಕ್ರೈಸ್ತನಾಗಿಯೇ ಬದುಕಿದ್ದೆ
ಎಂಬ ಬಿಗುಮಾನ
ದಿನವೂ ವಾಕ್ಯವ ಓದಿ ಜಪಸರ ಮಾಡಿ
ಪೂಜೆಗೆ ಹೋಗಿ ಕಾಣಿಕೆ ಹಾಕಿ
ಗುರುಗಳಿಗೆ ಕೈ ಮುಗಿದು ಕ್ಷಮೆ ಬೇಡಿದ್ದೆ
ಸಂತರ ಜೀವನ ಓದಿಕೊಂಡಿದ್ದೆ
ಸ್ವರ್ಗದ ಸಾಲು ಕಿರಿದಾದಂತೆ
ಕರ್ತನ ಕಾಣಲು ಕಾತುರನಾದಂತೆ
ಮಗ್ಗುಲಲ್ಲಿ ಪಾಪಿಗಳ ಸಾಲು
ಅಳುವವರು ಗೋಳಾಡುವವರು
ಕ್ಷಮೆ ಬೇಡುತ್ತಾ ಪ್ರಲಾಪಿಸುತ್ತಿರುವವರು
ಆ ಕಡೆ ಕಣ್ಣಾಯಿಸುತ್ತಿದ್ದಂತೆ
ನಿಂತಿದ್ದವನು ನನ್ನದೇ
ಕಛೇರಿಯ ಸಹದ್ಯೋಗಿ ಗೆಳೆಯ
ದಿನವೂ ಕಂಡು ಒಟ್ಟಿಗೆ ಉಂಡು
ಕೆಲಸ ಮಾಡಿ ನಗುತ್ತಾ ಇದ್ದವರು
ನಾನೂ ಅವನು.
ಇಂದು ತೀರ್ಪಿಗಾಗಿ ಮತ್ತೊಂದು
ಸಾಲಿನಲ್ಲಿ ಕಾಯುತ್ತಿದ್ದ ಅವನು
ದಿನವೂ ಸಿಕ್ಕಾಗ ಜೊತೆ ಜೊತೆ ನಕ್ಕಾಗ
ತೋರಲಿಲ್ಲವೇಕೆ ದೇವರ ನನಗೆ?
ಪ್ರತಿ ದಿನ ಪ್ರತಿ ವಾರ ಹೋಗುವಾಗ
ಗುಡಿಗೆ ಕರೆಯಲಿಲ್ಲ ನನ್ನೇಕೆ?
ನಿನ್ನಂತೆ ಸ್ವರ್ಗ ಭಾಗ್ಯವ ಹೊಂದಲು
ಕರ್ತನ ಕಾಣಲು
ಅಣಿ ಮಾಡಲಿಲ್ಲ ನನ್ನೇಕೆ
ಎಂದು ನನ್ನ ನೋಡಿ
ಅಲ್ಲಿಂದಲೇ ಕೂಗುತ್ತಿದವನಿಗೆ
ಮುಖ ತೋರಲಾಗದೆ ತಲೆ ಬಾಗಿದೆ
ಇನ್ನೂ ಒಬ್ಬರೇ ನನ್ನ ಮುಂದೆ ಸಾಲಲ್ಲಿ
ಗೆಳೆಯ ಮಾತ್ರ ಇನ್ನಷ್ಟು
ಪ್ರಶ್ನೆಗಳನ್ನು ಕೇಳುತ್ತಿದ್ದ
ತಡೆಯಲಾರದಾಯಿತು ನನಗೆ
ಎದೆಯ ಭಾರಕ್ಕೆ ಕುಸಿಯುವಂತಾದೆ
ಬಿದ್ದೆ.........
ಎದ್ದಾಗ ಕಣ್ಣುಬಿಟ್ಟಾಗ..
ಕನಸ್ಸಾಗಿತ್ತು ಅದು
ಅದರೂ ಮನಸ್ಸಿಗೆ ಅದೇ ಭಾರ
ಖಾಲಿತನ
ಅರಿತೆ ಅಂದೇ,.....
ನನ್ನ ಕರ್ತ ನನ್ನ ದೇವ
ಅತನ ವಾಕ್ಯ ಶಿಲುಬೆ ತ್ಯಾಗವೆಲ್ಲಾ
ಗುಟ್ಟಲ್ಲ, ನನ್ನದು ಮಾತ್ರವಲ್ಲ
ಹಂಚದೆ ಹರಡದೆ
ನನ್ನ ಸ್ವರ್ಗ ಪೂರ್ತಿಯಲ್ಲ
-ಪ್ರಶಾಂತ್ ಇಗ್ನೇಷಿಯಸ್
(ಇಂಗ್ಲೀಷ್ ಬರಹವೊಂದರ ಸ್ಪೂರ್ತಿ)!
ನನ್ನ ಮುಂದೆ ಸಾಲಲ್ಲಿ ಇದ್ದವರು
ನನ್ನಂತೆಯೇ ನ್ಯಾಯ ತೀರ್ಪಿಗಾಗಿ
ಸ್ವರ್ಗದ ಬಾಗಿಲಲ್ಲಿ ನಿಂತವರು
ನನ್ನ ಮನದಲ್ಲಾವುದೋ ಅನಂದ
ಸಂತೋಷ ಸಮಾಧಾನ
ಭೂಲೋಕದ ಬಾಳಲ್ಲಿ ಉತ್ತಮ
ಕ್ರೈಸ್ತನಾಗಿಯೇ ಬದುಕಿದ್ದೆ
ಎಂಬ ಬಿಗುಮಾನ
ದಿನವೂ ವಾಕ್ಯವ ಓದಿ ಜಪಸರ ಮಾಡಿ
ಪೂಜೆಗೆ ಹೋಗಿ ಕಾಣಿಕೆ ಹಾಕಿ
ಗುರುಗಳಿಗೆ ಕೈ ಮುಗಿದು ಕ್ಷಮೆ ಬೇಡಿದ್ದೆ
ಸಂತರ ಜೀವನ ಓದಿಕೊಂಡಿದ್ದೆ
ಸ್ವರ್ಗದ ಸಾಲು ಕಿರಿದಾದಂತೆ
ಕರ್ತನ ಕಾಣಲು ಕಾತುರನಾದಂತೆ
ಮಗ್ಗುಲಲ್ಲಿ ಪಾಪಿಗಳ ಸಾಲು
ಅಳುವವರು ಗೋಳಾಡುವವರು
ಕ್ಷಮೆ ಬೇಡುತ್ತಾ ಪ್ರಲಾಪಿಸುತ್ತಿರುವವರು
ಆ ಕಡೆ ಕಣ್ಣಾಯಿಸುತ್ತಿದ್ದಂತೆ
ನಿಂತಿದ್ದವನು ನನ್ನದೇ
ಕಛೇರಿಯ ಸಹದ್ಯೋಗಿ ಗೆಳೆಯ
ದಿನವೂ ಕಂಡು ಒಟ್ಟಿಗೆ ಉಂಡು
ಕೆಲಸ ಮಾಡಿ ನಗುತ್ತಾ ಇದ್ದವರು
ನಾನೂ ಅವನು.
ಇಂದು ತೀರ್ಪಿಗಾಗಿ ಮತ್ತೊಂದು
ಸಾಲಿನಲ್ಲಿ ಕಾಯುತ್ತಿದ್ದ ಅವನು
ದಿನವೂ ಸಿಕ್ಕಾಗ ಜೊತೆ ಜೊತೆ ನಕ್ಕಾಗ
ತೋರಲಿಲ್ಲವೇಕೆ ದೇವರ ನನಗೆ?
ಪ್ರತಿ ದಿನ ಪ್ರತಿ ವಾರ ಹೋಗುವಾಗ
ಗುಡಿಗೆ ಕರೆಯಲಿಲ್ಲ ನನ್ನೇಕೆ?
ನಿನ್ನಂತೆ ಸ್ವರ್ಗ ಭಾಗ್ಯವ ಹೊಂದಲು
ಕರ್ತನ ಕಾಣಲು
ಅಣಿ ಮಾಡಲಿಲ್ಲ ನನ್ನೇಕೆ
ಎಂದು ನನ್ನ ನೋಡಿ
ಅಲ್ಲಿಂದಲೇ ಕೂಗುತ್ತಿದವನಿಗೆ
ಮುಖ ತೋರಲಾಗದೆ ತಲೆ ಬಾಗಿದೆ
ಇನ್ನೂ ಒಬ್ಬರೇ ನನ್ನ ಮುಂದೆ ಸಾಲಲ್ಲಿ
ಗೆಳೆಯ ಮಾತ್ರ ಇನ್ನಷ್ಟು
ಪ್ರಶ್ನೆಗಳನ್ನು ಕೇಳುತ್ತಿದ್ದ
ತಡೆಯಲಾರದಾಯಿತು ನನಗೆ
ಎದೆಯ ಭಾರಕ್ಕೆ ಕುಸಿಯುವಂತಾದೆ
ಬಿದ್ದೆ.........
ಎದ್ದಾಗ ಕಣ್ಣುಬಿಟ್ಟಾಗ..
ಕನಸ್ಸಾಗಿತ್ತು ಅದು
ಅದರೂ ಮನಸ್ಸಿಗೆ ಅದೇ ಭಾರ
ಖಾಲಿತನ
ಅರಿತೆ ಅಂದೇ,.....
ನನ್ನ ಕರ್ತ ನನ್ನ ದೇವ
ಅತನ ವಾಕ್ಯ ಶಿಲುಬೆ ತ್ಯಾಗವೆಲ್ಲಾ
ಗುಟ್ಟಲ್ಲ, ನನ್ನದು ಮಾತ್ರವಲ್ಲ
ಹಂಚದೆ ಹರಡದೆ
ನನ್ನ ಸ್ವರ್ಗ ಪೂರ್ತಿಯಲ್ಲ
-ಪ್ರಶಾಂತ್ ಇಗ್ನೇಷಿಯಸ್
(ಇಂಗ್ಲೀಷ್ ಬರಹವೊಂದರ ಸ್ಪೂರ್ತಿ)!
Thursday, 9 May 2013
ಬೇಸಿಗೆ ತುಂಬು ಬಿಡುವಿಲ್ಲದ ಆಟಗಳು
ªÀÄÈvÀÄåAdAiÀĤUÉ E£ÀÄß §gÉÆÃ§j MAzÀÄ wAUÀ¼ÀÄ ¸Á«®è. JAxÀ ¸ÁºÀ¸ÀUÀ¼ÀÄ, zÀĸÁìºÀ¸ÀzÀ C£ÀĨsÀªÀUÀ¼ÁzÀgÀÆ
CrجĮè. Gj ©¹°£À gÀhļÀ CVßAiÀÄAvÀºÀ ¥ÀjÃPÉëAiÀÄ vÁ¥À DVgÀ¯ÁgÀzÀÄ JAzÀÄ ¤zsÀðj¹
DVgÀÄwÛvÀÄÛ. E£ÉߤzÀÝgÀÄ DqÀÄ ªÀÄÄlÖzÀ ¸ÉƦà®è DlªÁqÀzÀ ªÀÄPÀ̽®è.
-ಸಂತೋಷ್ ಇನ್ನಾಸಿ.
________________
¥ÀæwAiÉÆAzÀÄ
Hj£À®Æè «²µÀÖ ±ÉʰAiÀÄ DlUÀ¼ÀÄ EzÉÝà EgÀÄvÀÛªÉ. £ÀªÀÄä Hj£À®Æè CzÀÄ
¸ÁªÀiÁ£ÀåªÁVvÀÄÛ. £ÀªÀÄä ªÀÄzsÉå CµÉÖ£ÀÆ «Që¥ÀÛªÁV PÁt¢zÀÝgÀÆ PÁ¯ÁAvÀgÀzÀ°è
£ÀªÀÄä ¸ÀägÀuÉAiÀÄ°è ¥ÀļÀQvÀgÀ£ÁV¸ÀÄvÁÛ EgÀÄvÀÛªÉ. D DlUÀ¼ÀÄ ºÉZÀÄÑ
ªÉÄ®ÄPÀĺÁPÀĪÀAvÁUÀĪÀÅzÀÄ F ¨ÉùUÉAiÀİèAiÉÄÃ. ªÀļÉUÁ®zÀ ºÉÆ®UÀ¼À°è
vÉ£ÉPÁAiÀÄĪÁUÉ, ¨ÉùUÉUÁ®zÀ §AiÀÄ®°è DlUÀ¼ÀÄ CqÀPÁ¬Ä¹PÉÆ¼ÀÄîwÛzÀªÀÅ. “Dl MA¢zÀÝgÉ
¸ÁPÀÄ Hl ¨ÉÃqÀ ¤zÉÝ ¨ÉÃqÀ” vÁAiÀÄA¢gÀÄ vÀªÀÄä ªÀÄPÀ̼À£ÀÄß
¥ÀjZÀ¬Ä¸ÀĪÀÅzÉ ºÁUÉ. CzÀÄ DlzÀ vÁPÀvÀÄÛ ºËzÀÄ. DlzÀ ¸ÀÄVÎ JAzÀgÉ ¨ÉùUÉAiÉÄ. D
¨ÉùUÉUÉ eÁvÀPÀ ¥ÀQëAiÀÄAvÉ PÁAiÀÄÄwÛzÀÄzÀÄ MAzÀÄ PÁ®.
¨ÉùUÉ MAzÀÄ jÃwAiÀÄ
AiÀÄÄUÁ¢ vÀgÀºÀ. ¥ÀjPÉë ªÀÄvÀÄÛ DlUÀ¼À ¨ÉêÀÅ ¨É®è. ¥ÀjPÉëAiÀÄ PÀlÖPÀqÉAiÀÄ
¢£ÀªÀAvÀÆ ¸ÀAPÀæªÀÄt¢£À. ¸ÀÆAiÀÄð vÀ£Àß ¥ÀxÀ §zÀ°¹zÀ ºÁUÉ. CµÀÄÖ ¢£ÀªÉ®è ±ÀæzÉÞ¬ÄAzÀ
PÀÆvÀÄ ¥ÀjÃPÉë§gÉzÀªÀ£À ²¸ÀÄÛ ¸ÀAAiÀĪÀÄ DlzÀ PÀ£ÀªÀjPÉAiÀÄ°è ªÀÄÄgÀÄPÉÆAqÀÄ
©¢ÝgÀÄvÀÛzÉ. JµÀÖgÀ ªÀÄnÖUÉ JAzÀgÉ ªÀµÀðªÉ®è eÉÆÃ¥Á£À ªÀiÁrzÀ ¥ÀĸÀÛPÀUÀ¼ÀÄ
ªÀÄvÀÄÛ CzÀgÀ ¥ÁoÀUÀ¼ÀÄ ªÀĸÀÛPÀ¢AzÀ delate ªÀiÁr, CªÀ£Éß®è ºÀ¼É PÀ§Ú ¸ÁªÀiÁ£ï vÀÄA§ÄªÀ
vÀPÀÌrUÉ vÀÆV©qÀÄwzÉÝêÀÅ. CzÀÄ PÉêÀ® MAzÀÄ »r §mÁtÂUÉ. D §mÁtÂVAvÀ ªÀÄÄRåªÁV
MAzÀÄ ªÀµÀðzÀ £ÀªÀÄä ¤zÉÝ £ÉªÀÄä¢AiÀÄ£ÀÄß §°vÉUÉzÀÄPÉÆAqÀ, £ÀªÀÄä DlUÀ½UÉ
CqÀØUÁ®ÄºÁQzÀ, £ÀªÀÄä «zÁå¨sÁå¸ÀzÀ §AqÀªÁ¼ÀªÀÅ ±ÀÆ£ÀåªÉAzÀÄ CAPÀ¥ÀnÖAiÀİè
PÁtĪÀAvÉ ªÀiÁqÀÄwzÀÝ, ¨É£ÀßUÀÆ£ÀÄ ¥ÀĸÀÛPÀUÀ¼ÀÄ £À«ÄäAzÀ EAzÉà vÉÆ®V¹ ©qÀ¨ÉÃPÉA§
ºÀoÀ. D ¤gÁ¼À ¢£À §mÁt ªÉÄ®ÄPÀÄvÁÛ CªÀÄä£À£ÀÄß NgÉUÀtÂÚ¤AzÀ £ÉÆÃr ¤ªÁ½¹,
ªÀÄÈvÀÄåAd£ÁzÀªÀAvÉ CqÁØqÀÄwÛzÉÝêÀÅ.
ªÀÄÈvÀÄåAdAiÀĤUÉ E£ÀÄß §gÉÆÃ§j
JgÀqÀÄ wAUÀ¼ÀÄ ¸Á«®è. JAxÀ ¸ÁºÀ¸ÀUÀ¼ÀÄ, zÀĸÁìºÀ¸ÀzÀ C£ÀĨsÀªÀUÀ¼ÁzÀgÀÆ
CrجĮè. Gj ©¹°£À gÀhļÀ CVßAiÀÄAvÀºÀ ¥ÀjÃPÉëAiÀÄ vÁ¥À DVgÀ¯ÁgÀzÀÄ JAzÀÄ ¤zsÀðj¹
DVgÀÄwÛvÀÄÛ. E£ÉߤzÀÝgÀÄ DqÀÄ ªÀÄÄlÖzÀ ¸ÉƦà®è DlªÁqÀzÀ ªÀÄPÀ̽®è. EzÀÝgÉ
CªÀgÀÄ Hj£À°ègÀÄwÛgÀ°è®è. Uncle Aunty ªÀÄ£ÉUÉ ºÉÆÃVgÀÄwÛzÀÝgÀÄ. ºÉÆÃUÀzÀ ªÀÄPÀ̼À UÀÄA¥ÀÄ
zÉÆqÀØzÀÄ. ªÀÄÄAeÁ£ÉUÉ J®ègÀÆ MlÄÖ ¸ÉÃgÀÄwÛzÀÄzÀÄ ±Á¯Á PÁA¥ËAr£À°è. ±Á¯Á
ªÁgÁAqÀzÀ ºÉAa£À ¸ÀAzÀÄUÀ¼À°è UÀÆqÀÄPÀnÖzÀÝ, ªÀµÀð«rà C¸ÀA©è£À°è C®ÄUÁqÀzÉ ¤®ÄèwÛzÀÝ
£ÀªÀÄä£ÀÄß £ÉÆÃr UÉðªÀiÁqÀÄwÛzÀÝ ºÀQÌUÀ½UÉ §¯ÉPÀnÖzÀ £ÀAvÀgÀªÉà ¥ÉÆÃ°ZÉAr£Ál. PÉ®ªÉqÉ
bÀÆZÉAqÀÄ JAzÀÄ PÀgÉAiÀÄ®àqÀÄwÛzÀÄzÀÄ E°è ¥ÉÆÃ°ZÉAqÀÄ. a¤ßzÁAqÀÄ £ÀªÀÄä°è V°èzÁAqÀÄ. UÀ°èUÀ°èAiÀÄ°è ®UÉÆÃj
UÉÆÃ° §ÄUÀÄj vÀAqÉÆÃ¥À vÀAqÀªÁV DqÀÄwÛzɪÀÅ. ¨É£Àß ªÉÄÃ¯É ºÉÆvÀÄÛ¸ÁUÀĪÀ
UÀuÉñÀ£À Dl, nQÌ, §ArDl, »ÃUÉ DlUÀ¼À §Ar MAzÀgÀ »AzÉ MAzÀgÀAvÉ ¥ÉÆÃt¹PÉÆ¼ÀÄîwÛzÀݪÀÅ.
¸ÀĸÀÄÛ ªÀiÁvÀæ ¸À°UÉUÀÆ ºÀwÛgÀ ¸ÀĽAiÀÄÄwÛgÀ°®è. «gÁªÀÄzÀ°è ¥ÀQëUÀ½UÉ ºÁQzÀ
§¯É check ªÀiÁqÀÄwÛzɪÀÅ.
©r¹PÉÆ¼Àî¯ÁUÀzÀ ºÀQÌUÀ¼ÀÄ ©r©rAiÀiÁV G¥ÀÄà PÁgÀ ¸ÀªÉÄÃvÀ £ÀªÀÄäUÀ¼À ºÉÆmÉÖUÉ.
DzÀgÀÆ ªÀÄzsÁåºÀßzï ºÉÆwÛUÉ ªÀÄ£ÉAiÀİgÀ¨ÉÃQvÀÄÛ. CzÀÄ xÉÃmï ¸ÀÆÌ¯ï ºÁdgÁw
EzÀÝAUÉ. HlPÉÌ vÀ¦à¹PÉÆAqÀgÉ CªÀÄäA¢gÀ ¢ªÀå ¨ÉÊUÀ¼À AiÀiÁªÀ¤UÉâÃPÀÄ. Hl
ªÀÄÄVAiÉÆÃzÉ vÀqÀ, ªÀÄvÉÛ DlUÀ¼ÀÄ ±ÀÄgÀÄ. F ºÉÆwÛ£À DlUÀ¼Éà ¨ÉÃgÉ. ZËPÀ¨ÁgÀÄ
Dl, CgÉUÀĽªÀÄ£É, ºÀĽPÀÄj Dl MAzÉà JgÀqÉÃ. D DlUÀ¼ÀÄ ªÀÄ£ÉAiÀÄ ¥ÀqÀ¸Á¯ÉAiÀİè
ªÀģɪÀÄA¢AiÉÄ®è PÀÆvÀÄ DqÀĪÀ ¥Àj ¸ÉÆUÀ¸ÀÄ. ¨ÉùUÉ C£ÉÆßzÀÄ ©qÀÄ«®èzÀ DlUÀ¼À
¸ÀAvÉ D£ÉÆßzÀPÉÌ EzÀÄ ¸ÁQë.
PÉ®ªÉǪÉÄä ©¹®Gj vÁ¼À¯ÁgÀzÉÃ
¤ÃgÀ£ÀÄß §AiÀĹ ºÀÄqÀÄUÀgÉ®ègÀÄ £À¢, vÉÆgÉ, PÉgÉ ¨Á«UÀ½UÉ ºÉÆÃV©qÀwÛzɪÀÅ. D
ªÉÆÃdÄ K£ÉAzÀÄ ºÉÃ¼ÉÆzÀÄ, C°è ¨sÀdðj d®QæÃqÉ. D¼À CUÀ®, JvÀÛgÀ J®è «¨sÁUÀzÀ FdÄ
¥ÀlÄÖUÀ¼ÀÄ C°è ¥ÀæzÀ±Àð£À. ¤ÃgÀÄ PÀÄrzÀªÀ£ÀÄ, £ÉwÛUÉj¹PÉÆAqÀªÀ£ÀÄ, £ÉvÀÛgÀÄ
¸ÀÄj¹PÉÆAqÀªÀ£ÀÄ £ÀªÀÄä vÀAqÀzÀ°è£À ºÉƸÀ ¸ÀzÀ¸ÀågÀ UÀÄgÀÄvÀÄUÀ¼ÀÄ. £À¢
zÀAqÉAiÀĝɯè, vÉÆÃlzÀ EPÉÌ®UÀ¼À°ègÀĪÀ ªÀiÁ«£ÀPÁ¬Ä, vÉAV£ÀPÁ¬Ä, D PÀëtzÀ
ºÀ¹«UÉ DºÁgÀ. EµÁÖzÀgÀÆ zÀtÂAiÀÄzÀ zÉúÀ gÁwæ ¥Á¼ÉAiÀÄ DlUÀ½UÀÆ ªÉÄÊAiÉÆrØ
¤®ÄèwÛzÀݪÀÅ. CSÁqÀPÉÌ ©zÀݪÀgÀAvÉ DqÀÄwÛzÀÄzÀÄ PÀ§ârAiÀÄ£Àß. gÁwæAiÀÄ ©Ã¢
¢Ã¥ÀªÉà gÉ¥sÀj. CzÀgÀ §ÄqÀzÀ°è CAPÀtªÀ®èzÀ CAPÀtªÀ£ÀÄß ©r¹ vÉÆqÉ vÀnÖ ¤®ÄèwvÀÄÛ
JgÀqÀÄ vÀAqÀ. ¸ÉÆÃ¯ÉÆ ªÀiÁvÉà E®è C¯Éè¤zÀÝgÀÄ UÁAiÀÄUÀ¼À ¯ÉPÀÌ, f¢Ý£À ¥ÉÊ¥ÉÆn. ¸Àé®à
¸ÀtÚªÀÄPÀ̼ÀzÀÄÝ £Á¬ÄªÀÄÆ¼ÉAiÀÄ Dl, ªÀÄÆUÀÄV®Äè, PÀÄAmÉ©¯Éè,
PÀtÚªÀÄÄZÁѯÉAiÀÄAvÀºÀ ¥ÀvÉÛzÁj DlUÀ¼ÀÄ. ¥ÀvÉÛzÁjAiÀiÁUÀ¨ÉÃPÁzÀªÀ£À£ÀÄß ¥ÀvÉÛ
ªÀiÁqÀ¯ÉAzÉ MAzÀÄ ªÀÄAvÀæ EvÀÄÛ. “CªÀ®QÌ
¥ÀªÀ®QÌ PÁAZÀt «Ät«Ät qÁA qÀÆA qÀ¸ï ¥Àĸï PÉÆAiÀiï PÉÆmÁgï!”DzÀªÀ£ÀÄ D DlzÀ ¥ÀvÉÛzÁjAiÀiÁUÀ¨ÉÃPÀÄ, ¥ÀvÉÛAiÀiÁzÀªÀ£À£ÀÄß »rzÀÄ amÁgï JAzÀÄ QgÀÄazÀgÉ
PÀ¼Àî ¨ÉPÀÄÌ ¹QÌ©¢ÝzÉ JAzÉ CxÀð. ªÀÄvÀÄÛ ZÀAzÀæ£ÉãÁzÀgÀÄ ¥ÀÆtð £ÀQÌzÀÝ ¢£À
J®èjUÀÆ D£ÀAzÀªÉÇà D£ÀAzÀ. DlªÀ£ÀÄß «ÃQë¸À®Ä ªÀģɪÀÄA¢AiÉÄ®è §AzÀÄ
¸ÉÃgÀÄwÛzÀgÀÄ.. CzÉÆAzÀÄ «zsÀzÀ°è ¸ÁªÀÄfPÀ QæÃqÁ vÁtªÁV ªÀiÁ¥ÀðqÀÄwÛvÀÄÛ.
FUÉ®è ¨É¹UÉAiÀÄ£ÀÄß IPL QæPÉmï £ÀÄAUÀĺÁQzÉ. E°è
£Á£ÀÄ IPL ¤AzÀ DUÀĪÀ ¯Á¨sÀ £ÀµÀÖUÀ¼À£ÀÄß
«±Éèö¸À®Ä ºÉÆgÀn®è. DzÀgÉ IPL VAvÀ®Æ
£ÀªÀÄä £ÉgÉºÉÆgÉAiÀĪÀgÀ£ÀÄß ¸ÁªÀiÁfPÀªÁV ºÀwÛgÀ vÀgÀÄwÛzÀÝ ISL -Inter Social League CAvÀgÀ ¸ÁªÀiÁfPÀ
DmÁªÀ½UÀ¼ÀÄ ºÉZÀÄÑ ¥ÀļÀQvÀgÀ£ÁßV¸ÀÄwÛzÀݪÀÅ JAzÀÄ ºÉüÀ°aÒ¸ÀÄvÉÛãÉ.
Thursday, 2 May 2013
ಐದು ವರ್ಷಕೊಮ್ಮೆ ಬರುವ.........
ಐದು ವರ್ಷಕ್ಕೊಮ್ಮೆ ಬರುವ
ಕಡು ಬಡವಗೂ ಹೆಮ್ಮೆಯ ತರುವ
ಎಲ್ಲ ಜನಗಳ ಕಣ್ಣು ತೆರೆಸುವ ವರದಾನ
ಎಲ್ಲರ ಪಾಲಿಗು ಅಮೂಲ್ಯವಾದ ಮತದಾನ
ಪ್ರಜಾ ಪ್ರಭುತ್ವ ಕೊಟ್ಟ ಕೊಡುಗೆಯೋ
ಪರಮಧಿಕಾರ ಇಟ್ಟ ನಡಿಗೆಯೋ
ದುಷ್ಟರ ಕೂಟಕೆ ದಿಟ್ಟ ಸವಾಲೋ
ಜನಗಳ ಅರಿವಿನ ಅಗ್ನಿ ಪರೀಕ್ಷೆಯೋ
ಎಲ್ಲರ ಎದೆಯಲಿ ಕನಸನು ಬೆಳೆಸುತ
ಭ್ರಮೆಗಳ ನೆಲೆಸುವ ಮತದಾನ
ಎಲ್ಲರ ಪಾಲಿಗು ಅಮೂಲ್ಯವಾದ ಮತದಾನ
ಚುನಾವಣೆಗಳು ಬಂದಾಗಲೆಲ್ಲಾ ಕವಿ ಸಿದ್ಧಲಿಂಗಯ್ಯನರು ಬರೆದ ಈ ಮೇಲಿನ ಚಿತ್ರಗೀತೆ ಬಿಟ್ಟು ಬಿಡದಂತೆ ನೆನಪಿಗೆ ಬರುತ್ತದೆ. ಪ್ರಜಾಪ್ರಭುತ್ವದ ದೊಡ್ಡ ಕೊಡುಗೆಯಾದ, ದುಷ್ಟ ವ್ಯವಸ್ಥೆಗೆ ಸವಾಲಾಗಬಲ್ಲಂಥ, ಜನಗಳ ಅರಿವು, ಜವಬ್ದಾರಿಗಳನ್ನು ಅಗ್ನಿ ಪರೀಕ್ಷೆಗೆ ಒಳಪಡಿಸುತ್ತಲೇ, ಆಶಾವಾದದ ಕನಸನ್ನು ಬಿತ್ತುವ ಚುನಾವಣೆ, ಮತದಾನದ ಬಗ್ಗೆ ಸುಂದರವಾಗಿ ರಚಿತವಾದ ಗೀತೆ ಇದು. ಹಾಗೆಯೇ ಮುಂದುವರಿಯುವ ಗೀತೆ ತನ್ನ ಮುಂದಿನ ಸಾಲುಗಳಲ್ಲಿ ಮತದಾನವೆಂಬ ಪ್ರಜಾಪ್ರಭುತ್ವದ ಶಕ್ತಿಯುತ ಸಾಧನ ಹೇಗೆ ಸ್ವಾರ್ಥ, ಭ್ರಷ್ಟ ವ್ಯವಸ್ಥೆಯಲ್ಲಿ ನಲುಗಿ ತನ್ನ ನಿಜ ಸ್ವರೂಪವನ್ನು ಕಳೆದುಕೊಳ್ಳುತ್ತಿದೆ ಎಂಬುದನ್ನು ಎಳೆ ಎಳೆಯಾಗಿ ಚಿತ್ರಿಸುತ್ತಾ ಹೋಗುತ್ತದೆ. ಮತ್ತೊಂದು ಚುನಾವಣೆ ಬಂದಿರುವ ಈ ಸಂದರ್ಭದಲ್ಲಿ ಇದು ಸಮಯೋಚಿತ.
ಕೆಳೆದ ಐದು ವರ್ಷಗಳಲ್ಲಿ ಹಲವಾರು ಬಾರಿ ಮುಂದಿನ ವಾರವೋ, ಬರುವ ತಿಂಗಳೋ ಆಗಬಹುದು ಎಂಬಂತ್ತಿದ್ದ ಚುನಾವಣೆಗಳು ಈಗ ನಿಜಕ್ಕೂ ಬಂದಿದೆ. ಪೂರ್ತಿ ಐದು ವರ್ಷದ ಬಳಿಕವೇ ಬರುತ್ತಿದೆ ಎಂಬುದು ಸಮಾಧಾನದ ವಿಷಯ. ಒಂದೆರೆಡು ತಿಂಗಳ ಹಿಂದಷ್ಟೇ ನಡೆದ ಸ್ಥಳೀಯ ಚುನಾವಣೆಗಳನ್ನು ಎದುರಿಸಲು ಭಾರಿ ಹಿಂದೇಟು ಹಾಕಿದ ಪಕ್ಷಗಳು ಈ ಬಾರಿಯ ವಿಧಾನಸಭೆಯ ಚುನಾವಣೆಯನ್ನು ಎದುರಿಸಲು ಅತ್ತ್ತ್ಯುತ್ಸಾಹದಿಂದ ಗರಿಗೆದರಿ ನಿಂತಿವೆ. ಪಕ್ಷಗಳ ಟಿಕೆಟ್ ಆಕಾಂಕ್ಷಿಗಳ ಸಾಲು, ಟಿಕೆಟ್ ಪಡೆದವರ ಸಂಭ್ರಮ, ಸಿಗದವರ ನಿರಾಸೆ, ಪ್ರತಿಭಟನೆ, ನಾಮ ಪತ್ರ ಸಲ್ಲಿಸುವಾಗ ನಡೆಯುತ್ತಿರುವ ಮೆರವಣಿಗೆ, ಆಗುತ್ತಿರುವ ಟ್ರಾಫಿಕ್ಕು ಜಾಮು, ಲಾಠಿ ಚಾರ್ಜು ಎಲ್ಲವನ್ನು ನೋಡುತ್ತಿದ್ದರೆ ಈ ಬಾರಿಯ ಚುನಾವಣೆಗಳು ಭಾರಿ ಕುತೂಹಲ ಮೂಡಿಸಿದೆ.
ಸರಿಯಾಗಿ ಗಮನಿಸಿದರೆ ಹಲವು ಪ್ರತಿಷ್ಠಿತ ಕ್ಷೇತ್ರಗಳಲ್ಲಿ, ಪ್ರತಿಯೊಂದು ಪಕ್ಷದಿಂದಲೂ ಕನಿಷ್ಠ ಇಬ್ಬರಾದರೂ ಟಿಕೆಟ್ ಆಕಾಂಕ್ಷಿಗಳು. ಯಾರಿಗೆ ಟಿಕೆಟ್ ಕೊಡಬೇಕೆನ್ನುವ ತಲೆನೋವು ಮಾತ್ರವಲ್ಲದೆ, ಜೋರು ಪ್ರತಿಭಟನೆಗಳನ್ನು ಪಕ್ಷದ ಮುಖಂಡರು ಎದುರಿಸಬೇಕಾಗಿ ಬಂದಿದೆ. ತಮ್ಮ ನಾಯಕರೊಬ್ಬರಿಗೆ ಟಿಕೆಟ್ ಕೊಡಲಿಲ್ಲ ಎಂಬ ಕಾರಣಕ್ಕೆ ಪಕ್ಷದ ಹಿರಿಯ ಮುಖಂಡರೊಬ್ಬರು ಹೊರಟಿದ್ದ ಕಾರಿನ ಚಕ್ರದ ಬಳಿ ಮಲಗಿ ಪ್ರತಿಭಟಿಸಿದ ಕಾರ್ಯಕರ್ತನೊಬ್ಬನ ನೋವನ್ನು ಟಿ.ವಿ ಚಾನೆಲ್ಲಗಳು ನಿಮಿಷಕ್ಕೆ ಐದಾರಿ ಬಾರಿ ಹಾಕುತ್ತಿದ್ದವು. ಹಾಗೇ ಪ್ರತಿಭಟನೆಗೆ ಕರೆದುಕೊಂಡು ಬಂದಿದ್ದ ವೃದ್ಧರೊಬ್ಬರು ಹೃದಯಾಪಘಾತವಾಗಿ ಸತ್ತ ಮನಕಲಕುವ ಘಟನೆಯೂ ನಡೆದಿದೆ. ಈ ಹತ್ತಾರು ನ್ಯೂಸ್ ಚಾನೆಲ್ಲುಗಳು ಬಂದ ಮೇಲೆ, ಈಗ ಪಕ್ಷಗಳಲ್ಲಿ "ಒಳ ಜಗಳಗಳೇ" ಇಲ್ಲ, ಎಲ್ಲಾವೂ ನೇರಾತಿ ನೇರ, ಜನರ ಮುಂದೆ ಬಹಿರಂಗದ "ಹೊರ ಜಗಳಗಳೇ". ನಾಯಕರುಗಳ ಈ ಟಿಕೆಟ್ ಪಡೆಯುವಿಕೆ,ನಾಮ ಪತ್ರ ಸಲ್ಲಿಕೆ, ಚುನಾವಣೆ ಎದುರಿಸುವ ಸಿದ್ಧತೆ, ಬದ್ಧೆತೆಗಳನ್ನು ಕಂಡು, ಇದೇ ಸಿದ್ಧತೆ, ಬದ್ಧತೆಗಳನ್ನು ಅವರು
ಜನರ ಸಮಸ್ಯೆಗಳ ಬಗೆಗೂ ತೋರಿದರೆ, ನೀರು, ಕರೆಂಟು, ಬಸ್ಸು ರೋಡು, ಶಾಲೆ, ಆಸ್ಪತ್ರೆ ಮುಂತಾದವುಗಳೆಲ್ಲಾ ಸಮಸ್ಯೆಗಳೆಲ್ಲ ಸಮಸ್ಯೆಗಳೇ ಅಲ್ಲ ಎಂಬ ಅನಿಸಿಕೆ ಜನಸಾಮಾನ್ಯರದು. ಇನ್ನೂ ಅಲ್ಲಲ್ಲಿ ಕೇಳಿ ಬರುತ್ತಿರುವ ಭಾಷಣಗಳು, ಪ್ರಣಾಳಿಕೆಗಳು, ಪರಸ್ಪರ ದೋಷಾರೋಪಗಳನ್ನು ಕಂಡಾಗ ಮೇಲಿನ ಹಾಡಿನ ಮುಂದಿನ ಸಾಲುಗಳು ನೆನಪಾಗುತ್ತವೆ.
![]() |
| ಚಿತ್ರಕೃಪೆ : ಪ್ರಜಾವಾಣಿ |
ಬಣ್ಣ ಬಣ್ಣದ ಭಾಷಣದಲ್ಲಿ
ಕಣ್ಮನ ಸೆಳೆಯುವ ಸ್ವರ್ಗವ ತಂದು
ಎಲ್ಲರ ಎದೆಯಲಿ ಕನಸನು ಬೆಳೆಸುತ
ಭ್ರಮೆಗಳ ಮೆರೆಸುವ ಮತದಾನ
ಆಡುವ ಮಾತು ಹೃದಯದ್ದಲ್ಲ
ಮಾಡುವ ಕೆಲಸ ಮನಸಿನದಲ್ಲ
ಭಾವನೆ ಇಲ್ಲದ ಕನಸನು ಕೊಲ್ಲುವ
ಸುಳಿಯಲಿ ಸಿಲುಕುವ ಮತದಾನ
ಎಲ್ಲರ ಪಾಲಿಗು ಅಮೂಲ್ಯವಾದ ಮತದಾನ .....
ಇಷ್ಟೆಲ್ಲದರ ನಡುವೆಯೂ ಜನ ಸಾಮಾನ್ಯರಾದ ನಾವು ನೀವು ಮತದಾನದ ಬಗ್ಗೆ, ಚುನಾವಣೆಗಳ ಬಗ್ಗೆ ಆಶಾವಾದ ಇಟ್ಟುಕೊಳ್ಳಲೇ ಬೇಕಾಗಿದೆ. ನಿಜಕ್ಕೂ ಇದು ಪ್ರಜಾಪ್ರಭುತ್ವದ ದೊಡ್ಡ ಕೊಡುಗೆಯೇ. ಮತ ಚಲಾಯಿಸದೆ ವ್ಯವಸ್ಥೆಯನ್ನು ದೂಷಿಸುವುದರಲ್ಲಿ ಅರ್ಥವಿಲ್ಲವೆಂಬ ಸತ್ಯವನ್ನು ನಾವು ಮನಗಾಣಬೇಕಾಗಿದೆ. ಪ್ರತಿ ಹೊಸ ಚುನಾವಾಣೆಯ ಸಮಯದಲ್ಲಿ ಹೊಸದಾಗಿ ಮತ ಚಲಾಯಿಸುವ ಹಕ್ಕು ಪಡೆಯುವ ಯುವಕರ ಸಂಖ್ಯೆ ದುಪ್ಪಟ್ಟಾಗುತ್ತಿರುವ ಈ ಸಂದರ್ಭದಲ್ಲಿ ಯುವ ಜನತೆಯ ಪಾತ್ರವೂ ಮಹತ್ವದಾಗಿದೆ. ಒಬ್ಬ ಕ್ರಿಕೆಟ್ ಆಟಗಾರನ ಎಲ್ಲಾ ಅಂಕಿ ಅಂಶಗಳೂ, ಒಬ್ಬ ಸಿನಿಮಾ ನಟನ ವ್ಯಯಕ್ತಿಕ ಜೀವನದ ಸಣ್ಣ ವಿವರಗಳೂ ಗೊತ್ತಿರುವ ನಮಗೆ, ಮುಂದೆ ನಮ್ಮನ್ನು ಪ್ರತಿನಿಧಿಸುವ ನಮ್ಮದೇ ಕ್ಷೇತ್ರದ ಅಭ್ಯರ್ಥಿಯ ವಿವರಗಳು ಮುಖ್ಯದಾಗಬೇಕಾಗುತ್ತದೆ. ಯಾವ ಮೊಬೈಲಿನಲ್ಲಿ ಯಾವ ಸೌಲಭ್ಯವಿದೆ, ಯಾವ ಸಿಮ್ ಹೆಚ್ಚು ಫ್ರೀ ಎಸ್.ಎಮ್.ಎಸ್ ಕೊಡುತ್ತದೆ ಎಂಬ ಗೊಂದಲಗಳಂತೆಯೇ ಯಾವ ಪಕ್ಷಕ್ಕೆ ಮತ ಕೊಟ್ಟರೆ ನಾಡಿಗೆ ಒಳ್ಳೆಯದಾಗುತ್ತದೆ, ಯಾವ ಅಭ್ಯರ್ಥಿ ಏಕೆ ನಮ್ಮ ಕ್ಷೇತ್ರಕ್ಕೆ ಬೇಕು, ನಮ್ಮ ಹಿತ ಕಾಯುವುದು ರಾಷ್ಟ್ರೀಯ ಪಕ್ಷವೇ? ಪ್ರಾದೇಶಿಕ ಪಕ್ಷವೇ?, ನಮಗೆ ಪಕ್ಷ ಮುಖ್ಯವೇ ಆಥವಾ ಕ್ಷೇತ್ರದ ಅಭ್ಯರ್ಥಿ ಮುಖ್ಯವೇ? ಎನ್ನುವಂಥಹ ಗೊಂದಲ, ಪ್ರಶ್ನೆಗಳು ನಮ್ಮಲ್ಲಿ ಮೂಡಬೇಕಾಗಿದೆ. ಮೂಡುವ ಪ್ರಶ್ನೆಗಳಿಗೆ ಉತ್ತರವನ್ನೂ ಕಂಡುಕೊಳ್ಳಬೇಕಾಗಿದೆ. ಈ ನಿಟ್ಟನಲ್ಲಿ ನಮ್ಮ ಕೆಲವೊಂದು ಪತ್ರಿಕೆಗಳು ನಿಜಕ್ಕೂ ಒಳ್ಳೆಯ ಕೆಲಸವನ್ನು ಮಾಡಿ ಪ್ರತಿ ಕ್ಷೇತ್ರದಲ್ಲಿನ ಪರಿಸ್ಥಿತಿ, ಅಭ್ಯರ್ಥಿಗಳ ಬಗ್ಗೆ ನಿಖರವಾದ ಮಾಹಿತಿಗಳನ್ನು ಕೊಡುತ್ತಿವೆ. ಅವೆಲ್ಲವನ್ನು ಗಣನೆಗೆ ತೆಗೆದುಕೊಂಡು ನಮ್ಮ ಮತಗಳನ್ನು ಚಲಾಯಿಸಬೇಕಾದ ಅನಿವಾರ್ಯತೆ ಹಿಂದೆಂದಿಗಿಂತಲೂ ಈಗ ಇದೆ. ಜವಬ್ದಾರಿಯುತ ಮತದಾನದಿಂದಾಗಿ ಜವಬ್ದಾರಿಯುತವಾದ ನಾಯಕ ಸಮೂಹವನ್ನು ಕಟ್ಟುವ, ಅದರೊಂದಿಗೆ ನಾಡಿನ ಅಭಿವೃಧಿಯಲ್ಲಿ ಪಾಲುದಾರರಾಗುವ ಸದವಕಾಶ ನಮಗೆ ಚುನಾವಣೆಗಳು ನೀಡಿದೆ.
ಚುನಾವಣಾ ಆಯೋಗವೂ ತನ್ನ ಕೆಲಸವನ್ನು ಉತ್ತಮವಾಗಿಯೇ ನಿರ್ವಹಿಸುತಿರುವಂತೆ ಕಾಣಿಸುತ್ತಿದೆ. ಚುನಾವಣಾ ನೀತಿ ಸಂಹಿತೆ ಆದಷ್ಟು ಸಮರ್ಪಕವಾಗಿಯೇ ಬಳಕೆಯಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂಥೆ ಮೊನ್ನೆ ಯಾರದೋ ಪ್ರಭಾವಿ ವ್ಯಕ್ತಿಯೊಬ್ಬರ ಮನೆಯ ಬೀಗರ ಊಟಕ್ಕೆ ತಹಸಿಲ್ದಾರ್ ಕಛೇರಿಯಿಂದ ಅನುಮತಿ ಸಿಗದೆ ಕೊನೆಗೆ ಕೋರ್ಟ್ ಮೊರೆ ಹೊಕ್ಕು ಅನುಮತಿ ತರಬೇಕಾದ ಪರಿಸ್ಥಿತಿ ಬಂದ ಸುದ್ದಿಯನ್ನು ಪತ್ರಿಕೆಗಳು ವರದಿ ಮಾಡಿವೆ. ಅಂತೆಯೇ ಯಾವುದೇ ಪಕ್ಷದ ಚಿಹ್ನೆಯಾಗಿರುವ ವಸ್ತುಗಳನ್ನು ಮತಗಟ್ಟೆಗಳಲ್ಲಿ ಉಪಯೋಗಿಸಬಾರದು ಎಂಬ ನಿಬಂಧನೆ ಇರುವುದರಿಂದ ಮತಗಟ್ಟೆಯ ಅಧಿಕಾರಿಗಳುಈ ಬಾರಿ ಸೆಖೆಯಲ್ಲೇ ಕೆಲಸ ಮಾಡಬೇಕಾದ ಪರಿಸ್ಥಿತಿ!!!! ಏಕೆಂದರೆ ಫ್ಯಾನು ಕೂಡ ಪಕ್ಷವೊಂದರ ಚಿಹ್ನೆ ಎಂಬಂಥ ಜೋಕುಗಳು ಸಹಾ ಹರಿದಾಡುತ್ತಿವೆ. ರಾಜಕೀಯದ ಬಗ್ಗೆ ಎಲ್ಲಾ ತಮಾಷೆ, ಹಾಸ್ಯ, ನಿರಾಸೆಯ ನಡುವೆಯೂ ನಾಡು ಹಾಗೂ ಜನರ ಸೌಖ್ಯಕ್ಕಾಗಿ, ಬಡವರ, ರೈತರ, ಎಲ್ಲಾ ವರ್ಗದ ಜನರ ಒಳಿತಿಗಾಗಿ ದುಡಿಯುವ ಸರ್ಕಾರವೊಂದು ಬಂದು ಮುನ್ನಡೆಸಲಿ ಹಾಗೂ ಅದಕ್ಕೆ ಈ ಚುನಾವಣೆ ಸಾಧನವಾಗಲಿ ಎಂಬ ಆಶಾಭಾವದಿಂದ ಮತ ಚಲಾಯಿಸೋಣ.
ಕೊನೆಗೆ, ದುಂಡಿರಾಜರ ಚುನಾವಣೆ ಬಗೆಗಿನ ಒಂದು ಹನಿಗವನ:
ಚುನಾವಣೆ ಎಂದರೆ ಕೆಲವು ನಾಯಕರಿಗೆ
ಕಂಡಾಬಟ್ಟೆ
ಸಿಟ್ಟು.
ಕೆಳೆದ ಚುನಾವಣೆಯಲ್ಲಿ ಪಾಪ ಅವರು
ಕಳೆದುಕೊಂಡಿದ್ದರು ಡಿಪಾ
ಸಿಟ್ಟು!!!
- ಪ್ರಶಾಂತ್ ಇಗ್ನೇಷಿಯಸ್
Saturday, 27 April 2013
Election Terminology
ಚುನಾವಣೆ;
ಕೆಲವರು ಕಣದಲ್ಲಿ
ಹಲವರು ಕನ್ನದಲ್ಲಿ
ಮತ;
ಪಂಚವಾರ್ಷಿಕ ಬಂಪರು ಬೆಲೆ
ಪಂಚ ರಸ್ತೆಗಳ ಡಾಂಬರು ನೆಲೆ
ಪಕ್ಷ;
ಮೆಚುರಿಟಿ ಔಟು
ಮೆಜಾರಿಟಿ ಮಾತ್ರ ಕೌಂಟು
ಚಿಹ್ನೆ;
ಇದು ಚಿರಕಾಲ ಅಲ್ಲ
ಈ ಚಿಹ್ನೆ ಇ ಸಲ
ಅಭ್ಯರ್ಥಿ;
ಎಲ್ಲರ ಅಕ್ಷಯಪಾತ್ರೆ
ತಲೆ ಖಾಲಿಪಾತ್ರೆ
ಪ್ರಚಾರ;
ಮನೆ ಮನೆಗಳಿಗೆ ಎಣಕಾಟ
ಕಾಲಿಗೆ ಬೀಳ್ವ ಹುಚ್ಚಾಟ
ಪ್ರಣಾಳಿಕೆ;
ಅರವಳಿಕೆ ಚುಚ್ಚು ಮದ್ದು
ಒಂದು ಸುಖ ನಿದ್ರೆಗೆ ಸೀಮಿತ
-Santhosh .I
ಕೆಲವರು ಕಣದಲ್ಲಿ
ಹಲವರು ಕನ್ನದಲ್ಲಿ
ಮತ;
ಪಂಚವಾರ್ಷಿಕ ಬಂಪರು ಬೆಲೆ
ಪಂಚ ರಸ್ತೆಗಳ ಡಾಂಬರು ನೆಲೆ
ಪಕ್ಷ;
ಮೆಚುರಿಟಿ ಔಟು
ಮೆಜಾರಿಟಿ ಮಾತ್ರ ಕೌಂಟು
ಚಿಹ್ನೆ;
ಇದು ಚಿರಕಾಲ ಅಲ್ಲ
ಈ ಚಿಹ್ನೆ ಇ ಸಲ
ಅಭ್ಯರ್ಥಿ;
ಎಲ್ಲರ ಅಕ್ಷಯಪಾತ್ರೆ
ತಲೆ ಖಾಲಿಪಾತ್ರೆ
ಪ್ರಚಾರ;
ಮನೆ ಮನೆಗಳಿಗೆ ಎಣಕಾಟ
ಕಾಲಿಗೆ ಬೀಳ್ವ ಹುಚ್ಚಾಟ
ಪ್ರಣಾಳಿಕೆ;
ಅರವಳಿಕೆ ಚುಚ್ಚು ಮದ್ದು
ಒಂದು ಸುಖ ನಿದ್ರೆಗೆ ಸೀಮಿತ
-Santhosh .I
Thursday, 4 April 2013
ಮುತ್ತನ ತಪ್ಪಸ್ಸು - ಸಣ್ಣ ಕಥೆ
ಕ್ರೈಸ್ತರು ಆಚರಿಸುವ ಈಸ್ಟರ್ ಹಬ್ಬದ ಮುಂಚಿನ 40 ದಿವಸಗಳನ್ನು ತಪ್ಪಸು ಕಾಲವೆಂದು ಕರೆಯುತ್ತಾರೆ. ತ್ಯಾಗ ಹಾಗೂ ಶೋಕದ ದಿನಗಳಾದ ಈ ಸಮಯದಲ್ಲಿ ಅನೇಕ ಕ್ರೈಸ್ತರು ಹಲವಾರು ರೀತಿಯ ತ್ಯಾಗ, ಧ್ಯಾನದಲ್ಲಿ ಪಾಲ್ಗೊಳ್ಳುತ್ತಾರೆ. ಕೆಲವರು ಉಪವಾಸ ಕೈಗೊಂಡರೆ ಮತ್ತೆ ಕೆಲವರು ಮಾಂಸಹಾರವನ್ನೂ, ಕೆಲವರು ಮಧ್ಯಪಾನವನ್ನು ಬಿಡುತ್ತಾರೆ. ಈ ಹಿನ್ನಲೆಯಲ್ಲಿ ಮುತ್ತ ಎಂಬುವವನು ಆಚರಿಸಿದ ತಪ್ಪಸಿನ ಸುತ್ತ ಎಣೆದಿರುವ ಕಥೆ ಇದು.
ಸಣ್ಣ ಪುಟ್ಟ ಲೇಖನಗಳನ್ನು ಬರೆಯುವ ನನಗೆ ಕಥೆ,ಕವಿತೆ ಒಲಿದಿಲ್ಲ, ಆದರೂ ತುಂಬಾ ದಿನಗಳಿಂದ ಮನದಲ್ಲಿ ರೆಕ್ಕೆಗಟ್ಟಿ ಹಾರಾಡುತ್ತಿದ್ದ ಈ ಸಣ್ಣ ಕಥೆಗೆ ಅಕ್ಷರ ರೂಪ ಕೊಟ್ಟಿದ್ದೇನೆ. ಪ್ರಯತ್ನ ನನ್ನದು. ಕಮೆಂಟು, ಟೀಕೆ ಟಿಪ್ಪಣಿ ನಿಮ್ಮದು.
-ಪ್ರಶಾಂತ್ ಇಗ್ನೇಷಿಯಸ್
--------------------------------------------------------------------------------------------------------------------
"ಥೂ ಆದೇನು ಹಿಂಗ್ ಕುಡಿದು ಸಾಯ್ತಿರೋ, ವರ್ಷಕ್ಕ್ ಒಂದ್ ಹಬ್ಬದಲ್ಲಾದ್ರೂ ಮಾನ ಮರ್ವಾದೆ ಇಂದ ಇರೋಕೆ ಆಗಲ್ವಾ, ಥೂ ನಿಮ್ಮ್ ಗಳ್ ಜನ್ಮಕ್ಕೆ"
ಮುತ್ತ ಪ್ಲಾಸ್ಟಿಕ್ ಡಬ್ಬಕ್ಕೆ ತನ್ನ ಕೈ ಹಾಕಿ, ಅಲ್ಲಿದ್ದ ನೋಟು ನಾಣ್ಯಗಳ ಮಧ್ಯೆ ಕೈ ಆಡಿಸುತ್ತಾ, ಹೋದ ವರ್ಷದ ಹಬ್ಬದ ದಿನ ಕುಮಾರಪ್ಪನವರು ಬಯ್ದ ಮಾತುಗಳನ್ನೇ ನೆನಸಿಕೊಳ್ಳುತ್ತಿದ್ದ. ಈಗ ನೆನಸಿಕೊಂಡರೂ ಕೋಪ ಬರುತ್ತಿತ್ತು ಅವನಿಗೆ. ಆದರೆ ಅವತ್ತು ಮಾತ್ರ ಅವನಿಗೆ ಏನೂ ಅನಿಸಿರಲಿಲ್ಲ, ಅವರು ಹೇಳಿದ ಮಾತೇನೋ ಸ್ಪಷ್ಟವಾಗಿ ಕೇಳುತ್ತಿತ್ತು ಆದರೆ ಕೋಪ ಗೀಪ ಏನೂ ಬಂದಿರಲಿಲ್ಲ.ಬಂದರೂ ಏನೂ ಮಾಡೋ ಸ್ಥಿತಿಲಿ ಇರಲಿಲ್ಲ ಅವನು. ಅಷ್ಟೊಂದು ಕುಡಿದಿದ್ದ. ಕುಡಿದ್ದಿದೇನೋ ಸರಿ, ಆದರೆ ಹೋಗಿ ಹೋಗಿ ಆ ಕುಮಾರಪ್ಪನವರ ಮನೆ ಮುಂದಿನ ಜಗುಲಿ ಮೇಲೆ ಎಚ್ಚರ ತಪ್ಪಿ ಬಿದ್ದಿದ್ದ.
ಅಂತಾ ಏಪ್ರಿಲ್ ಬಿಸಿಲಿಗೂ ಜಗ್ಗದೇ ಬಿದ್ದಿದ್ದ ಅವನನ್ನು ಎಲ್ಲರೂ ನೋಡುವವರೇ.ಕುಮಾರಪ್ಪನವರ ಮನೆ ಏನು ಊರಿನ ಮೂಲೇಲಿತ್ತೇ? ಅಲ್ಲೇ ದೇವಸ್ಥಾನದ ಬೀದಿಲೇ ಇತ್ತು. ಊರಿಗೆ ಊರೇ ಒಡಾಡೋ ಬಿದೀಲಿ ಹಾಗೆ ಕುಡಿದು ಬಿದಿದ್ದರೆ ಹೋಗೋ ಬರೋ ಜನ ನೋಡದೆ ಇರ್‍ತಾರೆಯೇ? ಪೂಜೆ ಮುಗಿಸಿಕೊಂಡು ಹೋಗೋರು, ಅಂಗಡಿಗೆ ಬಂದು ಹೋಗೋರು, ಮಾಂಸ ತರೋಕೆ ಹೋಗೋರು, ಎಲ್ಲಾ ಮತ್ತಾಗಿದ್ದ ಮುತ್ತನ ನೋಡೋರೇ. ಆದರೆ ಯಾರೂ ಅವನ ಮುಟ್ಟಲು, ಎತ್ತಲು ಹೋಗಲಿಲ್ಲ. ದಿನಾ ಕುಡಿಯೋರನ್ನ ಎತ್ತೋರು ಯಾರು?
ಅಂತಾ ಏಪ್ರಿಲ್ ಬಿಸಿಲಿಗೂ ಜಗ್ಗದೇ ಬಿದ್ದಿದ್ದ ಅವನನ್ನು ಎಲ್ಲರೂ ನೋಡುವವರೇ.ಕುಮಾರಪ್ಪನವರ ಮನೆ ಏನು ಊರಿನ ಮೂಲೇಲಿತ್ತೇ? ಅಲ್ಲೇ ದೇವಸ್ಥಾನದ ಬೀದಿಲೇ ಇತ್ತು. ಊರಿಗೆ ಊರೇ ಒಡಾಡೋ ಬಿದೀಲಿ ಹಾಗೆ ಕುಡಿದು ಬಿದಿದ್ದರೆ ಹೋಗೋ ಬರೋ ಜನ ನೋಡದೆ ಇರ್‍ತಾರೆಯೇ? ಪೂಜೆ ಮುಗಿಸಿಕೊಂಡು ಹೋಗೋರು, ಅಂಗಡಿಗೆ ಬಂದು ಹೋಗೋರು, ಮಾಂಸ ತರೋಕೆ ಹೋಗೋರು, ಎಲ್ಲಾ ಮತ್ತಾಗಿದ್ದ ಮುತ್ತನ ನೋಡೋರೇ. ಆದರೆ ಯಾರೂ ಅವನ ಮುಟ್ಟಲು, ಎತ್ತಲು ಹೋಗಲಿಲ್ಲ. ದಿನಾ ಕುಡಿಯೋರನ್ನ ಎತ್ತೋರು ಯಾರು?
ಹಬ್ಬದ ದಿನ ಮನೆ ಮುಂದೆ ಹೀಗೆ ಬಿದ್ದಿದ್ದ ಮುತ್ತನ ನೋಡಿ ರೇಗಿ ಹೋಗಿತ್ತು ಕುಮಾರಪ್ಪನಿಗೆ. ಮನೆ ತುಂಬಾ ಹಬ್ಬಕ್ಕೆ ಅಂಥಾ ಜನ ಬಂದಿರುವಾಗ ಇವನು ಹೀಗೆ ಮನೆ ಮುಂದೆ ಬಿದ್ದಿದ್ದರೆ ಯಾವನಿಗೆ ಕೋಪ ಬರೊಲ್ಲ? ಅದರಲ್ಲೂ ಅವನು ಅವರ ಮನೆ ತೋಟದ ಆಳು. ತೋಟದ ಕೆಲಸಕ್ಕೆ ಅಂಥಾನೇ ಅವನ ನೇಮಿಸಿಕೊಂಡಿದ್ದರೂ ಮುತ್ತ ಕುಮಾರಪ್ಪನವರ ಮನೆ ಕೆಲಸಗಳನ್ನು ಸಹಾ ಮಾಡುತ್ತಿದ್ದ. ಅಂಗಡಿ ಇಂದ ಸಾಮಾನು ತರೋದು,ಮಾಂಸ, ಕೋಳಿ ಮೀನು ಕುಯ್ದು ಕ್ಲೀನ್ ಮಾಡಿಕೊಡುವುದು, ಪಕ್ಕದ ಊರಿಗೆ ಹೋಗಿ ಗ್ಯಾಸು,ಮದ್ದು,ಗಿದ್ದು ತರೋದು ಹೀಗೆ. ಈ ಕರೆಂಟ್ ಸಮಸ್ಯೆಯಿಂದ ತೋಟದ ಕೆಲಸಗಳೆಲ್ಲಾ ಅಷ್ಟರಲ್ಲೇ ಇತ್ತು. ಮುತ್ತನಿಗೂ ದಿನಾ ಎಲ್ಲಾ ತೋಟದಲ್ಲಿ ಬಿಸಿಲಲ್ಲಿ ಮೈ ಬಗ್ಗಿಸಿ ಕೆಲಸ ಮಾಡೋದಕ್ಕಿಂತ ಈ ಕೆಲಸನೇ ಹೆಚ್ಚು ಇಷ್ಟ ಆಗಿತ್ತು. ಕರೆಂಟ್ ಇಲ್ದೆ ಇರೋದು ಕುಮಾರಪ್ಪನಂಥವರಿಗೆ ಶಾಪವಾದರೆ ಮುತ್ತನಂಥವರಿಗೆ ವರವಾಗಿತ್ತು.
ಇಂಥ ಮುತ್ತಂದಿರು ಊರಲ್ಲಿ ತುಂಬಾ ಜನ ಇದ್ದರು. ಮುತ್ತನಿಗೆ ಕುಡಿಯೋ ಅಭ್ಯಾಸ ಇದೆ ಎನ್ನುವುದು ಇಡೀ ಊರಿಗೇ ಗೊತ್ತಿದ್ದರೂ, ಅವತ್ತು ಈಸ್ಟರ್ ಹಬ್ಬದ ದಿನ, ಎರಡನೇ ಪೂಜೆ ಪ್ರಸಂಗದ ಹೊತ್ತಿಗೇ ಈ ರೀತಿ ಚಿತ್ತಾಗಿ ಬಿದ್ದಿದ್ದು ನೋಡಿದವರಿಗೆ ಯಾಕೋ ಅತಿ ಅನಿಸುತ್ತಿತ್ತು. ಮನೆ ತುಂಬಾ ನೆಂಟರು ಇದ್ದು ಕೆಲಸ ಇರುವಾಗ ಹೀಗೆ, ಬಿದ್ದಿದ್ದರೆ ಕೋಪ ಮಾಡಿಕೊಳ್ಳದೆ ಇರುವುದಕ್ಕೆ ಕುಮಾರಪ್ಪನವರೇನು ಸಂತರೇ?. ನೆಂಟರು, ಬೀದಿ ಜನ ಅಂತನೂ ನೋಡದೆ ಸರಿಯಾದ ಬಯ್ಗಳಗಳನ್ನು ಬಿಡ್ತಿದ್ದರು ಕುಮಾರಪ್ಪ. ಗಂಟಲು ಪೂರ್ತಿ ಕುಡಿದಿದ್ದವನಿಗೆ ಅದೆಲ್ಲಾ ಏನೂ ಕೇಳಿಸಲಿಲ್ಲ , ಕೊನೆಗೆ ಮಾತ್ರ "ಥೂ ಅದೇನು ಹೀಂಗ್........ " ಅಂತ ಅವರು ಬಯ್ಯುತ್ತಿದ್ದರೆ, ಸುತ್ತ ಸೇರಿದ್ದ ಮಕ್ಕಳೆಲ್ಲಾ ಮುಸಿ ಮುಸಿ ನಗುತಿದ್ದದ್ದು ಮಾತ್ರ ಅವನಿಗೆ ಗೊತ್ತಾಗಿತ್ತು. ಅದರಲ್ಲಿ ತನ್ನ ಮಕ್ಕಳೇನಾದರೂ ಇದ್ದಾರೆಯೇ ಎಂದು ನೋಡಿದ ಮುತ್ತ, ಉಹಂ.. ಏಪ್ರಿಲ್ ತಿಂಗಳ ಮುಂಜಾನೆಯ ಸೂರ್ಯ ಕಣ್ಣಲ್ಲೇ ಬಂದು ಕೂತ್ತಿದ್ದ. ಹಾಗೇ ಮೆಲ್ಲನೆ ಕಣ್ಣು ಮುಚ್ಚಿಕೊಂಡ ತಾತ್ಕಾಲಿಕವಾಗಿ.......
ಇಂಥ ಮುತ್ತಂದಿರು ಊರಲ್ಲಿ ತುಂಬಾ ಜನ ಇದ್ದರು. ಮುತ್ತನಿಗೆ ಕುಡಿಯೋ ಅಭ್ಯಾಸ ಇದೆ ಎನ್ನುವುದು ಇಡೀ ಊರಿಗೇ ಗೊತ್ತಿದ್ದರೂ, ಅವತ್ತು ಈಸ್ಟರ್ ಹಬ್ಬದ ದಿನ, ಎರಡನೇ ಪೂಜೆ ಪ್ರಸಂಗದ ಹೊತ್ತಿಗೇ ಈ ರೀತಿ ಚಿತ್ತಾಗಿ ಬಿದ್ದಿದ್ದು ನೋಡಿದವರಿಗೆ ಯಾಕೋ ಅತಿ ಅನಿಸುತ್ತಿತ್ತು. ಮನೆ ತುಂಬಾ ನೆಂಟರು ಇದ್ದು ಕೆಲಸ ಇರುವಾಗ ಹೀಗೆ, ಬಿದ್ದಿದ್ದರೆ ಕೋಪ ಮಾಡಿಕೊಳ್ಳದೆ ಇರುವುದಕ್ಕೆ ಕುಮಾರಪ್ಪನವರೇನು ಸಂತರೇ?. ನೆಂಟರು, ಬೀದಿ ಜನ ಅಂತನೂ ನೋಡದೆ ಸರಿಯಾದ ಬಯ್ಗಳಗಳನ್ನು ಬಿಡ್ತಿದ್ದರು ಕುಮಾರಪ್ಪ. ಗಂಟಲು ಪೂರ್ತಿ ಕುಡಿದಿದ್ದವನಿಗೆ ಅದೆಲ್ಲಾ ಏನೂ ಕೇಳಿಸಲಿಲ್ಲ , ಕೊನೆಗೆ ಮಾತ್ರ "ಥೂ ಅದೇನು ಹೀಂಗ್........ " ಅಂತ ಅವರು ಬಯ್ಯುತ್ತಿದ್ದರೆ, ಸುತ್ತ ಸೇರಿದ್ದ ಮಕ್ಕಳೆಲ್ಲಾ ಮುಸಿ ಮುಸಿ ನಗುತಿದ್ದದ್ದು ಮಾತ್ರ ಅವನಿಗೆ ಗೊತ್ತಾಗಿತ್ತು. ಅದರಲ್ಲಿ ತನ್ನ ಮಕ್ಕಳೇನಾದರೂ ಇದ್ದಾರೆಯೇ ಎಂದು ನೋಡಿದ ಮುತ್ತ, ಉಹಂ.. ಏಪ್ರಿಲ್ ತಿಂಗಳ ಮುಂಜಾನೆಯ ಸೂರ್ಯ ಕಣ್ಣಲ್ಲೇ ಬಂದು ಕೂತ್ತಿದ್ದ. ಹಾಗೇ ಮೆಲ್ಲನೆ ಕಣ್ಣು ಮುಚ್ಚಿಕೊಂಡ ತಾತ್ಕಾಲಿಕವಾಗಿ.......
ಈಗ ಅದೆಲ್ಲಾ ನೆನಪು ಮಾಡಿಕೊಳ್ಳುತ್ತಾ ಮತ್ತೆ ಆ ಪ್ಲಾಸ್ಟಿಕ್ ಹುಂಡಿಯಲ್ಲಿ ಕೈ ಹಾಕಿದ ಮುತ್ತ.ತನ್ನ ಹೆಂಚಿನ ಮನೆಯ ನೆತ್ತಿಯ ಮೇಲಿನ ಫ್ಯಾನು ಬಿಸಿ ಗಾಳಿಯನ್ನೇ ಬೀಸುತ್ತಿದ್ದರೂ ಹುಂಡಿಯೊಳಗಿನ ಕಾಸು ಮಾತ್ರ ಕೈಗೆ ತಣ್ಣಗೆ ತಾಕುತ್ತಿತ್ತು. ಸುಮಾರು 35 ದಿನಗಳಿಂದ ಕೂಡಿಟ್ಟ ದುಡ್ಡು ಎಷ್ಟಾಗಿದೆ ಎಂದು ಎಣಿಸಲು ಹೋಗಿರಲಿಲ್ಲ ಅವನು. ಬರುವ ವಾರ ಅದನ್ನು ಒಟ್ಟಿಗೆ ತೆಗೆಯುವಾಗ ಎಷ್ಟಾಗಿರಬಹುದು ಎಂದು ಅಂದಾಜು ಹಾಕಿತು ಮನಸ್ಸು. ಆ ಅಂದಾಜಿಗೇ ತುಟಿಯ ಮೇಲೆ ಸಣ್ಣ ಮುಗಳ್ನಗೆಯೊಂದು ಸುಳಿದ್ದಾಡುತ್ತಿದ್ದಂತೆಯೇ, ಅಡುಗೆ ಮನೆಯಿಂದ ಹೆಂಡತಿ ಕರೆದ ಸದ್ದಾಯಿತು. ತುಟಿಯಿಂದ ನಗೆ ಮರೆಯಾಗಿ, ಕೈ ಬೆದರಿದಂತೆ ಹುಂಡಿಯಿಂದ ಹೊರ ಬಂತು.
ಅವನು ಹಾಗೆ ಸುಮ್ಮನೆ ಕುಳಿತಾಗಲೆಲ್ಲಾ ಹೆಂಡತಿ ಅಡುಗೆ ಮನೆಯಿಂದಲೇ ಕೂಗುವುದು,ಮನೆಯ ಕಷ್ಟ ಹೇಳಿಕೊಳ್ಳುವುದು, ಮಕ್ಕಳ ಶಾಲೆ ಫೀಸು, ಹೊಸ ಬಟ್ಟೆಯ ಬಗ್ಗೆ ಗೋಳಿಡಿವುದು , ಅವನು ಅದನ್ನು ಕಿವಿಗೂ ಹಾಕಿಕೊಳ್ಳದಿರುವುದು, ಆಗ ಅವಳು ಅಳುವುದು ಇದೆಲ್ಲಾ ಮುತ್ತನ ದಿನಚರಿಯ ಭಾಗವಾಗಿತ್ತು. ಇನ್ನು, ಇಷ್ಟೆಲ್ಲಾ ಆದ ಮೇಲೆ ಸುಮ್ಮನಿರಲು ಸಾಧ್ಯವೇ? ಎದ್ದು ನೇರವಾಗಿ ಊರಿನ ಒಂದೇ ಬಾರಿನಲ್ಲಿ ಕೂತು ಕುಡಿಯುವುದು, ಕುಡಿದದ್ದು ಜಾಸ್ತಿ ಆದಾಗ ಅಲ್ಲೇ ಬಾರಿನ ಜಗಲಿಯಲ್ಲೋ ರಸ್ತೆ ಬದಿಯಲ್ಲೋ ದಣಿ(?)ವಾರಿಸಿಕೊಂಡು ಮನೆಗೆ ಬರುತ್ತಿದ್ದದ್ದು, ಆ ದಿನಚರಿಯ ಮುಂದಿನ ಭಾಗ. ಒಮ್ಮೊಮ್ಮೆ ಇನ್ನೂ ಜಾಸ್ತಿಯಾದಗ ಮಕ್ಕಳು ಬಂದು ಮನೆಗೆ ಕರೆದುಕೊಂಡು ಹೋಗುತ್ತಿದ್ದದ್ದು ಬೆಳಿಗ್ಗೆ ಎದ್ದಾಗ ನೆನಪಿಗೆ ಬರುತಿತ್ತು. ಮುತ್ತಿನಂಥ ಮಕ್ಕಳು ಎಂದು ಕೊಳ್ಳುತ್ತಿದ್ದ ಮುತ್ತ.
ಅವನು ಹಾಗೆ ಸುಮ್ಮನೆ ಕುಳಿತಾಗಲೆಲ್ಲಾ ಹೆಂಡತಿ ಅಡುಗೆ ಮನೆಯಿಂದಲೇ ಕೂಗುವುದು,ಮನೆಯ ಕಷ್ಟ ಹೇಳಿಕೊಳ್ಳುವುದು, ಮಕ್ಕಳ ಶಾಲೆ ಫೀಸು, ಹೊಸ ಬಟ್ಟೆಯ ಬಗ್ಗೆ ಗೋಳಿಡಿವುದು , ಅವನು ಅದನ್ನು ಕಿವಿಗೂ ಹಾಕಿಕೊಳ್ಳದಿರುವುದು, ಆಗ ಅವಳು ಅಳುವುದು ಇದೆಲ್ಲಾ ಮುತ್ತನ ದಿನಚರಿಯ ಭಾಗವಾಗಿತ್ತು. ಇನ್ನು, ಇಷ್ಟೆಲ್ಲಾ ಆದ ಮೇಲೆ ಸುಮ್ಮನಿರಲು ಸಾಧ್ಯವೇ? ಎದ್ದು ನೇರವಾಗಿ ಊರಿನ ಒಂದೇ ಬಾರಿನಲ್ಲಿ ಕೂತು ಕುಡಿಯುವುದು, ಕುಡಿದದ್ದು ಜಾಸ್ತಿ ಆದಾಗ ಅಲ್ಲೇ ಬಾರಿನ ಜಗಲಿಯಲ್ಲೋ ರಸ್ತೆ ಬದಿಯಲ್ಲೋ ದಣಿ(?)ವಾರಿಸಿಕೊಂಡು ಮನೆಗೆ ಬರುತ್ತಿದ್ದದ್ದು, ಆ ದಿನಚರಿಯ ಮುಂದಿನ ಭಾಗ. ಒಮ್ಮೊಮ್ಮೆ ಇನ್ನೂ ಜಾಸ್ತಿಯಾದಗ ಮಕ್ಕಳು ಬಂದು ಮನೆಗೆ ಕರೆದುಕೊಂಡು ಹೋಗುತ್ತಿದ್ದದ್ದು ಬೆಳಿಗ್ಗೆ ಎದ್ದಾಗ ನೆನಪಿಗೆ ಬರುತಿತ್ತು. ಮುತ್ತಿನಂಥ ಮಕ್ಕಳು ಎಂದು ಕೊಳ್ಳುತ್ತಿದ್ದ ಮುತ್ತ.
ಇಂಥಾ ಮುತ್ತ ಈ ವರ್ಷದ ತಪ್ಪಸ್ಸು ಕಾಲವನ್ನು ಬೇರೆಯದೇ ರೀತಿಯಲ್ಲಿ ಆಚರಿಸಿಕೊಳ್ಳಲು ನಿರ್ಧಾರ ಮಾಡಿದ್ದ. ಮುತ್ತನ ಅನೇಕ ಗೆಳೆಯರು ಈಸ್ಟರ್ ಹಬ್ಬದ ಹಿಂದಿನ ಆ 40 ದಿನಗಳ ತಪ್ಪಸ್ಸು ಕಾಲದಲ್ಲಿ ಮಾಂಸವನ್ನೋ, ಕುಡಿಯುವುದನ್ನು ಬಿಡುತ್ತಿದ್ದರು. ಬಿಡುವುದೇನೋ ಬಿಡುತ್ತಿದ್ದರು, ಆದರೆ ಕಾದುಕೊಂಡಿದ್ದು, ಬಿಟ್ಟಿದ್ದ ಅಷ್ಟೂ ದಿನದ ಒಟ್ಟು ಮೊತ್ತವನ್ನು ಹಬ್ಬದ ದಿನ ಜಮಾ ಮಾಡಿಕೊಳ್ಳುತ್ತಿದ್ದರು. ಆದರೆ ಮುತ್ತ ಮಾತ್ರ ಇದುವರೆಗಿನ ಯಾವ ತಪ್ಪಸ್ಸು ಕಾಲದಲ್ಲೂ ಈ ರೀತಿ ತ್ಯಾಗ ಮಾಡುವ ಮನಸ್ಸು ಮಾಡಿರಲಿಲ್ಲ. ಹಾಗೇ ಬಿಡುವುದೇಕೆ, ತಪ್ಪಸ್ಸು ಕಾಲ ಮುಗಿದ ಮರುದಿನವೇ ಎಲ್ಲವನ್ನೂ ಸೇರಿ ಕುಡಿಯುವುದೇಕೆ ಎಂಬ ಅವನ ಪ್ರಶ್ನೆಗೆ ಗೆಳೆಯರಲ್ಲಿ ಉತ್ತರವಿರಲಿಲ್ಲ.
ಆದರೆ ಉತ್ತರವಿಲ್ಲದಿರುವುದು ಮುತ್ತ ಬಿಡದಿರುವುದಕ್ಕೆ ಕಾರಣವಾಗಿರಲಿಲ್ಲ. ಒಂದು ದಿನ ಕುಡಿಯದೆ ಇರುವುದು ಅವನಿಗೆ ಉಹಿಸಲೂ ಸಾಧ್ಯವಿರಲಿಲ್ಲ. ಹಾಗೆಂದ ಮಾತ್ರಕ್ಕೆ ಅವನು ದಿನವೂ ತುಂಬಾ ಏನೂ ಕುಡಿಯುತ್ತಿರಲಿಲ್ಲ, ವಾರಕ್ಕೆ ಎರಡೋ ಮೂರೋ ಬಾರಿ ಜಾಸ್ತಿ ಆಗುತ್ತಿತ್ತು ಅಷ್ಟೆ. ಆದರೆ ಈ ವರ್ಷ ಮಾತ್ರ ತಪ್ಪಸ್ಸು ಕಾಲದಲ್ಲಿ ಕುಡಿತ ಬಿಡಲು ನಿರ್ಧರಿಸಿದ್ದ ಮುತ್ತ. ಅದಕ್ಕೆ ತ್ಯಾಗ ಭಕ್ತಿ ಏನೂ ಕಾರಣವಾಗಿರಲಿಲ್ಲ, ಅದೆಲ್ಲವೂ ಮನಸ್ಸಿನಲ್ಲಿ ಇರಬೇಕು ಎಂದು ಹೇಳುತ್ತಿದ್ದನಾದರೂ, ಮನಸ್ಸಿನಲ್ಲೂ ಅದು ಸ್ವಲ್ಪ ಕಡಿಮೆಯೇ ಆಗಿತ್ತು.
ಹೋದ ವರ್ಷ ಕುಮಾರಪ್ಪನವರ ಮನೆ ಮುಂದೆ ಅರೆ ಪ್ರಜ್ಞೆಯಲ್ಲಿ ಬಿದ್ದದ್ದರಿಂದ ಅವನಿಗೆ ಅವಮಾನವೇನೂ ಆಗಿರಲ್ಲಿಲ್ಲ, ಆದರೆ ಅಂದು ಕುಡಿದ ಸರಕಿನ ಮೇಲೆ ಅವನಿಗೆ ಕೋಪ ಬಂದಿತ್ತು. ಹಬ್ಬ ಎಂದು ಸ್ವಲ್ಪ ಹೆಚ್ಚಾಗಿಯೇ ಕುಡಿಯಲು ಹೋದ ತನ್ನ ಬಳಿ ಅಂದು ಅಷ್ಟು ಕಾಸಿಲ್ಲದಿದ್ದ ಕಾರಣ ಕಡಿಮೆ ದರ್ಜೆಯ ಸರಕ್ಕನ್ನು ಕುಡಿದದ್ದು ಅವನಿಗೆ ನೆನಪಿಗೆ ಬಂದಿತು. ಅದರಿಂದಲೇ ಅಲ್ಲವೇ ಅಷ್ಟೆಲ್ಲಾ ರಾದ್ಧಾಂತವಾಗಿದ್ದು ಎಂದು ನಿರ್ಧರಿಸಿದವನೇ ಈ ಸಲ ಹಬ್ಬಕ್ಕೆ ತನ್ನ ಊರಿನ ಬಾರಿನಲ್ಲಿ ಸಿಗುವ ಅತಿ ಹೆಚ್ಚು ಬೆಲೆಯ ಬಾಟಲನ್ನೇ ತೆಗೆದುಕೊಳ್ಳಲು ನಿರ್ಧರಿಸಿದ್ದ.ಹಾಗೇ ಮಾಡಲು ಹಣ ಬೇಕಲ್ಲ? ಹೇಗೂ ತಪ್ಪಸ್ಸು ಕಾಲ, ಅಷ್ಟು ದಿನ ಬಿಟ್ಟು, ಬಿಟ್ಟಾಗಿನ ಹಣವನ್ನೆಲ್ಲಾ ಕೂಡಿಸಿ ಆ ಹಣದಿಂದ ಹಬ್ಬದ ದಿನ ದಿವಿನಾಗಿ ಹಬ್ಬ ಮಾಡುವುದು ಅವನ ಮಾಸ್ಟರ್ ಪ್ಲಾನ್ ಆಗಿತ್ತು. ನೀಲಿ ಬಣ್ಣದ ಸ್ಟಿಕ್ಕರ್ ಸುತ್ತಿದ್ದ ಬಾಟಲೊಂದು ಅವನನ್ನು ಯಾವಗಲೂ ಕರೆಯುತ್ತಿತ್ತು. ನಮಂಥ ಬಡವರಿಗಲ್ಲ ಅದೂ ಎಂದುಕೊಳ್ಳುತ್ತಲೇ ಅದರ ಅಹ್ವಾನವನ್ನು ಮುತ್ತ ನಯವಾಗಿ ತಿರಸ್ಕರಿಸುತ್ತಲೇ ಬಂದಿದ್ದ. ಈ ವರ್ಷ ಅದರ ಅಹ್ವಾನಕ್ಕೆ ಮಣೆ ನೀಡಲು ಮಹೂರ್ತ ಬಂದಿದೆ ಎಂದೆನಿಸಿತು ಮುತ್ತನಿಗೆ.
ಆದರೆ ಉತ್ತರವಿಲ್ಲದಿರುವುದು ಮುತ್ತ ಬಿಡದಿರುವುದಕ್ಕೆ ಕಾರಣವಾಗಿರಲಿಲ್ಲ. ಒಂದು ದಿನ ಕುಡಿಯದೆ ಇರುವುದು ಅವನಿಗೆ ಉಹಿಸಲೂ ಸಾಧ್ಯವಿರಲಿಲ್ಲ. ಹಾಗೆಂದ ಮಾತ್ರಕ್ಕೆ ಅವನು ದಿನವೂ ತುಂಬಾ ಏನೂ ಕುಡಿಯುತ್ತಿರಲಿಲ್ಲ, ವಾರಕ್ಕೆ ಎರಡೋ ಮೂರೋ ಬಾರಿ ಜಾಸ್ತಿ ಆಗುತ್ತಿತ್ತು ಅಷ್ಟೆ. ಆದರೆ ಈ ವರ್ಷ ಮಾತ್ರ ತಪ್ಪಸ್ಸು ಕಾಲದಲ್ಲಿ ಕುಡಿತ ಬಿಡಲು ನಿರ್ಧರಿಸಿದ್ದ ಮುತ್ತ. ಅದಕ್ಕೆ ತ್ಯಾಗ ಭಕ್ತಿ ಏನೂ ಕಾರಣವಾಗಿರಲಿಲ್ಲ, ಅದೆಲ್ಲವೂ ಮನಸ್ಸಿನಲ್ಲಿ ಇರಬೇಕು ಎಂದು ಹೇಳುತ್ತಿದ್ದನಾದರೂ, ಮನಸ್ಸಿನಲ್ಲೂ ಅದು ಸ್ವಲ್ಪ ಕಡಿಮೆಯೇ ಆಗಿತ್ತು.
ಹೋದ ವರ್ಷ ಕುಮಾರಪ್ಪನವರ ಮನೆ ಮುಂದೆ ಅರೆ ಪ್ರಜ್ಞೆಯಲ್ಲಿ ಬಿದ್ದದ್ದರಿಂದ ಅವನಿಗೆ ಅವಮಾನವೇನೂ ಆಗಿರಲ್ಲಿಲ್ಲ, ಆದರೆ ಅಂದು ಕುಡಿದ ಸರಕಿನ ಮೇಲೆ ಅವನಿಗೆ ಕೋಪ ಬಂದಿತ್ತು. ಹಬ್ಬ ಎಂದು ಸ್ವಲ್ಪ ಹೆಚ್ಚಾಗಿಯೇ ಕುಡಿಯಲು ಹೋದ ತನ್ನ ಬಳಿ ಅಂದು ಅಷ್ಟು ಕಾಸಿಲ್ಲದಿದ್ದ ಕಾರಣ ಕಡಿಮೆ ದರ್ಜೆಯ ಸರಕ್ಕನ್ನು ಕುಡಿದದ್ದು ಅವನಿಗೆ ನೆನಪಿಗೆ ಬಂದಿತು. ಅದರಿಂದಲೇ ಅಲ್ಲವೇ ಅಷ್ಟೆಲ್ಲಾ ರಾದ್ಧಾಂತವಾಗಿದ್ದು ಎಂದು ನಿರ್ಧರಿಸಿದವನೇ ಈ ಸಲ ಹಬ್ಬಕ್ಕೆ ತನ್ನ ಊರಿನ ಬಾರಿನಲ್ಲಿ ಸಿಗುವ ಅತಿ ಹೆಚ್ಚು ಬೆಲೆಯ ಬಾಟಲನ್ನೇ ತೆಗೆದುಕೊಳ್ಳಲು ನಿರ್ಧರಿಸಿದ್ದ.ಹಾಗೇ ಮಾಡಲು ಹಣ ಬೇಕಲ್ಲ? ಹೇಗೂ ತಪ್ಪಸ್ಸು ಕಾಲ, ಅಷ್ಟು ದಿನ ಬಿಟ್ಟು, ಬಿಟ್ಟಾಗಿನ ಹಣವನ್ನೆಲ್ಲಾ ಕೂಡಿಸಿ ಆ ಹಣದಿಂದ ಹಬ್ಬದ ದಿನ ದಿವಿನಾಗಿ ಹಬ್ಬ ಮಾಡುವುದು ಅವನ ಮಾಸ್ಟರ್ ಪ್ಲಾನ್ ಆಗಿತ್ತು. ನೀಲಿ ಬಣ್ಣದ ಸ್ಟಿಕ್ಕರ್ ಸುತ್ತಿದ್ದ ಬಾಟಲೊಂದು ಅವನನ್ನು ಯಾವಗಲೂ ಕರೆಯುತ್ತಿತ್ತು. ನಮಂಥ ಬಡವರಿಗಲ್ಲ ಅದೂ ಎಂದುಕೊಳ್ಳುತ್ತಲೇ ಅದರ ಅಹ್ವಾನವನ್ನು ಮುತ್ತ ನಯವಾಗಿ ತಿರಸ್ಕರಿಸುತ್ತಲೇ ಬಂದಿದ್ದ. ಈ ವರ್ಷ ಅದರ ಅಹ್ವಾನಕ್ಕೆ ಮಣೆ ನೀಡಲು ಮಹೂರ್ತ ಬಂದಿದೆ ಎಂದೆನಿಸಿತು ಮುತ್ತನಿಗೆ.
ಅಸಲಿಗೆ ಆ ಬಾಟಲ್ ಗಾಗಿ ಮುತ್ತ 40 ದಿನ ಕುಡಿತ ಬಿಡಬೇಕಾಗಿರಲಿಲ್ಲ. ಅದು ಅಷ್ಟು ದುಬಾರಿ ಏನಿರಲಿಲ್ಲ. ಅದರೂ ಆ ಬಾಟಲಿನ ವಿನ್ಯಾಸ, ಅದರ ವಯ್ಯಾರ, ಒನಪು ಹಾಗೂ ಮೇಲಿನ ಪದರಗಳೆಲ್ಲಾ ಮುತ್ತನ ಲೆಕ್ಕಚಾರಕ್ಕೆ ಅಡ್ಡ ಮಾಡಿತ್ತು. ಒಟ್ಟಿನಲ್ಲಿ 40 ದಿನಗಳ ಕಾಲ ಕುಡಿಯುವುದು ಬಿಟ್ಟು, ಹಬ್ಬದ ದಿನ ಆ ದುಬಾರಿ ಬಾಟಲ್ ಅನ್ನು ತೆಕ್ಕೆಗೆ ಹಾಕಿಕೊಂಡು, ಕುಮಾರಪ್ಪನವರ ಮನೆ ಮುಂದೆ ಬೀಳದಿರುವುದು ಅವನ ಕಾರ್ಯತಂತ್ರವಾಗಿತ್ತು. ಹೀಗೆ ಅವನ ತಪ್ಪಸ್ಸು ಕಾಲ ಯಶಸ್ವಿಯಾಗೇ ನಡೆದುಕೊಂಡು ಬಂತು.
ಬೇರೆ ಸಮಯದಲ್ಲಿ ಕೆಲವೊಮ್ಮೆ ಬೆಳಿಗ್ಗೆಯೇ ರಂಗಾಗುತ್ತಿದ್ದ ಮುತ್ತ ಸಂಜೆಯಾದರೂ ನೆಟ್ಟಗೇ ನಡೆಯುತ್ತಿದ್ದನ್ನು ನೋಡಿದ ಜನ ಬಾಯಿಯ ಮೇಲೆ ಕೈ ಇಟ್ಟುಕೊಂಡರು. ಬಾರಿನಲ್ಲಿನ ಇವನ ಇತರ ಗೆಳೆಯರು ಇವನನ್ನು ಕಂಡು ಲೊಚ್ಚಗುಟ್ಟಿದ್ದರು. ತಪಸ್ಸು ಕಾಲದಲ್ಲಿ ಕುಡಿತ ಬಿಟ್ಟಿದ್ದ ಇವನ ಇತರ ಗೆಳೆಯರ ಮುಖದಲ್ಲಿ ತೃಪ್ತಿಯ ಭಾವ. ತಮ್ಮಿಂದ ಇನ್ನೊಬ್ಬ ತಾತ್ಕಾಲಿಕವಾಗಿಯಾದರೂ ಉದ್ಧಾರ ಆದ ಎಂಬಂತೆ.
ಬೇರೆ ಸಮಯದಲ್ಲಿ ಕೆಲವೊಮ್ಮೆ ಬೆಳಿಗ್ಗೆಯೇ ರಂಗಾಗುತ್ತಿದ್ದ ಮುತ್ತ ಸಂಜೆಯಾದರೂ ನೆಟ್ಟಗೇ ನಡೆಯುತ್ತಿದ್ದನ್ನು ನೋಡಿದ ಜನ ಬಾಯಿಯ ಮೇಲೆ ಕೈ ಇಟ್ಟುಕೊಂಡರು. ಬಾರಿನಲ್ಲಿನ ಇವನ ಇತರ ಗೆಳೆಯರು ಇವನನ್ನು ಕಂಡು ಲೊಚ್ಚಗುಟ್ಟಿದ್ದರು. ತಪಸ್ಸು ಕಾಲದಲ್ಲಿ ಕುಡಿತ ಬಿಟ್ಟಿದ್ದ ಇವನ ಇತರ ಗೆಳೆಯರ ಮುಖದಲ್ಲಿ ತೃಪ್ತಿಯ ಭಾವ. ತಮ್ಮಿಂದ ಇನ್ನೊಬ್ಬ ತಾತ್ಕಾಲಿಕವಾಗಿಯಾದರೂ ಉದ್ಧಾರ ಆದ ಎಂಬಂತೆ.
ಮನೆಯಲ್ಲೂ ಸಂತೋಷ ಮನೆ ಮಾಡಿತು. ಅಪ್ಪ ಮನೆಗೆ ಬೇಗ ಬರುತ್ತಿದ್ದದ್ದು ಮಾತ್ರವಲ್ಲದೆ, ಯಾರನ್ನೂ ಬಯ್ಯದೇ ತಮ್ಮ ಪಾಡಿಗೆ ತಮ್ಮದೇ ಲೋಕದಲ್ಲಿ ಇದ್ದದ್ದನು ಕಂಡು ಮಕ್ಕಳು ಪರೀಕ್ಷೆಗೆ ಓದತೊಡಗಿದರು. ಮದುವೆ ಆದಗಿನಿಂದಲೂ ನಿತ್ಯವೂ ತಪ್ಪಸ್ಸು ಕಾಲವೇ ಎಂಬತಾಗಿದ್ದ ಹೆಂಡತಿಯ ಮುಖದಲ್ಲಂತೂ ಹಬ್ಬದ ಸಡಗರ. ಮುತ್ತನದು ಮಾತ್ರ ಬೇರೆಯದೇ ಸಂತೋಷ. ಸಾಮಾನ್ಯ ಸಂತೋಷವನ್ನು ಮೀರಿದ ಹೊಸ ನಿರೀಕ್ಷೆಯ, ಭರವಸೆಯ ಆನಂತ ಆನಂದ ಭಾವ ಅವನ ಮುಖದಲ್ಲಿ ಎದ್ದು ಕಾಣುತ್ತಿತ್ತು. ಹುಂಡಿಯಲ್ಲಿ ಕೈ ಹುದುಗಿಸಿದಾಗಲಂತೂ ಅವನ ಕಣ್ಣುಗಳು ಪ್ರಕಾಶಮಾನವಾಗಿ ಬೆಳಗಿ ಅದು ನಗೆಯ ರೂಪದಲ್ಲಿ ತುಟಿಯ ಮೇಲೆ ಸರಿದಾಡುತ್ತಿತು.ಅದನ್ನು ಹೋಗಲಾಡಿಸುವ ಶಕ್ತಿ ಯಾರಿಗೂ, ಯಾವುದಕ್ಕೂ ಇರಲಿಲ್ಲ.
ಅಡುಗೆ ಮನೆಯಿಂದ "ರೀ" ಎಂಬ ಶಬ್ದವೊಂದಕ್ಕೆ ಬಿಟ್ಟು. ಅಂದೂ ಹಾಗೇ ಆಯಿತು. ಹೆಂಡತಿಯ "ರೀ" ಶಬ್ದಕ್ಕೆ ಹೂಂಗುಟ್ಟಿದ್ದ ಮುತ್ತ. ಮುಂದೆ ಹೆಂಡತಿ ಏನೋ ಹೇಳುತ್ತಿದ್ದಳು. ಹುಂಡಿಯಲ್ಲಿನ ಹಣದ ಬಗ್ಗೆ ಕೇಳುತ್ತಿದ್ದಳು. ಮಕ್ಕಳ ಫೀಸ್ ಬಗ್ಗೆಯೂ ಏನೋ ಹೇಳಿದಂತಾಯಿತು. ಹೂಂ ಅಂದ ಮುತ್ತ. ಹುಂಡಿಯ ಹಣದ ಬಗ್ಗೆ ಕೇಳಿದ್ದೇ ಮುತ್ತಾ ಬೇರೆಯದೇ ಪ್ರಪಂಚಕ್ಕೆ ಹೊರಳಿದ್ದ. ಹುಂಡಿಯಲ್ಲಿ ಇದ್ದ ಎಲ್ಲವನ್ನೂ ಎಣಿಸಿದಂತೆ, ಬೊಗಸೆಯಲ್ಲಿ ತುಂಬಿಕೊಂಡಂತೆ, ಬಾರಿನ ಕಡೆ ಹೊರಟಂತೆ, ಕೈ ಬೀಸಿ ಕರೆಯುತ್ತಿದ್ದ ನೀಲಿ ಬಾಟಲಿಗೆ ಬಂದೆ ಎಂದು ತಲೆ ಅಲ್ಲಾಡಿಸಿದಂತೆ....ಇತ್ತ ಹೆಂಡತಿ ಹೇಳಿದಕ್ಕೆಲ್ಲಾ ಹೂ ಹೂ ಎನ್ನುತ್ತಿದ್ದ ಮುತ್ತ.
ಅಡುಗೆ ಮನೆಯಿಂದ "ರೀ" ಎಂಬ ಶಬ್ದವೊಂದಕ್ಕೆ ಬಿಟ್ಟು. ಅಂದೂ ಹಾಗೇ ಆಯಿತು. ಹೆಂಡತಿಯ "ರೀ" ಶಬ್ದಕ್ಕೆ ಹೂಂಗುಟ್ಟಿದ್ದ ಮುತ್ತ. ಮುಂದೆ ಹೆಂಡತಿ ಏನೋ ಹೇಳುತ್ತಿದ್ದಳು. ಹುಂಡಿಯಲ್ಲಿನ ಹಣದ ಬಗ್ಗೆ ಕೇಳುತ್ತಿದ್ದಳು. ಮಕ್ಕಳ ಫೀಸ್ ಬಗ್ಗೆಯೂ ಏನೋ ಹೇಳಿದಂತಾಯಿತು. ಹೂಂ ಅಂದ ಮುತ್ತ. ಹುಂಡಿಯ ಹಣದ ಬಗ್ಗೆ ಕೇಳಿದ್ದೇ ಮುತ್ತಾ ಬೇರೆಯದೇ ಪ್ರಪಂಚಕ್ಕೆ ಹೊರಳಿದ್ದ. ಹುಂಡಿಯಲ್ಲಿ ಇದ್ದ ಎಲ್ಲವನ್ನೂ ಎಣಿಸಿದಂತೆ, ಬೊಗಸೆಯಲ್ಲಿ ತುಂಬಿಕೊಂಡಂತೆ, ಬಾರಿನ ಕಡೆ ಹೊರಟಂತೆ, ಕೈ ಬೀಸಿ ಕರೆಯುತ್ತಿದ್ದ ನೀಲಿ ಬಾಟಲಿಗೆ ಬಂದೆ ಎಂದು ತಲೆ ಅಲ್ಲಾಡಿಸಿದಂತೆ....ಇತ್ತ ಹೆಂಡತಿ ಹೇಳಿದಕ್ಕೆಲ್ಲಾ ಹೂ ಹೂ ಎನ್ನುತ್ತಿದ್ದ ಮುತ್ತ.
ಮುತ್ತನ ತಪ್ಪಸ್ಸು - ಮುಂದುವರಿದ ಭಾಗ
ಮುತ್ತ ಕಾಯುತ್ತಿದ್ದ ಹಬ್ಬದ ವಾರ ಬಂದೇ ಬಿಟ್ಟಿತು. ಕುಮಾರಪ್ಪನವರ ತೋಟದಲ್ಲಿ, ಮನೆಯಲ್ಲಿ ಭರ್ಜರಿ ಕೆಲಸ. ಹಬ್ಬಕೆ ಮನೆಯೆಲ್ಲಾ ಸ್ವಚ್ಛ ಮಾಡುತ್ತಿದ್ದರೆ, ಹಾಳಾದ್ದು ಕರೆಂಟು ದಿನವೆಲ್ಲಾ ಇದ್ದು, ನೀರು ಕಟ್ಟುವುದು, ಪಾತಿ ಮಾಡುವುದು ಎಲ್ಲವೂ ನಡೆದಿತ್ತು. ಸಂಜೆ ಸುಸ್ತಾಗಿ ಮನೆಗೆ ಹೋಗುತ್ತಿದ್ದ ಮುತ್ತ ಹುಂಡಿಯನೊಮ್ಮೆ ನೋಡಿ ಮಲಗಿ ಬಿಡುತ್ತಿದ್ದ. ಆ ವಾರವೆಲ್ಲ ಅದಕ್ಕೆ ದುಡ್ಡೂ ಹಾಕಿರಲಿಲ್ಲ. ಈಗಾಗಲೇ ತುಂಬಿ ಹೋಗಿತ್ತು. ಭಾನುವಾರ ಬೀಗ ತೆಗೆದು ಖಾಲಿ ಮಾಡಿಕೊಳ್ಳುವುದೊಂದೇ ಬಾಕಿ. ಭಾನುವಾರವೆಲ್ಲಿ? ಶನಿವಾರ ರಾತ್ರಿಯಲ್ಲವೇ ಹಬ್ಬ? ಅಬ್ಬಾ.....ಮನಸ್ಸಿನ ಈ ಪರಿಯ ಸಡಗರವನ್ನು ಈಚೀನ ವರ್ಷಗಳಲ್ಲಿ ಮುತ್ತ ಸವಿದದ್ದೇ ಇಲ್ಲ.
ಹೊರಗೆ ಬಂದ ಹೆಂಡತಿ "ಹೊಸ ಬಟ್ಟೆ ಹಾಕಿಕೊಳ್ಳಲಿಲ್ಲವೇ" ಎನ್ನುತ್ತಿದ್ದಂತೆ
ಹೆಂಡತಿ ಇನ್ನೂ ಮಾತನಾಡುತ್ತಲೇ ಇದ್ದಳು, ಮುತ್ತ ಅಲ್ಲಿಂದ ಹೊರಟ, ಭಾರವಾದ ಹೆಜ್ಜೆಗಳನ್ನು
ಇಡುತ್ತಾ...ನಿಧಾವಾಗಿ ಎಲ್ಲವೂ ಅರ್ಥವಾಗತೊಡಗಿತು. ಅಂದು ಮನೆಯಲ್ಲಿ ಕೂತ್ತಿದ್ದಾಗ, ಹೆಂಡತಿ ಎಂದಿನಂತೆ ಬಟ್ಟೆ,ಫೀಸು, ಹಬ್ಬಕ್ಕೆ ಮನೆ ಸಾಮಾನುಗಳ ಬಗ್ಗೆ ಹೇಳುತ್ತಿದ್ದಾಳೆ, ದುಡ್ಡು ಕೇಳಿದ್ದಾಳೆ, ಮುತ್ತ ಏನೂ ಕೇಳಿಸಿಕೊಳ್ಳದೆ ಹೂಂ ಹೂಂ ಎಂದಿದ್ದಾನೆ. ಕೂಡಿಟ್ಟ ದುಡ್ಡೆಲ್ಲ ಮನೆಗೇನೋ ಎಂದುಕೊಂಡವಳು ಹೋಗಿ ಫೀಸು ಕಟ್ಟಿ, ಬಟ್ಟೆ, ಸಾಮನುಗಳನ್ನು ತಂದಿದ್ದಾಳೆ. ಅಷ್ಟೇ.
ಈ ನಡುವೆ ಶುಭ ಶುಕ್ರವಾರದ ಪೂಜೆ ಪ್ರಾರ್ಥನೆಯೆಲ್ಲಾ ಅಗಿತ್ತು. ಶನಿವಾರ ಕುಮಾರಪ್ಪನವರ ತೋಟದಲ್ಲಿ ಮಧ್ಯಾಹ್ನದವರೆಗೂ ಕೆಲಸ ಮಾಡಿದ್ದ ಮುತ್ತ ಮನೆಗೆ ಬಂದು ವಿಶ್ರಮಿಸಿಕೊಂಡ. ರಾತ್ರಿಯೆಲ್ಲಾ ಎದ್ದಿರಬೇಕಲ್ಲ. ಮಕ್ಕಳು ಮನೆಯಲ್ಲಿ ಸಂಭ್ರಮದಿಂದ ಇದ್ದರು. ಇಷ್ಟು ವರ್ಷಗಳ ಹಬ್ಬಗಳಲ್ಲಿ ಇಲ್ಲದ ಕೇಕೆ ನಗು ಎಲ್ಲವೂ ಕೇಳುತ್ತಿತ್ತು. ಕಾರಣ ಕೇಳಲು ಹೋಗಲಿಲ್ಲ ಮುತ್ತ. ರಾತ್ರಿಯಾಗುತ್ತಿದ್ದಂತೆ ಮನೆಯಲ್ಲಿ ಎಲ್ಲರೂ ಹಬ್ಬದ ಪೂಜೆಗೆ ಹೋಗಲು ಅಣಿಯಾಗುತ್ತಿದ್ದರು. ತಾನೂ ಪೂಜೆಗೆ ಹೋಗಬೇಕಲ್ಲ ಎಂದುಕೊಳ್ಳುತ್ತಲೇ, ಹುಂಡಿಯನ್ನು ಹುಡುಕತೊಡಗಿತು ಮುತ್ತನ ಕಣ್ಣುಗಳು.
ಪೂಜೆಯ ಯಾವ ಭಾಗದಲ್ಲಿ ಎದ್ದು ಹೋಗಬೇಕು ಎಂದು ಅಂದಾಜು ಹಾಕುತ್ತಲೇ, ಅಷ್ಟರಲ್ಲಿ ಬಾರಿನವನು ಮುಚ್ಚಿಕೊಂಡು ಹೋದರೇ ಎಂಬ ಅನುಮಾನದ ಮುಳ್ಳು ಚುಚ್ಚಿತು. ಎಲ್ಲಾದರು ಉಂಟೇ? ಇವತ್ತು ಅವನು ಬಾರು ಬೇಗ ಮುಚ್ಚಿದ್ದರೆ, ಭಕ್ತರ ಗತಿಯೇನು? ಹಾಗೆಲ್ಲಾ ಆಗುವುದಿಲ್ಲ ಎಂದು ವಿಶ್ವಾಸ ತಂದು ಕೊಂಡ ಮುತ್ತ. ಇತ್ತ ಪೂಜೆಗೆ ಹೊರಟು ನಿಂತ ಹೆಂಡತಿ, ಹೊಸ ಶರ್ಟು, ಪಂಚೆ ತಂದುಕೊಟ್ಟು ಪೂಜೆಗೆ ಹಾಕಿಕೊಂಡು ಬನ್ನಿ ಎಂದಾಗ ಮುತ್ತನಿಗೆ ಆಶ್ಚರ್ಯವಾಯಿತು. ಆದರೆ ದೊಡ್ಡ ಸಂಭ್ರಮದ ಹೊಸ್ತಿಲ್ಲಲ್ಲಿ ಇದು ಯಾಕೋ ಅಷ್ಟು ಮುಖ್ಯವೆನಸಲಿಲ್ಲ. ಸರಿ ಎಂದವನೇ, ಅವರು ಹೊರಟ ಮೇಲೆ ತನ್ನ ಪ್ಲಾಸ್ಟಿಕ್ ಹುಂಡಿಯನ್ನು ತೆಗೆದುಕೊಂಡ.
ಪೂಜೆಯ ಯಾವ ಭಾಗದಲ್ಲಿ ಎದ್ದು ಹೋಗಬೇಕು ಎಂದು ಅಂದಾಜು ಹಾಕುತ್ತಲೇ, ಅಷ್ಟರಲ್ಲಿ ಬಾರಿನವನು ಮುಚ್ಚಿಕೊಂಡು ಹೋದರೇ ಎಂಬ ಅನುಮಾನದ ಮುಳ್ಳು ಚುಚ್ಚಿತು. ಎಲ್ಲಾದರು ಉಂಟೇ? ಇವತ್ತು ಅವನು ಬಾರು ಬೇಗ ಮುಚ್ಚಿದ್ದರೆ, ಭಕ್ತರ ಗತಿಯೇನು? ಹಾಗೆಲ್ಲಾ ಆಗುವುದಿಲ್ಲ ಎಂದು ವಿಶ್ವಾಸ ತಂದು ಕೊಂಡ ಮುತ್ತ. ಇತ್ತ ಪೂಜೆಗೆ ಹೊರಟು ನಿಂತ ಹೆಂಡತಿ, ಹೊಸ ಶರ್ಟು, ಪಂಚೆ ತಂದುಕೊಟ್ಟು ಪೂಜೆಗೆ ಹಾಕಿಕೊಂಡು ಬನ್ನಿ ಎಂದಾಗ ಮುತ್ತನಿಗೆ ಆಶ್ಚರ್ಯವಾಯಿತು. ಆದರೆ ದೊಡ್ಡ ಸಂಭ್ರಮದ ಹೊಸ್ತಿಲ್ಲಲ್ಲಿ ಇದು ಯಾಕೋ ಅಷ್ಟು ಮುಖ್ಯವೆನಸಲಿಲ್ಲ. ಸರಿ ಎಂದವನೇ, ಅವರು ಹೊರಟ ಮೇಲೆ ತನ್ನ ಪ್ಲಾಸ್ಟಿಕ್ ಹುಂಡಿಯನ್ನು ತೆಗೆದುಕೊಂಡ.
ಯಾಕೋ ಭಾರವಿಲ್ಲವೆನಿಸಿತು. ಈಗಿನ ನೋಟುಗಳು ಹಾಗೆ ಎಂದು ಸಮಾಧಾನ ಮಾಡಿಕೊಂಡು ಮುಚ್ಚಳ ತೆಗೆದ ಮುತ್ತ. ಒಳಗೆ ಒಂದಷ್ಟು ಚಿಲ್ಲರೆ ನಾಣ್ಯಗಳನ್ನು ಬಿಟ್ಟರೆ ಬೇರೇನಿಲ್ಲ. ಇದೇ ಹುಂಡಿಯೇ ಎಂದು ಮತ್ತೆ ನೋಡಿಕೊಂಡ. ಅದೇ ಹುಂಡಿ. ಆದರೆ ದುಡ್ಡಿಲ್ಲ. ನೆನಪಿಸಿಕೊಂಡ ಬೇರೆಲ್ಲಾದರೂ ಇಟ್ಟೆನೇ ಎಂದು. ಉಹೂಂ ನೆನಪಿಗೆ ಬರುತ್ತಿಲ್ಲ. ತನ್ನ ಶರ್ಟು, ಪ್ಯಾಂಟೆಲ್ಲಾ ತಡಕಾಡಿದ. ಇಲ್ಲ. ಮನೆಯ ಒಂದೇ ಬೀರುವಿನಲ್ಲಿ ಹುಡುಕಾಡಿದ. ಅಲ್ಲೂ ಇರಲಿಲ್ಲ. ಯಾವುದೋ ಬಟ್ಟೆ ಅಂಗಡಿಯ ಕೆಲವು ಕವರುಗಳನ್ನು ಬಿಟ್ಟರೆ ಮನೆ, ಹಬ್ಬದ ಸಲುವಾಗಿ ಸ್ವಚ್ಛವಾಗಿತ್ತು. ಮುತ್ತನ ಹುಡುಕಾಟದಿಂದಾಗಿ ಮನೆ ಮತ್ತೆ ಹಳೆಯ ರೂಪ ಪಡೆದಿತ್ತು.
ಯಾಕೋ ಫ್ಯಾನಿನ ಗಾಳಿ ಕಡಿಮೆಯಾದ್ದಂತೆ ಎನಿಸಿತು. ಬೆನ್ನಿನಲ್ಲಿ ಬೆವರು ಮೆಲ್ಲಗೆ ಇಳಿಯುತ್ತಿತ್ತು. ಅಡುಗೆ ಮನೆಯ ದಬ್ಬಗಳಲ್ಲಿ ಇರಲು ಸಾಧ್ಯವಿಲ್ಲದಿದ್ದರೂ ಹುಡುಕಾಡಿದ. ಇನ್ನೂರು ರುಪಾಯಿ ಬಿಟ್ಟರೆ ಮತೇನೂ ಸಿಗಲಿಲ್ಲ. ತಾನು ಹುಡುಕುತ್ತಿರುವುದು ಸಾವಿರದ ಆಸುಪಾಸಿನ ಮೊತ್ತ. ಉಹೂಂ ಸಿಗಲೊಲ್ಲದು. ಮನೆಗೆ ಬಂದವರು ಯಾರಾದರೂ ಹುಂಡಿಗೆ ಕೈ ಹಾಕಿದರೆ?....., ಯಾರು ಬಂದಿರಬಹುದು ಎನ್ನುವುದೂ ನನಪಿಗೆ ಬರಲಿಲ್ಲ. ದೇವಸ್ಥಾನದ ಗಂಟೆ ಮೊಳಗಲು ಪ್ರಾರಂಭಿಸಿತು. ಏನು ಅನಿಸಿತೋ ಅವನಿಗೆ ಮನೆಯ ಬಾಗಿಲನ್ನೂ ಹಾಕದೇ ಓಡಲು ಪ್ರಾರಂಭಿಸಿದ ಮುತ್ತ. ಕಾಲು ದೇವಸ್ಥಾನದ ಕಡೆ ದಾಪುಗಾಲಿಟ್ಟಿತು.
ಯಾಕೋ ಫ್ಯಾನಿನ ಗಾಳಿ ಕಡಿಮೆಯಾದ್ದಂತೆ ಎನಿಸಿತು. ಬೆನ್ನಿನಲ್ಲಿ ಬೆವರು ಮೆಲ್ಲಗೆ ಇಳಿಯುತ್ತಿತ್ತು. ಅಡುಗೆ ಮನೆಯ ದಬ್ಬಗಳಲ್ಲಿ ಇರಲು ಸಾಧ್ಯವಿಲ್ಲದಿದ್ದರೂ ಹುಡುಕಾಡಿದ. ಇನ್ನೂರು ರುಪಾಯಿ ಬಿಟ್ಟರೆ ಮತೇನೂ ಸಿಗಲಿಲ್ಲ. ತಾನು ಹುಡುಕುತ್ತಿರುವುದು ಸಾವಿರದ ಆಸುಪಾಸಿನ ಮೊತ್ತ. ಉಹೂಂ ಸಿಗಲೊಲ್ಲದು. ಮನೆಗೆ ಬಂದವರು ಯಾರಾದರೂ ಹುಂಡಿಗೆ ಕೈ ಹಾಕಿದರೆ?....., ಯಾರು ಬಂದಿರಬಹುದು ಎನ್ನುವುದೂ ನನಪಿಗೆ ಬರಲಿಲ್ಲ. ದೇವಸ್ಥಾನದ ಗಂಟೆ ಮೊಳಗಲು ಪ್ರಾರಂಭಿಸಿತು. ಏನು ಅನಿಸಿತೋ ಅವನಿಗೆ ಮನೆಯ ಬಾಗಿಲನ್ನೂ ಹಾಕದೇ ಓಡಲು ಪ್ರಾರಂಭಿಸಿದ ಮುತ್ತ. ಕಾಲು ದೇವಸ್ಥಾನದ ಕಡೆ ದಾಪುಗಾಲಿಟ್ಟಿತು.
ಒಂದೇ ಉಸಿರಲ್ಲಿ ಓಡಿದ ಮುತ್ತ ದೇವಾಸ್ಥಾನದ ಬಳಿ ಬರುತ್ತಿದ್ದಂತೆ ನಿಧಾನ ಮಾಡಿದ. ನಕ್ಕ ಪರಿಚಯದವರತ್ತ ಪೇಲವವಾಗಿ ನಕ್ಕ. ಕೆಲವರು ಏನೋ ಮಾತನಾಡಿಸಿದರು, ಏನೂ ಕೇಳಿಸಲಿಲ್ಲ. ಬಾಗಿಲ ಬಳಿ ಬಂದವನು ಸಾಮಾನ್ಯವಾಗಿ ಹೆಂಡತಿ ಕೂರುವ ಜಾಗದತ್ತ ನೋಡುತ್ತ ಅವಳನ್ನು ಹುಡುಕ ತೊಡಗಿದ. ಓಡಿ ಬಂದ ದಣಿವು ಇನ್ನೂ ಇತ್ತು, ಕಣ್ಣುಗಳು ಯಾಕೋ ಸರಿಯಾಗಿ ಹುಡುಕುತ್ತಿಲ್ಲ. ಹೆಂಡತಿ ಕಾಣುತ್ತಿಲ್ಲ. ಹೊಸ ಸೀರೆಗಳನ್ನು ಉಟ್ಟ ಹೆಂಗಸರು, ತಲೆಗೆ ಸೆರಗನ್ನು ಹೊದ್ದು ಕೊಂಡಿದ್ದರಿಂದ ತನ್ನ ಹೆಂಡತಿಯನ್ನು ಹುಡುಕುವುದು ಇನ್ನೂ ಕಷ್ಟವಾಯಿತು ಮುತ್ತನಿಗೆ. ಕೊನೆಗೆ ತನ್ನ ಮಗಳು ಕಂಡಳು. ಅವಳತ್ತ ಕೈ ಸನ್ನೆ ಮಾಡಿದ ಮುತ್ತ ಕೊನೆಯ ಪ್ರಯತ್ನವೆಂಬಂತೆ . ಅವಳು, ಟಾಟಾ ಎನ್ನುವಂತೆ ಸಣ್ಣಗೆ ಸನ್ನೆ ಮಾಡಿ ಕಣ್ಣು ಮುಚ್ಚಿಕೊಂಡಳು. ರೇಗಿ ಹೋಯಿತು ಮುತ್ತನಿಗೆ ಮಗಳ ಭಕ್ತಿಯ ಮೇಲೆ. ಮಗಳು ಮತ್ತೆ ಕಣ್ಣು ಬಿಡುವ ತನಕ ಕಾದ. ಅವಳು ಮೆತ್ತಗೆ ಕಣ್ಣು ಬಿಟ್ಟಳು, ಮತ್ತೊಮ್ಮೆ ಕೈ ಅಲ್ಲಾಡಿಸಿದ, ಏನು ಎಂಬಂತೆ ಕೇಳಿದಳು ಮಗಳು. ಅಮ್ಮನನ್ನು ಕರೆ ಎಂಬಂತೆ ಸನ್ನೆ ಮಾಡಿದ. ಅವಳು ಅಮ್ಮನನ್ನು ಕರೆದು ಮುತ್ತನತ್ತ ತೋರಿದಳು. ಅವಸರವಾಗಿ ಹೊರಗೆ ಕರೆದ.
ಹೊರಗೆ ಬಂದ ಹೆಂಡತಿ "ಹೊಸ ಬಟ್ಟೆ ಹಾಕಿಕೊಳ್ಳಲಿಲ್ಲವೇ" ಎನ್ನುತ್ತಿದ್ದಂತೆ
"ಅದಿರಲಿ ಹುಂಡಿಯಲ್ಲಿ ಇದ್ದ ನನ್ನ ಕಾಸು ನೋಡ್ದಾ?" ಎಂದ ಮುತ್ತ.
"ಯಾವ್ ಹುಂಡಿ?". ಮುತ್ತನ ಕೋಪ ತಲೆಗೆ ಹತ್ತಿತು.
"ಇನ್ಯಾವ ಹುಂಡಿ, ನನ್ನ ಪ್ಲಾಸ್ಟಿಕ್ ಹುಂಡಿ"
"ಅದನ್ನು ತೆಗೆದುಕೋ ಅಂತಾ ನೀವೆ ಹೇಳಿಲ್ವಾ? ಬಟ್ಟೆಗೆ, ಮಕ್ಕಳ ಫೀಸಿಗೆ........
ಹೆಂಡತಿ ಮಾತನಾಡುತ್ತಿದ್ದರೆ ಮುತ್ತನ ಕಾಲುಗಳು ದು:ಖದಿಂದ ನಡುಗತೊಡಗಿದವು....
"ಅವತ್ತು ಬಟ್ಟೆಗೆ, ಫೀಸ್ ಗೆ ಕಾಸ್ ಬೇಕು, ನಿಮ್ಮ ಹುಂಡಿಯಿಂದ ಕೊಡ್ರಿ ಅಂದಿದ್ದಕ್ಕೆ ಹೂಂ ಅಂದ್ರಿ, ಅದಕ್ಕೆ ನಾನು ತೆಗ್ದು ...ಸೋಮವಾರ ಸ್ಕೂಲಿಗೆ ಹೋಗಿ.....
ಹೆಂಡತಿ ಇನ್ನೂ ಮಾತನಾಡುತ್ತಲೇ ಇದ್ದಳು, ಮುತ್ತ ಅಲ್ಲಿಂದ ಹೊರಟ, ಭಾರವಾದ ಹೆಜ್ಜೆಗಳನ್ನು
ಇಡುತ್ತಾ...ನಿಧಾವಾಗಿ ಎಲ್ಲವೂ ಅರ್ಥವಾಗತೊಡಗಿತು. ಅಂದು ಮನೆಯಲ್ಲಿ ಕೂತ್ತಿದ್ದಾಗ, ಹೆಂಡತಿ ಎಂದಿನಂತೆ ಬಟ್ಟೆ,ಫೀಸು, ಹಬ್ಬಕ್ಕೆ ಮನೆ ಸಾಮಾನುಗಳ ಬಗ್ಗೆ ಹೇಳುತ್ತಿದ್ದಾಳೆ, ದುಡ್ಡು ಕೇಳಿದ್ದಾಳೆ, ಮುತ್ತ ಏನೂ ಕೇಳಿಸಿಕೊಳ್ಳದೆ ಹೂಂ ಹೂಂ ಎಂದಿದ್ದಾನೆ. ಕೂಡಿಟ್ಟ ದುಡ್ಡೆಲ್ಲ ಮನೆಗೇನೋ ಎಂದುಕೊಂಡವಳು ಹೋಗಿ ಫೀಸು ಕಟ್ಟಿ, ಬಟ್ಟೆ, ಸಾಮನುಗಳನ್ನು ತಂದಿದ್ದಾಳೆ. ಅಷ್ಟೇ.
ದೇವಾಸ್ಥಾನದ ಬಾಗಿಲಿಗೆ ಬರುತ್ತಿದ್ದಂತೆ ಮುತ್ತ ಬೆವರ ತೊಡಗಿದ. ದೊಡ್ಡ ದೊಡ್ಡ ಕಷ್ಟಗಳನ್ನು ಬಂಡೆಯಂತೆ ಎದುರಿಸಿದವನು, ಅವಮಾನಗಳಂತೂ ನಿತ್ಯ ಸಂಗಾತಿ. ಆದರೆ 40 ದಿನದಿಂದ ಆಚರಿಸಿಕೊಂಡು ಬಂದ ತಪ್ಪಸ್ಸೆಲ್ಲಾ ಫೀಸು, ಬಟ್ಟೆ, ಮನೆ ಸಾಮಾನಿನ ಮುಂದೆ ಮಣ್ಣು ಪಾಲಾಯಿತ್ತಲ್ಲಾ ಎಂದುಕೊಳ್ಳುತ್ತಲೇ ತಲೆ ಸುತ್ತಿದಂತಾಯಿತು. ದೇವಾಲಯದ ಗಂಟೆ ಮತ್ತೆ ಮೊಳಗತೊಡಗಿದವು. ಪೂಜೆ ಇನ್ನೇನು ಪ್ರಾರಂಭವಾಗಬೇಕಿತ್ತು.ಕುಮಾರಪ್ಪನವರ ಮನೆಯ ಬಳಿ ಬರುತ್ತಿದ್ದಂತೆ ಇನ್ನೂ ತಡೆಯಲಾರದಂತೆ ಮುತ್ತ ಅಲ್ಲೇ ಕುಸಿದು ಬಿದ್ದ...
ಪೂಜೆಗೆ ಹೊರಟ ಕುಮಾರಪ್ಪನವರ ಮಾತು ಸಣ್ಣದಾಗೆ ಕೇಳುತ್ತಿತ್ತು " "ಥೂ ಆದೇನು ಹಿಂಗ್ ಕುಡಿದು ಸಾಯ್ತಿರೋ, 40 ದಿವಸ ಬಿಡೋದ್ಯಾಕೆ? ವರ್ಷಕ್ಕೆ ಒಂದ್ ಹಬ್ಬದಲ್ಲೇ ಹೀಂಗ್ ಕುಡಿದು ಬೀಳೋದ್ಯಾಕೆ? ಹೋದ ವರ್ಷನೂ ಹಬ್ಬದಲ್ಲಿ ಹಿಂಗೆ ಕುಡ್ದು ಬಿದಿದ್ದ . ಈ ನನ್ನ್ ಮಕ್ಕಳ್ಳೆಲ್ಲಾ ಉದ್ಧಾರ ಆಗೋಲ್ಲ ...... "
ಮುತ್ತ ಹಾಗೇ ಮೆಲ್ಲನೆ ಕಣ್ಣು ಮುಚ್ಚಿಕೊಂಡ ತಾತ್ಕಾಲಿಕವಾಗಿ......
ಮುತ್ತ ಹಾಗೇ ಮೆಲ್ಲನೆ ಕಣ್ಣು ಮುಚ್ಚಿಕೊಂಡ ತಾತ್ಕಾಲಿಕವಾಗಿ......
-ಪ್ರಶಾಂತ್ ಇಗ್ನೇಷಿಯಸ್
Subscribe to:
Posts (Atom)









